ಚಿಲೂರು ಡಬ್ಬಲ್ ಅಟ್ಯಾಕ್!ರಾಜಕಾರಣಿಯೊಬ್ಬರ ಆಪ್ತ ಓರ್ವ ಪತ್ರಕರ್ತ ವಶಕ್ಕೆ? ಶರಣಾಗತಿ ಪ್ಯಾಕೇಜ್​ಗೆ ದಾವಣಗೆರೆ ಪೊಲೀಸ್ ಸ್ಟ್ರೈಟ್ ಹಿಟ್! ಏನಿದು JP BIG EXCLUSIVE

Chilur double attack: A journalist close to a politician detained by Davanagere police JP BIG EXCLUSIVE

ಚಿಲೂರು ಡಬ್ಬಲ್ ಅಟ್ಯಾಕ್!ರಾಜಕಾರಣಿಯೊಬ್ಬರ ಆಪ್ತ  ಓರ್ವ ಪತ್ರಕರ್ತ ವಶಕ್ಕೆ? ಶರಣಾಗತಿ ಪ್ಯಾಕೇಜ್​ಗೆ ದಾವಣಗೆರೆ ಪೊಲೀಸ್ ಸ್ಟ್ರೈಟ್ ಹಿಟ್! ಏನಿದು JP BIG EXCLUSIVE
ಚಿಲೂರು ಡಬ್ಬಲ್ ಅಟ್ಯಾಕ್!ರಾಜಕಾರಣಿಯೊಬ್ಬರ ಆಪ್ತ ಓರ್ವ ಪತ್ರಕರ್ತ ವಶಕ್ಕೆ? ಶರಣಾಗತಿ ಪ್ಯಾಕೇಜ್​ಗೆ ದಾವಣಗೆರೆ ಪೊಲೀಸ್ ಸ್ಟ್ರೈಟ್ ಹಿಟ್! ಏನಿದು JP BIG EXCLUSIVE

ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನ ಚೀಲೂರಿನ ಗೋವಿನಕೋವಿ ಬಳಿ ನಡೆದ ಡಬ್ಬಲ್​ ಅಟ್ಯಾಕ್​ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ದಾವಣಗೆರೆ ಎಸ್​ಪಿ ಕೇಸ್​ನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ತಮ್ಮವ್ಯಾಪ್ತಿಯಲ್ಲಿ ನಡೆದ ಶಿವಮೊಗ್ಗ ರೌಡಿಸಂನ ಪ್ರತಿಕಾರದ ದಾಳಿಯಲ್ಲಿ ಆರೋಪಿಗಳು ಯಾರು ಸಹ ತಪ್ಪಿಸಿಕೊಳ್ಳಬಾರದು ಎಂದು ಬೇರೆಯದ್ದೆ ಬಲೆಯನ್ನು ದಾವಣಗೆರೆ ಪೊಲೀಸರು ಹೆಣೆಯುತ್ತಿದ್ಧಾರೆ. ಅದಕ್ಕಿಂತಲೂ ಹೆಚ್ಚಾಗಿ, ನಡೆದ ದಾಳಿಯ ಹಿಮ್ಮೇಳದಲ್ಲಿ ಯಾರ್ಯಾರಿದ್ದಾರೆ? ಫೈನಾನ್ಶಿಯರ್ ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟ ಪೊಲೀಸರು, ಘಟನೆ ನಡೆದ ಕೆಲವೆ ಗಂಟೆಗಳಲ್ಲಿ ಹಾವೇರಿಯ ಶಿಗ್ಗಾವಿ ಪೊಲೀಸರಿಗೆ ಆರೋಪಿಗಳನ್ನ ಸೆರೆಂಡರ್ ಮಾಡಿಸಲು ವೇದಿಕೆ ಕಲ್ಪಿಸಿದ ಆರೋಪದ ಮೇಲೆ ಓರ್ವ ಟಿವಿ ಪತ್ರಕರ್ತರನ್ನು ವಶಕ್ಕೆ ಪಡೆದಿದೆ ಎಂಬ ಮಾಹಿತಿಯಿದೆ. ಧಾರವಾಡದ ಪತ್ರಕರ್ತನೊಬ್ಬನನ್ನ ಲಿಫ್ಟ್ ಮಾಡಿರುವ ನ್ಯಾಮತಿ ಪೊಲೀಸರು, ಆತನನ್ನ ಕೂರಿಸಿಕೊಂಡು, ಆರೋಪಿಗಳ ಶರಣಾಗತಿ ಪ್ಯಾಕೆಜ್​ ಬಗ್ಗೆ ಎನ್​ಕ್ವೈರಿ ನಡೆಸ್ತಿದೆ. ಅಷ್ಟೆಅಲ್ಲದೆ, ದಾಳಿ ವೇಳೆ ಇದ್ದ ಉಳಿದ ಆರೋಪಿಗಳಿಗಾಗಿ ತಲಾಶ್ ನಡೆಸಿದೆ. 

ಹಂದಿ ಅಣ್ಣಿ ಕೊಲೆಗೆ ಪ್ರತಿಕಾರ ತೀರಿಸಿಕೊಂಡನೇ ಹೆಬ್ಬೆಟ್ಟು ಮಂಜ? ಸಲಗ ಸಿನಿಮಾದಂತಾಗಿದೆ ಶಿವಮೊಗ್ಗದ ಪಾತಕ ಲೋಕ..ನಿಜವಾಗ್ಲೂ ಬ್ಯಾಟ್ ಬೀಸಿದವರು ಅಂದರ್ ಆಗ್ತಾರಾ ?JP EXCLUSIVE

ಇಷ್ಟಕ್ಕೂ ಏನಿದು ಶರಣಾಗತಿ ಪ್ಯಾಕೇಜ್​! 

ಒಬ್ಬ  ಬ್ರಿಲಿಯೆಂಟ್ ಕ್ರಿಮಿನಲ್ ಆದ್ರೆ ಪೊಲೀಸ್ ವ್ವವಸ್ಥೆಗೆ ತುಂಬಾ ಕಷ್ಟವಾಗುತ್ತೆ. ಈ ರೌಡಿಗಳು ಎದುರಾಳಿಗಳನ್ನು ಹತ್ಯೆಗೈಯುವುದನ್ನು ಒಂದು  ರೀತಿಯ ಕಾಮಗಾರಿ ಪ್ರಾಜೆಕ್ಟ್​ ರೀತಿಯಲ್ಲಿ ನಡೆಸ್ತಿದ್ದಾರೆ.  ಎದುರಾಳಿಯವನ್ನು ಯಾರು ಕೊಲೆ ಮಾಡಬೇಕು?  ಯಾರು ಪೊಲೀಸರಿಗೆ ಶರಣಾಗಲು ತಯಾರಿರಬೇಕು.? ಯಾವ ರಾಜಕಾರಣಿ ಇಲ್ಲವೇ ಅವರ ನಿಕಟವರ್ತಿಗಳ ಸಂಪರ್ಕದಲ್ಲಿದ್ದು ಸ್ಥಳೀಯ ಠಾಣೆಗೆ ಶರಣಾಗಬೇಕು?. ಇನ್ನು ಕೊಲೆಗೆ ಬಳಸುವ ವಾಹನ, ಹಣದ ಪೂರೈಕೆ ಹೇಗೆಲ್ಲಾ ಆಗಬೇಕು ? ಎಂಬುದನ್ನು  ಜೈಲಿನಲ್ಲಿದ್ದುಕೊಂಡೇ ಮಾಸ್ಟರ್ ಮೈಂಡ್ ಗಳು ಯೋಜನೆ ರೂಪಿಸಿರ್ತಾರೆ.  ಅದರಂತೆಯೇ ಪ್ಲಾನ್ ಎಕ್ಸಿಕ್ಯೂಟ್  ಆಗುತ್ತೆ.  ಯಾವ ಪೊಲೀಸ್ ಠಾಣೆಗೆ ಹೋಗಿ ಶರಣಾದ್ರೆ ನಮಗೆ ಸೇಪು ಅನ್ನೋದನ್ನು ಕೂಡ ತಮ್ಮ ಸ್ಕೆಚ್ ನಲ್ಲಿ ಹಾಕಿಕೊಂಡಿರ್ತಾರೆ ಯೋಜನೆ ರೂಪಿಸುವ ಮಾಸ್ಚರ್ ಮೈಂಡ್! ಹಾಗೆ ಅಂದುಕೊಂಡಂತೆ ಒಂದಿಷ್ಟು ಆರೋಪಿಗಳನ್ನು ಮೀಡಿಯೇಟರ್​ ಮೂಲಕ ಶರಣಾಗಿಸುವುದು ಶರಣಾಗತಿ ಪ್ಯಾಕೆಜ್.

Chilur double attack/ ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಅಟ್ಯಾಕ್! ದಾವಣಗೆರೆ ಎಸ್​ಪಿ ಸಿ.ಬಿ.ರಿಷ್ಯಂತ್ ಹೇಳಿಕೆ!

ಕನ್ನಡದ ಸಿನಿಮಾವೊಂದರಲ್ಲಿ ಈ ರೀತಿಯ ಶರಣಾಗತಿ ಪ್ಯಾಕೇಜ್​ ದೃಶ್ಯ ಕಾಣಸಿಗುತ್ತದೆ. ಆದರೆ ಶಿವಮೊಗ್ಗದಲ್ಲಿ ಈ ರೀತಿಯ ದೃಶ್ಯಗಳು ಮೊದಲಿನಿಂದಲೂ ನಡೆಯತ್ತಿದೆ. ಅಂದಹಾಗೆ, ಒಬ್ಬನ ಮೇಲೆ ಅಟ್ಯಾಕ್ ಮಾಡುವವರನ್ನ ಬ್ಯಾಟ್ಸಮನ್​ಗಳೆನ್ನಲಾಗುತ್ತದೆ. ಆ ಕೇಸ್​ನಲ್ಲಿ ಸೆರೆಂಡರ್ ಆಗಿ ಫಿಟ್ ಆಗುವವರು ಶರಣಾಗತಿ ಪ್ಯಾಕೇಜ್​ನಲ್ಲಿ ಬರುತ್ತಾರೆ. ಇದಕ್ಕೆ ಹಿಮ್ಮೇಳದಲ್ಲಿ ರಾಜಕಾರಣಿಗಳು ಮತ್ತು ಅವರ ಆಪ್ತರು ಸೆರೆಂಡರ್ ಪ್ರಕ್ರಿಯೆಯಲ್ಲಿ ಪೊಲೀಸ್ ಸ್ಟೇಷನ್​ಗಳ ವೇದಿಕೆಯನ್ನು ಒದಗಿಸುತ್ತಾರೆ. ವಿವಿಐಪಿಗಳು, ರೌಡಿಸಂ ಬಿಟ್ಟು ದಂಧೆ ನಡೆಸುವವರು ಹಾಗೂ  ವೈಯಕ್ತಿಕ ದ್ವೇಷ ಹಾಗೂ ಸಂಬಂಧಿಗಳು ಫೈನಾನ್ಸ್​ ಮಾಡಿರುತ್ತಾರೆ. ​ ಇದಿಷ್ಟು ರೌಡಿ ಮರ್ಡರ್​ನ ಘಟನೆಗಳಲ್ಲಿ ನಡೆಯುವ ಕಾಮನ್ ಸೀನ್​.

  1. ಹಿಂದೆ ಹಂದಿ ಅಣ್ಣಿಯನ್ನು ಕೊಲೆ ಮಾಡಿದ ಕಾಡಾ ಕಾರ್ತಿ ಟೀಂ ಗೂ ಶಿವಮೊಗ್ಗ ಜಿಲ್ಲೆಯ ರಾಜಕೀಯ ನಾಯಕರೊಬ್ಬರ ಮಗ ನೆರವಾಗಿದ್ದ. ಆಗ ಕಾಡಾ ಕಾರ್ತಿಕ್ ಟೀಂ ತಮಗೆ ಸೇಫ್ ಎನಿಸಿದ ಚಿಕ್ಕಮಗಳೂರು ಎಸ್ಪಿ ಕಛೇರಿಗೆ ಹೋಗಿ ಶರಣಾಗಿತ್ತು. 
  2. ಇನ್ನು 2006 ರಲ್ಲಿ ಲವಕುಶ ಅವಳಿ ಸಹೋದರರನ್ನು ಕೊಲೆ ಮಾಡಿದ ಹಂದಿ ಅಣ್ಣಿ ಅಂಡ್ ಟೀಂ ಪತ್ರಕರ್ತ ರವಿ ಬೆಳಗೆರೆ ಬಳಿ ಮೂಲಕ ನ್ಯಾಯಾಲಯಕ್ಕೆ ಶರಣಾಗಿತ್ತು.
  3. 2011 ರಲ್ಲಿ ರೌಡಿ ತುಳಸಿ ರಾಂ ಕೊಲೆ ಮಾಡಿದ  ಮೆಂಟಲ್ ಸೀನಾ ದೊಡ್ಡಪೇಟೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದ.  2012 ರಲ್ಲಿ ತುಳಸಿರಾಂ ಹತ್ಯೆಗೆ ಪ್ರತಿಕಾರವಾಗಿ  ಮೆಂಟಲ್ ಸೀನಾನ ನನ್ನು  ಕೊಲೆ ಮಾಡಿದ್ದ ಮಾರ್ಕೆಟ್ ಲೋಕಿ ಟೀಂ ನಂತರ ಪೊಲೀಸರಿಗೆ ಶರಣಾಗಿತ್ತು. 
  4. ಮೆಂಟಲ್ ಸೀನಾ ಕೊಲೆ ಕೇಸ್ ನಿಂದಾಗಿ ಅಬ್ ಸ್ಕಾಂಡ್ ಆಗಿದ್ದ ಸ್ಪಾಟ್ ನಾಗ ನ್ಯಾಯಾಲಯದ ಮುಂದೆ ಶರಣಾಗಿದ್ದ. ಹೀಗೆ  ಶುರುವಾದ ಶರಣಾಗತಿ ಪ್ಯಾಕೇಜ್​ ಈಗ ಹೈಟೆಕ್ ಸ್ಪರೂಪ ಪಡೆದಿದೆ.

ಶಿಗ್ಗಾವಿ ಪೊಲೀಸರಿಗೆ ಶರಣಾದ ಡಬ್ಬಲ್ ಅಟ್ಯಾಕ್ ಟೀಂ

Chilur double attack/ ಚೀಲೂರು ಸ್ಪಾಟ್​ಗೆ ಶಿವಮೊಗ್ಗ ಎಸ್​ಪಿ ಭೇಟಿ! ಅಣ್ಣಿ ಆರೋಪಿಗಳ ಮೇಲೆ ಅಟ್ಯಾಕ್​ ಮಾಡಿದವರು ಸೆರೆಂಡರ್ ಆಗಿಲ್ಲ! ಬಂಧನ ಎಂದರು ದಾವಣಗೆರೆ ಎಸ್​ಪಿ! ಏನಿದು ಡಿಟೇಲ್ಸ್​

ಇನ್ನೂ ಚೀಲೂರಿನಲ್ಲಿ ನಡೆದ ಅಟ್ಯಾಕ್​ಗೆ ಸಂಬಂಧಿಸಿದಂತೆ, ನಾವೇ ಕೊಲೆ ಮಾಡಿದ್ದು ಎಂದು ಶಿವಮೊಗ್ಗದ ಅಭಿಲಾಷ್, ಸುನೀಲ್ ವೆಂಕಟೇಶ್ ಪವನ್ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ವಿಶೇಷ ಅಂದರೆ, ಇಂತಹ ಪ್ರಕರಣಗಳಲ್ಲಿ ಈ ಹಿಂದೆ ತೋರಿದ ನಿರ್ಲಕ್ಷ್ಯವನ್ನು ದಾವಣಗೆರೆ ಪೊಲೀಸರು ತೋರಿಸುತ್ತಿಲ್ಲ. ಹಾಗಾಗಿಯೇ ಪತ್ರಕರ್ತನೊಬ್ಬನನ್ನ ವಶಕ್ಕೆ ಪಡೆದು ನ್ಯಾಮತಿ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಅಸಲಿಗೆ ಇಲ್ಲಿ ಅನುಮಾನಿತರ ಕಾಲ್ ಡಿಟೈಲ್ ತೆಗೆದಾಗ ಪ್ರಮುಖ ರಾಜಕಾರಣಿಯೊಬ್ಬರ ಆಪ್ತಸಹಾಯಕ ಹಾಗೂ ಪತ್ರಕರ್ತನ ಬಗ್ಗೆ ಪೊಲೀಸರಿಗೆ ಕ್ಲೂ ಸಿಕ್ಕಿತ್ತು. 

ಶಿವಮೊಗ್ಗ ಮತ್ತು ಹೈಟೆಕ್ ರೌಡಿಸಂ

ರೌಡಿ ರೌಡಿಗಳು ಹೊಡ್ಕೊಂಡು ಸತ್ತೋದ್ರೆ ಅದ್ರಿಂದ ಸಮಾಜಕ್ಕೇನು ನಷ್ಟವಿಲ್ಲ ಅಂತಾ ಸುಮ್ಮನಿರಬಹುದಾದರೂ..ಇದೊಂದು ರೀತಿಯಲ್ಲಿ ಗಂಭೀರವಾದಂತ ವಿಚಾರ. ಒಬ್ಬ ರೌಡಿಯನ್ನು ಕೊಲ್ಲಲು ಎದುರಾಳಿ ರೌಡಿಗಳು ರೂಪಿಸುವ ಯೋಜನೆಗಳನ್ನು ಸಾಮಾನ್ಯ ಜನರ ಮೇಲೆ ಪ್ರಯೋಗಿಸಿದರೆ, ನ್ಯಾಯಾಲಯದಲ್ಲಿ ನ್ಯಾಯ ಕೂಡ ಸಿಗೋದಕ್ಕೆ ಸಾಧ್ಯವಿಲ್ಲ. ಅಷ್ಟೊಂದು ಅಚ್ಚುಕಟ್ಟಾಗಿ ರೌಡಿಗಳು ಸಾಕ್ಷ್ಯ ನಾಶಪಡಿಸಿಬಿಡ್ತಾರೆ.

ಚೀಲೂರಿನ ಗೋವಿನಕೋವಿಯಲ್ಲಿ ನಡೆದಿರುವ ಘಟನೆಯಲ್ಲಿ ರೌಡಿ ಹಂದಿ ಅಣ್ಣಿ ಕೊಲೆ ಮಾಡಿದ ಆರೋಪಿ ಮಧು ಮತ್ತು ಆಂಜನೇಯ ಎಂಬ ರೌಡಿಗಳ ಹತ್ಯೆಗೆ  ಎದುರಾಳಿ ತಂಡ ತುಂಬಾ ಯೋಜಿತವಾಗಿ ಸ್ಕೆಚ್ ಹಾಕಿದೆ. ಅದರಲ್ಲಿ ಆಂಜನೇಯನನ್ನು ಬರ್ಬರವಾಗಿ ಕೊಲೆ ಮಾಡಿದೆ. ಕೊಲೆ ಮಾಡಿದ ಆರೋಪಿಗಳನ್ನು ಬೆಂಗಳೂರಿನ ಮೂಲದ ಬ್ಯಾಟರ್ಸ್ ಗಳೆಂದು ಹೇಳಲಾಗುತ್ತಿದೆ.

ಡಬ್ಬಲ್ ಅಟ್ಯಾಕ್ ಡೌಟ್

ಆದ್ರೆ ಶಿಗ್ಗಾವಿ ಪೊಲೀಸರಿಗೆ ಶರಣಾದ ಶಿವಮೊಗ್ಗದ ರೌಡಿಗಳನ್ನು ನೋಡಿದಾಗ ಅನುಮಾನ ಮತ್ತಷ್ಟು ದಟ್ಟವಾಗುತ್ತದೆ. ಏಕೆಂದರೆ ಘಟನೆ ನಡೆದ ದಿನ, ಬೈಕ್ ನಲ್ಲಿ ಹೋಗುತ್ತಿದ್ದ ಮಧು ಮತ್ತು ಆಂಜನೇಯನನ್ನು ಸ್ಕಾರ್ಪಿಯೋ ದಿಂದ ಗುದ್ದಿ ಅವರನ್ನು ಬೀಳಿಸಲಾಗಿತ್ತು. ಈ ವೇಳೆ ಸ್ಕಾರ್ಪಿಯೋ ಕೂಡ ಅಪ್ ಸೆಟ್ ಆಗಿತ್ತು. ಆ ಕಾರಣಕ್ಕೆ ಸ್ಕಾರ್ಪಿಯೋ ಅಲ್ಲೆ ಬಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ರು. ಇಲ್ಲಿ ಪ್ರಶ್ನೆ ಎಂದರೆ, ಶರಣಾದ ನಾಲ್ವರು ಆರೋಪಿಗಳು ಇದೇ ಸ್ಕಾರ್ಪಿಯೋದಲ್ಲಿ ಇದ್ದಿದ್ದರೇ, ಅವರಿಗೂ ಗಾಯಗಳಾಗಿರಬೇಕಿತ್ತು ಅಲ್ಲವೇ?  

ಘಟನಾ ಸ್ಥಳದಲ್ಲಿದ್ದವರು ಹೇಳುವ ಪ್ರಕಾರ, ಇಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೂ ಪೆಟ್ಟು ಬಿದ್ದಿತ್ತು. ಸ್ಕಾರ್ಪಿಯೋ ಅಪ್​ಸೆಟ್ ಆದಾಗ, ಅದರಲ್ಲಿದ್ದವರು ಗಾಯಗೊಂಡಿದ್ದರು. ಅವರು ಎಸ್ಕೇಪ್​ ಆಗುವಾಗಲು ತೆವಳಿಕೊಂಡು ಹೋಗಿದ್ದನ್ನ ನೋಡಿದವರಿದ್ದಾರಂತೆ. ಹಾಗಿದ್ದ ಮೇಲೆ ಏನೂ ಆಗದ ಫ್ರೆಶ್ ಫೇಸ್​ ನಲ್ಲಿರುವ ನಾಲ್ವರು ಕೇಸ್​ ಸಂಬಂಧ ಫೋಟೋ ಹೊಡೆಸಿಕೊಂಡರಾ ಎಂಬುದು ಅನುಮಾನ! ಈ ಸಂಶಯ ದಾವಣಗೆರೆ ಪೊಲೀಸರಿಗೂ ಇದೆ. 

ಇನ್ನೂ ಗಾಂಜಾ ಡೋಪ್ ನಲ್ಲಿದ್ದ ಬೆಂಗಳೂರು ಮೂಲದ ರೌಡಿಗಳು ಕೊಲೆ ಮಾಡಿ, ಎಸ್ಕೆಪ್ ಆಗಿದ್ದಾರೆ ಎಂದು ಮಾತಾಡುತ್ತಿದೆ ರೌಡಿ ವಲಯ. ಕೊನೆಯದಾಗಿ ಪಾತಕಲೋಕದಲ್ಲಿ ಕೊಲೆಗೆ ಬಳಸುವ ಟೂಲ್ಸ್, ಪ್ರಯಾಣಕ್ಕಾಗಿ ಬಳಸುವ ವಾಹನ, ಕೃತ್ಯ ಎಸಗುವ ಹುಡುಗರಿಗೆ ಜೈಲಿನಲ್ಲಿ ಒಳ್ಳೆಯ ಊಟ, ಕುಟುಂಬಕ್ಕೆ ಹಣಕಾಸಿನ ನೆರವು, ಜಾಮೀನಿಗೆ ಹಣ ಹೊಂಚಿಸುವವರೆಗೆ ಎಲ್ಲವೂ ಇಲ್ಲಿ ಪಕ್ಕಾ ಪ್ಲಾನ್ ಆಗಿರುತ್ತೆ. ಇಲ್ಲಿ ಮೊಬೈಲ್ ಬಳಕೆಗೆ ಅವಕಾಶವಿಲ್ಲ. ಸಿಗ್ನಲ್ ವೈರ್ ನಂತ ಆ್ಯಪ್ ಗಳ ಬಳಕೆಗೆ ಕ್ರೈಂ ಲೋಕ ತವಕಿಸುತ್ತದೆ. ಇಂತವರಿಗೆ ಸೂಕ್ತ ನೆರವು ನೀಡಲು ರಾಜಕೀಯ ವ್ಯವಸ್ಥೆ ಕೆಲಸ ಮಾಡುವುದೇ ಇಲ್ಲಿ ವಿಪರ್ಯಾಸ.

READ |ಸೇಮ್ ಅಟ್ಯಾಕ್​ !? ಚೀಲೂರಿನ ಗೋವಿನ ಕೋವಿಯಲ್ಲಿ ನಡೆದಿದ್ದೇನು? ಆಂಜನೇಯ ಸಾವು! ಮಧು ಗಂಭೀರ

READ |BIG BREAKING NEWS | ಹಂದಿ ಅಣ್ಣಿ ಕೊಲೆ ಆರೋಪಿಗಳಿಬ್ಬರ ಮೇಲೆ ಮಾರಣಾಂತಿಕ ದಾಳಿ! ಓರ್ವ ಸಾವು! ಇನ್ನೊಬ್ಬ ಗಂಭೀರ! ರಿವೆಂಜ್​ ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga shivamogga handi anni murder,handi anni news,handi anni,handi anni murderers,handi anni murder case,handi anni murder acuused arrest,handi anni case,handi quilter,handi anni accused of murder,handhi anni is no more,anni dewani,rowdy sheeter #Crime, #Crimenews, #Davanagerenews, #Davanagerepolice, #Murder, #Murdernews, #Nyamathi, #Nyamathipolicestation, #Police, #Rowdy, #Rowdyattack, #Rowdysheeter, #Shimoga, #Shimogacrimenews, #Shimogarowdys,  #ಆರೋಪಿಗಳು  #ಕೊಲೆ, #ಗೋವಿನಕೋವಿ, #ಗೋವಿನಕೋವಿಗ್ರಾಮ, #ದಾವಣಗೆರೆ, #ನ್ಯಾಮತಿ, #ನ್ಯಾಮತಿತಾಲೂಕು, #ನ್ಯಾಮತಿಪೊಲೀಸ್, #ನ್ಯಾಮತಿಪೊಲೀಸ್_ಠಾಣೆ, #ಮರ್ಡರ್, #ರೌಡಿ, #ರೌಡಿಗಳಮೇಲೆದಾಳಿ, #ರೌಡಿಗಳು, #ರೌಡಿಹಂದಿಅಣ್ಣಿ, #ಹಂತಕರು