ತಾನೆ ಹೆತ್ತ ಮರಿಗಳ ಸಾವಿಗೆ ಕಾರಣ ಎನಿಸಿದವಳು ತನ್ನ ನಾಲ್ಕನೇ ಕುಡಿಯನ್ನಾದರೂ ಬದುಕಿಸುತ್ತಾಳಾ? JP ಬರೆಯುತ್ತಾರೆ

Malenadu Today

KARNATAKA NEWS/ ONLINE / Malenadu today/ Nov 4, 2023 SHIVAMOGGA NEWS

SHIVAMOGGA | ಧರೆಗೆ ಬಂದ ಕೆಲವೇ ದಿನಗಳಲ್ಲಿ ಸಾವಿಗೀಡಾದ ಮೂರು ಆನೆ ಮರಿಗಳು..ಮರಿಗಳಿಗೆ ಹಾಲುಣಿಸದೆ ತಾಯ್ತನಕ್ಕ ಅಪವಾದ ಎಂಬಂತಿರುವ ಆ ತಾಯಿ ಯಾರು? ಜೆಪಿ ಬರೆಯುತ್ತಾರೆ. 

ಆಕೆಗೆ ತಾಯ್ತನದ ಹಂಬಲವಿದ್ದರೂ,ಮಗುವನ್ನು ಸಾಕಿ ಸಲುಹುವ ಉತ್ಸಾಹವಿಲ್ಲ. ಮೂರು ಮರಿಗಳನ್ನು  ಪೊರೆದರೂ, ಅವು ಬದುಕುಳಿಯಲಿಲ್ಲ. ನಾಲ್ಕನೇ ಮಗು ಹುಟ್ಟಿದಾಗಲೂ ಆಕೆ,ಸಂತೋಷಗೊಳ್ಳಲಿಲ್ಲ. ಹುಟ್ಟಿದ ಕಂದಮ್ಮಳನ್ನೇ ಶತ್ರುಗಳವಂತೆ ಕಾಣುವ ತಾಯಿ ಹಾಲು ಕೂಡ ಉಣಿಸಲಿಲ್ಲ. ಈಗ ನಾಲ್ಕನೇ ಹೆಣ್ಣು ಮರಿಗೆ ಆಕೆ ಜನ್ಮ ನೀಡಿದ್ದಾಳೆ. ಹುಟ್ಟಿದ ಮಕ್ಕಳನ್ನೇ ತಿರಸ್ಕರಿಸುವ ಆ ತಾಯಿ ಯಾರು ಅಂತಿರಾ ಈ ಸ್ಟೋರಿ ಓದಿ

READ : ಸಕ್ರೆಬೈಲ್ ಆನೆ ಬಿಡಾರ | ಹೆಣ್ಣು ಮರಿಗೆ ಜನ್ಮ ನೀಡಿದ ಬಾನುಮತಿ ಆನೆ | ಸುದ್ದಿ ಬಹಿರಂಗ ಪಡಿಸಲಿಲ್ಲವೇ ಅಧಿಕಾರಿಗಳು?

ನಾಲ್ಕನೇ ಹೆಣ್ಣು ಮರಿಗಾದರೂ ಸಲಹುವಳೇ?

ಸಕ್ರೆಬೈಲು ಆನೆ ಬಿಡಾರದಲ್ಲಿ ಅತ್ಯಂತ ಶಾಂತ ಸೌಮ್ಯದ ಹೆಣ್ಣಾನೆ ಇದ್ದರೆ ಅದು ಭಾನುಮತಿ ಎಂದು ಮಾವುತ ಕಾವಾಡಿಗಳು ತಕ್ಷಣಕ್ಕೆ ಹೇಳುತ್ತಾರೆ.ಸೌಮ್ಯ ಸ್ವಭಾವದ ಭಾನುಮತಿ 2014 ರಲ್ಲಿ ಮರಿಯಾನೆಯೊಂದಿಗೆ ಸೆರೆಹಿಡಿಯಲ್ಪಟ್ಟ ಆನೆ.ಆನೆಯನ್ನು ಸಕ್ರೆಬೈಲು ಕ್ರಾಲ್ ನಲ್ಲಿ ಪಳಗಿಸಿ,ಕೆಲವೇ ದಿನಗಳಲ್ಲಿ ಮಾವುತರು ಬಾನುಮತಿ ಹೆಗಲೇರಿದ್ದು ಒಂದು ದಾಖಲೆಯೇ ಸೈ. 

ಇಂತಹ ಸೌಮ್ಯ ಸ್ವಭಾವದ ಭಾನುಮತಿಗೆ ತಾನು ತಾಯ್ತನವನ್ನು ಪೂರೈಸಬೇಕೆಂಬ ಹಂಬಲವಿದ್ದರೂ, ಅದ್ಯಾಕೋ ಆಕೆಯ ಆರೋಗ್ಯ ಕೈಕೊಡುತ್ತಿದೆ.ತಾನು ಪೊರೆದ ಮಗುವಿಗೆ ಹಾಲುಣಿಸಲು ಭಾನುಮತಿಗೆ ಸಾಧ್ಯವಾಗುತ್ತಿಲ್ಲ ದೇಹದೊಳಗೆ ಹಾಲು ಉತ್ಪತ್ತಿಯಾಗುತ್ತಿಲ್ಲ.ಹೀಗಾಗಿ ತಾನು ಈವರೆಗೂ ಜನ್ಮ ನೀಡಿದ ಮೂರು ಮರಿಯಾನೆಗಳಿಗೆ ಹಾಲುಣಿಸಲು ಸಾದ್ಯವಾಗದೇ,ಭಾನುಮತಿ ಮರಿಗಳ ಸಾವಿಗೆ ಕಾರಣಳಾಗಿದ್ದಾಳೆ.

2021 ರಲ್ಲಿ ಸಕ್ರೆಬೈಲಿನ ಕ್ರಾಲ್ ಬಳಿ ಭಾನುಮತಿ ಹೆಣ್ಣುಮರಿಗೆ ಜನ್ಮ ನೀಡಿದ ತಕ್ಷಣವೇ ಕಾಲಿನಿಂದ ಒದ್ದು ದೂರವಾಗಿದ್ದಳು..ಇದನ್ನು ಸೂಕ್ಷ್ಮವಾಗಿ ಗಮನಿಸಿದ ವನ್ಯಜೀವಿ ವೈದ್ಯ ಡಾಕ್ಟರ್ ವಿನಯ್, ಮತ್ತೆ ಮರಿಯನ್ನು ತಾಯಿಯ ಬಳಿ ಕರೆತಂದು ಹಾಲಿನ ಬಾಟಲಿ ಮೂಲಕ ಹಾಲುಣಿಸುವ ಪ್ರಯತ್ನ ಮಾಡಿದ್ದರು. 

READ : ಆನೆ ಬಾಲಕ್ಕೆ ಕತ್ತಿಯಿಂದ ಕಡಿದವರು ಯಾರು? | ಬಾನುಮತಿ ಆನೆ ವಿಚಾರದಲ್ಲಿ ಡಿಸಿಎಫ್​ ಪ್ರಸನ್ನ ಕೃಷ್ಣ ಪಟಗಾರ್ ಹೇಳಿದ್ದೇನು?

ಆದರೆ ಭಾನುಮತಿ ಮಾತ್ರ ತನ್ನ ಮಗುವಿನ ಜೊತೆ ದಿನದೂಕಲು ಇಷ್ಟವಿಲ್ಲದೆ ದೂರವಾದಳು.ಆದರೂ ವೈದ್ಯರು ಬಿಡದೆ ಮರಿಯಾನೆಗೆ ತಾಯಿಯಿಂದ ಹಾಲುಣಿಸುವ ಪ್ರಯತ್ನ ಮಾಡಿದರೂ ಭಾನುಮತಿ ಮಾತ್ರ ಸ್ಪಂಧಿಸಲೇ ಇಲ್ಲ. ತದನಂತರದಲ್ಲಿ ಮರಿ ಸಾವನ್ನಪ್ಪಿತು. ಭಾನುಮತಿ ದೂರ ಮಾಡಿದ ಮೂರು ಮರಿಗಳು ಸಾವನ್ನಪ್ಪಿದೆ ಈಗ ನಾಲ್ಕನೆ ಬಾರಿಗೆ ಹೆಣ್ಣು ಮರಿಗೆ ಜನ್ಮ  ನೀಡಿದೆ. ನಾಲ್ಕನೇ ಮರಿಗಾದರೂ ಭಾನುಮತಿ ಹಾಲುಣಿಸಿ ಬದುಕಿಸಿಕೊಳ್ಳುವಳೇ ಎಂಬುದು ಪ್ರಶ್ನೆಯಾಗಿ ಉಳಿದಿದೆ.

ಸಾಮಾನ್ಯವಾಗಿ ಪ್ರಾಣಿಗಳಲ್ಲಿ ತಾಯಿ ಜನ್ಮ ನೀಡಿದಾಗ,ಮರಿಯನ್ನೇ ತಿನ್ನುವ,ಇಲ್ಲವೇ  ದೂರ ಮಾಡುವ  ಹಾಗು ಕೊಲ್ಲುವ ಪ್ರವೃತ್ತಿ ಪ್ರಕೃತಿದತ್ತವಾಗಿ ಬಂದಿದೆ.ಇದು ಆನೆಗಳಿಗೂ ಅನ್ವಯಿಸುತ್ತದೆ. .ಭಾನುಮತಿ ತಾಯಿಯಾಗಲು ಯೋಗ್ಯಳಾಗಿದ್ದಳೂ,ಈ ಹಿಂದೆ ಜನ್ಮ ನೀಡಿದ ಎರಡು ಮರಿಗಳು ಬದುಳಿದಿಲ್ಲ.ತಾಯಿಯ ಹಾಲಿನ ಪೌಷ್ಠಿಕತೆ ಮಗುವಿಗೆ ದಕ್ಕದಿದ್ದರೆ, ಅದು ಆರೋಗ್ಯಪೂರ್ಣವಾಗಿ ಬೆಳೆಯಲು ಸಾಧ್ಯವಿಲ್ಲ. ಅದೇ ರೀತಿ ಭಾನುಮತಿ ದೇಹದಲ್ಲಿ ಹಾಲಿನ ಉತ್ಪಾದನೆಯಾಗುತ್ತಿಲ್ಲ.ಹೀಗಾಗಿ ಅದು ಸಹಜವಾಗಿ ಮರಿಯನ್ನು ದೂರ ಮಾಡುತ್ತಿದೆ.

ಈ ಬಾರಿ ಪುನಃ ಭಾನುಮತಿ ಮರಿಗೆ ಹಾಲುಣಿಸದಿದ್ದರೆ,  ವೈದ್ಯರು ಹಾಲಿನ ಪುಡಿಯ ಹಾಲನ್ನು ನಿಪ್ಪಲ್ ಮೂಲಕ ಮರಿಯಾನೆಗೆ ಹಾಲು ನೀಡುವುದು ಅನಿವಾರ್ಯವಾಗುತ್ತದೆ. ತಾಯಿಯ ಬಳಿಯೇ ಹಾಲನ್ನು ನೀಡಬೇಕಾಗುತ್ತದೆ. ಹುಟ್ಟಿದ ಮಗುವಿಗೆ ತಾಯಿ ಹಾಲಿನ ಭಾಗ್ಯ ಸಿಗದಿದ್ದರೆ,ಆರೋಗ್ಯಪೂರ್ಣವಾಗಿ ಬೆಳೆಯುವುದು ಕಷ್ಟ. ಈ ಬಾರಿಯಾದ್ರೂ ಭಾನುಮತಿ ಮರಿಗೆ ತಾಯಿ ಪ್ರೀತಿ ತೋರಲಿ ಎಂಬುದು ಪ್ರಾಣಿ ಪ್ರೀಯರ ಆಶಯವಾಗಿದೆ .


Share This Article