showroom fire ಶೋರೂಂ ಸುಟ್ಟಿದ್ದು ಹೇಗೆ ಗೊತ್ತಾ? ನೆಲಮಹಡಿಯಲ್ಲಿದ್ದೇನು? ಧಗಧಗಿಸಿದ ಕಟ್ಟಡದ ಕಥೆ ಮೂರು ಇಲಾಖೆಗೆ ಎಚ್ಚರಿಕೆ!?

Do you know how the showroom was burnt? What's on the ground floor? The story of the building that burned down is a warning to three departments!?

showroom fire ಶೋರೂಂ ಸುಟ್ಟಿದ್ದು ಹೇಗೆ ಗೊತ್ತಾ? ನೆಲಮಹಡಿಯಲ್ಲಿದ್ದೇನು? ಧಗಧಗಿಸಿದ ಕಟ್ಟಡದ ಕಥೆ ಮೂರು ಇಲಾಖೆಗೆ ಎಚ್ಚರಿಕೆ!?
showroom fire

Shivamogga Feb 18, 2024    showroom fire ಶಿವಮೊಗ್ಗ ನಗರ ಶಂಕರಮಠದಲ್ಲಿರುವ  ಹುಂಡೈ ಕಾರು ಶೋ ರೂಂನಲ್ ಕಳೆದ ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಪರಿಣಾಮ ಅಗ್ನಿ ಹೊತ್ತಿ ಉರಿದ ರಭಸಕ್ಕೆ ನಾನಾ ಮಾತುಗಳು ನಾನಾ ರೀತಿಯಲ್ಲಿ ಕೇಳಿಬಂದಿತ್ತು. ಸುಟ್ಟು ಹೋದಿ ಶೋರೂಂನಲ್ಲಿ ಹಿಡಿದ ಕರಿಮಸಿಯ ಕಥೆಯನ್ನು ನಾವಿಲ್ಲಿ ನೀಡುತ್ತಿದ್ದೇವೆ. 

ಸಾಮಾನ್ಯವಾಗಿ ಶೋರೂಂಗಳಲ್ಲಿ ವಾಲ್ ಸೀಲಿಂಗ್ ಮಾಡಲಾಗುತ್ತದೆ. ಹಾಗಾಗಿ ಅದು ಬೆಂಕಿಗೆ ಬೇಗ ಸುಟ್ಟುಹೋಗುತ್ತದೆ ಮತ್ತು ಹೆಚ್ಚು ವ್ಯಾಪಿಸುವಂತೆ ಮಾಡುತ್ತದೆ. ಆದರೂ ಬೆಂಕಿ ನಲಮಹಡಿಗೆ ಹೇಗೆ ಹೊತ್ತಿಕೊಳ್ತು ಎಂಬುದು ಅಚ್ಚರಿಯ ಸಂಗತಿಯಾಗಿತ್ತು. ಮೇಲಾಗಿ ಶೋರೂಂನಲ್ಲಿ ಫೈರ್​ ಸೇಫ್ಟಿಯ ಯಾವೊಂದು ವ್ಯವಸ್ಥೆ ಮಾಡಿರಲಿಲ್ಲವೇ? ಈ ಪ್ರಶ್ನೆಗೆ ಆಡಳಿತ ಅಂಗಗಳು ಈಗ ನೋಟಿಸ್ ಕೊಟ್ಟು ಉತ್ತರ ಪಡೆಯಲು ಸಿದ್ಧವಾಗುತ್ತಿವೆ. 

ಏನೇನಾಯ್ತು?

ಮೇಲ್ನೋಟಕ್ಕೆ ಸಿಕ್ಕ ಲೆಕ್ಕದ ಪ್ರಕಾರ 2 ಡಿಸ್ಪ್ಲೆ ಕಾರುಗಳು ಸುಟ್ಟಿವೆ.  ಕೆಲವು ಸರ್ವಿಸ್​ಗೆಂದು ಬಂದಿದ್ದ ಕಾರು ಸುಟ್ಟಿವೆ. ಒಂದಿಷ್ಟು ಕಾರುಗಳಿಗೆ ಹಾನಿಯಂತು ಆಗಿವೆ. ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ದಡಬಡ ಎಂದು ಓಡಿಬಂದು ಬೆಂಕಿ ನಂದಿಸಲು ಆರಂಭಿಸಿದೆ. ಫೈರ್​ ಇಂಜಿನ್ ಬಂದ ತಕ್ಷಣ ಆರುತ್ತದೆಯೇ? ಅಥವಾ ಇರುವ ಬೆಂಕಿಯನ್ನ ತಟ್ಟನೆ ಕಡಿಮೆ ಮಾಡಲು ಅದನ್ನು ಅಗ್ನಿಶಾಮಕ ಸಿಬ್ಬಂದಿ ನುಂಗಲು ಆಗುತ್ತದೆ. 

ಪರಿಸ್ಥಿತಿಯನ್ನು ಅನಾಲಿಸಸ್ ಮಾಡುವ ಅಗ್ನಿಶಾಮಕ ಸಿಬ್ಬಂದಿ ಎಲ್ಲಿಂದ ನೀರು ಕೊಡಬೇಕು , ಎಲ್ಲಿಂದ ಫೋಮ್ ಕೊಡಬೇಕು ಬೆಂಕಿ ಹೇಗೆ ನಂದಿಸಬೇಕು ಎಂಬ ಲೆಕ್ಕಚಾರ ಕ್ಷಣಮಾತ್ರದಲ್ಲಿ ಹಾಕಿ ಕೆಲಸ ಆರಂಭಿಸುತ್ತಾರೆ. ಆದರೆ ಶೋರೂಂ ಬೆಂಕಿ ನಂದಿಸಲು ದೊಡ್ಡ ಅಡಚಣೆಯೇ ಆಗಿತ್ತು. 

ವಿಶೇಷ ಅಂದರೆ, ಶೋರೂಂನ ಅಂಡರ್​ಗ್ರೌಂಡ್​ನಲ್ಲಿ ಸ್ಪೇರ್​ ಪಾರ್ಟ್​​ಗಳನ್ನು ತುಂಬಿಡಲಾಗಿತ್ತು. ಬೆಂಕಿ ಹೊತ್ತಿಕೊಂಡು ಧಗಧಗಿಸಲು ಕಾರಣವಾಗಿದ್ದು ಈ ಸ್ಪೇರ್​​ ಪಾರ್ಟ್​ಗಳೇ ಕಾರಣ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಕೆಮಿಕಲ್ ಇರುವಂತಹ ವಸ್ತುಗಳು ಆಯಿಲ್ಗಳನ್ನು ಹೊಂದಿರುವ ವಸ್ತುಗಳು ಗ್ರೀಸ್​ ಹೊಂದಿರುವ ವಸ್ತುಗಳನ್ನ ಅಲ್ಲಿಯೇ ರಾಶಿ ಇಡಲಾಗಿತ್ತು. 

ಎಲ್ಲಾ ಸುಡುವ ವಸ್ತುಗಳು

ಆಯಿಲ್​, ಡಿಸೇಲ್ , ವೇಸ್ಟೇಜ್​, ಪರ್ಫ್ಯೂಮ್​ ಹೀಗೆ ಬ್ಲಾಸ್ಟ್ ಆಗುವಂತಹ ವಸ್ತುಗಳನ್ನ ನೆಲಮಹಡಿಯಲ್ಲಿ ಇಡಲಾಗಿತ್ತು. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿ ಚೂರು ಯಾಮಾರಿದ್ದರೂ ಅವರ ಜೀವಕ್ಕೆ ದೇವರೂ ಸಹ ಗ್ಯಾರಂಟಿ ಕೊಡುತ್ತಿರಲಿಲ್ಲ. ಅಂತಹದ್ದೊಂದು ಸನ್ನಿವೇಶದಲ್ಲಿ  ಫೋಮ್​ ಬಳಸಿದ ಅಗ್ನಿಶಾಮಕ ಒಂದೊಂದೆ ಹಂತವನ್ನು ದಾಟಿಕೊಂಡು ಬೆಂಕಿ ನಂದಿಸ್ತುತ್ತಾ ಸಾಗಿದ್ದಾರೆ. ಇದಷ್ಟೆ ಅಲ್ಲದೆ 10 ವೀಲ್ಹ್​ 16 ಸಾವಿರ ಲೀಟರ್ ನೀರುವ ವಾಹನವನ್ನ ತರಿಸಿಕೊಂಡು ನೀರು ಹಾಯಿಸಿದ್ದಾರೆ. ಬರೋಬ್ಬರಿ 2 ಅಡಿ ನೀರನ್ನ ಹರಿಸಿ ನೆಲಮಹಡಿಯಲ್ಲಿ ನಿಲ್ಲಿಸಿದ ಅಗ್ನಿಶಾಮಕ ಆ ಮೂಲಕ ಬೆಂಕಿ ಮತ್ತೆ ಹೆಚ್ಚಾಗುವ ಸಾಧ್ಯತೆಯನ್ನ ಕಟ್ ಮಾಡಿದ್ದಾರೆ. 

