ಶಿವಮೊಗ್ಗ ಜಿಲ್ಲೆಯಲ್ಲಿ ಒಂದೆ ದಿನ ಎರಡು ಕೊಲೆ/ ಏನಿವು ಘಟನೆ? ನಡೆದಿದ್ದು ಏನು? ವಿವರ ಇಲ್ಲಿದೆ

ಶಿವಮೊಗ್ಗದಲ್ಲಿ ಒಂದೇ ದಿನ ಎರಡು ಕೊಲೆ ಘಟನೆ ಸಂಭವಿಸಿದೆ. ಮೊದಲ ಪ್ರಕರಣ ಶಿವವಮೊಗ್ಗ ಜಿಲ್ಲೆಯ ಆಗುಂಬೆ ಸಮೀಪ ಸಂಭವಿಸಿದ್ದು, ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪ ಬಿದರಗೋಡು ಬಳಿ ಬರುವ ಗುಣಸೇ ಬಳಿ ಕೊಲೆ ಘಟನೆಯೊಂದು ಸಂಭವಿಸಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಒಂದೆ ದಿನ ಎರಡು ಕೊಲೆ/ ಏನಿವು ಘಟನೆ? ನಡೆದಿದ್ದು ಏನು? ವಿವರ ಇಲ್ಲಿದೆ

ಶಿವಮೊಗ್ಗದಲ್ಲಿ ಒಂದೇ ದಿನ ಎರಡು ಕೊಲೆ ಘಟನೆ ಸಂಭವಿಸಿದೆ. ಮೊದಲ ಪ್ರಕರಣ ಶಿವವಮೊಗ್ಗ ಜಿಲ್ಲೆಯ ಆಗುಂಬೆ ಸಮೀಪ ಸಂಭವಿಸಿದ್ದು, ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪ ಬಿದರಗೋಡು ಬಳಿ ಬರುವ ಗುಣಸೇ ಬಳಿ ಕೊಲೆ ಘಟನೆಯೊಂದು ಸಂಭವಿಸಿದೆ. ಇಲ್ಲಿನ ನಿವಾಸಿ ಜಮೀನ್ದಾರ್ ಸಾವಿತ್ರಮ್ಮ ಎಂಬವರ ತೋಟದ ಕೆಲಸಕ್ಕೆ ಬಂದಿದ್ದವರ ನಡುವೆ ಹೊಡೆದಾಟವಾಗಿ ಕೊಲೆಯಾಗಿದೆ. 

 ಇದನ್ನು ಸಹ ಓದಿ :DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ ಸಿಗಲು ಕಾರಣವಾದ ಕೇಸ್​ ಯಾವುದು ಗೊತ್ತಾ? ಇಲ್ಲಿದೆ ಪ್ರಕರಣ ರೋಚಕ ತನಿಖೆಯ ಸರಣಿ

ನಡೆದಿದ್ದು ಏನು

ಚಿತ್ರದುರ್ಗದಿಂದ ಸಾವಿತ್ರಮ್ಮರವರ ಮನೆಗೆ ಅಡಿಕೆ ಕೆಲಸಕ್ಕೆ ಟೀಂ ಒಂದು ಬಂದಿತ್ತು. ಈ ಟೀಮ್​ನಲ್ಲಿ ಬಂದಿದ್ದ 45 ವರ್ಷದ ಪಾರ್ವತಿ ಎಂಬವರ ಹತ್ಯೆಯಾಗಿದೆ. ಘಟನೆಗೆ ಕಾರಣ ಇನ್ನೂ ಸಹ ಸ್ಪಷ್ಟವಾಗಬೇಕಿದೆ. ಸದ್ಯಕ್ಕೆ ಸಿಕ್ಕ ಮೂಲಗಳ ಪ್ರಕಾರ, ಕೆಲಸಕ್ಕೆ ಬಂದ ತಂಡದಲ್ಲಿ ಜಗಳ ನಡೆದಿದ್ದು, ಆ ಜಗಳದಲ್ಲಿ ಹೊಡೆದಾಟ ನಡೆದು ಹತ್ಯೆಯಾಗಿದೆ ಎನ್ನಲಾಗುತ್ತಿದೆ.ಈ ಬಗ್ಗೆ ಆಗುಂಬೆ ಪೊಲೀಸರು ಸ್ಪಷ್ಟಪಡಿಸಿಲ್ಲ.

ಇನ್ನೂ ಇವತ್ತು ಬೆಳಗ್ಗೆ ಘಟನೆ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸದ್ಯ ಆಗುಂಬೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಮೂಲಗಳ ಪ್ರಕಾರ ಆಗುಂಬೆ ಪೊಲೀಸರು ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ಧಾರೆ ಎನ್ನಲಾಗುತ್ತಿದೆಯಾದರೂ ಆಗುಂಬೆ ಪೊಲೀಸರು ಮಾಹಿತಿ ನೀಡುತ್ತಿಲ್ಲ. 

ಈ ಸಂಬಂಧ ಮಾಧ್ಯಮಗಳಿಗೆ ಸಂದೇಶದ ಮೂಲಕ ಮಾಹಿತಿ ರವಾನಿಸಿರುವ ಎಸ್​ಪಿ ಮಿಥುನ್ ಕುಮಾರ್, ಹೊಳಲ್ಕೆರೆ ಮೂಲದ ಮಹಿಳೆ ಪಾರ್ವತಿ ಮೃತಪಟ್ಟಿದ್ದು, ಘಟನೆ ಸಂಬಂಧ ಒಬ್ಬ ಶಂಕಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು ಇನ್ನಷ್ಟು ವಿವರ ನೀಡುವುದಾಗಿ ತಿಳಿಸಿದ್ಧಾರೆ. 

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ಸೊರಬ ತಾಲ್ಲೂಕಿನಲ್ಲಿ ಮರ್ಡರ್​

ಇನ್ನೊಂದೆಡೆ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಆನವಟ್ಟಿ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ತುಡನೂರು ಎಂಬಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ, ಆತನಿಗೆ ಸಂಬಂಧಿಸಿದ ಹೊಲದ ಪಕ್ಕದಲ್ಲಿಯೇ ಹರಿಯುವ ಹಳ್ಳದಲ್ಲಿ ಹಲ್ಲೆ ಮಾಡಿದ ರೀತಿಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಈ ಸಂಬಂದ ಆನವಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಸ್ಥಳ ಮಹಜರ್ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನೂ ಘಟನೆಗೆ ಕಾರಣವೇನು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸ್ತಿದೆ. ಮೃತಪಟ್ಟ ವ್ಯಕ್ತಿಯನ್ನು ಸಲೀಮ್​ 26 ವರ್ಷ ಎಂದು ಗುರುತಿಸಲಾಗಿದೆ. 

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link