ದಕ್ಷಿಣಕನ್ನಡದಲ್ಲಿ ಜಾಹಿರಾತು ಕೊಟ್ಟವರಿಗೆ ಶಿವಮೊಗ್ಗದಲ್ಲಿ 6 ಲಕ್ಷ ರೂಪಾಯಿ ಮೋಸ/ ನಾಗರಿಕರೇ ಎಚ್ಚರ ಹೀಗೂ ಆಗುತ್ತೆ

ಮಗಳ ಮದುವೆಗೆ ಹಣ ಬೇಕು, ಹೀಗಾಗಿ ಕಾರ್ಕಳದಲ್ಲಿರುವ ಒಂದು ಎಕರೆ ಜಮೀನು ಮಾರಾಟಕ್ಕಿದೆ ಎಂದು ಗಾಡಿಕೊಪ್ಪದ (Gadikoppa) ನಿವಾಸಿ ಎಸ್.ರಂಗಪ್ಪ (70) ಜಾಹಿರಾತು ನೀಡಿದ್ದರು.

ದಕ್ಷಿಣಕನ್ನಡದಲ್ಲಿ ಜಾಹಿರಾತು ಕೊಟ್ಟವರಿಗೆ ಶಿವಮೊಗ್ಗದಲ್ಲಿ 6 ಲಕ್ಷ ರೂಪಾಯಿ ಮೋಸ/ ನಾಗರಿಕರೇ ಎಚ್ಚರ ಹೀಗೂ ಆಗುತ್ತೆ

ಶಿವಮೊಗ್ಗ: ಮಗಳ ಮದುವೆ ಮಾಡಿಸಲು ಆಸ್ತಿ ಮಾರಾಟಕ್ಕಿದೆ ಎಂದು ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದ್ದನ್ನು ಗಮನಿಸಿ, ಗಿರಾಕಿ ಸೋಗಿನಲಿ ಬಂದ ಇಬ್ಬರು  6 ಲಕ್ಷ ರೂಪಾಯಿ  ಲಪಟಾಯಿಸಿಕೊಂಡು ಹೋದ ಘಟನೆ ಶಿವಮೊಗ್ಗದ ಗಾಡಿಕೊಪ್ಪದಲ್ಲಿ ನಡೆದಿದೆ.

ನಡೆದಿದ್ದು ಏನು? 

ಮಗಳ ಮದುವೆಗೆ ಹಣ ಬೇಕು, ಹೀಗಾಗಿ ಕಾರ್ಕಳದಲ್ಲಿರುವ ಒಂದು ಎಕರೆ ಜಮೀನು ಮಾರಾಟಕ್ಕಿದೆ ಎಂದು ಗಾಡಿಕೊಪ್ಪದ (Gadikoppa)  ನಿವಾಸಿ ಎಸ್.ರಂಗಪ್ಪ (70) ಜಾಹಿರಾತು ನೀಡಿದ್ದರು. ದಕ್ಷಿಣಕನ್ನಡದ (Dakshina Kannada) ಪ್ರಮುಖ ಪತ್ರಿಕೆಯಲ್ಲಿ ಜಾಹೀರಾತು ಹಾಕಿಸಿದ್ದರು. ಇದನ್ನು ನೋಡಿ ಜಮೀನು ಖರೀದಿಯ ನೆಪದಲ್ಲಿ ಮಂಗಳೂರಿನಿಂದ ನಿಮ್ಮ ಆಸ್ತಿ ಖರೀದಿಸಲು ಬಂದಿರುವುದಾಗಿ ಸುಂದರ್ ಮತ್ತು ಮಹೇಶ್ ಎಂಬುವರು ರಂಗಪ್ಪನ ಮನೆಗೆ ಬಂದಿದ್ದರು. 

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ಪರಿಚಯ ಮಾಡಿಕೊಂಡು ನಂಬಿಸಿದ್ದರು

ಪರಿಚಯ ಮಾಡಿಕೊಂಡ ಸುಂದರ್ ಜಮೀನು ಯಾಕೆ ಮಾರಾಟ ಮಾಡುತ್ತಿರುವುದಾಗಿ ಕೇಳಿದ್ದಾರೆ. ಮಗಳ ಮದುವೆಗೆ ಹಣಬೇಕು, ಮಾರಾಟ ಮಾಡುವುದಾಗಿ ಎಂದು ರಂಗಪ್ಪರವರು ಹೇಳಿದ್ದಾರೆ. ಈ ವೇಳೆ ಬಂದವರು,  6 ಲಕ್ಷ ರೂಪಾಯಿ ಹೊಂದಿಸಿಕೊಳ್ಳಿ ನಾನು ನಿಮಗೆ 25 ಲಕ್ಷ ರೂಪಾಯಿ ಕೊಡಿಸುತ್ತೇನೆ ಎಂದು ಹೇಳಿ ಪುನಃ ಬರುವುದಾಗಿ ಹೋಗಿದ್ದರು. 

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ಮಸಿನೋಟು ಅದ್ದಿದರೇ ಬಂತು ಹೊಸ ನೋಟು

ಕೆಲ ದಿನಗಳ ನಂತರ ರಂಗಪ್ಪರವರನ್ನ ಮೈಸೂರಿಗೆ ಬರುವಂತೆ ಹೇಳಿ ಇದೇ ಗಿರಾಕಿಗಳು ಕರೆಸಿಕೊಂಡಿದ್ದಾರೆ. ಅಲ್ಲದೆ  ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಖುದ್ದು ಬಂದ ಸುಂದರ್ ರಂಗಪ್ಪನವರನ್ನ ಕಾರಿನಲ್ಲಿ ಕೂರಿಸಿಕೊಂಡು ಎರಡು ಕಿಮೀ ದೂರ ಕರೆದುಕೊಂಡು ಹೋಗಿ ಕಪ್ಪು ನೋಟ್‌ಗಳನ್ನು ಕೆಮಿಕಲ್ ಗೆ ಅದ್ದಿ ಮೂರು ಹೊಸ 500 ರೂಪಾಯಿ ನೋಟು ತಯಾ ರಿಸಿ ತೋರಿಸಿದ್ದಾರೆ. ಇದರಿಂದ ರಂಗಪ್ಪಖುಷಿಯಾಗಿದ್ದಾರೆ.

 ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ನಂಬಿಕೆ ಮೂಡಿಸಿ ದುಡ್ಡು ಕೇಳಿದರು

ಮೈಸೂರಲ್ಲಿ ಮಸಿ ನೋಟು ಅದ್ದಿ ತೋರಿಸಿದ ಆಸಾಮಿಗಳು, ರಂಗಪ್ಪರಿಗೆ ನೀವು 6 ಲಕ್ಷ ರೂಪಾಯಿ ಸಿದ್ಧಪಡಿಸಿಕೊಳ್ಳಿ ನಾವು ಶಿವಮೊಗ್ಗಕ್ಕೆ ಬಂದು 25 ಲಕ್ಷ ರೂಪಾಯಿ ಮಾಡಿಕೊಡುತ್ತೇವೆಂದು  ನಂಬಿಸಿದ್ದಾರ. ಇವರನ್ನ ನಂಬಿ, ರಂಗಪ್ಪ ಮುತ್ತೂಟ್ ಫೈನಾನ್ಸ್ ನಲ್ಲಿ ಚಿನ್ನಾಭರಣಗಳನ್ನ ಅಡವಿಟ್ಟು 6 ಲಕ್ಷ ರೂ. ಸಿದ್ಧಪಡಿಸಿಕೊಂಡಿದ್ದಾರೆ. 6 ಲಕ್ಷ ರೂ. ಸಿದ್ಧವಿದೆ ಬನ್ನಿ ಎಂದ ತಕ್ಷಣವೇ ಸುಂದರ್ ನೇರವಾಗಿ ರಂಗಪ್ಪನವರ ನಿವಾಸವಿರುವ ಗಾಡಿಕೊಪ್ಪಕ್ಕೆ ಆತನ ಕಾರು ನೇರವಾಗಿ ಬಂದಿದೆ.

ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್​ಪೋಸ್ಟ್​ನಲ್ಲಿ 46 ಕೇಸ್​/ ಏನಿದು? ವಿವರ ನೋಡಿ

ಎಂಆರ್​ಎಸ್​ ಬಳಿ ಹೊಸ ಆಟ ಶುರು

ರಂಗಪ್ಪನವರ ಬಳಿ 6 ಲಕ್ಷ ರೂಪಾಯಿ ಸ್ವೀಕರಿಸಿ ಕೆಮಿಕಲ್ ತರೋಣವೆಂದು ರಂಗಪ್ಪನವರನ್ನು ಕಾರಿನಲ್ಲಿ ಕೂಡ್ರಿಸಿಕೊಂಡು  ಎಂ ಆರ್ ಎಸ್‌ಗೆ ಆರೋಪಿಗಳು ಬಂದಿಳಿದಿದ್ದಾರೆ. ಆದರೆ ಅಲ್ಲಿ ಯಾವ ಶಾಪ್ ನಲ್ಲೂ ತಾವು ಕೇಳಿದ ಕೆಮಿಕಲ್ ಇಲ್ಲವೆಂದು ರಂಗಪ್ಪರನ್ನು ನಂಬಿಸಿದ್ದಾರೆ. ಬಳಿಕ ಸುಂದರ್  ರಂಗಪ್ಪನವರನ್ನ ಇಳಿಸಿ ನಾವು ಬೆಂಗಳೂರಿಗೆ ಹೋಗಿ ಕೆಮಿಕಲ್ ತರುವುದಾಗಿ ಹೇಳಿ ಹೋಗಿದ್ದಾರೆ. 15 ದಿನವಾದರೂ ಬಾರದ ಇವರನ್ನು ಗಮನಿಸಿ ಹಣ ಕಳೆದುಕೊಂಡ ರಂಗಪ್ಪ ವಿನೋಬನಗರ ಪೊಲೀಸ್ ಠಾಣೆಯಲ್ಲಿ (Vinobanagar Police Station) ದೂರು ನೀಡಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ತನಿಖೆ ನಡೆಸ್ತಿದ್ದಾರೆ. 

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link