ಸಾರ್ವಜನಿಕರ ಗಮನಕ್ಕೆ ! ನಾಳೆ ಸರ್ಕಾರಿ ರಜೆ ಇಲ್ಲ | ಶಿವಮೊಗ್ಗದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಇರುವುದಿಲ್ಲ

SHIVAMOGGA  |  Jan 21, 2024  |  No government holiday tomorrow ಅಯೋಧ್ಯೆಯಲ್ಲಿ ಶ್ರೀರಾಮಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಟಾಪನೆಯ ಹಿನ್ನೆಲೆಯಲ್ಲಿ ಹಲವೆಡೆ ಸರ್ಕಾರಿ ರಜೆ ಘೋಷಿಸಲಾಗಿದೆ. ಈ ಸಂಬಂಧ ರಾಜ್ಯದಲ್ಲಿಯು ರಜೆ ನೀಡಲಾಗುತ್ತದೆ ಎಂಬ ಚರ್ಚೆ ನಡೆದಿತ್ತು. ಆದರೆ ನಾಳೆ ಸರ್ಕಾರಿ ರಜೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. 

ಸಿಎಂ ಸಿದ್ದರಾಮಯ್ಯ

ಇದೇ ವಿಚಾರದ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಸಿದ್ದರಾಮಯ್ಯರವರು, ನಾಳೆ ಸರ್ಕಾರಿ ರಜೆ ಇಲ್ಲ ಎಂದು ತಿಳಿಸಿದ್ದಾರೆ.  ತುಮಕೂರು ಜಿಲ್ಲೆಯಲ್ಲಿ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕೆಲವೊಂದು ಶಿಕ್ಷಣ ಸಂಸ್ಥೆಗಳು ನಾಳೆ ರಜೆ ನೀಡಿವೆ. ಆದರೆ ಸರ್ಕಾರಿ ರಜೆ ನಾಳೆ ಇರುವುದಿಲ್ಲ. ಇದನ್ನ ಸಿದ್ದರಾಮಯ್ಯರವರು ಸ್ಪಷ್ಟವಾಗಿ ಹೇಳಿದ್ದಾರೆ 

ನಾಳೆ ಶಿವಮೊಗ್ಗದಲ್ಲಿ ನೀರು ಪೂರೈಕೆ ಸ್ಥಗಿತ ಇಲ್ಲ

ಇನ್ನೂ ಶಿವಮೊಗ್ಗ ನಗರದಲ್ಲಿ  ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಇವತ್ತು ಮತ್ತು ನಾಳೆ ನೀರು ಪೂರೈಕೆ ವತ್ಯಯವಾಗಲಿದೆ ಎಂದು ಹೇಳಲಾಗಿತ್ತು.ಈ ಸಂಬಂಧ ಪ್ರಕರಣೆಯನ್ನು ಸಹ ಹೊರಡಿಸಲಾಗಿತ್ತು. ಆ ಬಳಿಕ ವಿಚಾರದ ಸಂಬಂಧ ಸ್ಪಷ್ಟನೆಯನ್ನು ನೀಡಲಾಗಿದ್ದು, ನಾಳೆ ನೀರು ಪೂರೈಕೆ ಎಂದಿನಂತೆ ಆಗಲಿದೆ ಎಂದು ತಿಳಿಸಲಾಗಿದೆ. 

ಕುಡಿಯುವ ನೀರು ವ್ಯತ್ಯಯವಿರುವುದಿಲ್ಲ

21  ಮತ್ತು 22 ರಂದು ಶಿವಮೊಗ್ಗ ನಗರದ ದೈನಂದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಿರುವುದಿಲ್ಲವೆಂದು  ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ ಎಂದು ವಾರ್ತಾಇಲಾಖೆಯ ಮೂಲಕ ತಿಳಿದು ಬಂದಿದೆ


Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು