ಒಂದು ಮನೆ ಗಲಾಟೆಗೆ ಇಡೀ ಊರು ಆಗಿತ್ತು ಬಂದ್! ತನ್ನವರಿಂದ ಬೀದಿಗೆ ಬಿದ್ದವಳಿಗೆ ಸಿಕ್ಕಿದ್ದು ದೇವರ ಮಕ್ಕಳು! ಧರ್ಮ, ಜಾತಿ ಹಂಗಿಲ್ಲದೇ ಕಟ್ಟಿದ ‘ಅಜ್ಜಿಮನೆ’ ಕಥೆ! JP FLASHBACK ನಲ್ಲಿ

The story of a grandmother who was thrown out of her house in a property dispute and a new house was built by the entire village! IN JP FLASHBACK ಆಸ್ತಿ ಜಗಳದಲ್ಲಿ ಮನೆಯಿಂದ ಹೊರದಬ್ಬಲ್ಪಟ್ಟ ಅಜ್ಜಿಯೊಬ್ಬಳಿಗೆ ಇಡೀ ಊರಿನವರೇ ಸೇರಿಕೊಂಡು ಹೊಸ ಮನೆ ಕಟ್ಟಿಸಿದ ಕಥೆ! JP FLASHBACK ನಲ್ಲಿ

ಒಂದು ಮನೆ ಗಲಾಟೆಗೆ ಇಡೀ ಊರು ಆಗಿತ್ತು ಬಂದ್! ತನ್ನವರಿಂದ ಬೀದಿಗೆ ಬಿದ್ದವಳಿಗೆ ಸಿಕ್ಕಿದ್ದು ದೇವರ ಮಕ್ಕಳು!  ಧರ್ಮ, ಜಾತಿ ಹಂಗಿಲ್ಲದೇ ಕಟ್ಟಿದ ‘ಅಜ್ಜಿಮನೆ’ ಕಥೆ! JP FLASHBACK ನಲ್ಲಿ

KARNATAKA NEWS/ ONLINE / Malenadu today/ Jul 30, 2023 SHIVAMOGGA NEWS

ವರದಿ: ಜೆಪಿ

2015 ರಲ್ಲಿ ನ್ಯಾಯಾಲಯದ ಆದೇಶವನ್ನಿಟ್ಟುಕೊಂಡು  ಸಂಬಂಧಿಕರು, ಆ ವಯೋವೃದ್ದೆಗೆ ಆಸರೆಯಾಗಿದ್ದ ಮನೆಯಿಂದ ಹೊರಹಾಕಿದ ಘಟನೆ ಇಡಿ ಗ್ರಾಮಸ್ಥರನ್ನು ಕೆರಳಿಸಿತ್ತು.  ಜೋಪಡಿಯಲ್ಲಿದ್ದ ಅಜ್ಜಿಗೆ ಗ್ರಾಮಸ್ಥರೇ ಹೈಟೆಕ್ ಆಗಿ ಮನೆ ಕಟ್ಟಿಕೊಟ್ಟು ಸಾಮರಸ್ಯಕ್ಕೆ ನಾಂದಿ ಹಾಡಿದ್ದು ಹೇಗೆ ಗೊತ್ತಾ  ಇದು ಇವತ್ತಿನ ಜೆಪಿ ಪ್ಲಾಶ್ ಬ್ಯಾಕ್ 

ಮಲೆನಾಡಿಗ ಮಾನವೀಯತೆಗೆ ಸಾಕ್ಷಿಯಾದ ಘಟನೆ

ಇದು ಮಾನವೀಯ ಮೌಲ್ಯಕ್ಕೆ ಕನ್ನಡಿಯಾಗಬಲ್ಲ ಒಂದು ಅಪರೂಪದ ಘಟನೆ. ಸಂಬಂಧಕ್ಕಿಂತ ನೆರೆಹೊರೆಯವರ ಪ್ರೀತಿ ಔದಾರ್ಯ ಉದಾರತೆ ದೊಡ್ಡದು ಎಂಬುದಕ್ಕೆ ಪ್ರೇರಕ ಶಕ್ತಿಯಾಗಿತ್ತು.ಜಾತಿ ಧರ್ಮಕ್ಕಿಂತ ಮಾನವತೆ ದೊಡ್ಡದು ಎಂಬುದನ್ನು ಸಾಕ್ಷಿಕರಿಸಿತ್ತು ಆ ಘಟನೆ. ಕಲ್ಲುಹೃದಯಗಳನ್ನು ಕರಗಿಸುವ ಸಂದರ್ಭಕ್ಕೆ ಸಾಕ್ಷಿಯಾಗಿತ್ತು ಆ ದಯನೀಯ ಕ್ಷಣ.ಕಾನೂನಿನ ಆದೇಶಕ್ಕಿಂತ ಮಾನವೀಯತೆ  ದೊಡ್ಡದು ಎಂಬುದನ್ನು ಸಾರಿ ಹೇಳಿತ್ತು.

SHIVAMOGGA AIRPORT ಗೆ ಸಿಗಲಿದೆ ವಿಶೇಷ ಭದ್ರತೆ! ಗೋವಾ, ತಿರುಪತಿ, ಹೈದ್ರಾಬಾದ್​ಗೂ ಹಾರುತ್ತೆ ವಿಮಾನ! ಟಿಕೆಟ್ ದರದ ಬಗ್ಗೆ ಸಂಸದರು ಹೇಳಿದ್ದೇನು?

ತೀರ್ಥಹಳ್ಳಿ ತಾಲ್ಲೂಕಿನ ಒಂದು ಗ್ರಾಮ

89 ವರ್ಷದ ವಯೋವೃದ್ಧೆ  ಜಯಮ್ಮ (ಹೆಸರು ಬದಲಿಸಿದೆ).ತನ್ನ ಬದುಕನ್ನೇಲ್ಲಾ  ಜೋಪಡಿಯಂತಹ ಮನೆಯಲ್ಲಿ ಕಳೆದಿತ್ತ ಆ ಹಿರಿಜೀವ. ಸಾಲದ್ದಕ್ಕೆ ಇಳಿಸಂಜೆಯಲ್ಲಿ ತಾನಿದ್ದ ಮನೆ ತೊರೆದು ಬೀದಿಪಾಲಾಗುವ ಸಂದರ್ಭ ಎದುರಾಗಿತ್ತು. ಎತ್ಲಾಗೆ ಹೋಗೋದೋ…ಎಲ್ಲೋ ಮೂಲೆಯಲ್ಲಿ ಇರ್ತಿನ್ರೋ..ಆಸರೆ ಕೊಡ್ರೋ ಎನ್ನುತ್ತಿದ್ದ ಆ ಅಜ್ಜಿಯ ಕೂಗು ಸಂಬಂಧಿಕರ ಮನಸ್ಸನ್ನ ಕರಗಿಸಿರಲಿಲ್ಲ.  ಅಜ್ಜಿಯನ್ನು ದರದರ ಎಳೆದು ಮನೆಯಿಂದ ಹೊರಹಾಕಿಯೇ ಬಿಟ್ಟರು.ಮನೆಯಲ್ಲಿದ್ದ ಪಾತ್ರೆ ಪಿಠೋಪಕರಣ ಹಾಸಿಗೆ ಎಲ್ಲವನ್ನು ಮನೆಯಿಂದ ಹೊರಗೆ ಬಿಸಾಡಿದ್ದರು. ಸಾಲಗಾರನೊಬ್ಬನನ್ನ ಬಡ್ಡಿ ವಸೂಲಿಗಾರ ಮನೆಯಿಂದ ಬೀದಿಗೆಳೆದು ಹಾಕುವಂತೆ ಅಲ್ಲಿದ್ದವರು ಅಜ್ಜಿಯನ್ನ ನಡುಬೀದಿಗೆ ತಂದಿದ್ದರು. ಇದನ್ನ ಕಣ್ಣಾರೆ ಕಂಡ ಊರ ಮಂದಿಗೆ ಕರಳು ಚುರಕ್​ ಅಂದಿತ್ತು.  ಇವರಿಗೆ ಮನುಷ್ಯತ್ವವೇ ಇಲ್ಲವೇ.? ಆ ಅಜ್ಜಿಯನ್ನು ಮನೆಯಿಂದ ಹೊರಹಾಕಿದರೆ ಅವರೆಲ್ಲಿ ಹೋಗಬೇಕು? ಮದುವೆಗೆ ಬಂದ ಹೆಣ್ಣುಮಕ್ಕಳ ಪಾಡೇನು?  ಇನ್ನು ಕೆಲವರು ವ್ಯವಸ್ಥೆಯನ್ನು ಕಂಡು ರೊಚ್ಚಿಗೆದ್ದರು.ಮನೆ ಖಾಲಿ ಮಾಡಿಸಲು ಬಂದವರಿಗೆ ದಬಾಯಿಸಿದರು. ಆದರೆ, ಕಾನೂನು ಬದ್ಧವಾದ ಕ್ರಮಕ್ಕೆ ಬೇರೆನೂ ಮಾಡಲಾಗದೇ ಮೂಕ ಸಾಕ್ಷಿಯಾಗಿದ್ದರು. 

40 ವರ್ಷದ ಹೋರಾಟ

ಒಂದು ಚಿಕ್ಕ ಮನೆ, ಅದಕ್ಕೆ ತಾಗಿಕೊಂಡು ಒಂದು ಸೈಟು, ಇಷ್ಟಕ್ಕಾಗಿ ಕೋರ್ಟ್​ನಲ್ಲಿ ನಲವತ್ತು ವರ್ಷ ಹೋರಾಟ ನಡೆದಿತ್ತು. ಕೊನೆಗೆ ಈ ಹೋರಾಟದಲ್ಲಿ ಗೆದ್ದವರು, ಆಯಮ್ಮನ ಕುಟುಂಬವನ್ನು ಹೊರಕ್ಕೆ ಹಾಕಿದ್ದರು. ಮನೆಯ ಪೊಜಿಷನ್ ತೆಗೆದುಕೊಂಡ ಅವರು, ವೃದ್ದೆಯ ಮುಸ್ಸಂಜೆ ಬದುಕಿನ ಬಗ್ಗೆ ಯೋಚಿಸುವ ಇರಾದೆಯಲ್ಲಿರಲಿಲ್ಲ! 

ಅಜ್ಜಿಗಾಗಿ ಒಂದಾಗಿತ್ತು ಇಡೀ ಊರು

ಅವತ್ತು ವಿಷಯ ಊರು ತುಂಬಾ ಹರಡಿ, ಆ ಪಂಚಾಯ್ತಿಯ ಜನರೆಲ್ಲಾ ಅಲ್ಲಿ ಸೇರಿ ಪ್ರತಿಯೊಬ್ಬರು ಅಜ್ಜಿಯ ಪರವಾಗಿ ಮಾತನಾಡಿದ್ರು. ಅಲ್ಲದೆ ಸಿಟ್ಟಿಗೆದ್ದು ಊರಿಗೆ ಊರನ್ನೆ ಬಂದ್ ಮಾಡಿದ್ದರು. ಒಬ್ಬ ಬಡ ಮಹಿಳೆಯ ಕಾರಣಕ್ಕೆ ಊರನ್ನ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದು ಬಹುಶಃ ಅದೆ ಕೊನೆ ಅದೆ ಮೊದಲಿರಬೇಕು! ಅಣಕು ಶವಯಾತ್ರೆ ನಡೆಸಿ ಸ್ಥಳೀಯ ಆಡಳಿತದ ನೆರವು ಕೋರಿದ್ರು! ಜನಪ್ರತಿನಿಧಿಗಳನ್ನ ಕರೆಸಿ ಅಜ್ಜಿಗಾಗಿ ನ್ಯಾಯ ಕೋರಿದ್ರು. ಆದರೆ ಊರಿನವರ ಯಾವ ಪ್ರಯತ್ನವೂ ಫಲ ನೀಡಲಿಲ್ಲ. 

ಅಜ್ಜಿ ಪರವಾಗಿ ಇಡೀ ಊರೇ ನೀಡಿತು ಶ್ಯೂರಿಟಿ

ಒಂದು ಕಡೆ ಅಜ್ಜಿ ಪರವಾಗಿ ಹೋರಾಟ ನಡೆಸಿದ ಊರಿನವರು, ಕೊನೆಗೆ ಊರು ಮನೆ ಪಂಚಾಯ್ತಿ ನಡೆಸಿ, ಅಜ್ಜಿ ಸಂಬಂಧಿಕರ ಮನವೊಲಿಸಿ ಒಂದು ತೀರ್ಮಾನ ಮಾಡಿಸಿದ್ರು. ಒಂದು ವರ್ಷದವರೆಗೂ ಅಜ್ಜಿಗೆ ಕಾಲಾವಕಾಶ ಕೊಟ್ಟು, ಅದೇ ಮನೆಯಲ್ಲಿ ಇರಿಸುವುದು ಎಂದು ತೀರ್ಮಾನವಾಯ್ತು. ವರ್ಷದ ನಂತರ ಮನೆ ಖಾಲಿ ಮಾಡುವ ತೀರ್ಮಾನಕ್ಕೆ ಇಡೀ ಊರಿನವರು ಅಜ್ಜಿಯ ಪರವಾಗಿ ಶ್ಯೂರಿಟಿ ಕೊಟ್ಟರು. 

ಮತ್ತೆ ಹಾಲುಕ್ಕಿಸಿ ಮನೆ ತುಂಬಿಸಿದ ಗ್ರಾಮಸ್ಥರು

ಆದ ತೀರ್ಮಾನದಂತೆ ಅಜ್ಜಿಗೆ ಅದೇ  ಮನೆಯಲ್ಲಿ ಇರಲು ಅವಕಾಶ ಸಿಕ್ಕಿತ್ತು. ಮನೆಯಿಂದ ಹೊರಬಿದ್ದ ಸಾಮಾನುಗಳನ್ನ ಊರಿನವರೆ ಮನೆಯೊಳಗೆ ಇರಿಸಿ ಹಾಲು ಉಕ್ಕಿಸಿದರು. ಪಟಾಕಿ ಸಿಡಿಸಿದರು. ಆದರೆ ಇದೆಲ್ಲವೂ ತಾತ್ಕಾಲಿಕವಾಗಿತ್ತು. ಮಾತು ಕೊಟ್ಟಂತೆ ವರ್ಷ ತುಂಬುದುವರೊಳಗೆ ಮನೆ ಬಿಟ್ಟು ಕೊಡಬೇಕಿತ್ತು. ಅಜ್ಜಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಏನು ಮಾಡೋಣಾ? ಶುರುವಾಯ್ತು ಚರ್ಚೆ ಊರೊಳಗೆ.. ಹೀಗೆ ಆರಂಭವಾಯ್ತು ಮಾನವೀಯತೆಯ ಮಹಾ ಆಪರೇಷನ್​ 

ಶಿವಮೊಗ್ಗ ಟಿವಿ ಟವರ್ ಗೆ ಎಫ್​ಎಂ ಟ್ರಾನ್ಸ್​ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್​ಎಂ!? ಏನಂದ್ರು ಸಂಸದರು?

ಧರ್ಮ, ಜಾತಿಯ ಎಲ್ಲೆ ಮೀರಿ ನಡೀತು ಮನುಜನ ಪವಾಡ

ಆಗ ತೀರ್ಥಹಳ್ಳಿಯಲ್ಲಿ ಒಬ್ಬ ಹೆಣ್ಣುಮಗಳ ಸಾವಿನ ಪ್ರಕರಣ ಸಾಕಷ್ಟು ಚರ್ಚೆಯಲ್ಲಿತ್ತು. ಅದರ ನಡುವೆ ನಡೆದ  ಅಜ್ಜಿಯ ಮನೆ ಗಲಾಟೆಯ ಪ್ರಕರಣ, ಜಾತಿ ಧರ್ಮದ ರೇಖೆಗಳನ್ನು ಅಕ್ಷರಶಃ ಅಳಿಸಿ ಹಾಕಿತ್ತು. ಒಂದಿಷ್ಟು ಮಂದಿ ಜವಾಬ್ದಾರಿ ಹೊತ್ತರು, ಅವರ ಜವಾಬ್ದಾರಿಗೆ ಮತ್ತೊಂದಿಷ್ಟು ಮಂದಿ ಹೆಗಲು ಕೊಟ್ಟರು. ಅಜ್ಜಿಗೊಂದು ಹೊಸ ಮನೆ ಕಟ್ಟಿಸಿಕೊಡಬೇಕು. ಆ ಮನೆ, ಆಕೆಯ ನೋವನ್ನ ಅಳಿಸಬೇಕು. ಅಲ್ಲದೆ, ಇಳಿ ಸಂಜೆಯ ಆಕಯೆ ಸಂತೋಷವನ್ನು ಕೂಡ ದುಪ್ಪಟ್ಟುಗೊಳಿಸಬೇಕು ಎಂದು ಊರಿನವರು ತೀರ್ಮಾನಿಸಿದ್ರು ಮುಸ್ಲಿಮರು, ಹಿಂದೂಗಳು, ಕ್ರೈಸ್ತರು ಹೀಗೆ ಪ್ರತಿಯೊಬ್ಬರು ಅಜ್ಜಿಯ ಪರವಾಗಿ ನಿಂತರು. ಒಂದೊಳ್ಳೆ ಕೆಲಸಕ್ಕೆ ದೇವರು ಸಹ ಕೈ ಜೋಡಿಸುತ್ತಾನಂತೆ. ಅಲ್ಲಿಯು ಆಗಿದ್ದು ಅದೇ , ಊರಿನವರ ನಿಸ್ವಾರ್ಥ ಕೆಲಸಕ್ಕೆ ನೋಡನೋಡುತ್ತಲೇ ಎರಡು ಲಕ್ಷಕ್ಕೂ ಮೀರಿ ದುಡ್ಡು ಸಂಗ್ರಹವಾಗಿತ್ತು. ಇಟ್ಟಿಗೆ, ಮರಳು, ಕಲ್ಲು, ಸಿಮೆಂಟ್​, ಕಬ್ಬಿಣ ಅಲ್ಲಲ್ಲೆ ಅಡ್ಜೆಸ್ಟ್ ಆಗಿತ್ತು. ಇನ್ನೂ ಗ್ರಾಮ ಪಂಚಾಯ್ತಿಯ ಸರದಿ.. 

ಟ್ರಂಚ್​ ಹೊಡೆದು ಜಾಗ ಕೊಟ್ಟ ಪಂಚಾಯ್ತಿ!

ಅತ್ತ ಊರಿನವರು ಹೊಸಮನೆಗೆ ಸಿದ್ದತೆ ಮಾಡಿಕೊಳ್ತಿದ್ರೆ, ಇತ್ತ ಪಂಚಾಯ್ತಿ ಅಜ್ಜಿಯಿದ್ದ ಜಾಗದ ಅಳತೆ ಮಾಡಿಸಿತು. ಆಗ ಪರರ ಪರವಾದ ಆಸ್ತಿಯಲ್ಲಿ, ಪಂಚಾಯ್ತಿಯ ಆಸ್ತಿಯಿರುವುದು ತಿಳಿದುಬಂದಿತ್ತು. ತಕ್ಷಣವೇ ತನ್ನ ಜಾಗಕ್ಕೆ ಟ್ರಂಚ್ ಹೊಡೆದ ಪಂಚಾಯ್ತಿ ಸದಸ್ಯರು, ಅದೇ ಜಾಗದಲ್ಲಿ ಜಯಮ್ಮರ ಕುಟುಂಬಕ್ಕೆ ಸೂರು ಕಟ್ಟಿಕೊಡಲು ನಿವೇಶನ ನೀಡಿತು. ಎಲ್ಲವೂ ಹೊಂದಿಕೆಯಾಯ್ತು. ಊರಿನವರ ಶ್ರಮ, ಸಹಾಕಾರ, ಮೇಲುಸ್ತುವಾರಿ ಮತ್ತು ಮಾನವೀಯತೆಯಿಂದ ಕೆಲವೇ ದಿನಗಳಲ್ಲಿ ಮನೆಯೊಂದು ತಲೆಯೆತ್ತಿ ನಿಂತಿತ್ತು. 

ಜೀವನ ಕೊಟ್ಟ ಹಣೆಬರಹಕ್ಕೆ ಗುಡಿಸಲಲ್ಲಿ ವಾಸಿಸ್ತಿದ್ದ ಅಜ್ಜಿಗೆ ಸುಂದರವಾದ ಆರ್​ಸಿಸಿ ಮನೆ ಸ್ವಾಗತಿಸುತ್ತಿತ್ತು. ಅದನ್ನ ನೋಡಿದ ಜಯಮ್ಮರ ಮನಸ್ಸಲ್ಲಿ ಊರಿನವರು ತನ್ನ ಮಕ್ಕಳಂತೆ ಕಂಡರು, ತಾಯಿ ಹೃದಯ ಕಣ್ಣಂಚಲ್ಲಿ ನೀರು ತುಂಬಿಕೊಂಡದ್ದನ್ನ ಕಂಡ ಊರಿನವರು ಅಮ್ಮಾ ಎಂದು ಬುಜದ  ಮೇಲೆ ಕೈಯಿಟ್ಟು ನಾನಿದ್ದೇನೆ ಎನ್ನುತ್ತಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ಮಾನವೀಯತೆ ಘಟನೆಗಳು ಸಾಕಷ್ಟು ನಡೆದಿವೆ. ಇವತ್ತಿಗೂ ತೀರ್ಥಹಳ್ಳಿಗೆ ಹೋದರೆ, ಅಜ್ಜಿಯ ಸುಂದರ ಮನೆ ಆ ಊರಿನವರ ಒಗ್ಗಟ್ಟು ಹಾಗೂ ಮಾನವೀಯತೆಗೆ ಸಾಕ್ಷಿಯಾಗಿ ಕಾಣಸಿಗುತ್ತದೆ. ಮಾನವೀಯತೆ ಸೃಷ್ಟಿಸುವ ಅದ್ಭುತ ಪವಾಡಗಳನ್ನು ತಿಳಿಸುವ ಸಲುವಾಗಿ ಈ ಪ್ಲ್ಯಾಶ್ ಬ್ಯಾಕ್​ನ್ನ ನಿಮ್ಮ ಮುಂದೆ ಇಟ್ಟಿದ್ದೇನೆ.. 

ಜೆಪಿ 


ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಿಟ್​ ಆ್ಯಂಡ್​ ರನ್​ ಯುವಕ ಬಲಿ! ಏನಿದು ಘಟನೆ?

SHIVAMOGGA AIRPORT ಗೆ ಸಿಗಲಿದೆ ವಿಶೇಷ ಭದ್ರತೆ! ಗೋವಾ, ತಿರುಪತಿ, ಹೈದ್ರಾಬಾದ್​ಗೂ ಹಾರುತ್ತೆ ವಿಮಾನ! ಟಿಕೆಟ್ ದರದ ಬಗ್ಗೆ ಸಂಸದರು ಹೇಳಿದ್ದೇನು?

 

ಶಿವಮೊಗ್ಗ ಟಿವಿ ಟವರ್ ಗೆ ಎಫ್​ಎಂ ಟ್ರಾನ್ಸ್​ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್​ಎಂ!? ಏನಂದ್ರು ಸಂಸದರು?

ಆರು ಚಿನ್ನದ ಪದಕದ ಜೊತೆಗೆ ರಾಜ್ಯದಲ್ಲಿಯೇ ಫಸ್ಟ್ RANK ಪಡೆದ ಶಿವಮೊಗ್ಗ ಯುವತಿ!

VIRAL TODAY / ಶಾಸಕರ ಬಾಯಿ ರುಚಿ ಮತ್ತು ಬೃಂದಾವನ್​ ಕ್ಯಾಂಟಿನ್​ ಮೆಣಸಿನ ಕಾಯಿ ಬೋಂಡಾ! ವೈರಲ್​ ಆಯ್ತು ಬೇಳೂರು ಹೇಳಿದ ಬಜ್ಜಿ ರೆಸಿಪಿ!

 

SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

 ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ






 ​