ಕಾಡಿನ ಸಮಸ್ಯೆಗಳೇ ಸುಂದರೇಶ್​ರ ಕುಟುಂಬವನ್ನು ಕಾಡಿದವು, ಭಾದಿಸಿದವು..ಜೀವ ಬಲಿ ಪಡೆದವು! ಅರಣ್ಯ ರಕ್ಷಕನ ಹೋರಾಟದ ಬದುಕಿನ ವರದಿಯಿದು ! ಜೆಪಿ ಬರೆಯುತ್ತಾರೆ.

It was the problems of the forest that plagued Sundaresh's family. They lost their lives! This is a report of the life of a forest guard's struggle. JP writes.

ಕಾಡಿನ ಸಮಸ್ಯೆಗಳೇ ಸುಂದರೇಶ್​ರ ಕುಟುಂಬವನ್ನು ಕಾಡಿದವು,  ಭಾದಿಸಿದವು..ಜೀವ ಬಲಿ ಪಡೆದವು!  ಅರಣ್ಯ ರಕ್ಷಕನ ಹೋರಾಟದ ಬದುಕಿನ ವರದಿಯಿದು ! ಜೆಪಿ ಬರೆಯುತ್ತಾರೆ.

ಹಾಸನದ ಕಾಡುಬೆಟ್ಟ ಎಸ್ಟೆಟ್ ಬಳಿ ಕಾಣಿಸಿಕೊಂಡ ಕಾಡ್ಗಿಚ್ಚು ನಂದಿಸಲು ಹೋದ ಪಾರೆಸ್ಟ್ ಗಾರ್ಡ್ ಸುಂದರೇಶ್ ಅಗ್ನಿದುರಂತದಲ್ಲಿ ಸಾವನ್ನಪ್ಪಿರುವ ಘಟನೆ ಇಡೀ ಮಲೆನಾಡಿನಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ. ತೀರ್ಥಹಳ್ಳಿ ತಾಲೂಕು ಸಾಲೂರು ಪಂಚಾಯತ್ ನ ಸಂಪಿಗೆಸರ ಗ್ರಾಮದಲ್ಲಿ ಸುಂದರೇಶ್ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು, ಆ ಸಂದರ್ಭದಲ್ಲಿ ಸುಂದರೇಶ್ ಎದೆಗಾರಿಕೆ ಬಗ್ಗೆಯೇ ಜನರು ನೆನೆದು ಕಣ್ಣೀರಿಟ್ಟರು. ಅರಣ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಯುವಕ ಅದೇ ಅರಣ್ಯದ ರಕ್ಷಣೆಗೆ ನಿಂತು ಆತ್ಮಹುತಿಯಾಗಿದ್ದರ ಬಗ್ಗೆ ನೋವಿನ ನುಡಿಗಳು ಅಲ್ಲಿ ಮಾರ್ಧನಿಸಿದವು. ಹೌದು ಸುಂದರೇಶ್ ಎಷ್ಟೇ ನಗುಮೊಗದಲ್ಲಿದ್ದರೂ, ಅವರ ಬದುಕು ಅಷ್ಟು ಸುಂದರವಾಗಿರಲಿಲ್ಲ. ಅರಣ್ಯ ಸಮಸ್ಯೆಗಳೇ ಇವರ ಕುಟುಂಬಕ್ಕೆ ಮರಣ ಶಾಸನ ಬರೆದಿರವುದಕ್ಕೆ ನಡೆದ ಘಟನಾವಳಿಗಳೇ ಸಾಕ್ಷಿಯಾಗಿದೆ. 

BREAKING : ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಸಮೀಪ ಫೈರಿಂಗ್! ಇಬ್ಬರು ಸಾವು! ಘಟನೆ ವಿವರ ಇಲ್ಲಿದೆ

ಒಂದು ನೆಲದಲ್ಲಿ ಬದುಕು ಕಟ್ಟಿಕೊಂಡಿದ್ದ ಸುಂದರೇಶ್ ಕುಟುಂಬ ತಂದೆ ಜಯಚಂದ್ರಗೌಡ ತಾಯಿ ಶಾರದಮ್ಮ.ಕುಟುಂಬ. ಚಕ್ರಾ ಸಾವೆಹಕ್ಲು ಯೋಜನೆ ಜಾರಿಯಾದಾಗ ಮೂಲ ನೆಲೆಯನ್ನೇ ತೊರೆಯಬೇಕಾಯಿತು. ಹುಲಿಕಲ್ ಬಳಿ ಹಾರೋಕಣ ಗ್ರಾಮ ಸುಂದರೇಶ್ ಕುಟಂಬದ ಮೂಲ ಗ್ರಾಮವಾಗಿದ್ದು, ಈಗ ಮುಳುಗಡೆ ಸಂತ್ರಸ್ಥರಾಗಿದ್ದಾರೆ. ಸುಂದರೇಶ್ ಸೋದರ ಮಾವ ಪರಮೇಶ್ವರ ಇಲಾಖೆಯಲ್ಲಿ ಸಿಸಿಎಫ್ ಆಗಿದ್ದವರು. ಇವರ ಸಂಬಂದಿಗಳು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸುಂದರೇಶ್​ರವರ ಪತ್ನಿ ರಕ್ಷಿತಾ ಕೂಡ ವರಾಹಿ ಮುಳುಗಡೆ ಸಂತ್ರಸ್ಥರು. ಥೈರೊಳ್ಳಿ ಗ್ರಾಮದ ಬಳಗೋಣಿಯವರು. ಆರು ವರ್ಷದ ಹಿಂದೆ ಇವರಿಬ್ಬರಿಗೆ ವಿವಾಹವಾಗಿತ್ತು. ಸಂದರೇಶ್ ಗೆ ಕೆಲಸ ಸಿಕ್ಕಿ ಒಂಬತ್ತು ವರ್ಷವಾಗಿತ್ತು. ನಾಲ್ಕು ವರ್ಷದ ಶಾರ್ವರಿ ಎಂಬ ಹೆಣ್ಣು ಮಗಳಿದ್ದಾಳೆ. ಸುಂದರೇಶ್​ರವರ ಶಾರದಮ್ಮ ಎರಡು ವರ್ಷದ ಹಿಂದೆ ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಅಜ್ಜ ಕೂಡ ಮಂಗನ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಈಗ ಅರಣ್ಯ ರಕ್ಷಣೆಗಾಗಿ ಹೋದ ಸುಂದರೇಶ್ ಕೂಡ ಅದೇ ಅರಣ್ಯದಲ್ಲಿ ಆತ್ಮಾಹುತಿಯಾಗಿದ್ದಾರೆ. 

ಸದಾ ಅರಣ್ಯದ ಬಗ್ಗೆ ಕಾಳಜಿ ತೋರುತ್ತಿದ್ದ ಸುಂದರೇಶ್ ಪ್ರತಿದಿನ ಬೀಟ್ ನಲ್ಲಿ ಇರುತ್ತಿದ್ದರು. ಕಾಡಂಚಿನ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷವಾದ್ರೂ ಹಿಂದೆ ಮುಂದೆ ನೋಡದೆ,ಅದನ್ನು ಹಿಮ್ಮೆಟ್ಟಿಸುತ್ತಿದ್ದರು. ಆನೆ ಓಡಿಸುವ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಅದು ಕೈಯಲ್ಲಿ ಸ್ಪೋಟಗೊಂಡು ಸುಂದರೇಶ್ ಕೈ ಬೆರಳೊಂದು ತುಂಡಾಗಿತ್ತು. ಅಂತಹ ಧೈರ್ಯವಂತ ಸುಂದರೇಶ್​ಗೆ ಆ ಧೈರ್ಯವೇ ಮುಳುವಾಯ್ತಾ..ಎಂಬುದು ಪ್ರಶ್ನೆಯಾಗಿ ಉಳಿದಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು

ಜಿಲ್ಲಾ ಜಂಕ್ಷನ್ ನಡೆದಿದ್ದು ಆಕ್ಸಿಡೆಂಟ್! ಬಯಲಾಗಿದ್ದು ಕೊಲೆ ಹಾಗೂ ದರೋಡೆ ಕೇಸ್!? ದ್ವೇಷ ಹೀಗೂ ತೀರಿಸಿಕೊಳ್ಳುತ್ತಾರಾ? ವಿಚಿತ್ರ ಕ್ರೈಂ ಕಥೆ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com