Shivamogga riots ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ನಡೆದಿತ್ತು ಕೋಮುಗಲಭೆ ! JP BIG Exclusive

Shimoga riots: Communal riots took place in Shivamogga city even before independence.

Shivamogga riots ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ನಡೆದಿತ್ತು ಕೋಮುಗಲಭೆ ! JP BIG Exclusive
Shimoga riots: Communal riots took place in Shivamogga city even before independence.

KARNATAKA |  Jan 14, 2024  |  Shivamogga riots ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ನಡೆದಿತ್ತು ಕೋಮುಗಲಭೆ ! ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ನಡೆಯಿತು ಹಿಂದು ಕಾರ್ಯಕರ್ತನ ಹತ್ಯೆ ! ಸ್ವಾತಂತ್ರ್ಯ ದಿನವೇ ನಡೆಯಿತು ಶಿವಮೊಗ್ಗದಲ್ಲಿ ಕೋಮು ಗಲಾಟೆ JP BIG Exclusive

1933 ರಲ್ಲಿ ಶಿವಮೊಗ್ಗದಲ್ಲಿ ನಡೆದಿತ್ತು ಕೋಮುಗಲಭೆ

ಶಿವಮೊಗ್ಗ ಶಾಂತಿ ಸೌಹಾರ್ದತೆಗೆ ಹೆಸರಾಗಿರವ ಜಿಲ್ಲೆ.ಶಿವಮೊಗ್ಗ ಜಿಲ್ಲೆ ನಿಂತ ನೀರಲ್ಲ.ಇಲ್ಲಿ ಕಲೆಸಾಹಿತ್ಯ ,ಸಂಗೀತ, ರಂಗಭೂಮಿ,ರಾಜಕೀಯ,ಆಧ್ಯಾತ್ಮಿಕ,ಸಾಹಿತ್ಯಿಕ,ವಿಚಾರಧಾರೆಗಳು ಹೊಸತನದೊಂದಿಗೆ ಸದಾ ಹರಿಯುತ್ತಲೇ ಇರುತ್ತದೆ.ಮಲೆನಾಡಿನ ಹಸಿರಿನ ಹಾಸೇ ಇಲ್ಲಿನ ಪ್ರಶಾಂತತೆ,ತನ್ಮಯತೆಗೆ ಸಾಕ್ಷಿಯಾಗಿದೆ. 

ಒಂದು ವೇಳೆ ಇಂತಹ ವಿಚಾರಧಾರೆಗಳು ನಿಂತ ನೀರಾದಾಗ.., ಸಮಾಜದ ಮೇಲೆ ಅದು ಹೇಗೆ ದುಷ್ಪರಿಣಾಮ ಬೀರುತ್ತೋ ಅದೇ ರೀತಿ..,ವೈಚಾರಿಕತೆಯ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳ ಸಂಘರ್ಷ ಮುಗಿಲು ಮುಟ್ಟಿದಾಗ ನಡೆಯೋದೇ ಗಲಭೆ.. ಇದಕ್ಕೆ ಒಳ್ಳೆಯ ಅಥವಾ ಕೆಟ್ಟ ವಿಚಾರ ಅನ್ನೋ ವಿಮರ್ಷೆಯ ಅಗತ್ಯವಿಲ್ಲ.

ಎಡಪಂಥೀಯ ಮತ್ತು ಬಲಪಂಥೀಯ ಹೊಸ ವಿಚಾರಧಾರೆಗಳು ಇಲ್ಲಿ ಜೀವ ಪಡೆದಷ್ಟು ಬೇರೆಲ್ಲೂ ಕಾಣಸಿಗೋದಿಲ್ಲ.ಇಂತಹ ಧಾರ್ಮಿಕ ವೈಚಾರಿಕ ಸೈದ್ಧಾಂತಿಕ ಸಂಘರ್ಷಗಳು ವಿಕೋಪಕ್ಕೆ ಹೋದಾಗ ಶಿವಮೊಗ್ಗ ನಗರ ಅಕ್ಷರ ಸಹ ಹೊತ್ತಿ ಉರಿದಿದೆ. ಕೋಮು ಸಂಘರ್ಷ ಅನ್ನೋದು ಶಿವಮೊಗ್ಗ ಜಿಲ್ಲೆಗೆ ಅಂಟಿಕೊಂಡಿರುವ ಶಾಪ ಅಂದ್ರೆ ತಪ್ಪಾಗೋದಿಲ್ಲ. ದೇಶದ ಮೋಸ್ಟ್ ಸೆನ್ಸಿಟಿವ್ ಸಿಟಿಗಳಲ್ಲಿ ಶಿವಮೊಗ್ಗ ಜಿಲ್ಲೆ ಕೂಡ ಒಂದು..,ಹೀಗಾಗಿಯೇ ಇಲ್ಲಿ ಧಾರ್ಮಿಕ ಆಚರಣೆಗಳು ಹಬ್ಬಗಳ ಸಂದರ್ಭದಲ್ಲಿ ಕೇಂದ್ರ ಗುಪ್ತಚರ ಸಂಸ್ಥೆ ತನ್ನ ಸಿಬ್ಬಂದಿಗಳಿಗೆ ಹದ್ದಿನ ಕಣ್ಣಿಟ್ಟು ಕೆಲಸ ಮಾಡಿ ವರದಿ ನೀಡುವಂತೆ ಸೂಚಿಸುತ್ತೆ.

ಶಿವಮೊಗ್ಗದಲ್ಲಿ ಕೇವಲ ಹೆಚ್.ಎಂ.ಎಸ್ ಗಣಪತಿ ಪ್ರತಿಷ್ಟಾಪನೆ ಮಾಡಿದ ಸಂದರ್ಭದಿಂದ ಕೋಮುಗಲಭೆಗಳು ನಡೆದಿಲ್ಲ.ಸ್ವತಂತ್ರ್ಯ ಪೂರ್ವದಲ್ಲಿಯೇ ಅಂದ್ರೆ 1933 ರಲ್ಲಿ ಶಿವಮೊಗ್ಗದಲ್ಲಿ ಕೋಮುಗಲಭೆ ನಡೆದು ಇಡೀ ನಗರದ ಚಿತ್ರಣವೇ ಬದಲಾಗಿತ್ತು.

ಹಿಂದು ಮುಸ್ಸಿಂರು ನೇರವಾಗಿ ಹೊಡೆದಾಡಿಕೊಂಡು, ಗಾಂಧಿ ಬಜಾರ್ ನ ಅಂಗಡಿ ಮುಂಟ್ಟುಗಳೆಲ್ಲವನ್ನು ದ್ವಂಸಗೊಳಿಸಿದ್ರು. ಜನರು ಅಂದೇ ಕರ್ಪ್ಯೂ ನಂತ ವಾತಾವರಣ ಕಂಡಿದ್ದಾರೆ. ಇದು ಕೋಮುಗಲಭೆ ವಿಷಯದಲ್ಲಿ ಶಿವಮೊಗ್ಗಕ್ಕಿರುವ ಹಿನ್ನಲೆ.

1947 ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ನಡೆದಿತ್ತು ಶಿವಮೂರ್ತಿ ಕೊಲೆ

  • ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲಿ ವೈಚಾರಿಕ ಮತ್ತು ಧಾರ್ಮಿಕ ವಿಚಾರೆಧಾರೆಗಳ ಬಿಸಿಬಿಸಿ ಚರ್ಚೆಗಳು ನಡೆಯುತ್ತಿದ್ದ ಸಂದರ್ಭ. ಸರ್ಕಾರ ಪ್ರಾರ್ಥನಾ ಮಂದಿರಗಳ ಮುಂದೆ ಮಂಗಳವಾದ್ಯ ನುಡಿಸದಂತೆ ತಡೆಯೊಡ್ಡಿತ್ತು

  • ಧಾರ್ಮಿಕ ಸ್ವಾತಂತ್ರ್ಯದ ಸಾವಿಂಧಾನಿಕ ಹಕ್ಕುಚ್ಯುತಿ ಎಂದು ಭಾವಿಸಿದ ಹಿಂದು ಮಹಾ ಮಂಡಳಿ,1947 ರ ಗಣೇಶೋತ್ಸವ ಸಂದರ್ಭದಲ್ಲಿ ಗಾಂಧಿ ಬಜಾರ್ ನ ಮಸೀದಿಯ ಮುಂದೆ ಮಂಗಳವಾದ್ಯ ನುಡಿಸಲು ಅಣಿಯಾಯ್ತು.

  • ಈ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಗಲಾಟೆಗಳು ನಡೆದು ಹೋಯ್ತು.ಶಿವಮೊಗ್ಗ ನಗರ ಅಕ್ಷರ ಸಹ ಹೊತ್ತಿ ಉರಿಯಿತು.

  • ರಾಜಬೀದಿಯಲ್ಲಿ ಮೆರವಣಿಗೆ ನಡೆಯುವ ಸಂದರ್ಭದಲ್ಲಿಯೇ ಶಿವಮೂರ್ತಿ (Shivamurthy Circle Shivamogga) ಎನ್ನುವ 26 ವರ್ಷದ ಯುವಕನನ್ನು ಎಂಬುವರನ್ನು ಒಂದು ಕೋಮಿನ ಗುಂಪು ಹತ್ಯೆಗೈಯಿತು.

  • ನಂತರ ನಡೆದಿದ್ದೆಲ್ಲಾ ಕರಾಳ ರಕ್ತಸಿಕ್ತ ಅಧ್ಯಾಯ.ಪೊಲೀಸರೇ ಗಣಪತಿಯನ್ನು ವಿಸರ್ಜಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು

  • ಗಲಭೆ ಹಿನ್ನಲೆಯಲ್ಲಿ ಶಿವಮೊಗ್ಗ ನಗರದಲ್ಲಿ ವಾರಗಟ್ಟಲೆ ಕರ್ಪೂ ವಿಧಿಸಲಾಯಿತು.ಗಣೇಶ ಪೊಲೀಸ್ ಠಾಣೆ ಮೆಟ್ಟಲೇರಿದ.ನಂತರ ಪೊಲೀಸರ ಸರ್ಪಗಾವಲಿನಲ್ಲಿ ವಿಸರ್ಜನೆ ಮಾಡಲಾಯಿತು.