ಸಿರಿಯಾಗೆ ತೆರಳಲು ಸಿದ್ಧವಾಗಿತ್ತೆ ತೀರ್ಥಹಳ್ಳಿ ಬ್ರದರ್ಸ್ ಟೀಂ! ಅರಾಫತ್ ಅರೆಸ್ಟ್ ಬಗ್ಗೆ ಆತನ ತಂದೆ ಹೇಳಿದ್ದೇನು!? NIA ತನಿಖಾ ತಂಡ ಬಂದಿತ್ತಾ?

KARNATAKA NEWS/ ONLINE / Malenadu today/ Sep 16, 2023 SHIVAMOGGA NEWS  

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ನಿವಾಸಿ ಅರಾಫತ್ ಅಲಿ ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡ ಆರೋಪದ ಅಡಿಯಲ್ಲಿ ಎನ್​ಐಎ ನಿಂದ ಅರೆಸ್ಟ್ ಆಗಿದ್ದಾನೆ. ಈ ಸಂಬಂಧ ಮಲೆನಾಡು ಟುಡೆ ವರದಿ ಇಲ್ಲಿದೆ: ಶಿವಮೊಗ್ಗ ಐಸಿಸ್ ಶಂಕಿತ ಆರೋಪಿ ಅರಾಫತ್ ಅಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನ

ಇದೀಗ ಅರಾಫತ್ ಅಲಿ ಮೇಲಿನ ಆರೋಪದ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಿದೆ, ಮೇಲಾಗಿ ಅರಾಫತ್ ಅಲಿ ಅರೆಸ್ಟ್ ಬೆನ್ನಲ್ಲೆ ತೀರ್ಥಹಳ್ಳಿಗೆ ಎನ್​ಐಎ ಅಧಿಕಾರಿಗಳು ಬಂದು ಹೋಗಿದ್ದಾರೆ ಎಂಬ ಮಾಹಿತಿಯಿದೆ.ಆದರೆ ಎನ್​ಐಎ ಟೀಂ ವಿಸಿಟ್​ ಬಗ್ಗೆ ಎಲ್ಲಿಯು ದಾಖಲೆ ಲಭ್ಯವಾಗಿಲ್ಲ. 

ಇನ್ನೊಂದೆಡೆ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಾತನಾಡಿರುವ ಅರಾಫತ್ ಅಲಿ ತಂದೆ,  ಅರಾಫತ್ ದುಬೈ ಗೆ ಹೋಗಿ ಮೂರುವರೆ ವರ್ಷ ಆಗಿದೆ. ದುಬೈ ನಲ್ಲಿ ಪರ್ಪ್ಯೂಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ..ಆಗಾಗ ಹಣ ಕೂಡ ಕಳಿಸುತ್ತಿದ್ದ. ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿಸಿದ್ದಾರಷ್ಟೆ ಅಲ್ಲದೆ, ಆತನನ್ನು ಪ್ರಕರಣದಲ್ಲಿ ಸುಖಾಸುಮ್ಮನೆ ಸಿಕ್ಕಿಸಲಾಗುತ್ತಿದೆ ಎಂದು ದೂರಿದ್ದಾರೆ. 

ಮಂಗಳೂರು ಗೋಡೆ ಬರಹ ಕೇಸ್​ನಲ್ಲಿ ಅರಾಫತ್ ಹೇಳಿದ್ದರಿಂದಲೇ ಆರೋಪಿಗಳು ಗೋಡೆ ಬರಹ ಬರೆದಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಆದರೆ ಮಂಗಳೂರು ಕೇಸ್​ನಲ್ಲಿ ಸಿಕ್ಕಿಬಿದ್ದವರು  ಈತನ ಸ್ನೇಹಿತರಾಗಿದ್ದಕ್ಕೆ ಈತನ ಮೇಲೆ ಕೇಸ್ ಹಾಕಿದ್ದರು. ಇದೀಗ ಅರೆಸ್ಟ್ ಮಾಡಿದ್ದಾರೆ. ಆತನ ಬಳಿಯಲ್ಲಿ ಈ ಬಗ್ಗೆ ವಿಚಾರಿಸಿದ್ದೆ, ನಾನು ಯಾವ  ಕೇಸ್​ನಲ್ಲಿಯು ಇಲ್ಲ ನನಗೇನು ಗೊತ್ತಿಲ್ಲ ಎಂದು ಆತ ಹೇಳಿದ್ದ ಎಂದಿದ್ದಾರೆ. 

