BREAKING : ಗ್ರಾಮ ಪಂಚಾಯತಿ ಸದಸ್ಯ, ಅದ್ಯಕ್ಷ, ಉಪಾಧ್ಯಕ್ಷರಿಗೆ ಗುಡ್​ ನ್ಯೂಸ್​/ ಸರ್ಕಾರದಿಂದ ಹೊರಬಿತ್ತು ಹೊಸ ಆದೇಶ

ಅದರಂತೆ ಈ ಕೆಳಕಂಡ ಆದೇಶ ಸಂಖ್ಯೆ: ಗ್ರಾಅಪಂರಾ 126 ಜಿಪಸ 2022, ಬೆಂಗಳೂರು ದಿನಾಂಕ:18-12-2022

BREAKING :  ಗ್ರಾಮ ಪಂಚಾಯತಿ ಸದಸ್ಯ, ಅದ್ಯಕ್ಷ, ಉಪಾಧ್ಯಕ್ಷರಿಗೆ ಗುಡ್​ ನ್ಯೂಸ್​/ ಸರ್ಕಾರದಿಂದ ಹೊರಬಿತ್ತು ಹೊಸ ಆದೇಶ

ಬೆಂಗಳೂರು,ಡಿ.18: ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳ ಮತ್ತು ಸದಸ್ಯರ ಗೌರವಧನವನ್ನು ಇಮ್ಮಡಿಗೊಳಿಸಿ ರಾಜ್ಯ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ. 2017 ರ ಮೇ 5ರಂದು ಸರ್ಕಾರ ಹೊರಡಿಸಿದ್ದ ಆದೇಶದ ಅನ್ವಯ ಸದ್ಯ ಅಧ್ಯಕ್ಷರುಗಳಿಗೆ ರೂಪಾಯಿ 3 ಸಾವಿರ, ಉಪಾಧ್ಯಕ್ಷರಿಗೆ ರೂಪಾಯಿ 2 ಸಾವಿರ, ಸದಸ್ಯರಿಗೆ ರೂಪಾಯಿ 1 ಸಾವಿರ ನೀಡಲಾಗುತ್ತಿದೆ. ಈ ಮೊತ್ತವನ್ನು ಕ್ರಮವಾಗಿ ರೂಪಾಯಿ 6 ಸಾವಿರ, ರೂಪಾಯಿ. 4 ಸಾವಿರ, ರೂಪಾಯಿ 2 ಸಾವಿರವಾಗಿ ಹೆಚ್ಚಳಗೊಳಿಸಲಾಗಿದೆ.

ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್​/ ಕೇಳೋರೆ ಇಲ್ಲದ ಅನಾಥೆ ಸಾವಿಗೆ, ನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್​/ EXCLUSIVE JP REPORT

ಪ್ರಕಟಣೆಯಲ್ಲಿ ಏನಿದೆ? 

ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳಿಗೆ ರೂ.3000/-, ಉಪಾಧ್ಯಕ್ಷರುಗಳಿಗೆ ರೂ.2000/- ಹಾಗೂ ಸದಸ್ಯರುಗಳಿಗೆ ರೂ.1000/-ಗಳ ಮಾಸಿಕ ಗೌರವಧನವನ್ನು ನಿಗದಿಪಡಿಸಲಾಗಿತ್ತು. ಪ್ರಸ್ತುತ ಗೌರವಧನವನ್ನು ಪರಿಷ್ಕರಿಸಿ, ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳಿಗೆ ರೂ.6,000/-, ಉಪಾಧ್ಯಕ್ಷರುಗಳಿಗೆ ರೂ.4,000/- ಹಾಗೂ ಸದಸ್ಯರುಗಳಿಗೆ ರೂ.2,000/-ಗಳ ಮಾಸಿಕ ಗೌರವಧನವನ್ನು ನಿಗದಿಗೊಳಿಸಲು ತೀರ್ಮಾನಿಸಿದೆ,

ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ಅದರಂತೆ ಈ ಕೆಳಕಂಡ ಆದೇಶ ಸಂಖ್ಯೆ: ಗ್ರಾಅಪಂರಾ 126 ಜಿಪಸ 2022, ಬೆಂಗಳೂರು ದಿನಾಂಕ:18-12-2022.  ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲಿ, ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳಿಗೆ ಮಾಸಿಕ ರೂ.6,000/-, ಉಪಾಧ್ಯಕ್ಷರುಗಳಿಗೆ ಮಾಸಿಕ ರೂ.4,000/- ಹಾಗೂ ಸದಸ್ಯರುಗಳಿಗೆ ಮಾಸಿಕ ರೂ.2,000/-ಗಳ ಗೌರವಧನವನ್ನು ಪರಿಷ್ಕರಿಸಿ ನಿಗದಿಗೊಳಿಸಿ ಆದೇಶಿಸಿದೆ. 

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಇನ್ನೂ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಸಂಸದ ಬಿವೈ ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದು, ಸರ್ಕಾರವನ್ನು ಅಭಿನಂದಿಸಿದ್ಧಾರೆ.