ತೀರ್ಥಹಳ್ಳಿ ಬೆಂಕಿ ಕೇಸ್ PART 1/ ಸುಡುವ ಮೊದಲೇ ಸಾವನ್ನಪ್ಪಿದ್ದರಾ ದಂಪತಿ! ಮಗ ಮಾತ್ರನಾ ಜೀವಂತ ದಹನಗೊಂಡಿದ್ದು? ಜೆಪಿ ಬರೆಯುತ್ತಾರೆ!/

JP writes an investigation report on the incident that took place in Tirthahalli Taluk of Shimoga districtಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದ ಘಟನೆ ತನಿಖಾ ವರದಿ ಜೆಪಿ ಬರೆಯುತ್ತಾರೆ

ತೀರ್ಥಹಳ್ಳಿ ಬೆಂಕಿ ಕೇಸ್ PART 1/ ಸುಡುವ ಮೊದಲೇ ಸಾವನ್ನಪ್ಪಿದ್ದರಾ ದಂಪತಿ! ಮಗ ಮಾತ್ರನಾ ಜೀವಂತ ದಹನಗೊಂಡಿದ್ದು? ಜೆಪಿ ಬರೆಯುತ್ತಾರೆ!/



KARNATAKA NEWS/ ONLINE / Malenadu today/ Oct 10, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ತಿರ್ಥಹಳ್ಳಿ ತಾಲ್ಲೂಕು ಅರಳಸುರಳಿ ಸಮೀಪದ ಮನೆಯೊಂದರಲ್ಲಿ ಮೂವರು ದಹನವಾದ ಪ್ರಕರಣ ಸಾಕಷ್ಟು ನಿಗೂಢ ಅಂಶಗಳನ್ನು ಹೊಂದಿದ್ದು ಮಲೆನಾಡ ಮನೆಗಳಲ್ಲಿ ಇದೇ ವಿಚಾರ ಚರ್ಚೆಯಾಗುತ್ತಿದೆ. ತಂದೆ, ತಾಯಿ, ಮಗ ಹಾಗೂ ಕಿರಿಮಗ ಒಂದೇ ಕೋಣೆಯಲ್ಲಿ ಬೆಂಕಿ ಹಾಕಿಕೊಂಡಿದ್ದೇಕೆ ಎನ್ನುವುದೇ ವಿಚಿತ್ರ ಅನ್ನಿಸುತ್ತಿದೆ. ಈ ಸಂಬಂಧ ಪೊಲೀಸ್ ಇಲಾಖೆ ಸೀನ್ ಆಫ್ ಕ್ರೈಂ, ಎಫ್ಎಸ್​ಎಲ್ ಹಾಗೂ ವಿಶೇಷ ತನಿಖಾ ತಂಡದ ಮೂಲಕ ಪ್ರಕರಣದ ತನಿಖೆ ನಡೆಸ್ತಿದೆ. 

ನಿಗೂಢ ಪ್ರಕರಣ

ಈ ಮಧ್ಯೆ ಪ್ರಕರಣದಲ್ಲೊಂದು ಟ್ವಿಸ್ಟ್ ಸಿಕ್ಕಿದೆ. ಅದೇನು ಅನ್ನೋದನ್ನ ನೋಡುವುದಾದರೆ,  ಬೆಂಕಿ ಬಿದ್ದು ಬಹುತೇಕ ಸುಟ್ಟು ಹೋಗಿದ್ದರು ಸಹ ಅವರ ಸಾವು ಸಹಜವೋ ಅಥಾ ಅಸಹಜವೋ ಎಂದು ವೈಜ್ಞಾನಿಕವಾಗಿ ಹೇಳಬಹುದು. ಇದೇ ಕಾರಣಕ್ಕೆ FSL  ಟೀಂವೊಂದು ತೀರ್ಥಹಳ್ಳಿ ಆ ಮನೆಯಲ್ಲಿ  ಇಂಚಿಂಚೂ ಪರಿಶೀಲನೆ ನಡೆಸಿತ್ತು.  

ಏನಾಗಿತ್ತು?

ಘಟನೆಯಲ್ಲಿ ತಂದೆ ರಾಘವೇಂದ್ರ, ತಾಯಿ ನಾಗರತ್ನ ಹಾಗು ಪುತ್ರ ಶ್ರೀರಾಮ್ ಅಗ್ನಿಯಲ್ಲಿ ದಹನಗೊಂಡಿದ್ದು ಮತ್ತೋರ್ವ ಪುತ್ರ ಭರತ್ ಸಾವಿನಿಂದ ಪಾರಾಗಿದ್ದ. ಸದ್ಯ ಆತ, ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ನಡೆದ ದಿನ  ಕುಟುಂಬದಲ್ಲಿ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದರಾ...ಅಥವಾ ನಾಗರತ್ನ ಹೃದಯಾಘಾತದಿಂದ ಸಾವನ್ನಪ್ಪಿದ್ದನ್ನು ಕಂಡು ಗಂಡ ರಾಘವೇಂದ್ರರಿಗೆ ಹೃದಯಾಘಾತವಾಯ್ತಾ..ತಂದೆ ತಾಯಿ ಸಾವನ್ನಪ್ಪಿದ ಬಳಿಕ ನಾವೇಕೆ ಬದುಕಿರಬೇಕು ಎಂದು ನಿರ್ಧಾರ ತಳೆದು ಪುತ್ರರು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದರಾ. ಅಷ್ಟಕ್ಕೂ ಪ್ರಕರಣದಲ್ಲಿ ಭರತ್ ಹೇಗೆ ಪಾರಾದ...ಇವೆಲ್ಲಾ ತೀರ್ಥಹಳ್ಳಿಯ ಜನತೆಗೆ ಕಾಡುತ್ತಿರುವ ಪ್ರಶ್ನೆ 

ಏನಾದರೂ ವಿಚಾರವಿತ್ತಾ?

ರಾಘವೇಂದ್ರ ಕುಟುಂಬದ  ನಿರ್ಧಾರಕ್ಕೆ ಆಸ್ತಿ ವಿಚಾರ ವೈಮಸ್ಸುಗಳು ಥಳಕು ಹಾಕಿಕೊಂಡಿದೆ ಎನ್ನಲಾಗುತ್ತಿದ್ದು, ಆ ವಿಚಾರಗಳೆಲ್ಲಾ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬರುತ್ತೆ. ಸದ್ಯ ಮುಖ್ಯವಾಗಿ ಗೊತ್ತಾಗಬೇಕಿರುವುದು ಅಲ್ಲಿದವರು ಆ ಕೋಣೆಯಲ್ಲಿ ಸಜೀವವಾಗಿ ದಹನಗೊಂಡರೆ ಎಂಬ ವಿಚಾರ? ಈ ಪ್ರಶ್ನೆಗೆ ಉತ್ತರ ಕೊಡಲೆಂದೆ ಶಿವಮೊಗ್ಗ ಪೊಲೀಸರು  ಎಫ್.ಎಸ್ಎಲ್ ತಜ್ಞರನ್ನು ಕರೆಸಿಕೊಂಡಿತ್ತು. ಬಂದಿದ್ದ ಟೀಂ ತಮ್ಮದೇ ವೈಜ್ಞಾನಿಕ ಮಾದರಿಯಲ್ಲಿ ಸ್ಯಾಂಪಲ್ ಕಲೆ ಹಾಕಿದೆ. 

ಹೇಗೆ ಸಾವನ್ನಪ್ಪಿದರು ಎಂಬುದನ್ನ ಕಂಡುಹಿಡಿಬಹುದಾ?

ಇಲ್ಲೊಂದು ವಿಶೇಷ ಅಂದರೆ ಎಫ್​ಎಸ್​ಎಲ್​ ನಲ್ಲಿ ವ್ಯಕ್ತಿಯೊಬ್ಬ ಸಜೀವವಾಗಿ ದಹನಗೊಂಡನಾ ಅಥವಾ ಸತ್ತ ಮೇಲೆ ದಹನಾ ಗೊಂಡನಾ ಎಂಬುದುನ್ನ ಕಂಡು ಹಿಡಿಯಲೊಂದು ಮಾರ್ಗವಿದೆ. ಅದೇನು ಎಂಬುದನ್ನ ಹೇಳುತ್ತೇವೆ , ಎಫ್ ಎಸ್ ಎಲ್ ನಲ್ಲಿ ಪೋಸ್ಟ್ ಮಾರ್ಟಮ್ ಬರ್ನಿಂಗ್ ಮತ್ತು ಆ್ಯಂಟಿ  ಬರ್ನಿಂಗ್ ಎಂಬ ಅಂಶವಿದೆ. 

ಪೋಸ್ಟ್ ಮಾರ್ಟಮ್ ಬರ್ನಿಂಗ್ ಅಂದರೆ ಮನುಷ್ಯ ಸಾವನ್ನಪ್ಪಿದ ನಂತರ ಬೆಂಕಿಗೆ ಆಹುತಿಯಾಗಿದ್ರೆ, ಕಾರ್ಬನ್ ಮೊನಾಕ್ಸೈಡ್ ಲಂಗ್ಸ್ ನಲ್ಲಿ ಸ್ಟೋರ್ ಆಗೋದಿಲ್ಲ. ಉಸಿರಾಟವೇ ನಿಂತಿದ್ದಾಗ, ಆತನ ಹೃದಯಕ್ಕೆ ಹೊಗೆಯು ಹೋಗುವು ಸಾಧ್ಯತೆ ಇರುವುದಿಲ್ಲ. ಈ ಕಾರಣದ ಮೂಲಕದ ತಜ್ಞರು ವ್ಯಕ್ತಿಯ ಶ್ವಾಸಕೋಶದಲ್ಲಿ ಕಾರ್ಬನ್​ ಮೋನಾಕ್ಸೈಡ್ ಅಂಶ ಸಿಗದೆ ಇದ್ದರೇ ಆತ ಮೃತಪಟ್ಟ ನಂತರ ದಹನ ಗೊಂಡಿದ್ದಾನೆ ಎಂಬ ತೀರ್ಮಾನಕ್ಕೆ ಬರುತ್ತಾರೆ. 

ಆ್ಯಂಟಿ ಮಾರ್ಟಮ್ ಅಂದರೆ ಮನುಷ್ಯ ಜೀವಂತವಾಗಿರುವಾಗ ಆತ ಬೆಂಕಿಗೆ ಆಹುತಿಯಾದ್ರೆ, ಆತ ಉಸಿರಾಟದ ಮೂಲಕ ಕಾರ್ಬನ್ ಮೋನಾಕ್ಸೈಡ್ ಆತನ ಶ್ವಾಸಕೋಶ ಸೇರುತ್ತದೆ. ಬೆಂಕಿ ಅವಘಡಗಳಲ್ಲಿ ಉಸಿರುಘಟ್ಟಿ ಸಾಯುವ ಸ್ಥಿತಿ ಈ ಕಾರ್ಬನ್ ಮೋನಾಕ್ಸೈಡ್​ನಿಂದಲೇ ಆಗಿರುತ್ತದೆ. ಬೆಂಕಿಯಲ್ಲಿ ಸಿಲುಕಿದ ವ್ಯಕ್ತಿಯೊಬ್ಬನ  ಉಸಿರಾಟದಿಂದ ಕಾರ್ಬನ್ ಮೊನಾಕ್ಸೈಕ್ ಲಂಗ್ಸ್ ನಲ್ಲಿ ಡಿಪಾಸಿಟ್ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಸಜೀವವಾಗಿ ದಹನಗೊಂಡಿದ್ದಾನೆ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. 

ಓಹ್ ಹೀಗಾಯ್ತಾ ಹಾಗಾದರೆ 

ಸತ್ತ ವ್ಯಕ್ತಿಯ ದೇಹದಲ್ಲಿ ಯಾವುದೇ ಮೆಟಬೋಲಿಸಮ್ ಇಲ್ಲದಿರುವುದರಿಂದ ಉಸಿರು ನಿಂತಿರುತ್ತೆ. ಹೊಗೆ ದೇಹ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.  ಜೀವಂತ ದಹನವಾದ ಸಂದರ್ಭದಲ್ಲಿ ಮಾತ್ರ ಶ್ವಾಸಕೋಶಗಳಲ್ಲಿ ಕಾರ್ಬನ್ ಮೋನಾಕ್ಸೈಡ್ ಕಂಡು ಬರುತ್ತದೆ. ಈ ವಿಚಾರ ಹೇಳುವುದಕ್ಕೆ ಕಾರಣ ಅರಳ ಸುರಳಿಯಲ್ಲಿ ಸಜೀವ ದಹನದ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಅನುಮಾನ ವ್ಯಕ್ತಪಡಿಸಿರುವ ಹಾಗೆ, ಕೋಣೆಯಲ್ಲಿ ದೇಹಗಳ ಕದಲದ ರೀತಿಯಲ್ಲಿ ಬೆಂಕಿಗೆ ಆಹುತಿಯಾಗಿದ್ದವು. ಈ ಅನುಮಾನಕ್ಕೆ ಪೂರಕವಾಗಿ ಮಲೆನಾಡು ಟುಡೆ ಮೂಲಗಳ ಪ್ರಕಾರ ರಾಘವೇಂದ್ರ ಹಾಗು ನಾಗರತ್ನ ಬೆಂಕಿಗಾಹುತಿಯಾಗುವ ಮುನ್ನ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಅಂತಿಮ ಸತ್ಯ FSL ರಿಸಲ್ಟ್ ಹೇಳುತ್ತದೆ. 

ಲಾಸ್ಟ್ ಫಾಯಿಂಟ್

ಇನ್ನೂ ಮೃತ ಶ್ರೀರಾಮ್ ದೇಹದಲ್ಲಿ ಕಾರ್ಬನ್ ಮೊನಾಕ್ಸೈಡ್ ಅಂಶ ಪತ್ತೆಯಾಗಿರುವ ಸಾಧ್ಯತೆಗಳು ಹೆಚ್ಚಿದ್ದು, ಆತ ಜೀವಂತ ದಹನವಾಗಿರಬಹುದು ಅಥವಾ ಹೊಗೆಯಿಂದಾಗಿ  ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೆ ಅಧಿಕೃತ ಮಾಹಿತಿ ಹೊರಬರಬೇಕಿದೆ. ಹಾಗಾದರೆ, ಆ ರಾತ್ರಿ ಆ ಮನೆಯ ಆ ಕೋಣೆಯಲ್ಲಿ ನಡೆದಿದ್ದೇನು? ಆಗಿದ್ದೇನು? ಆಗಿದ್ದಕ್ಕೆ ಕಾರಣವೇನು? ಮಲೆನಾಡು ಟುಡೆಯಲ್ಲಿ ಈ ಬಗ್ಗೆ ತನಿಖಾ ವರದಿ ಪ್ರಕಟವಾಗಲಿದೆ… ನಿರೀಕ್ಷಿಸಿ..  


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?