ತೀರ್ಥಹಳ್ಳಿ ಬ್ರದರ್ಸ್​

ಈ ಹಿಂದೆ ಶಂಕಿತ ಚಟುವಟಿಕೆಗಳಲ್ಲಿ ರಿಯಾಜ್ ಯಾಸಿನ್ ಸೇರಿದಂತೆ ಭಟ್ಕಳದ ಆರೋಪಿಗಳು ಸೆರೆಯಾಗಿದ್ದರು. ಅಲ್ಲದೆ ಆ ಸಂದರ್ಭದಲ್ಲಿ ಇವರನ್ನ ಭಟ್ಕಳ ಬ್ರದರ್ಸ್​ ಎಂದು ಕರೆಯುವ ರೀತಿಯೊಂದು ಆರಂಭವಾಗಿತ್ತು. ಇದೀಗ ತೀರ್ಥಹಳ್ಳಿಯವರು ಸಾಲು ಸಾಲಾಗಿ ಅರೆಸ್ಟ್ ಆಗುತ್ತಿದ್ದಾರೆ. ಮಾಜ್, ಶಾರೀಖ್​ ನಂತರ ಅರಾಫತ್ ಅರೆಸ್ಟ್ ಆಗಿದ್ದಾನೆ. ಇನ್ನೂ ಅಬ್ದುಲ್ ಮತೀನ್​ ಕೂಡ ತೀರ್ಥಹಳ್ಳಿಯ  ಮೂಲದವನಾಗಿದ್ದಾನೆ. ಇವರೆಲ್ಲೆ ಒಂದು ಟೀಂ ಆಗಿ ಕೆಲಸ ಮಾಡುತ್ತಿರುವುದು ತಾಲ್ಲೂಕಿನ ಹೆಸರಿಗೆ ಕಳಂಕ ತಂದಿಡುತ್ತಿದೆ. 

ವೈರ್‌ಮೆಸೆಂಜರ್ ಆ್ಯಪ್‌ ಮೂಲಕ  ಶಾರೀಕ್‌ಗೆ ಅರಾಫತ್‌ ಅಲಿ ಸೂಚನೆ ನೀಡುತ್ತಿದ್ದ ಎಂದು ಎನ್​ಐಎ ತನ್ನ ತನಿಖೆಯಲ್ಲಿ ಪ್ತತೆಮಾಡಿದ  ಅರಾಫತ್‌ ಅಲಿಯಿಂದ  ಶಾರೀಕ್‌ಗೆ ನೇರ ಸೂಚನೆ ರವಾನೆಯಾಗುತ್ತಿತ್ತು. ಅರಾಫತ್​ಗೆ  ಅಬ್ದುಲ್ ಮತೀನ್ ಸೂಚನೆ ನೀಡುತ್ತಿದ್ದ. ಶಾರೀಕ್​ ನ ಟಾರ್ಗೆಟ್​ ಕದ್ರಿ ದೇವಸ್ಥಾನವಾಗಿತ್ತು. ಈ ಕೃತ್ಯ ಯಶಸ್ವಿಗೊಳಿಸಿ, ಸಿರಿಯಾಗೆ ತೆರಳಲು ಮಾಜ್ ಹಾಗೂ ಶಾರೀಕ್ ಸಿದ್ದವಾಗಿದ್ರು ಎಂಬ ವಿಚಾರ ಎನ್​ಐಎ ತನಿಖೆಯಲ್ಲಿ ಹೊರಬಿದ್ದಿದೆ.  


ಇನ್ನಷ್ಟು ಸುದ್ದಿಗಳು 

 


 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು