ಹನಿ ಟ್ರಾಪ್ ಮಾಡಿ ಕಾಡಾನೆಯನ್ನು ಹೇಗೆ ಸೆರೆಹಿಡಿಯಲಾಗುತ್ತದೆ ಗೊತ್ತಾ..? ಕಾಡಿನ ಕೌತುಕದ ಬಗ್ಗೆ ಜೆಪಿ ಬರೆಯುತ್ತಾರೆ

Do you know how a wild elephant is captured by honey trap? JP writes about the wonder of the jungle

ಹನಿ ಟ್ರಾಪ್ ಮಾಡಿ ಕಾಡಾನೆಯನ್ನು ಹೇಗೆ ಸೆರೆಹಿಡಿಯಲಾಗುತ್ತದೆ ಗೊತ್ತಾ..? ಕಾಡಿನ ಕೌತುಕದ ಬಗ್ಗೆ ಜೆಪಿ ಬರೆಯುತ್ತಾರೆ

ತೀರ್ಥಹಳ್ಳಿ ನಗರದಲ್ಲಿ ಪ್ರತ್ಯಕ್ಷವಾಗಿ ಜನರನ್ನು ತೀವ್ರ ಆತಂಕಕ್ಕೀಡು ಮಾಡಿದ್ದ ಕಾಡಾನೆ ಸೆರೆಹಿಡಿಯಲು ಸರ್ಕಾರ ಕೊನೆಗೂ ಒಪ್ಪಿಗೆ ನೀಡಿದೆ. ನೆನ್ನೆ ಸಕ್ರೆಬೈಲು ಬಿಡಾರದಿಂದ ಬಾಲಣ್ಣ, ಬಹದ್ದೂರು, ಸಾಗರ್ ಮತ್ತು ಭಾನುಮತಿ ಆನೆಗಳು ಕಾರ್ಯಾಚರಣೆಗೆ ಲಾರಿಯಲ್ಲಿ ಸಾಗಿಸಲಾಗಿತ್ತು. ಸಂಜೆಯಾಗಿದ್ದರಿಂದ ಕಾರ್ಯಾಚರಣೆಗೆ ತೊಡಕಾಗಿತ್ತು. ಇಂದು ಬೆಳಿಗ್ಗೆಯಿಂದ ಕಾಡಾನೆ ಸೆರೆಗೆ ಆನೆ ಸಿಬ್ಬಂದಿಗಳು ವನ್ಯಜೀವಿ ವೈದ್ಯ ಡಾಕ್ಟರ್ ವಿನಯ್ ನೇತ್ರತ್ವದ ತಂಡ ಕಾರ್ಯತಂತ್ರ ರೂಪಿಸುತ್ತಿದೆ.

ಸದ್ಯಕ್ಕೆ ಕಾಡಾನೆ ದೇವಂಗಿ ಸನಿಹದ ಬೆಟ್ಟದಲ್ಲಿರುವುದು ಆನೆಯ ಲದ್ದಿಯಿಂದ ಗೊತ್ತಾಗಿದೆ. ಇಂದು ಬೆಳಗ್ಗೆ ಕೂಂಬಿಂಗ್ ಮಾಡಿದ ಡಾರ್ಟ್ ಎಕ್ಸ್ ಪರ್ಟ್ ಗಳು ಆನೆಯ ಜಾಡನ್ನು ಪತ್ತೆ ಮಾಡಿದ್ದಾರೆ. ದುರ್ಗಮ ಕಾಡಿನಲ್ಲಿರುವ ಆನೆಯನ್ನು ಸೆರೆಹಿಡಿದರೂ ಸಾಗಾಣಿಕೆಗೆ ತೊಂದರೆಯಾಗುತ್ತದೆ. ಹೀಗಾಗಿ ಕಾಡಾನೆಯನ್ನೇ ತಮ್ಮ ಬಳಿಗೆ ಕರೆಸಿಕೊಳ್ಳಲು ತಂತ್ರ ರೂಪಿಸಿದ್ದಾರೆ. ಮಾವುತರು ಕಾಡಾನೆಯನ್ನು ಆಕರ್ಷಿಸಲು ಹೆಣ್ಣು ಸಾಕಾನೆಯನ್ನು ಬಳಸುತ್ತಾರೆ. ತೀರ್ಥಹಳ್ಳಿಯ ಕಾರ್ಯಾಚರಣೆಯಲ್ಲಿ ಭಾನುಮತಿ ಆನೆಯನ್ನು ಬಳಸಿಕೊಳ್ಳಲಾಗಿದೆ.

ಹೇಗಿರುತ್ತೆ ಇಲ್ಲಿ ವೈಲ್ಡ್ ಟಸ್ಕರ್ ಹನಿ ಟ್ರಾಪ್?

ಕಾಡಿನ ಪರಿಸರದಲ್ಲಿರುವ ಆನೆಯನ್ನು ಸೆರೆಹಿಡಿಯಲು ಬಿಡಾರದ ಕುಮ್ಕಿ ಆನೆಗಳನ್ನು ಅಂದರೆ ಬಿಡಾರದಲ್ಲಿಯೇ ಪಳಗಿ ತರಬೇತಿ ಪಡೆದ ಬಿಡಾರದ ಸಾಕಾನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಕನಿಷ್ಟವೆಂದರೂ ಕಾರ್ಯಾಚರಣೆಯಲ್ಲಿ ನಾಲ್ಕರಿಂದ  ಆರು ಸಾಕಾನೆಗಳಿರುತ್ತವೆ. ಅದರಲ್ಲಿ ಒಂದು ಹೆಣ್ಣು ಆನೆಯನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಕಾರ್ಯಾಚರಣೆಯಲ್ಲಿ ನುರಿತ ವೈದ್ಯರ ತಂಡ, ಮಾವುತ ಕಾವಾಡಿಗಳು, ಅರಣ್ಯ ಅಧಿಕಾರಿ ಸಿಬ್ಬಂದಿಗಳು ಡಾರ್ಟ್ ಎಕ್ಸ್ ಪರ್ಟ್ ಗಳು ಸೇರಿ ಸುಮಾರು 80 ರಿಂದ 90 ಮಂದಿ  ಆನೆ ಸೆರೆಹಿಡಿಯುವ ಕಾರ್ಯಚರಣೆ ತಂಡದಲ್ಲಿ ಕೆಲಸ ಮಾಡುತ್ತಾರೆ. ಕಾಡಾನೆ ಎಲ್ಲಿ ಬೀಡುಬಿಟ್ಟಿದೆ, ಯಾವ ಮಾರ್ಗದಲ್ಲಿ ಸಂಚರಿಸುತ್ತಿದೆ ಎಂಬುದನ್ನು ಮೊದಲು ಡಾರ್ಟ್ ಎಕ್ಸ್ ಪರ್ಟ್ ಗಳು ಕಾಡಿನ ಹಾದಿಯಲ್ಲಿ ಸಾಗಿ ಪತ್ತೆ ಹಚ್ಚುತ್ತಾರೆ. ನಂತರ ಕಾರ್ಯಾಚರಣೆಗೆ ತಂದ ಸಾಕಾನೆಗಳನ್ನು ಒಂದೆಡೆ ಕ್ಯಾಂಪ್ ಮಾಡಲಾಗುತ್ತದೆ. ಕಾಡಾನೆ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚುವ ತಜ್ಞರ ತಂಡ..ಇಂತಿಷ್ಟೆ ದೂರದಲ್ಲಿ ಕಾಡಾನೆ ಇರುವ ಸೂಚನೆ ನೀಡಿದಾಗ, ನಂತರ ಎರಡನೇ ಹಂತದ ಕಾರ್ಯಾಚರಣೆಗೆ ಮಾವುತ ಕಾವಾಡಿಗಳು ಅಣಿಯಾಗುತ್ತಾರೆ.

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ಕಾಡಾನೆ ಆಕರ್ಷಿಸಲು ಹೆಣ್ಣಾನೆ ಬಳಕೆ

ಕಾಡಾನೆ ಬೀಡು ಬಿಟ್ಟಿರುವ ಪರಿಸರದಲ್ಲಿ ಹೆಣ್ಣಾನೆಯನ್ನು ಓಡಾಡುವಂತೆ ಮಾವುತರು ನೋಡಿಕೊಳ್ಳುತ್ತಾರೆ. ಕಾಡಾನೆ ರಾತ್ರಿಯೆಲ್ಲಾ ಇದ್ದು ಹಗಲು ಹೊತ್ತು ತೊರೆದು ಹೋದ ಸಂದರ್ಭದಲ್ಲಿ ಈ ಪರಿಸರದಲ್ಲಿ ಹೆಣ್ಣು ಸಾಕಾನೆ ಓಡಾಡುವಂತೆ ಮಾಡುತ್ತಾರೆ. ಹೆಣ್ಣಾನೆ ಆ ಪರಿಸರದಲ್ಲಿ ಮಲಮೂತ್ರ ವಿಸರ್ಜನೆ ಮಾಡಿ, ತನ್ನ ಇರುವಿಕೆಯನ್ನು ಧೃಡೀಕರಿಸುತ್ತೆ. ಮರಗಳಿಗೆ ಸೊಂಡಿಲಿನಿಂದ ತಿಕ್ಕೆ ತೇವಿ, ಹಾಗು ಪರಿಸರದಲ್ಲಿ ಓಡಾಡಿ ತನ್ನ ಹೆಜ್ಜೆಗುರುತನ್ನು ಮೂಡಿಸಿರುತ್ತೆ...ಇದಾದ ನಂತರ ಮಾವುತರು ಕಾರ್ಯಾಚರಣೆಗೆ ಅನುಕೂಲವಾಗುವಂತೆ ಹೆಣ್ಣಾನೆಯನ್ನು ಬಯಲು ಪ್ರದೇಶದಲ್ಲಿ ಕಟ್ಟಿ ಹಾಕುತ್ತಾರೆ. ಹೆಣ್ಣಾನೆ ಕಟ್ಟಿಹಾಕಿದ ಮರದ ಮೇಲೆ ಒಂದು ಟ್ರೀ ಹೌಸ್ ನಿರ್ಮಿಸಲಾಗಿರುತ್ತೆ. ಈ ಸ್ಥಳದಲ್ಲಿ ಸದ್ದು ಮಾಡದೆ, ಗೌಪ್ಯವಾಗಿ ಡಾರ್ಟ್ (ಅರವಳಿಕೆ ಮದ್ದು) ಮಾಡುವ ವೈದ್ಯರು ಡಾರ್ಟ್ ಗನ್ ಸಮೇತ ಹೊಂಚು ಹಾಕಿ ಕೂತಿರುತ್ತಾರೆ.

ಬಯಲು ಪ್ರದೇಶದ 500 ರಿಂದ 600 ಮೀಟರ್ ದೂರದಲ್ಲಿ ಸಾಕಾನೆಗಳ ತಂಡ ಕ್ಯಾಂಪ್ ಮಾಡಿರುತ್ತೆ. ಅಲ್ಲಿ ಮಾವುತ ಕಾವಾಡಿಗಳು ಅರಣ್ಯ ಸಿಬ್ಬಂದಿಗಳು ಇರುತ್ತಾರೆ. ಬಯಲು ಪ್ರದೇಶದ ಕೂಗಳತೆ ದೂರದಲ್ಲಿ ಸಾಗಾಣಿಕೆಗೆ ಅನುಕೂಲವಾಗುವಂತೆ ಲಾರಿಯನ್ನು  ನಿಲ್ಲಿಸಲಾಗಿರುತ್ತೆ. ಕಾಡಿನಲ್ಲಿ ಆನೆಗೆ ಅರವಳಿಕೆ ನೀಡಿದಾಗ ಆನೆ ಪ್ರಜ್ಞೆ ತಪ್ಪಿದ ಸುಮಾರು ನಲ್ವತ್ತು ನಿಮಿಷದೊಳಗೆ ಅದರ ಕಾಲು ಕುತ್ತಿಗೆಗೆ ಹಗ್ಗ ಕಟ್ಟಿ ಬಂಧಿಯನ್ನಾಗಿ ಮಾಡಿ, ಸಾಕಾನೆಗಳ ಮೂಲಕ ಕಾಡಾನೆಯನ್ನು ಲಾರಿಗೆ ಶಿಪ್ಟ್ ಮಾಡಬೇಕಾದ ದೊಡ್ಡ ಸವಾಲು ಮಾವುತರು ಹಾಗು ವೈದ್ಯರಿಗಿರುತ್ತೆ. ದುರ್ಗಮ ಕಾಡಿನಲ್ಲಿ ಆನೆ ಸೆರೆಸಿಕ್ಕರೆ. ಸಾಗಾಣಿಕೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ...ಬಯಲು ಪ್ರದೇಶವನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅದಕ್ಕಾಗಿಯೇ ಇಲ್ಲಿ ಕಾಡಾನೆಗೆ ಹನಿ ಟ್ರಾಪ್ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತೆ. ಈಗ ಮತ್ತೆ ವಿಷಯಕ್ಕೆ ಬರೋದಾದ್ರೆ..,ಬಯಲಿನಲ್ಲಿ ಸಾಕಾನೆಯನ್ನು ಕಟ್ಟುವ ಅದೇ ಮರ ಇಲ್ಲವೇ ಪಕ್ಕದ ಮರದ ಮೇಲೆ ಟ್ರೀ ಹೌಸ್ ನಿರ್ಮಿಸಲಾಗುತ್ತೆ. ಆ ಟ್ರೀ ಹೌಸ್ ನಲ್ಲಿ  ಅರವಳಿಕೆ ಮದ್ದನ್ನು ಬಂದೂಕಿನಿಂದ ಪ್ರಯೋಗಿಸಲು ವೈದ್ಯರು ಸಜ್ಜಾಗಿ ಹೊಂಚುಹಾಕಿ ಕೂತಿರುತ್ತಾರೆ..

ಇತ್ತ ತನ್ನ ಪ್ರದೇಶಕ್ಕೆ ವಾಪಸ್ಸಾಗುವ ಕಾಡಾನೆಗೆ ಆ ಪರಿಸರದಲ್ಲಿ ಹೆಣ್ಣು ಆನೆ ಇಲ್ಲೇ ಎಲ್ಲೋ ಸನಿಹದಲ್ಲಿರುವುದು ನೈಸರ್ಗಿಕವಾಗಿಯೇ ಗೊತ್ತಾಗುತ್ತದೆ. ಮಲಮೂತ್ರ ವಾಸನೆ ಮೂಲಕ ಗ್ರಹಿಸುವ ಗಂಡಾನೆ..ಹೆಣ್ಣಾನೆಯನ್ನು ಅರಸಿಕೊಂಡು ಸಹಜವಾಗಿಯೇ ಬಯಲು ಪ್ರದೇಶದತ್ತ ಬರುತ್ತೆ. ಈ ಸಂದರ್ಭದಲ್ಲಿ ಹೆಣ್ಣಾನೆಯನ್ನು ಆಕರ್ಷಿಸುವಾಗ ಸಂಘರ್ಷವಾಗುವ ಸಾದ್ಯತೆ ಕಡಿಮೆ ಇರುತ್ತದೆ,,ಸಹಜವಾಗಿಯೇ ಹೆಣ್ಣಾನೆ ಜೊತೆ ಹೊಂದಿಕೊಳ್ಳುವ ಕಾಡಾನೆಯನ್ನು ಟ್ರೀಹೌಸ್ ನಲ್ಲಿರುವ ವೈದ್ಯರು ಅರವಳಿಕೆ ನೀಡಿ ಪ್ರಜ್ಞೆ ತಪ್ಪುವಂತೆ ಮಾಡುತ್ತಾರೆ. ತಕ್ಷಣ ಸನಿಹದ ಕ್ಯಾಂಪ್ ನಲ್ಲಿ ಬೀಡುಬಿಟ್ಟಿರುವ ತಂಡಕ್ಕೆ ಸೂಚನೆ ನೀಡುತ್ತಾರೆ.

ಜಸ್ಟ್​ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡೇ ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು?

