ಶಿವಮೊಗ್ಗದ ವಿದ್ಯಾನಗರದಲ್ಲಿ ಕೊಲೆ! ಚರಂಡಿಯಲ್ಲಿ ಸಿಕ್ತು ಮೃತದೇಹ! ನಡೆದಿದ್ದೇನು?

Murder in Shivamogga's Vidyanagar Body found in drain! What happened?ಶಿವಮೊಗ್ಗದ ವಿದ್ಯಾನಗರದಲ್ಲಿ ಕೊಲೆ! ಚರಂಡಿಯಲ್ಲಿ ಸಿಕ್ತು ಮೃತದೇಹ! ನಡೆದಿದ್ದೇನು?

ಶಿವಮೊಗ್ಗದ ವಿದ್ಯಾನಗರದಲ್ಲಿ ಕೊಲೆ! ಚರಂಡಿಯಲ್ಲಿ ಸಿಕ್ತು ಮೃತದೇಹ! ನಡೆದಿದ್ದೇನು?

KARNATAKA NEWS/ ONLINE / Malenadu today/ Jul 30, 2023 SHIVAMOGGA NEWS

ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ವಿದ್ಯಾನಗರದ  5 ನೇ ತಿರುವಿನಲ್ಲಿ ಬರುವ ಸುಭಾಷ್ ನಗರದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಜ್ಞಾನೇಶ್ವರ್ ಎಂಬ 43 ವರ್ಷದ ವ್ಯಕ್ತಿ ಸಾವನ್ನಪ್ಪಿದ್ಧಾನೆ. 

ನಡೆದಿದ್ದೇನು?

ಜ್ಞಾನೇಶ್ವರ್ ಬ್ಯಾಗ್​ ರಿಪೇರಿ ಕೆಲಸ ಮಾಡುತ್ತಿದ್ದು, ನಿನ್ನೆ ತನ್ನ ಅತ್ತೆ ಮನೆಗೆ ತೆರಳಿದ್ದಾನೆ. ಆ ಮನೆ ತನಗೆ ಸೇರಬೇಕು ಎಂದು ಆತನ ಹೆಂಡತಿಯ ತಾಯಿ ತಮ್ಮನ ಜೊತೆಗೆ ಮಾತುಕತೆ ಆರಂಭಿಸಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಕಿತ್ತಾಟ ನಡೆದು ತಳ್ಳಾಟ ಆಗಿದೆ. ಈ ವೇಳೆ ಜ್ಞಾನೇಶ್ವರ್​ ಮನೆ ಎದುರಿಗಿದ್ದ ಚರಂಡಿಗೆ ಬಿದ್ದಿದ್ದಾನೆ. ಅಲ್ಲಿಯೇ ಸಾವನ್ನಪ್ಪಿದ್ಧಾನೆ. ಕುಡಿದ ಅಮಲಿನಲ್ಲಿ ನಡೆದ ಘಟನೆಯಲ್ಲಿ ಜ್ಞಾನೇಶ್ವರ್​ ಸಾವನ್ನಪ್ಪಿದ್ದಾನೆ . 

ಇವತ್ತು ಬೆಳಗ್ಗೆ ಸ್ಥಳೀಯರು ಚರಂಡಿಯಲ್ಲಿ ಮೃತದೇಹ ಇರುವದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕೋಟೆ ಪೊಲೀಸ್ ಸ್ಟೇಷನ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. 


ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಿಟ್​ ಆ್ಯಂಡ್​ ರನ್​ ಯುವಕ ಬಲಿ! ಏನಿದು ಘಟನೆ?

ತೀರ್ಥಹಳ್ಳಿ / ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಶಿವರಾಜಪುರದ ಬಳಿಯಲ್ಲಿ, ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶಿವರಾಜಪುರದ ನಿವಾಸಿ ರಮೇಶ್ ಮೃತ ದುರ್ಧೈವಿ. 

ನಡೆದಿದ್ದೇನು?

ರಂಜದ ಕಟ್ಟೆ ಸಮೀಪ ಬರುವ ಶಿವರಾಜಪುರ ಬಸ್ ಸ್ಟಾಪ್ ಬಳಿಯಲ್ಲಿ ನಿನ್ನೆ ರಾತ್ರಿ 11 ಗಂಟೆ ನಂತರ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಯಾವುದೋ ಅಪರಿಚಿತ ವಾಹನವೊಂದು ನಡೆದುಕೊಂಡು ಹೋಗುತ್ತಿದ್ದ ರಮೇಶ್​ರವರಿಗೆ ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದಿದ್ದ ವಾಹನ ಡಿಕ್ಕಿ ಹೊಡೆದು ಅಲ್ಲಿಂದ ಮುಂದಕ್ಕೆ ಸಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಮೇಶ್​ ಅಲ್ಲಿಯೇ ರಸ್ತೆ ಬದಿಯಲ್ಲಿ ಬಿದ್ದಿದ್ದರು. ಕೆಲವು ಹೊತ್ತಿನ ಬಳಿಕ ದಾರಿಯಲ್ಲಿ ಹೋಗುತ್ತಿದ್ದವರು ರಮೇಶ್​ರವರನ್ನ ಗುರುತಿಸಿ ತೀರ್ಥಹಳ್ಳಿ ಆಸ್ಪತ್ರೆಗೆ ಅವರನ್ನ ರವಾನಿಸಿದ್ದಾರೆ. ಅಷ್ಟರಲ್ಲಾಗಲೇ ರಮೇಶ್ ಸಾವನ್ನಪ್ಪಿದ್ದರು. ಸದ್ಯ ಅವರ ಮೃತದೇಹವನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಇನ್ನೂ ಈ ಸಂಬಂಧ ತೀರ್ಥಹಳ್ಳಿ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ. 

ಸಾಕ್ಷಿಗೂ ಸಿಗದ ಸಿಸಿ ಕ್ಯಾಮರಾ?

ನಿನ್ನೆ ನಡೆದ ಘಟನೆಯಲ್ಲಿ ರಮೇಶ್​ರವರಿಗೆ ಡಿಕ್ಕಿ ಹೊಡೆದ ವಾಹನ ಯಾವುದು ಎಂಬ ಸುಳಿವು ಕೂಡ ಲಭ್ಯವಾಗಿಲ್ಲ. ಆಯಕಟ್ಟಿನಲ್ಲಿ ಸಿಸಿ ಕ್ಯಾಮರಾಗಳು ಇದ್ದಿದ್ದರೇ ಆರೋಪಿಯನ್ನು ಹುಡುಕುವ ಪ್ರಯತ್ನ ಮಾಡಬಹುದಿತ್ತು. ಸಮರ್ಪಕವಾಗಿ ಸಿಸಿ ಕ್ಯಾಮರಾಗಳನ್ನು ಸ್ಥಳೀಯ ಆಡಳಿತ ಅಳವಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಖಾಸಗಿ ಸಂಸ್ಥೆಗಳು ನೀಡಿದ ಸಿಸಿ ಕ್ಯಾಮರಾಗಳನ್ನು ಕೂಡ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ತೀರ್ಥಹಳ್ಳಿಯಲ್ಲಿ ಇಂತಹ ಹಿಟ್ ಆ್ಯಂಡ್​ ರನ್​ ಕೇಸ್​ಗಳು ನಡೆಯುತ್ತಲೇ ಇದ್ದು, ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದಾಗಿ ನೋಂದ ಕುಟುಂಬಗಳಿಗೆ ನ್ಯಾಯ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 


SHIVAMOGGA AIRPORT ಗೆ ಸಿಗಲಿದೆ ವಿಶೇಷ ಭದ್ರತೆ! ಗೋವಾ, ತಿರುಪತಿ, ಹೈದ್ರಾಬಾದ್​ಗೂ ಹಾರುತ್ತೆ ವಿಮಾನ! ಟಿಕೆಟ್ ದರದ ಬಗ್ಗೆ ಸಂಸದರು ಹೇಳಿದ್ದೇನು?

 

ಶಿವಮೊಗ್ಗ ಟಿವಿ ಟವರ್ ಗೆ ಎಫ್​ಎಂ ಟ್ರಾನ್ಸ್​ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್​ಎಂ!? ಏನಂದ್ರು ಸಂಸದರು?

ಆರು ಚಿನ್ನದ ಪದಕದ ಜೊತೆಗೆ ರಾಜ್ಯದಲ್ಲಿಯೇ ಫಸ್ಟ್ RANK ಪಡೆದ ಶಿವಮೊಗ್ಗ ಯುವತಿ!

VIRAL TODAY / ಶಾಸಕರ ಬಾಯಿ ರುಚಿ ಮತ್ತು ಬೃಂದಾವನ್​ ಕ್ಯಾಂಟಿನ್​ ಮೆಣಸಿನ ಕಾಯಿ ಬೋಂಡಾ! ವೈರಲ್​ ಆಯ್ತು ಬೇಳೂರು ಹೇಳಿದ ಬಜ್ಜಿ ರೆಸಿಪಿ!

 

SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

 ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ






 ​