ಚಿರತೆಯೋ? ಬೆಕ್ಕೋ? ಇದು ಎರಡು ಹೌದು! ಪತ್ತೆಯಾಯ್ತು ಅಪರೂಪದ ಜೀವಿ!

A leopard cat was found in Sagar in Shimoga district ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಪತ್ತೆಯಾಯ್ತು ಚಿರತೆ ಬೆಕ್ಕು

ಚಿರತೆಯೋ? ಬೆಕ್ಕೋ? ಇದು ಎರಡು ಹೌದು! ಪತ್ತೆಯಾಯ್ತು ಅಪರೂಪದ ಜೀವಿ!

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

SAGARA |  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಹೆಗ್ಗೋಡು ಬಳಿಯಲ್ಲಿ ಅಪರೂಪದ ಲೆಫೆರ್ಡ್​​ ಕ್ಯಾಟ್ ಪತ್ತೆಯಾಗಿದೆ. ಚಿರತೆಯಂತೆ ಕಾಣುವ ಬೆಕ್ಕು ಇದಾಗಿದ್ದು ಚಿರತೆ ಬೆಕ್ಕು ಎಂದು ಕರೆಯುತ್ತಾರೆ. ಅಸ್ವಸ್ಥ ಸ್ಥಿತಿಯಲ್ಲಿ ಈ ಪ್ರಾಣಿ ಪತ್ತೆಯಾಗಿದ್ದು, ನಾಯಿಗಳು ಇದರ ಮೇಲೆ ದಾಳಿಗೆ ಮುಂದಾಗಿದ್ದವು. ಈ ವೇಳೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡು ಪ್ರಾಣಿಯನ್ನು ಇಲಾಖೆ ವಶಕ್ಕೆ ನೀಡಿದ್ದಾರೆ. 

ಸದ್ಯ ಈ ಚಿರತೆ ಬೆಕ್ಕನ್ನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪರೂಪದ ಜೀವಿ ಇದಾಗಿದ್ದು, ರಾತ್ರಿ ಹೊತ್ತು ಹೆಚ್ಚು ಸಂಚಾರ ಮಾಡುತ್ತದೆಯಂತೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳಲ್ಲಿ ಇದು ಸಹ ಒಂದು ಎನ್ನುವ ಡಾ.ಮುರುಳಿ ಮೋಹನ್​, ಲೆಪರ್ಡ್​ ಕ್ಯಾಟ್​ನ ಸ್ಥಿತಿ ಗಂಭೀರವಾಗಿದ್ದು, ಅದನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.