ನಲ್ವತ್ತು ನಿಮಿಷದೊಳಗೆ ಕಾಡಾನೆಯನ್ನು ಹಗ್ಗದಿಂದ ಬಂಧಿಯನ್ನಾಗಿಸಬೇಕು

ಕೇವಲ ಎರಡೇ ನಿಮಿಷದಲ್ಲಿ ಪ್ರಜ್ಞೆ ತಪ್ಪುವ ಕಾಡಾನೆಯನ್ನು ನಲ್ವತ್ತು ನಿಮಿಷದ ಒಳಗೆ ಕಾಲು ಕುತ್ತಿಗೆಗೆ ಹಗ್ಗ ಕಟ್ಟಿ ಬಂಧಿಯನ್ನಾಗಿ ಮಾಡಬೇಕಾದ ಸವಾಲು ಮಾವುತ ಕಾವಾಡಿಗಳಿರುತ್ತೆ. ಅದಕ್ಕೆ ಪೂರಕವಾಗಿ ಸಾಕಾನೆ ಹಗ್ಗದೊಂದಿಗೆ ಬರುವ ತಂಡ, ಕೆಲವೇ ನಿಮಿಷಗಳಲ್ಲಿ ಆನೆಯನ್ನು ಬಂಧಿಯನ್ನಾಗಿ ಮಾಡಿ ಹಿಂದೆ ಮುಂದೆ ಅಕ್ಕಪಕ್ಕ ಆಂಟಿ ಎಲಿಫೆಂಟ್ ಗಳನ್ನು ನಿಲ್ಲಿಸಲಾಗುತ್ತೆ. ಇಲ್ಲಿ ಆನೆ ಬಂಧನಕ್ಕೆ ಕಬ್ಬಿಣದ ಸರಪಳಿ ಬಳಸುವುದಿಲ್ಲ. ಅದು ಘೀಳಿಟ್ಟು ಗಾಯಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದಲೇ ಇಲ್ಲಿ ಸೆಣಬಿನ ಹಗ್ಗ ಬಳಿಸಿಕೊಳ್ಳಲಾಗುತ್ತೆ. ನಂತರ ವೈದ್ಯರು ಪುನಃ ಆನೆಗೆ ಪ್ರಜ್ಞೆ ಬರುವ ಆ್ಯಂಟಿ ಡಾರ್ಟ್ ಡೋಸ್ ಲಸಿಕೆಯನ್ನು ನೀಡ್ತಾರೆ. ಕಾಡಾನೆಗೆ ಪ್ರಜ್ಞೆ ಬಂದಾಗ ಅದು ತುಂಬಾ ವೈಲ್ಡ್ ಆಗಿ ವರ್ತಿಸುತ್ತೆ. ಅದು ಘೀಳಿಡುವ ಪರಿ ಎಂತವರ ಎದೆ ಝಲ್ ಎನ್ನುವಂತೆ ಮಾಡುತ್ತೆ. ಆದ್ರೆ ನುರಿತ ಮಾವುತ ಕಾವಾಡಿಗಳ ತಂಡ ಸಾಕಾನೆಗಳ ಸಹಾಯದಿಂದ ಎಳೆದು ತಂದು ಲಾರಿಯಲ್ಲಿದ್ದ ಕ್ರಾಲ್ ಗೆ ಶಿಪ್ಟ್ ಮಾಡುತ್ತೆ...ಹೀಗೆ ಹೆಣ್ಣಾನೆಯ ಸಹಾಯದಿಂದ ಕಾಡಾನೆಯನ್ನು ಆಕರ್ಷಿಸುವಂತೆ ಮಾಡಿ, ನಂತರ ಖೆಡ್ಡಾಗೆ ಬೀಳಿಸುವ ನೈಸರ್ಗಿಕ ಕಲೆಯೇ ಒಂದು ಸೋಜುಗದ ಸಂಗತಿ. ಇಂತಹ ನೈಪುಣ್ಯತೆ ನಮ್ಮ ಸಕ್ರೆಬೈಲು ಮಾವುತ ಕಾವಾಡಿಗಳು ಹಾಗು ವೈದ್ಯ ಡಾಕ್ಟರ್ ವಿನಯ್ ತಂಡಕ್ಕಿರುವುದು ಹೆಮ್ಮೆಯ ಸಂಗತಿ..ಈವರೆಗೆ ಹತ್ತಕ್ಕೂ ಹೆಚ್ಚು ಕಾರ್ಯಾಚರಣೆಗಳನ್ನು ಈ ರೀತಿಯಲ್ಲಿಯೇ ಮಾಡಿ ಯಶಸ್ಸು ಕಂಡ ಈ ತಂಡಕ್ಕೆ ಒಂದು ಹ್ಯಾಟ್ಸಾಪ್ ಹೇಳಲೇ ಬೇಕು. 

ಆನೆಗಳ ಬಗ್ಗೆ ವಿಶೇಷ ಕುತೂಹಲ ನಿಮಗಿದ್ರೆ..ವೈಲ್ಡ್ ಟಸ್ಕರ್ ಸಂಸ್ಥೆಯು, ವೈಲ್ಡ್ ಟಸ್ಕರ್ ಸಕ್ರೆಬೈಲು (Wild tusker Sakrebylu) ಹೆಸರಿನಲ್ಲಿ ಯು ಟ್ಯೂಬ್ ಚಾನಲ್ ಮಾಡಲಾಗಿದೆ , ಈ ಚಾನಲ್ ನಲ್ಲಿ ಸಾಕಷ್ಟು ಅಪರೂಪದ ವಿಡಿಯೋಗಳಿವೆ.ಚಾನಲ್ ಗೆ ಸಬ್ ಸ್ಕೈಬ್ ಆಗಿ ಹೊಸ ಹೊಸ ಮಾಹಿತಿಗಳನ್ನು ಪಡೆಯಿರಿ

 MALENADUTODAY.COM  |SHIVAMOGGA| #KANNADANEWSWEB

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today, Shikaripura Court/ Shikaripura Court Judgment, Shiralakoppa Police Station, Assault Case, Abuse Case, Verdict to accused in old cases, 1st Additional CJ and JMFC Court, Shikaripura court / ಶಿಕಾರಿಪುರ ಕೋರ್ಟ್ ತೀರ್ಪು, ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​, ಹಲ್ಲೆ ಪ್ರಕರಣ, ನಿಂದಿಸಿದ ಪ್ರಕರಣ, ಹಳೆಯ ಪ್ರಕರಣಗಳಲ್ಲಿ ಆರೋಪಿಗಳಿಗೆ ತೀರ್ಪು , 1ನೇ ಅಧಿಕ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ,