ರಾಜ್ಯದ ನಂಬರ್​ 01 ಇನ್ವೆಸ್ಟಿಗೇಷನ್​ ಅಧಿಕಾರಿ ಬಾಲರಾಜ್​/ ಜ್ಞಾನ ಭಾರತಿ ಕೇಸ್​ ಬಿಡಿಸಿದ್ದು ಹೇಗೆ ಗೊತ್ತಾ ?DYSP ಬಾಲರಾಜ್​ Investigation part-3

ಮುಂದೇನು ಮಾಡಬೇಕೆಂದು ಯೋಚಿಸುತ್ತಿದ್ದಾಗ ಇದ್ದಕಿದ್ದಂತೆ ನನಗೆ 15 ದಿನಗಳ ಹಿಂದೆ ನಡೆದಿದ್ದ ಆಟೋ ಡ್ರೈವರ್‌ನ ಪ್ರಕರಣ ನೆನಪಾಯಿತು

ರಾಜ್ಯದ ಪೊಲೀಸ್ ಇಲಾಖೆಗೆ ಎದುರಾಗಿದ್ದ ಚಾಲೆಂಜಿಂಗ್​ ಕ್ರೈಂ ಕೇಸ್​ಗಳ ಪೈಕಿ , ಜ್ಞಾನಭಾರತಿ ರೇಪ್​ ಕೇಸ್​ ಮುಖ್ಯವಾದುದು , ಇಂತಹದ್ದೊಂದು ಪ್ರಕರಣವನ್ನು ಕೈಗೆತ್ತಿಕೊಂಡು, ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಶ್ರಮವಹಿಸಿದ್ದ ಬಾಲರಾಜ್​ರವರಿಗೆ ಅರ್ಹವಾದ ಗೌರವವೇ ಲಭಿಸಿದೆ. ಈ ನಿಟ್ಟಿನಲ್ಲಿ ಟುಡೆ, ಜ್ಞಾನಭಾರತಿ ಕೇಸ್​ನ ಸರಣಿಯನ್ನು ಬಾಲರಾಜ್​ರವರೇ ವಿವರಿಸಿದಂತೆ ಓದುಗರ ಮುಂದಿಡುತ್ತಿದೆ. ಇದರ ಭಾಗ ಎರಡರ ಸರಣಿ ಇಲ್ಲಿದೆ : 15 ದಿನದ ಹಿಂದೆ ನಡೆದಿದ್ದ ಘಟನೆ ಬೆನ್ನಲ್ಲೆ ನಡೆದಿತ್ತು ಭೀಕರ ಘಟನೆ/ ಜ್ಞಾನಭಾರತಿ ಕಾಡಲ್ಲಿ ಅಂದು ನಡೆದಿದ್ದು ಏನು? DYSP ಬಾಲರಾಜ್​ Investigation part-2

ನೆನಾಪಾಯ್ತು 15 ದಿನದ ಹಳೆಯ ಪ್ರಕರಣ

ಮುಂದೇನು ಮಾಡಬೇಕೆಂದು ಯೋಚಿಸುತ್ತಿದ್ದಾಗ ಇದ್ದಕಿದ್ದಂತೆ ನನಗೆ 15 ದಿನಗಳ ಹಿಂದೆ ನಡೆದಿದ್ದ ಆಟೋ ಡ್ರೈವರ್‌ನ ಪ್ರಕರಣ ನೆನಪಾಯಿತು. ಕೂಡಲೇ ನಾನು ಹುಡುಕಾಟ ನಡೆಸಲು ಬಂದಿದ್ದ ಬಸವೇಶ್ವರ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಶ್ರೀಮತಿ ಗೀತಾ ಕುಲಕರ್ಣಿರವರನ್ನು ನ್ಯಾಷನಲ್ ಲಾ ಕಾಲೇಜಿನ ಯುವತಿಯರ ಹಾಸ್ಟೆಲ್‌ಗೆ ಕಳುಹಿಸಿ ಯುವತಿ ಏನಾದರೂ ಹಾಸ್ಟೆಲ್‌ಗೆ ಬಂದಿರುವ ಬಗ್ಗೆ ತಿಳಿದುಕೊಳ್ಳುವಂತೆ ಹೇಳಿ ಕುಳುಹಿಸಿದೆ. ಹೋದ ಸ್ವಲ್ಪ ಹೊತ್ತಿನಲ್ಲಿಯೇ ಶ್ರೀಮತಿ ಗೀತಾ ಕುಲಕರ್ಣಿರವರು ನನಗೆ ದೂರವಾಣಿ ಕರೆ ಮಾಡಿ ಸದರಿ ಯುವತಿಯು ಮರಳಿ ಹಾಸ್ಟೆಲ್‌ಗೆ ಬಂದಿರುವುದಾಗಿಯೂ ತಾನು ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಿರುವುದಾಗಿ ತಿಳಿಸಿದರು.

ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ತಕ್ಷಣಕ್ಕೆ ಡಿಸಿಪಿರವರಿಗೆ ಮತ್ತು ನನಗೆ ಯುವತಿ ಜೀವಂತವಾಗಿ ಸಿಕ್ಕ ಬಗ್ಗೆ ಸ್ವಲ್ಪ ಸಮಾಧಾನವಾಯಿತು. ಡಿಸಿಪಿರವರು ತಾನೂ ಹಾಸ್ಟೆಲ್‌ಗೆ ಹೋಗುವುದಾಗಿ ತಿಳಿಸಿ ಮತ್ತೆ ನನಗೆ ಕಾಡಿನಲ್ಲಿ ಕೂಂಬಿಂಗ್ ಮಾಡಿ ಯುವತಿಯನ್ನು ಕರೆದುಕೊಂಡು ಹೋದವರ ಬಗ್ಗೆ ಹುಡುಕಲು ಕಳುಹಿಸಿದರು. ನಾನು ಕಾಡಿನಲ್ಲಿ ಇರುವಾಗಲೇ ಶ್ರೀಮತಿ ಗೀತಾ ಕುಲಕರ್ಣಿರವರು ಪೋನ್ ಮಾಡಿ ಬಹಳ ಕೆಟ್ಟ ಸುದ್ದಿಯನ್ನು ನೀಡಿದರು. ಆ ಯುವತಿ ನೇಪಾಳ ದೇಶದವಳಾಗಿದ್ದಳು ಮತ್ತು 08 ಜನ ಯುವಕರು ಸುಮಾರು 02 ಗಂಟೆಗಳಿಗೂ ಹೆಚ್ಚಿನ ಸಮಯ ಆ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆ ಯುವತಿಯನ್ನು ಮತ್ತೆ ಕರೆದುಕೊಂಡು ಬಂದು ನ್ಯಾಷನಲ್ ಲಾ ಕಾಲೇಜಿನ ಹತ್ತಿರ ಬಿಟ್ಟು ಹೋಗಿದ್ದರು.

ದಾಖಲಾಯ್ತು ದೂರು, ತನಿಖೆ ಆರಂಭ

ನಾನು ಶ್ರೀಮತಿ ಗೀತಾ ಕುಲಕರ್ಣಿರವರಿಗೆ ಆ ಯುವತಿಯಿಂದ ಘಟನೆ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುವಂತೆ ಮತ್ತು ಆಕೆಯಿಂದ ಮತ್ತು ಆಕೆಯ ಕೈ ಬರಹದಿಂದ ದೂರನ್ನು ಪಡೆದುಕೊಳ್ಳುವಂತೆ ತಿಳಿಸಿದೆ. ಸ್ವಲ್ಪ ಸಮಯದ ನಂತರ ಶ್ರೀಮತಿ ಗೀತಾ ಕುಲಕರ್ಣಿರವರು ಆ ಯುವತಿಯು ನೀಡಿದ್ದ ದೂರನ್ನು ಮತ್ತು ಆ ಯುವತಿಯನ್ನು ಕರೆದುಕೊಂಡು ಜ್ಞಾನಭಾರತಿ ಪೊಲೀಸ್ ಠಾಣೆಗೆ ಬಂದಿದ್ದು, ಅಪರಾಧ ಸಂಖ್ಯೆ 401/2013, ಕಲಂ. 376(ಜಿ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಯಿತು ಮತ್ತು ಸದರಿ ಯುವತಿಯನ್ನು ವೈದ್ಯಕೀಯ ತಪಸಣೆ ಮತ್ತು ಚಿಕಿತ್ಸೆ ಕುರಿತಂತೆ ಶ್ರೀಮತಿ ಗೀತಾ ಕುಲಕರ್ಣಿರವರ ಬೆಂಗಾವಲಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಯಿತು.

ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ಡಿಸಿಪಿರವರಿಗೆ ಸದರಿ ಯುವತಿಯನ್ನು ಮಾತನಾಡಿಸಿದ ನಂತರ ಘಟನೆ ನಡೆದ ಬಗ್ಗೆ ಅನುಮಾನ ಶುರುವಾಯಿತು. ಯಾಕೆಂದರೆ ಸುಮಾರು 08 ಜನ ಯುವಕರು 02 ಗಂಟೆಗಳ ಕಾಲ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದು ಕೂಡ ಆಕೆಯ ದೇಹದ ಮೇಲೆ ಯಾವುದೇ ಗಾಯಗಳು ಕಂಡುಬರಲಿಲ್ಲ ಆಕೆಯೂ ಆರಾಮವಾಗಿ ನಡೆಯುತ್ತಿದ್ದಳು ಮತ್ತು ಯಾವುದೇ ಒತ್ತಡವಿಲ್ಲದೇ ಮಾತನಾಡುತ್ತಿದ್ದಳು. ಘಟನೆ ನಡೆದಿರುವ ಬಗ್ಗೆಯೇ ಅವರಿಗೆ ಸಂಶಯ ಶುರುವಾಗಿತ್ತು. ಸದರಿ ಯುವತಿಯು ಸುಳ್ಳು ಹೇಳುತ್ತಿರಬಹುದು ಎಂದು ಶಂಕಿಸಿದರು ಆದರೆ 15 ದಿನಗಳ ಹಿಂದೆ ನಡೆದಿದ್ದ ಘಟನೆ ನನಗೆ ನೆನಪಿಗೆ ಬಂದಿದ್ದು ಆ ಘಟನೆಯೂ ಕೂಡ ಇದೇ ರೀತಿ ನಡೆದಿದ್ದು, ಸದರಿ ಪ್ರಕರಣದಲ್ಲಿಯೂ ಕೂಡ ಆಟೋ ಚಾಲಕನ ಹೆಂಡತಿಯ ದೇಹದ ಮೇಲೆ ಯಾವುದೇ ಗಾಯಗಳು ಆಗಿಲ್ಲದಿರುವುದು ನೆನಪಿಗೆ ಬಂತು. ನಾನು ಸದರಿ ವಿಷಯವನ್ನು ಡಿಸಿಪಿರವರಿಗೆ ವಿವರಿಸಿದೆನು.

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಸಂತ್ರಸ್ತೆ ಹೇಳಿದ ಘೋರ ಘಟನೆ

ಸದರಿ ಯುವತಿಯು ನೇಪಾಳ ದೇಶದವರಾಗಿದ್ದು ಆಕೆಯೂ ಘಟನೆಯ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಬಹಳ ವಿವರವಾಗಿ ನೀಡಿದರು. ಮತ್ತು ಘಟನೆ ಬಗ್ಗೆ ಧೈರ್ಯವಾಗಿ ದೂರು ನೀಡಲು ಮುಂದೆ ಬಂದಿದ್ದರು, ಬಹುಶಃ ಕಾನೂನು ವಿದ್ಯಾರ್ಥಿಯಾಗಿದ್ದರಿಂದ ಆ ಧೈರ್ಯ ಅವರಿಗೆ ಬಂದಿರಬಹುದು. ಘಟನೆ ನಡೆದಿದ್ದ ರೀತಿಯನ್ನು ಕೇಳಿಸಿಕೊಂಡ ನಮಗೆ ನಿಜವಾಗಿಯೂ ಗಾಬರಿಯಾಯಿತು ಆ ರೀತಿಯಲ್ಲಿ ಘಟನೆ ನಡೆದಿತ್ತು.ಕಾರಿನಲ್ಲಿ ಹುಡಗನೊಂದಿಗೆ ಮಾತನಾಡುತ್ತ ಕುಳಿತ್ತಿದ್ದ ಯುವತಿಯನ್ನು ಎಳೆದುಕೊಂಡು ಕಾಡಿನೊಳಕ್ಕೆ ಹೋಗಿದ್ದು, ಆ ಯುವತಿಯಿಂದ ಮೊಬೈಲನ್ನು ಕಿತ್ತುಕೊಳ್ಳಲಾಗಿತ್ತು. 08 ಜನರಿದ್ದ ಆ ತಂಡದಲ್ಲಿ 06 ಜನ ಯುವತಿಯನ್ನು ಬಲವಂತವಾಗಿ ಎಳೆದುಕೊಂಡು, ಇನ್ನಿಬ್ಬರು ಹುಡುಗನನ್ನು ಕರೆದುಕೊಂಡು ಪರ್ಸನಲ್ಲಿದ್ದ ಹಣಕ್ಕಾಗಿ ಹೊರಟ್ಟಿದ್ದು ಅಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್‌ನನ್ನು ನೋಡಿ ಹುಡುಗನ್ನು ಅಲ್ಲೇ ಬಿಟ್ಟು ಯುವತಿಯನ್ನು ಎಳೆದೊಯ್ದಿದ್ದ ತಂಡವನ್ನು ಸೇರಿಕೊಂಡಿದ್ದರು. ಕಾಡಿನಲ್ಲಿ ಯುವತಿಯ ಚಪ್ಪಲಿಗಳು ಸಿಕ್ಕ ಜಾಗದಲ್ಲಿ, ಆ ಗುಂಪಿನಲ್ಲಿದ್ದ ಓರ್ವ ಪ್ರಥಮಬಾರಿಗೆ ಅತ್ಯಾಚಾರವೆಸಗಿದ್ದ,

ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್​ಪೋಸ್ಟ್​ನಲ್ಲಿ 46 ಕೇಸ್​/ ಏನಿದು? ವಿವರ ನೋಡಿ

ಯುವತಿಗೆ ಕನ್ನಡ ಭಾಷೆ ಗೊತ್ತಿಲ್ಲವಾದ್ದರಿಂದ ಆ ಯುವಕರು ತಮ್ಮ ತಮ್ಮಲ್ಲಿಯೇ ಕನ್ನಡ ಭಾಷೆ ಮಾತನಾಡುತ್ತಿದ್ದರು. ಕತ್ತಲೆಯಲ್ಲಿ ಚಪ್ಪಲಿಗಳು ಕಳೆದುಹೋಗಿದ್ದರಿಂದ ಆ ಯುವತಿಗೆ ನಡೆಯಲು ಸಾಧ್ಯವಾಗದಿದ್ದಾಗ ಸದರಿ ಯುವತಿಯನ್ನು ಇಬ್ಬರು ಯುವಕರು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದರು. ಸದರಿ ಯುವತಿಯು ಸ್ಕೂಲಕಾಯುದವಳಾಗಿದ್ದರಿಂದ ಆಗಾಗ ಬೇರೆ ಯುವಕರು ಕೂಡ ಹೆಗಲು ಕೊಡುತ್ತಿದ್ದರು. ನಂತರ ಆಕೆಯನ್ನು ಹೊತ್ತುಕೊಂಡು ವೃಷಭಾವತಿ ನದಿಯ ದಂಡೆಗೆ ಬರಲಾಯಿತು. ದಂಡೆಯಲ್ಲಿ ಮತ್ತೊಮ್ಮೆ ಗುಂಪಿನಲ್ಲಿದ್ದ ಯುವಕನೊಬ್ಬ ಅತ್ಯಾಚಾರವೆಸಗಿದ್ದ. ನದಿಯ ದಂಡೆಯಲ್ಲಿ ಮತ್ತೆ ಆಕೆಯನ್ನು ಹೊತ್ತುಕೊಂಡು ಸದರಿ ಜಾಗದಲ್ಲಿ ನದಿಯನ್ನು ದಾಟಬಹುದೆಂಬ ವಿಷಯ ಯಾರಿಗೂ ತಿಳಿದಿರಲಿಲ್ಲ ಹಾಗಾಗಿ ನಾವು  ಹುಡುಕಿಕೊಂಡು ಹೋದಾಗ ನದಿಯನ್ನು ದಾಟಿರಬಹುದೆಂಬ ಊಹೆ ಕೂಡ ನಮಗೆ ಆಗಿರಲಿಲ್ಲ.

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ನದಿಯನ್ನು ದಾಟಿದ ನಂತರ ಸುಮಾರು 100 ಅಡಿ ದೂರದಲ್ಲಿ ಸುಮಾರು ಅಡಿ ಎತ್ತರದ ಕಾಂಪೌಂಡ್ ಇದ್ದು ಯುವಕರ ಗುಂಪು ಯುವತಿಯನ್ನು ಹೊತ್ತುಕೊಂಡು ಸದರಿ ಕಾಂಪೌಂಡನ್ನು ದಾಟಿದ್ದು, ಸದರಿ ಕಾಂಪೌಂಡಿನ ಪಕ್ಕದಲ್ಲೇ ಹುಲ್ಲಿನ ಹಾಸು ಇದ್ದು ಅದರ ಮೇಲೆ ಆಕೆಯನ್ನು ಮಲಗಿಸಲಾಗಿತ್ತು ಮತ್ತು  08 ಜನರು ಕೂಡ ಒಬ್ಬೊಬ್ಬರಂತೆ ಸತತ 02 ಗಂಟೆಯ ವರಗೆ ಅತ್ಯಾಚಾರವೆಸಗಿದ್ದರು. ಅದರಲ್ಲಿ ಒಬ್ಬ ಯುವಕ ಒಂದು ಬಿಳಿಯ ಬಣ್ಣದ ಕರ್ಚಿಫನ್ನು ನೀಡಿ  ಒರೆಸಿಕೊಳ್ಳುವಂತೆ ತಿಳಿಸಿದ್ದನು. ಪ್ರತಿಯೊಬ್ಬರು ಅತ್ಯಾಚಾರವೆಸಗಿದ ನಂತರ ಸದರಿ ಯುವತಿಗೆ  ಕರ್ಚಿಫ್‌ ಕೊಟ್ಟು ಸನ್ನೆ ಮಾಡುತ್ತಿದ್ರು.  ಸುಮಾರು 02 ಗಂಟೆಯ ಅತ್ಯಾಚಾರದ ನಂತರ ಯುವತಿಯ ಗುಪ್ತಾಂಗದಲ್ಲಿ ನೋವು ಉಂಟಾದ್ದರಿಂದ ಸದರಿ ಜಾಗದಲ್ಲಿ ನದಿಯನ್ನು ದಾಟಬಹುದೆಂಬ ವಿಷಯ ಯಾರಿಗೂ ತಿಳಿದಿರಲಿಲ್ಲ ಹಾಗಾಗಿ ನಾವು  ಹುಡುಕಿಕೊಂಡು ಹೋದಾಗ ನದಿಯನ್ನು ದಾಟಿರಬಹುದೆಂಬ ಊಹೆ ಕೂಡ ನಮಗೆ ಆಗಿರಲಿಲ್ಲ.

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ನದಿಯನ್ನು ದಾಟಿದ ನಂತರ ಸುಮಾರು 100 ಅಡಿ ದೂರದಲ್ಲಿ NAAC(ನ್ಯಾಷನಲ್ ಅಸೆಸ್‌ಮೆಂಟ್ ಅಂಡ್ ಅಕ್ರಡೇಷನ್‌ ಕೌನ್ಸಿಲ್‌) ಸಂಸ್ಥೆಯ ಸುಮಾರು ಅಡಿ ಎತ್ತರದ ಕಾಂಪೌಂಡ್ ಇದ್ದು ಯುವಕರ ಗುಂಪು ಯುವತಿಯನ್ನು ಹೊತ್ತಿಕೊಂಡು ಸದರಿ ಕಾಂಪೌಂಡನ್ನು ದಾಟಿದ್ದು, ಸದರಿ ಕಾಂಪೌಂಡಿನ ಪಕ್ಕದಲ್ಲೇ ಹುಲ್ಲಿನ ಹಾಸು ಇದ್ದು ಅದರ ಮೇಲೆ ಆಕೆ ತೊಟ್ಟಿದ್ದ ಸ್ವೆಟರ್‌ನ್ನು ಬಿಚ್ಚಿಸಿ ಹುಲ್ಲಿನ ಹಾಸಿನ ಮೇಲೆ ಹಾಕಿ ಅದರ ಮೇಲೆ ಆಕೆಯನ್ನು ಮಲಗಿಸಲಾಗಿತ್ತು. 08 ಜನರು ಕೂಡ ಒಬ್ಬೊಬ್ಬರಂತೆ ಸತತ 02 ಗಂಟೆಯ ವರಗೆ ಅತ್ಯಾಚಾರವೆಸಗಿದ್ದರು. ಅದರಲ್ಲಿ ಒಬ್ಬ ಯುವಕ ಒಂದು ಬಿಳಿಯ ಬಣ್ಣದ ಕರ್ಚಿಫನ್ನು ನೀಡಿ ಆಕೆಯ ಗುಪ್ತಾಂಗವನ್ನು ಒರೆಸಿಕೊಳ್ಳುವಂತೆ ತಿಳಿಸಿದ್ದನು. ಪ್ರತಿಯೊಬ್ಬರು ಅತ್ಯಾಚಾರವೆಸಗಿದ ನಂತರ ಸದರಿ ಯುವತಿಯು ತನ್ನ ಗುಪ್ತಾಂಗವನ್ನು ಕರ್ಚಿಫ್‌ನಿಂದ ಒರೆಸಿಕೊಳ್ಳುವಂತೆ ಸನ್ನೆಯ ಮುಖಾಂತರ ತಿಳಿಸುತ್ತಿದ್ದರು. ಸುಮಾರು 02 ಗಂಟೆಯ ಅತ್ಯಾಚಾರದ ನಂತರ ಯುವತಿಯು ಅಳಲು ಪ್ರಾರಂಭಿಸಿ ಬಿಟ್ಟು ಬಿಡುವಂತೆ ತನ್ನ ಭಾಷೆಯಲ್ಲಿ ಕೇಳಿಕೊಂಡಳು.

ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ಮತ್ತೆ ಅವಳನ್ನು ಎತ್ತಿಕೊಂಡು ಮತ್ತೊಂದು ಕಾಂಪೌಂಡನ್ನು ದಾಟಿಸಿ ಅಲ್ಲಿದ್ದ ದೇವಸ್ಥಾನದ ಪಕ್ಕದಲ್ಲಿ ಹಾಯ್ದು ಬೆಂಗಳೂರು ವಿಶ್ವವಿದ್ಯಾನಿಲಯದ ಗಾಂಧಿಭವನದ ರಸ್ತೆಯಲ್ಲಿ ಆಕೆಯನ್ನು ಬಿಡಲಾಗಿತ್ತು. ಮತ್ತು ಆ ಯುವಕರ ಗುಂಪಿನಲ್ಲಿದ್ದ ಒಬ್ಬ ತನ್ನ ಚಪ್ಪಲಿಯನ್ನು ನೀಡಿ ಅದನ್ನು ಹಾಕಿಕೊಂಡು ನಡೆದುಕೊಂಡು ಹೊಗುವಂತೆ ಸೂಚಿಸಿದ್ದ ಮತ್ತು ಆ ಗುಂಪಿನಲ್ಲಿದ್ದ ಓರ್ವ ಯುವಕ ಯುವತಿಗೆ 10 ರೂಪಾಯಿಯ ನೋಟನ್ನು ನೀಡಿ ನಡೆಯಲು ಸಾಧ್ಯವಾಗದಿದ್ದರೆ ಆಟೋದಲ್ಲಿ ಹೋಗುವಂತೆ ಸೂಚಿಸಿದ್ದ.

ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್​ಪೋಸ್ಟ್​ನಲ್ಲಿ 46 ಕೇಸ್​/ ಏನಿದು? ವಿವರ ನೋಡಿ

ಆ ಯುವಕರಿಗೆ ತಾವು ನಡೆಸಿದ ಅತ್ಯಾಚಾರದ ಬಗ್ಗೆ ದೂರು ದಾಖಲಾಗಬಹುದೆಂಬ ಅನುಮಾನವೂ ಸಹ ಆ ಸಮಯದಲ್ಲಿ ಅವರಿಗೆ ಬಂದಿರಲಿಲ್ಲ. ಮತ್ತು ಮುಂದೆ ತಾವು ಮಾಡಿದ ಕೆಲಸಕ್ಕಾಗಿ ದೊಡ್ಡ ಬೆಲೆಯನ್ನೇ ತೇರಬೇಕಾಗುತ್ತದೆ ಎಂಬ ಬಗ್ಗೆ ಸಣ್ಣ ಸಂಶಯವೂ ಕೂಡ ಇರಲಿಲ್ಲ. ಯುವತಿಯು ಅತ್ಯಾಚಾರವೆಸಗಿದವರ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡಿದ್ದರು. ಮೊದಲನೆದಾಗಿ ಅವರೆಲ್ಲಾರು ಕನ್ನಡ ಮಾತನಾಡುತ್ತಿದ್ದರು ಮತ್ತು ಸದರಿ ಕನ್ನಡವು ಬೆಂಗಳೂರಿಗರು ಮಾತನಾಡುವ ಕನ್ನಡದಂತೆ ಇರಲಿಲ್ಲ. 

ಭಾಗ 2 : ತನಿಖೆಯ ಜಾಡು ಹಿಡಿದು

ಸಂತ್ರಸ್ತ ಯುವತಿಯು ಬಹಳ ಸೂಕ್ಷ್ಮಮತಿಯಾಗಿದ್ದು ಸಣ್ಣ ಸಣ್ಣ ವಿಷಯಗಳನ್ನು ಗ್ರಹಿಸುವ ಮತ್ತು ಅದನ್ನು ನೆನಪಿಟ್ಟುಕೊಳ್ಳುವ ವಿಶೇಷವಾದ ಶಕ್ತಿಯನ್ನು ಪಡೆದಿದ್ದರು. ಈ ವಿಷಯವು ಅವರು ತಮ್ಮ ಸ್ವಂತ ಬರವಣಿಗೆಯಲ್ಲಿ ಆರೋಪಿತರ ಬಗ್ಗೆ ನೀಡಿದ ವಿವರಗಳಿಂದ ತಿಳಿದುಬಂದಿತು. ಅಲ್ಲದೇ ಆಕೆಯು ಅಗಾಧವಾದ ಜ್ಞಾಪನಶಕ್ತಿಯನ್ನು ಕೂಡ ಹೊಂದಿರುವುದು ಕಂಡುಬಂತು. ಆಕೆಯು 08 ಜನ ಆರೋಪಿತರ ಬಗ್ಗೆ ವಿವರಣೆಯನ್ನು ನೀಡಿದ್ದಳು. ಆರೋಪಿಗಳು ಕನ್ನಡ ಭಾಷೆ ಮಾತನಾಡುತ್ತಿದ್ದರು ಮತ್ತು ಅವರು ಆಡುತ್ತಿದ್ದ ಕನ್ನಡ ಭಾಷೆ ಬೆಂಗಳೂರಿನ ಜನರು ಆಡುತ್ತಿದ್ದ ಕನ್ನಡ ಭಾಷೆಯಂತೆ ಇರಲಿಲ್ಲವೆಂದು ಹಾಗು ಅವರು ಹಾಕಿಕೊಂಡಿದ್ದ ಬಟ್ಟೆಗಳು ಹಳೆಯದಾಗಿದ್ದವು ಮತ್ತು ಅವುಗಳನ್ನು ಬಹಳ ದಿನಗಳಿಂದ ತೊಳೆಯದೇ ಇದ್ದುದರಿಂದ ಅವು ಕೊಳೆಯಾಗಿದ್ದವು ಮತ್ತು ಅವುಗಳಿಂದ ವಾಸನೆ ಬರುತ್ತಿತ್ತು ಮತ್ತು ಅವರು ಬಹಳ ದಿನಗಳಿಂದ ಸ್ನಾನ ಮಾಡದೇ ಇದ್ದುದರಿಂದ ಅವರ ದೇಹದಿಂದ ಬೆವರಿನ ವಾಸನೆ ಬರುತ್ತಿತ್ತು. ಅವರನ್ನು ನೋಡಿದರೆ ಅವರು ಹಳ್ಳಿಗರಂತೆ ಕಾಣುತ್ತಿದ್ದರು ಮತ್ತು ನಾನು ಅವರೆಲ್ಲರನ್ನು ಜ್ಞಾನಭಾರತಿಯ ಪರೀಕ್ಷಾ ಕೇಂದ್ರದ ಬೀದಿ ದೀಪದ ಬೆಳಕಿನಲ್ಲಿ ನೋಡಿರುತ್ತೇನೆ ಮತ್ತು ಅವರು ನನ್ನ ಮೇಲೆ ಅತ್ಯಾಚಾರ ಎಸಗುವ ಸಮಯದಲ್ಲಿ ಬಹಳ ಹತ್ತಿರದಿಂದ ನೋಡಿದ್ದು ಅವರನ್ನು ಮತ್ತೊಮ್ಮೆ ನೋಡಿದರೆ ಗುರುತಿಸುವುದಾಗಿ ತಿಳಿಸಿದ್ದಳು.

ಇದನ್ನು ಸಹ ಓದಿ : BREAKING : ಗ್ರಾಮ ಪಂಚಾಯತಿ ಸದಸ್ಯ, ಅದ್ಯಕ್ಷ, ಉಪಾಧ್ಯಕ್ಷರಿಗೆ ಗುಡ್​ ನ್ಯೂಸ್​/ ಸರ್ಕಾರದಿಂದ ಹೊರಬಿತ್ತು ಹೊಸ ಆದೇಶ

ಖಡಕ್ ನಿರ್ಧಾರ ಕೈಗೊಂಡ ಬಾಲರಾಜ್

ಪ್ರಕರಣದ ಸೂಕ್ಷ್ಮತೆ ಮತ್ತು ಅದು ಪಡೆದುಕೊಳ್ಳುತ್ತಿದ್ದ ವ್ಯಾಪಕವಾದ ಪ್ರಚಾರದಿಂದ ನಾನು ಈ ಪ್ರಕರಣದ ತನಿಖೆಯನ್ನು ಅಚ್ಚುಕಟ್ಟಾಗಿ ಮತ್ತು ಮುತುವರ್ಜಿ ವಹಿಸಿ ಮಾಡಲು ನಿರ್ಧರಿಸಿದೆ ಮತ್ತು ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಆರೋಪಿತರಿಗೆ ಶಿಕ್ಷೆ ಕೊಡಿಸಬೇಕೆಂದು ನಾನು ನಿರ್ಧಾರ ತೆಗೆದುಕೊಂಡೆ. ಆ ಕಾಲಕ್ಕೆ ಎಫ್.ಎಸ್.ಎಲ್ ಮಡಿವಾಳದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ರವೀಂದ್ರ ಮತ್ತು ಶ್ರೀ ವಿ.ಜಿ.ನಾಯಕ್ ರವರನ್ನು ದೂರವಾಣಿಯ ಮುಖಾಂತರ ಸಂಪರ್ಕಿಸಿ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಬೇಕಾದ ಸಾಕ್ಷ್ಯಗಳ ಕುರಿತು ಚರ್ಚಿಸಿದೆ. ಅವರಿಬ್ಬರೂ ನನಗೆ ಒಳ್ಳೆಯ ಸ್ನೇಹಿತರಾಗಿದ್ದರು. 2010 ರಲ್ಲಿ ಅಸ್ಸಾಂ ನ ದಿಸ್‌ಪುರ್ ನಲ್ಲಿ ನಡೆದಿದ್ದ ಪೊಲೀಸ್‌ ಡ್ಯೂಟಿ ಮೀಟ್‌ಗೆ ತರಬೇತಿಗಾಗಿ ನಾನು ಸುಮಾರು ಎರಡು ತಿಂಗಳ ಕಾಲ ಎಫ್.ಎಸ್.ಎಲ್ ಮಡಿವಾಳದಲ್ಲಿ ತರಬೇತಿಯಲ್ಲಿ ಭಾಗವಹಿಸಿದ್ದೆ. ಆ ಸಮಯದಲ್ಲಿ ಅವರಿಬ್ಬರು ನನಗೆ ಪರಿಚಯವಾಗಿದ್ದರು. ಮತ್ತು ಅವರಿಂದ ತನಿಖೆಯ ಬಗ್ಗೆ ಹಾಗು ಸಾಕ್ಷ್ಯ ಸಂಗ್ರಹದ ಬಗ್ಗೆ ಬಹಳಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೆ. ಈ ಸಮಯದಲ್ಲಿ ಅವರು ನೀಡಿದ ಸಲಹೆ, ಸೂಚನೆಗಳು ಪ್ರಕರಣದಲ್ಲಿ ಆರೋಪಿತರಿಗೆ ಶಿಕ್ಷೆಯಾಗಲು ಸಹಕಾರಿಯಾದವು.

ಇದನ್ನು ಸಹ ಓದಿ :ಶಿವಮೊಗ್ಗ ಜಿಲ್ಲೆಯಲ್ಲಿ ಒಂದೆ ದಿನ ಎರಡು ಕೊಲೆ/ ಏನಿವು ಘಟನೆ? ನಡೆದಿದ್ದು ಏನು? ವಿವರ ಇಲ್ಲಿದೆ

ಸ್ಥಳ ಪಂಚನಾಮೆಗೆ ಪಂಚರಾಗಿ ಒಳ್ಳೆಯ ವಿದ್ಯಾಭ್ಯಾಸ ಇರುವ ಮತ್ತು ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಅಭಿಯೋಗದ ಪರವಾಗಿ ಸಾಕ್ಷಿಯನ್ನು ಹೇಳಲು ಬದ್ಧರಾಗಿರುವಂತಹ ಇಬ್ಬರು ಸಾಕ್ಷಿದಾರರನ್ನು ಕರೆತರಲು ಸಿಬ್ಬಂದಿಗೆ ಸೂಚಿಸಿದೆ. ನಾನು ಅವರಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡಿ ಪ್ರಕರಣದ ಸೂಕ್ಷ್ಮತೆಯನ್ನು ಅವರಿಗೆ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡೆ ಮತ್ತು ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಸಾಕ್ಷಿ ನುಡಿಯಬೇಕಾಗಿದ್ದರಿಂದ ಪಂಚನಾಮೆಯ ಪ್ರತಿಯೊಂದು ವಿಷಯಗಳನ್ನು ಸರಿಯಾಗಿ ನೋಡಿ ಅರ್ಥಮಾಡಿಕೊಳ್ಳಬೇಕೆಂದು ತಿಳಿಸಿದೆ ಮತ್ತು ಏನಾದರು ಅನುಮಾನ ಇದಲ್ಲಿ ಕೇಳಿ ಪರಿಹರಿಸಿಕೊಳ್ಳಲು ಅವರಿಗೆ ತಿಳಿಸಿದೆ.

ಇದನ್ನು ಸಹ ಓದಿ :ದಕ್ಷಿಣಕನ್ನಡದಲ್ಲಿ ಜಾಹಿರಾತು ಕೊಟ್ಟವರಿಗೆ ಶಿವಮೊಗ್ಗದಲ್ಲಿ 6 ಲಕ್ಷ ರೂಪಾಯಿ ಮೋಸ/ ನಾಗರಿಕರೇ ಎಚ್ಚರ ಹೀಗೂ ಆಗುತ್ತೆ

ಹುಡುಗಿಯ ಜೊತೆಗಿದ್ದ ಹುಡುಗನ ಮೊಬೈಲ್ ಹಾಗು ಐಪಾಡ್, ಮತ್ತು ಯುವತಿಯ ಸಿಮ್‌ ಕಾರ್ಡ್, ಆರೋಪಿತರು ಯುವತಿಗೆ ನೀಡಿದ್ದ ಹತ್ತು ರೂ ಮುಖಬೆಲೆಯ ನೋಟು ಮತ್ತು ಎರಡು ಪ್ಯಾರಗಾನ್ ಕಂಪೆನಿಯ ಚಪ್ಪಲಿಗಳನ್ನು ಪಂಚರ ಸಮಕ್ಷಮ ಯುವತಿಯಿಂದ ಅಮಾನತ್ತು ಪಡಿಸಿಕೊಂಡೆ,  ಬಳಿಕ  ಸುಮಾರು ಇನ್ನೂರು ಮೀಟರ್ ಮುಂದೆ ಹೋದಾಗ ಯುವತಿಯ ದಾರಿಯಲ್ಲಿ ಬಿದ್ದಿದ್ದ ಎರಡು ಸ್ತ್ರೀಯರು ಧರಿಸುವ ಚಪ್ಪಲಿಗಳನ್ನು ಗುರುತಿಸಿದ್ದು ಅವುಗಳು ತನ್ನವೆಂದು ಹಾಗು ಇದೇ ಸ್ಥಳದಲ್ಲಿ ಆರೋಪಿತರಲ್ಲಿ ಒಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ, ಆ ಸಮಯದಲ್ಲಿ ತನ್ನ ಚಪ್ಪಲಿಗಳು ಕಾಲಿನಿಂದ ಬಿದ್ದು ಕತ್ತಲಲ್ಲಿ ಕಾಣೆಯಾದ ಬಗ್ಗೆ ತಿಳಿಸಿದರು. ನಾನು ಸದರಿ ಚಪ್ಪಲಿಗಳನ್ನು ಅಮಾನತ್ತುಪಡಿಸಿಕೊಂಡೆ. ಅದೇ ದಾರಿಯಲ್ಲಿ ಸದರಿ ಯುವತಿಯು ನಮ್ಮೆಲ್ಲರನ್ನು ಕರೆದುಕೊಂಡು ಸುಮಾರು ಒಂದು ಕಿ.ಮೀ ನಡೆದ ನಂತರ ಕೊಳಚೆ ನೀರಿನಿಂದ ತುಂಬಿದ್ದ ವೃಷಭಾವತಿ ನದಿಯು ಎದುರಾಯಿತು. ನದಿಯ ದಡದಲ್ಲಿದ್ದ ಒಂದು ಬಂಡೆಯನ್ನು ತೋರಿಸಿ ಇದೇ ಸ್ಥಳದಲ್ಲಿ ಆರೋಪಿತರಲ್ಲಿ ಒಬ್ಬನು ಅತ್ಯಾಚಾರ ಎಸಗಿದ್ದಾಗಿ ತಿಳಿಸಿದರು.

ಇದನ್ನು ಸಹ ಓದಿ :BREAKING / ಕುಂತಿ ಪುತ್ರನ ಜನನ/ ಸಕ್ರೆಬೈಲ್ ಬಿಡಾರದಲ್ಲಿ ಸಂತಸ/ ನಾಲ್ಕನೇ ಮರಿಗೆ ಜನ್ಮ ಕೊಟ್ಟ ಸಾಕಾನೆ

ನದಿ ದಾಟಿದ ರಹಸ್ಯ

ಮುಂದುವರೆದು ನದಿಯಲ್ಲಿ ಅಲ್ಲಲ್ಲಿ ಬಂಡೆಗಳು ಕಂಡುಬಂದವು. ಯುವತಿಯು ಸದರಿ ಬಂಡೆಗಳ ಮೇಲೆ ನಮ್ಮನ್ನು ಕರೆದುಕೊಂಡು ನದಿಯನ್ನು ದಾಟಿಸಿದರು. ನದಿಯ ದಂಡೆಯಿಂದ ಸುಮಾರು ನೂರು ಅಡಿಗಳ ದೂರದಲ್ಲಿ ಒಂದು ಏಳು ಅಡಿ ಎತ್ತರದ ಕಲ್ಲಿನ ಕಾಂಪೌಂಡ್ ಇದ್ದು ಅದರ ಮೇಲೆ ಗಾಜಿನ ಚೂರುಗಳನ್ನು ನೆಟ್ಟಿರುವುದು ಕಂಡುಬಂತು. ಯುವತಿಯು ಕಾಂಪೌಂಡಿನ ಒಂದು ಜಾಗವನ್ನು ತೋರಿಸಿ ಈ ಸ್ಥಳದಿಂದಲೇ ಆರೋಪಿತರು ತನ್ನನ್ನು ಕಾಂಪೌಂಡ್ ದಾಟಿಸಿದರೆಂದು ತಿಳಿಸಿದರು. ನಾವು ಆ ಸ್ಥಳವನ್ನು ಪರಿಶೀಲಿಸಿದಾಗ ಸುಮಾರು ಎರಡರಿಂದ ಮೂರು ಅಡಿ ಜಾಗದಲ್ಲಿ ಕಾಂಪೌಂಡಿನ ಮೇಲೆ ಇದ್ದ ಗಾಜಿನ ಚೂರುಗಳನ್ನು ತೆಗೆದು ಕಾಂಪೌಂಡ್ ದಾಟಲು ಅನುವು ಮಾಡಿಕೊಂಡಿರುವುದು ಕಂಡುಬಂದಿತು. ಮಹಿಳಾ ಪೊಲೀಸರ ಮತ್ತು ನಾವು ತಂದಿದ್ದ ಏಣಿಯ ಸಹಾಯದಿಂದ ಯುವತಿ ಮತ್ತು ನಾವೆಲ್ಲರು ಸದರಿ ಕಾಂಪೌಂಡನ್ನು ದಾಟಿದ್ದು, ಕಾಂಪೌಂಡಿಗೆ ಹೊಂದಿಕೊಂಡಂತೆ ನೆಲದ ಮೇಲೆ ಹುಲ್ಲನ್ನು ಕತ್ತರಿಸಿ ಹಾಕಿದ್ದು ಹುಲ್ಲಿನ ಹಾಸಿಗೆಯಂತೆ ಕಂಡುಬಂದಿತು. ಸದರಿ ಸ್ಥಳವನ್ನು ಯುವತಿಯು ತೋರಿಸಿ ಘಟನಾ ಸ್ಥಳ ಗುರುತಿಸಿದ್ದಳು. 

ಇದನ್ನು ಸಹ ಓದಿ : ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್?

ಈ ಸ್ಥಳದಲ್ಲಿ ಆಕೆಗೆ ಒರೆಸಿಕೊಳ್ಳಲು ಆರೋಪಿಗಳು ನೀಡಿದ್ದ ಕರ್ಚೀಪ್​ ಅಲ್ಲಿ ಸಿಕ್ಕಿತ್ತು. ಆ ಸಮಯದಲ್ಲಿ ನೀಲಿ ಬಣ್ಣದ ಕರ್ಚಿಫ್ ಪ್ರಕರಣದಲ್ಲಿ ಬಹು ಮುಖ್ಯವಾದ ಮತ್ತು ಪ್ರಮುಖವಾದ ಪಾತ್ರವನ್ನು ವಹಿಸಬಹುದೆಂದು ನಾವ್ಯಾರೂ ಊಹಿಸಿರಲಿಲ್ಲ. ಹುಲ್ಲು ಹಾಸಿನ ಆ ಸ್ಥಳದ ಮಣ್ಣನ್ನು ಮತ್ತು ಕತ್ತರಿಸಿ ಹಾಕಿದ್ದ ಹುಲ್ಲನ್ನು ತನಿಖೆ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡೆನು. ನಂತರ ಯುವತಿಯು ಸದರಿ ಕಾಂಪೌಂಡಿಗೆ ಹೊಂದಿಕೊಂಡಿದ್ದ ಆದರೆ ಲಂಬಕೋನದಲ್ಲಿ ಇದ್ದ ಕಾಂಪೌಂಡನ್ನು ತೋರಿಸಿ ಇದೇ ಜಾಗದಿಂದ ಮತ್ತೊಮ್ಮೆ ಕಾಂಪೌಂಡನ್ನು ಆರೋಪಿತರು ದಾಟಿಸಿದ್ದಾಗಿ ತಿಳಿಸಿದರು. ನಾವು ಸದರಿ ಕಾಂಪೌಂಡಿನ ಮೇಲ್ಬಾಗವನ್ನು ಪರಿಶೀಲಿಸಿದಾಗ ಅಲ್ಲಿಯೂ ಸಹ ಕಾಂಪೌಂಡಿನ ಮೇಲೆ ಇದ್ದ ಗಾಜುಗಳನ್ನು ತೆಗೆದು ದಾಟಲು ಅನುವುಮಾಡಿಕೊಂಡಿರುವುದು ಕಂಡುಬಂದಿತು. ನಾವೆಲ್ಲರೂ ಸದರಿ ಕಾಂಪೌಂಡನ್ನು ದಾಟಿ ಸುಮಾರು ಇನ್ನೂರು ಅಡಿ ಮುಂದೆ ಬಂದಾಗ ಅಲ್ಲಿ ಒಂದು ಪಾಳುಬಿದ್ದ ಸಣ್ಣ ಶೆಡ್‌ನಂತಹ ಮನೆ ಹಾಗು ಮುನೇಶ್ವರ ಸ್ವಾಮಿ ದೇವಸ್ಥಾನ ಇರುವುದು ಕಂಡುಬಂದಿತು.

ಇದನ್ನು ಸಹ ಓದಿ :JP EXCLUSIVE ರಕ್ತ ಚಂದನಕ್ಕಿಂತಲೂ ದೊಡ್ಡ ಮಾರ್ಕೇಟ್ ಇದೆ ಕಾಡು ಮಾಂಸದ ರಾಕೆಟ್​ಗೆ! ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಏನದು ಮಂಗಳೂರು, ಬೆಂಗಳೂರು, ಕೇರಳ ಲಿಂಕ್​? ಪಾರ್ಟ್-2

ಯುವತಿಯು ತನ್ನನ್ನು ಇದೇ ಮಾರ್ಗವಾಗಿ ಆರೋಪಿತರು ಕರೆದುಕೊಂಡು ಬಂದಿದ್ದಾಗಿ ತಿಳಿಸಿ ಸುಮಾರು ಇನ್ನೂರು ಅಡಿಗಳಷ್ಟು ಮುಂದೆ ಹೋದಾಗ ಅಲ್ಲಿ ನಾಗರಭಾವಿ ಸರ್ಕಲ್‌ನಿಂದ ಬೆಂಗಳೂರು ವಿ.ವಿಯ ಆಡಳಿತ ಭವನಕ್ಕೆ ಹೋಗುವ ಗಾಂಧಿಭವನದ ರಸ್ತೆ ಎದುರಾಯಿತು. ಅದೇ ಸ್ಥಳದಲ್ಲಿ ತನಗೆ ಆರೋಪಿತರು ಹತ್ತು ರೂ ನೋಟು, ಒಂದು ಜೊತೆ ಚಪ್ಪಲಿ ಹಾಗು ತನ್ನ ಸಿಮ್ಮನ್ನು ಕೊಟ್ಟು ನಡೆದುಕೊಂಡು ಹೋಗುವಂತೆ ತಿಳಿಸಿದ್ದಾಗಿ ಹೇಳಿದರು. ನಾವು ಆ ಸ್ಥಳದಲ್ಲಿ ಕುಳಿತು ಪಂಚನಾಮೆಯನ್ನು ತಯಾರಿಸಿದೆವು ಮತ್ತು ಯುವತಿಯು ತೋರಿಸಿದ ಪ್ರತಿಯೊಂದು ಸ್ಥಳದ ಛಾಯಾಚಿತ್ರವನ್ನು ತೆಗೆಸಿದೆನು. ತನಿಖೆಯಲ್ಲಿ ಒಂದು ಮುಖ್ಯವಾದ ಘಟ್ಟ ಮುಗಿದಿತ್ತು.

ಇನ್ನೂ ಇದೆ : ವೀಕ್ಷಕರೇ ರಾಜ್ಯದ ನಂಬರ್​ 1 ಇನ್ವೆಸ್ಟಿಗೇಷನ್ ಆಫಿಸರ್ ಎಂದೇ ಪೊಲೀಸ್ ಇಲಾಖೆಯಲ್ಲಿ ಖ್ಯಾತರಾಗಿರುವ ಬಾಲರಾಜ್​ರವರು ನಡೆಸಿದ್ದ ಜ್ಞಾನಭಾರತಿ ಕೇಸ್​ನ ಸರಣಿ ಮುಂದುವರಿಯಲಿದೆ, ಈ ನಿಟ್ಟಿನಲ್ಲಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ಸ್​ನಲ್ಲಿ ತಿಳಿಸಿ, ಮತ್ತು ನಮ್ಮ ವಾಟ್ಸ್ಯಾಪ್​ ಗ್ರೂಪ್​ನಲ್ಲಿ ಸೇರ್ಪಡೆಗೊಳ್ಳಿ

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link