ಬೆಂಕಿ ನಂದಿಸುವುದು ತಡವಾಯ್ತಾ

ಜನರು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವುದು ತಡವಾಗ್ತಿದೆ ಎಂದು ಆರೋಪವೂ ಕೇಳಿ ಬಂದಿತ್ತು.ಆದರೆ ಅಗ್ನಿಶಾಮಕ ಸಿಬ್ಬಂದಿ ಇಲ್ಲದೇ ಹೋಗಿದ್ದರೇ ಏನು ಸಹ ಆಗುತ್ತಿತ್ತು. ನಿಮಗೆ ಗೊತ್ತಿರಲಿ, ಅಗ್ನಿಶಾಮಕ ಸಿಬ್ಬಂದಿ ಕಚೇರಿಯಲ್ಲಿ ಒಬ್ಬ ವ್ಯಕ್ತಿಗೆ ತುರ್ತು ಮೆಸೇಜ್ ರವಾನೆಯಾದರೆ, ಆ ಕಚೇರಿಯ ಎಲ್ಲಾ ಅದಿಕಾರಿಗೂ ಸಿಬ್ಬಂದಿಗೂ ಮೆಸೇಜ್ ರವಾನೆಯಾಗುತ್ತದೆ. ಪರಿಸ್ಥಿತಿ ಸನ್ನಿವೇಶಕ್ಕೆ ತಕ್ಕಂತೆ ತಮ್ಮ ಸ್ವಂತ ಗಾಡಿಯಲ್ಲಿಯೇ ಸ್ಥಳಕ್ಕೆ ಸಿಬ್ಬಂದಿಗಳು ಓಡಿಬರುತ್ತಾರೆ. ನಿನ್ನೆಯು ಸಹ 30 ಸಿಬ್ಬಂದಿಗಳು ಶೋರೂಂನಲ್ಲಿ ಬೆಂಕಿ ಆರಿಸುವ ಕೆಲಸದಲ್ಲಿ ತೊಡಗಿದ್ದರು. ಎನೇ ಇದ್ದರೂ ಸೇಫ್ಟಿ ಫಸ್ಟ್​ ಆಗಿರುತ್ತದೆ. ಆ ನಿಟ್ಟಿನಲ್ಲಿ ಶಿಸ್ತು ಬದ್ಧವಾಗಿ ಅಗ್ನಿಶಾಮಕ ಸಿಬ್ಬಂದಿ ಕೆಲಸ ಮಾಡಿದ್ದಾರೆ. 

ಸೆಲ್ಲರ್​ ಧಗಧಗ

ನೆಲಮಹಡಿ ಅಥವಾ ಸೆಲ್ಲರ್​ನಿಂದಲೇ ಮೊದಲು ಬೆಂಕಿ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರೊಬ್ಬರು ಹೇಳಿದ್ದು ಅವು ಸಹ ತುರ್ತುಸಹಾಯವಾಣಿಗೆ ಕರೆ ಮಾಡಿದ್ದಾರೆ. ಶೋರೂಂ ಲೆಫ್ಟ್ ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಆನಂತರ ಚಾವಣಿಯಲ್ಲಿ ಧಗಧಗ ಎಂದಿದೆ. ಸೆಲ್ಲರ್​ ಫೈರ್​ಸೇಫ್ಟಿಯ ಯಾವೊಂದು ಪ್ರಿಕಾಶನರಿಯು ತೆಗೆದುಕೊಂಡಿಲ್ಲ ಎಂಬುದು ಸಹ ಅಧಿಕಾರಿಗಳ ಆರೋಪ.. ಫೈರ್​ ಡಿಕ್ಟೆಟರ್ ಅಥವಾ ಸ್ಪಿಂಕ್ಲರ್ ವ್ಯವಸ್ಥೆಯನ್ನಾದರೂ ಮಾಡಿಕೊಳ್ಳಬೇಕಿತ್ತು. ಆದರೆ ಮಾಡದೇ ಹೋಗಿರುವುದು ಅನಾಹುತಕ್ಕೆ ಕಾರಣ ಎನ್ನಲಾಗುತ್ತಿದೆ. 

