ಶಿವಮೊಗ್ಗ ಐಸಿಸ್ ಶಂಕಿತ ಆರೋಪಿ ಅರಾಫತ್ ಅಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನ

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS  

ಶಿವಮೊಗ್ಗ ಐಎಸ್​ಐಎಸ್​ ಟೆರರ್ ಮಾಡಲ್​ಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಮತ್ತೊಬ್ಬ ಶಂಕಿತನನ್ನ ಬಂಧಿಸಿದೆ.  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಕೀನ್ಯಾದ ನೈರೋಬಿಯಿಂದ ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ  ಇಸ್ಲಾಮಿಕ್ ಸ್ಟೇಟ್ (ಐಎಸ್) ಶಂಕಿತ ಅರಾಫತ್ ಅಲಿಯನ್ನು ಬಂಧಿಸಿದೆ.  

ಈತ  IS ಅಥವಾ ISIS ನ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್)ಸಂಘಟನೆ ಸೇರಿಕೊಂಡಿದ್ದ. ಅರಾಫತ್ ಅಲಿ 2020 ರಿಂದ ತಲೆಮರೆಸಿಕೊಂಡಿದ್ದ. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಯೋಜಿಸುತ್ತಿದ್ದ. ಶಾರೀಖ್​ ನಂತೆಯೇ ಈತನು ಸಹ ತೀರ್ಥಹಳ್ಳಿ ಮೂಲದವನು. ತೀರ್ಥಹಳ್ಳಿಯ ಇಂದಿರಾನಗರದವನು. ದುಬೈನ ಫರ್ಫ್ಯೂಮ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದವನು ಬಳಿಕ ನಾಪತ್ತೆಯಾಗಿದ್ದ. ಇನ್ನೂ ಶಾರೀಖ್​ ಜೊತೆಗೆ ನಂಟನ್ನು ಹೊಂದಿದ್ದ ಈತ, ಶಿವಮೊಗ್ಗದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್​ ಕೇಸ್​ನಲ್ಲಿಯು ಲಿಂಕ್ ಹೊಂದಿದ್ದ ಎನ್ನಲಾಗಿದೆ. 

2019 ರಲ್ಲಿ ತೀರ್ಥಹಳ್ಳಿ ತೊರೆದು, ಬೆಂಗಳೂರಿಗೆ ಹೋಗಿದ್ದ ಅರಾಫತ್ ಅಲಿ  2020 ರ ನವಂಬರ್ 27 ರಲ್ಲಿ ನಡೆದ  ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿಯು ಪ್ರಚೋದನೆ ನೀಡಿದ್ದ ಆರೋಪ ಎದುರಿಸುತ್ತಿದ್ದಾನೆ.  ಅಮಾಯಕ ಮುಸ್ಲಿಂ ಯುವಕರನ್ನು ಗುರುತಿಸುವುದು, ಅವರನ್ನ ಐಸಿಎಸ್​ಗೆ ಸೇರಿಸಿಕೊಳ್ಳುವುದು ಹಾಗೂ ಉಗ್ರ ಚಟುವಟಿಕೆಗೆ ನಿಯೋಜಿಸುವ ಕೆಲಸ ಈತ ಮಾಡುತ್ತಿದ್ದ. ಎನ್​ಐಎ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಶಿವಮೊಗ್ಗ ಐಸಿಸ್​  ಸಂಚು ಪ್ರಕರಣದಲ್ಲಿ ಭಾಗಿಯಾಗಿರುವ ಮೊಹಮ್ಮದ್ ಶಾರಿಕ್ ಎಸೆಗಿದ ಪ್ರೆಶರ್ ಕುಕ್ಕರ್ ಐಇಡಿ ಸ್ಫೋಟ ಪ್ರಕರಣದದಲ್ಲಿಯು  ಅರಾಫತ್ ಅಲಿ ಪ್ರಕರಣದ ಇತರ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದ  


ಇನ್ನಷ್ಟು ಸುದ್ದಿಗಳು 

 


 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು