ಶಿವಮೊಗ್ಗ ನಗರ ನಾಗರಿಕರೇ ನಾಳೆ ನೀರು ಬರೋದು ಡೌಟ್! ಕಾರಣ ಇಲ್ಲಿದೆ

Citizens of Shivamogga city, drinking water supply is doubtful tomorrow! Here's the reason

ಶಿವಮೊಗ್ಗ ನಗರ ನಾಗರಿಕರೇ ನಾಳೆ ನೀರು ಬರೋದು ಡೌಟ್! ಕಾರಣ ಇಲ್ಲಿದೆ
Citizens of Shivamogga city, drinking water supply is doubtful tomorrow! Here's the reason

SHIVAMOGGA  |  Jan 24, 2024  |  ಇತ್ತೀಚೆಗೆ ಜನವರಿ 22 ರಂದು ಶಿವಮೊಗ್ಗ ನಗರದಲ್ಲಿ ನೀರು ಸರಭರಾಜು ವ್ಯತ್ಯಯವಾಗಲಿದೆ ಎಂದು ಹೇಳಲಾಗಿತ್ತು. ಆನಂತರ ಅಕಾರಣಕ್ಕೆ ಪ್ರಕಟಣೆಯನ್ನು ವಾಪಸ್ ಪಡೆಯಲಾಗಿತ್ತು. ಇದೀಗ ನಾಳೆ ಅಂದರೆ, ಜನವರಿ 25 ರಂದು ಕುಡಿಯುವ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಪ್ರಕಟಣೆಯನ್ನು ಹೊರಡಿಸಲಾಗಿದೆ. 

ಕುಡಿಯುವ ನೀರು ವ್ಯತ್ಯಯ: ಸಹಕರಿಸಲು ಮನವಿ

ಕೃಷ್ಣರಾಜೇಂದ್ರ ಜಲಶುದ್ಧಿಕರಣ ಘಟಕಕ್ಕೆ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುವುದರಿಂದ ಜ.25 ರಂದು ಶಿವಮೊಗ್ಗ ನಗರದ ದೈನಂದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯವಾಗಲಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಗೆ ವಸ್ತ್ರ ಸಂಹಿತೆ

ಶಿವಮೊಗ್ಗ, ಜನವರಿ 24: (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‍ಟೇಬಲ್ (ಸಿಎಆರ್/ಡಿಎಆರ್) (ಪುರುಷ ಮತ್ತು ತೃತೀಯ ಲಿಂಗ ಪುರುಷ) -3064 ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ಜ. 28 ರಂದು ಬೆಳಗ್ಗೆ 11.00 ರಿಂದ 12.30ರವರೆಗೆ ರಾಜ್ಯಾದ್ಯಂತ ನಡೆಸಲಾಗುತ್ತಿದ್ದು, ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ತಿಳಿಸಲಾಗಿದೆ.

ಈ ಲಿಖಿತ ಪರೀಕ್ಷೆಗೆ ಹಾಜರಾಗುವ ಪುರುಷ ಮತ್ತು ತೃತಿಯಲಿಂಗ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‍ಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್‍ಗಳನ್ನು ಧರಿಸುವುದು. ಜಿಪ್ ಪ್ಯಾಕೆಟ್‍ಗಳು, ದೊಡ್ಡ ಬಟನ್‍ಗಳು ಇರುವ ಶರ್ಟ್‍ಗಳನ್ನು ಧರಿಸಬಾರದು.  

ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್‍ಗಳನ್ನು ಧರಿಸತಕ್ಕದ್ದಲ್ಲ. ಪರೀಕ್ಷಾ ಕೇಂದ್ರದೊಳಗೆ ಷೂಗಳನ್ನು ನಿಷೇಧಿಸಲಾಗಿದ್ದು, ತೆಳುವಾದ ಅಡಿಭಾಗವಿರುವ ಪಾದರಕ್ಷೆಗಳನ್ನು ಧರಿಸುವುದು. ಕುತ್ತಿಗೆ ಸುತ್ತಾ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗಗಳನ್ನು ಧರಿಸುವುದು ನಿಷೇಧಿಲಾಗಿದೆ ಎಂದು ಡಿ.ಐ.ಜಿ.ಪಿ. ನೇಮಕಾತಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್‍ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.