ಮಾನ್ಯ ಡಿಸಿಯವರಲ್ಲಿ ಮನವಿ

ಶಿವಮೊಗ್ಗಕ್ಕೆ ನೂತನವಾಗಿ ಬಂದಿರುವ ಡಿಸಿ ಗುರುದತ್ತ ನಾರಾಯಣ ಹೆಗಡೆ ಶಿವಮೊಗ್ಗದಲ್ಲಿ ತಮ್ಮ ಆರಂಭಿಕ ಕೆಲಸಗಳಲ್ಲಿ ಅಧಿಕಾರಿಗಳಿಗೆ ಅಚ್ಚರಿ ನೀಡುತ್ತಿದ್ದಾರೆ. ಅವರ ದಿಢೀರ್​ ವಿಸಿಟ್​ಗಳು ಸದ್ದಾಗುತ್ತಿದೆ. ಹುಂಡೈ ಶೋರೂಂನ ಘಟನೆಯು ಶಿವಮೊಗ್ಗದ ಶೋರೂಂಗಳ ಫೈರ್​ ಸೇಫ್ಟಿಯನ್ನು ಪ್ರಶ್ನಿಸುತ್ತಿದೆ. ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಫೈರ್ ಸೇಫ್ಟಿ ವಿಷಯದಲ್ಲಿ ಬಹು ದೊಡ್ಡ ನಿರ್ಲಕ್ಷ್ಯವೇ ಶಿವಮೊಗ್ಗ ಸಿಟಿಯಲ್ಲಿದೆ. ಅಗ್ನಿಶಾಮಕ ಸಿಬ್ಬಂದಿಯ ಜೊತೆ ಈ ಬಗ್ಗೆ ಜಿಲ್ಲಾಧಿಕಾರಿಗಳು ಚರ್ಚಿಸಿದರೇ ಫೈರ್ ಸೇಫ್ಟಿ ವಿಚಾರದಲ್ಲಿ ಒಂದೊಳ್ಳೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬಹುದು. 

ಬೂಪಾಳಂ ಘಟನೆ 

ಈ ಹಿಂದೇ ಕುವೆಂಪು ರಸ್ತೆಯಲ್ಲಿರುವ (Kuvempu Road Shivamogga) ಭೂಪಾಳಂರವರ ನಿವಾಸದಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು. ಕಳೆದ ವರ್ಷ ಜನವರಿ ತಿಂಗಳಿನಲ್ಲಿ ನಡೆದಿದ್ದ ಘಟನೆಯಲ್ಲಿ ಉದ್ಯಮಿ ಶರತ್​ರವರು ಸಾವನ್ನಪ್ಪಿದ್ದರು. ಆಗಲೂ ಅಗ್ನಿಶಾಮಕ ಸಿಬ್ಬಂದಿಯ ವಿರುದ್ಧ ಆರೋಪ ಕೇಳಿಬಂದಿತ್ತು. ಮನೆಗೆ ಇದ್ದ ಒಂದೇ ಎಂಟ್ರಿ, ಎಲ್ಲಾ ಕಡೆ ಎಂಟ್ರೆನ್ಸ್ ಲಾಕ್ ಆಗಿದ್ದು ಹೊಗೆ ತುಂಬಿದ್ದರಿಂದ ಶರತ್ ರವರು ಸಾವನ್ನಪ್ಪಿದ್ದರು ಎನ್ನಲಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ್ದ ಸಂಸದ ಬಿ.ವೈ.ರಾಘವೇಂದ್ರ ಅಗತ್ಯ ಸಮಯದಲ್ಲಿ ಜೀವ ಉಳಿಸುವ ಕೆಲಸ ಆಗಬೇಕು ಎಂದಿದ್ದರಷ್ಟರಲ್ಲೆ,  ಅಗ್ನಿಶಾಮಕ ದಳಕ್ಕೆ ಅವಶ್ಯಕ ಇರುವ  ಸೂಕ್ತ ಸವಲತ್ತಗಳ ಬಗ್ಗೆಯು ಮಾತನಾಡಿದ್ದರು. ಇದೀಗ ಹೊಸ ವರ್ಷದ ಆರಂಭದ ಎರಡನೇ ತಿಂಗಳಿನಲ್ಲಿ ಅಂತಹದ್ದೆ ಮತ್ತೊಂದು ಘಟನೆ ನಡೆದಿದೆ. ಹಿಂದಿನ ಘಟನೆ ನೆನಪಾಗುತ್ತಿದೆ.