ಬಂಗಾರದ ವ್ಯಾಜ್ಯ/ ಡೆತ್​​ ನೋಟ್​ ಬರೆದಿಟ್ಟು ಸಿದ್ದಯ್ಯ ರೋಡ್ ನಿವಾಸಿ ಆತ್ಮಹತ್ಯೆ!

Siddaiah Road resident commits suicide by writing a suicide note over gold dispute

ಬಂಗಾರದ ವ್ಯಾಜ್ಯ/  ಡೆತ್​​ ನೋಟ್​ ಬರೆದಿಟ್ಟು ಸಿದ್ದಯ್ಯ ರೋಡ್ ನಿವಾಸಿ ಆತ್ಮಹತ್ಯೆ!

KARNATAKA NEWS/ ONLINE / Malenadu today/ May 10, 2023 GOOGLE NEWS 

ಶಿವಮೊಗ್ಗ / ಚಿನ್ನದ ವಿಚಾರದಲ್ಲಿನ ವ್ಯಾಜ್ಯದಲ್ಲಿ ವ್ಯಕ್ತಿಯೊಬ್ಬರು ಡೆತ್​ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಹಳೆ ಶಿವಮೊಗ್ಗದ ಹೆಚ್​ಸಿದ್ದಯ್ಯ ರೋಡ್​ನ ನಿವಾಸಿ  ಕೃಷ್ಣಕುಮಾರ್ ಕುರ್ಡೇಕರ್ ಆತ್ಮಹತ್ಯೆ ಮಾಡಿಕೊಂಡವರು. ಕ

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಇವರು ಬರೆದಿರುವ ಡೆತ್ನೋಟ್​​ ಲಭ್ಯವಾಗಿದ್ದು, ಈ ಸಂಬಂಧ ಸಾವನ್ನಪ್ಪಿದವರ ಪತ್ನಿ ನೀಡಿರುವ ದೂರಿನ ಮೇರೆಗೆ ಎಫ್​ಐಆರ್ ಕೂಡ ದಾಖಲಾಗಿದೆ.41 ವರ್ಷದ ಕೃಷ್ಣಕುಮಾರ್​,  ತಮ್ಮ ಡೆತ್​ನೋಟ್​ನಲ್ಲಿ ಕೆಲವರ ಹೆಸರನ್ನ ಬರೆದಿಟ್ಟಿದ್ದು, ಅವರಿಂದ ನನಗೆ ಕಿರುಕುಳವಾಗ್ತಿದೆ. ದೈಹಿಕ ಹಿಂಸೆಯಾಗ್ತಿದೆ ನ್ಯಾಯ ಕೊಡಿಸಿ  ಎಂದು ಎಸ್​ಪಿ ಮಿಥುನ್ ಕುಮಾರ್​ರವರ ಹೆಸರನ್ನ ಉಲ್ಲೇಖಿಸಿದ್ದಾರೆ. 

ಚಿನ್ನ ಕೊಟ್ಟು ತೆಗೆದುಕೊಳ್ಳುವ ವಿಚಾರದಲ್ಲಿನ ವ್ಯಾಜ್ಯವೇ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಡೆತ್​ನೋಟ್​ನಡಿಯಲ್ಲಿ ದೊಡ್ಡಪೇಟೆ ಪೊಲೀಸ್​ ಸ್ಟೇಷನ್​ನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

 

ಮತದಾನಕ್ಕೆ ಮಳೆ/ ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರ್ಷಧಾರೆಯ ಎಚ್ಚರಿಕೆ

Karnataka Rain ಬೆಂಗಳೂರು/ India Meteorological Department/ ಚುನಾವಣೆಯ ನಡುವೆ ಮಳೆಯ ಆರ್ಭಟದ ಸುದ್ದಿ ಹೊರಬಿದ್ದಿದೆ. ಇವತ್ತು ಸೇರಿದಂತೆ 48 ಗಂಟೆಗಳ ಕಾಲ  ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Weather update)ತಿಳಿಸಿದೆ. 

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಚಾ ಚಂಡ ಮಾರುತದ ಎಫೆಕ್ಟ್​ ನಿಂದಾಗಿ ಮಳೆಯಾಗುವ ಸೂಚನೆ ನೀಡಿದೆ. 

 ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದ್ದು,(Rain alert) ಗಾಳಿ ವೇಗವು ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆಯಂತೆ. 

 

karnataka election /ಶಿವಮೊಗ್ಗ ಜಿಲ್ಲೆಯ 07 ವಿಧಾನಸಭಾ ಕ್ಷೇತ್ರಗಳಲ್ಲಿ  ಯಾವ್ಯಾವ ರೀತಿ ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ ಓದಿ 

ಕ್ಷಿಪ್ರ ಕಾರ್ಯಾಚರಣೆ/  ಶಿವಮೊಗ್ಗದ ಇಬ್ಬರು ಸೇರಿದಂತೆ ರಾಜ್ಯ ನಾಲ್ವರು ವಿದ್ಯಾರ್ಥಿಗಳು ಮಣಿಪುರದಲ್ಲಿ ಸೇಫ್​ 

ಶಿವಮೊಗ್ಗ ಗ್ರಾಮಾಂತರದ ಜಾವಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅನುಪಿನಕಟ್ಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಹೊಳಲೂರು, ಸರ್ಕಾರಿ ಪದದವಿಪೂರ್ವ ಕಾಲೇಜು(ವೆಸ್ಟ್‍ವಿಂಗ್)ಆಯನೂರು, ಸರ್ಕಾರಿ ಹಿ.ಪ್ರಾ.ಶಾಲೆ ಹರಿಗೆ ಇಲ್ಲಿ ಸಖಿ, ತಮ್ಮಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಡಬ್ಲ್ಯುಡಿ ಮತ್ತು ಹಕ್ಕಿಪಿಕ್ಕಿ ಕ್ಯಾಂಪ್ ಸರ್ಕರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎತ್ನಿಕ್ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.

ಭದ್ರಾವತಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ, ಅನ್ವರ್ ಕಾಲೋನಿ, ಹಳೇನಗರ,  ಅರಳಿಹಳ್ಳಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಎಂ.ವಿ.ಕಲಾ ಮತ್ತು ವಿಜ್ಞಾನ ಕಾಲೇಜು ಈಸ್ಟ್ ವಿಂಗ್ ನ್ಯೂಟೌನ್ ಭದ್ರಾವತಿ, ಸಕಾರಿ ಹಿ.ಪ್ರಾ.ಶಾಲೆ(ಸೌತ್‍ವಿಂಗ್)ಅರಳಿಹಳ್ಳಿ, ಸರ್ಕಾರಿ ಹಿ.ಪ್ರಾ.ಶಾಲೆ ವೀರಾಪುರ ಇಲ್ಲಿ ಸಖಿ, ಸರ್ಕಾರಿ ಉರ್ದು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ದೊಣಬಘಟ್ಟದಲ್ಲಿ ಪಿಡಬ್ಲ್ಯುಡಿ, ಸಿಂಗನಮನೆ ಗ್ರಾ.ಪಂ ಕಾರ್ಯಾಲಯದಲ್ಲಿ ಎತ್ನಿಕ್ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.

ಶಿವಮೊಗ್ಗದ ಬಸವೇಶ್ವರ ನಗರದ ಆಂಗ್ಲ ಮಾಧ್ಯಮ ಶಾಲೆ. ಬೊಮ್ಮನಕಟ್ಟೆಯ ಸರ್ಕಾರಿ ಕಿ.ಪ್ರಾ.ಶಾಲೆ, ತ್ಯಾವರೆಚಟ್ನಹಳ್ಳಿಯ ಸರ್ಕಾರಿ.ಕಿ.ಪ್ರಾ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರವೀಂದ್ರ ನಗರ, ಶಿವಮೊಗ್ಗದ ಸಿಇಓ ಜಿ.ಪಂ ಕಟ್ಟಡ(ಈಸ್ಟ್ ವಿಂಗ್), ರಲ್ಲಿ ಸಖಿ ಮತಗಟ್ಟೆ, ಮಲ್ಲಿಗೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಡಬ್ಲ್ಯುಡಿ, ನ್ಯೂಮಂಡ್ಲಿ ಕನ್ನಡ ಹಿ.ಪ್ರಾ.ಶಾಲೆಯಲ್ಲಿ ಯುವ ಮತದಾರರ ಮತ್ತು ಮಾಡೆಲ್ ಶಿವಪ್ಪನಾಯಕ ಅರಮೆನೆ ಮತ್ತು ಮಹಾನಗರ ಪಾಲಿಕೆ ಚಾಮರಾಜ ಮೆಮೋರಿಯಲ್ ಹಾಲ್‍ನಲ್ಲಿ ಎತ್ನಿಕ್ ಮತಗಟ್ಟೆ ಸ್ಥಾಪಿಸಲಾಗಿದೆ.

ಕ್ಷಿಪ್ರ ಕಾರ್ಯಾಚರಣೆ/  ಶಿವಮೊಗ್ಗದ ಇಬ್ಬರು ಸೇರಿದಂತೆ ರಾಜ್ಯ ನಾಲ್ವರು ವಿದ್ಯಾರ್ಥಿಗಳು ಮಣಿಪುರದಲ್ಲಿ ಸೇಫ್​ 

ತೀರ್ಥಹಳ್ಳಿಯ ಸರ್ಕಾರಿ ಕಿ.ಪ್ರಾ.ಶಾಲೆ, ಕಮ್ಮಚ್ಚಿ(ಅಮೃತ), ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಸೀಬಿನಕೆರೆ, ಸರ್ಕಾರಿ ಹಿ.ಪ್ರಾ.ಶಾಲೆ ದುರ್ವಾಸಪುರ, ಮುಳಬಾಗಿಲು ಗ್ರಾ.ಪಂ ಇಲ್ಲಿ ಸಖಿ ಮತಗಟ್ಟೆ, ಸರ್ಕರಿ ಹಿರಿಯ ಪ್ರಾಥಮಿಕ ಶಾಲೆ ಬೊಬ್ಬಿ ಇಲ್ಲಿ ಪಿಡಬ್ಲ್ಯುಡಿ, ಸರ್ಕಾರಿ ಹಿ.ಪ್ರಾ.ಬಾಲಕಿಯರ ಶಾಲೆ ಅಜಾದ್ ರಸ್ತೆ ಇಲ್ಲಿ ಎತ್ನಿಕ್ ಮತಗಟ್ಟೆ ಸ್ಥಾಪಿಸಲಾಗಿದೆ.

ಶಿಕಾರಿಪುರದ ಸರ್ಕಾರಿ ಮಾದರಿ ಹಿ.ಪ್ರಾ ಹೆಣ್ಣು ಮಕ್ಕಳ ಶಾಲೆ ಜಯಶ್ರೀ ಟಾಕೀಸ್ ಎದುರು ಶಿಕಾರಿಪುರ, ಸರ್ಕಾರಿ ಹಿ.ಪ್ರಾ.ಶಾಲೆ ಬೆಲವಂತಕೊಪ್ಪ ಇಲ್ಲಿ ಸಖಿ, ಸರ್ಕಾರಿ ಪ್ರೌ.ಶಾಲೆ ಹಾರೋಗೊಪ್ಪ ಇಲ್ಲಿ ಪಿಡಬ್ಲ್ಯುಡಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಟ್ಟೆಹಳ್ಳಿಯಲ್ಲಿ ಎತ್ನಿಕ್ ಮತಗಟ್ಟೆ ಸ್ಥಾಪಿಸಲಾಗಿದೆ.

     

ಕ್ಷಿಪ್ರ ಕಾರ್ಯಾಚರಣೆ/  ಶಿವಮೊಗ್ಗದ ಇಬ್ಬರು ಸೇರಿದಂತೆ ರಾಜ್ಯ ನಾಲ್ವರು ವಿದ್ಯಾರ್ಥಿಗಳು ಮಣಿಪುರದಲ್ಲಿ ಸೇಫ್​ 

ಸೊರಬದ ಸರ್ಕಾರಿ ಹಿರಿಯ ಪ್ರಾ.ಬಾಲಕಿಯರ ಶಾಲೆ ಆನವಟ್ಟಿ, ಸರ್ಕಾರಿ ಉರ್ದು ಹಿ.ಪ್ರಾ.ಶಾಲೆ ಚಿಕ್ಕಪೇಟೆ, ಸರ್ಕಾರಿ ಮಾದರಿ ಹಿ.ಪ್ರಾ.ಶಾಲೆ ಹಳೇಸೊರಬ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ರಾಘವೇಂದ್ರ ಬಡಾವಣೆ, ಸೊರಬ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಗ್ವೆ ಇಲ್ಲಿ ಸಖಿ , ಸರ್ಕಾರಿ ಹಿ.ಪ್ರಾ.ಶಾಲೆ ಶಕುನವಳ್ಳಿ ಇಲ್ಲಿ ಪಿಡಬ್ಲ್ಯುಡಿ, ಸರ್ಕಾರಿ ಪ.ಪೂ ಕಾಲೇಜು ಸೊರಬ ಇಲ್ಲಿ ಎತ್ನಿಕ್ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

     

ಸಾಗರದ ಸರ್ಕಾರಿ ಸಿದ್ದೇಶ್ವರ ಹಿ.ಪ್ರಾ.ಶಾಲೆ, ಸರ್ಕಾರಿ ಹಿ.ಪ್ರಾ.ಬಾಲಕಿಯರ ಶಾಲೆ, ಎಸ್‍ವಿಪಿ ಕಾಲೋನಿ, ಗಾಂಧಿನಗರ, ಬೆಲಳಮಕ್ಕಿ ಇಲ್ಲಿ ಸಖಿ, ಭಾರತಿ ಹಿ.ಪ್ರಾ.ಶಾಲೆ ಕೆಳದಿ ಹಮ್ಲೆಟ್ ಬಂಡಗದ್ದೆ, ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗವಟೂರು ಇಲ್ಲಿ ಪಿಡಬ್ಲ್ಯುಡಿ ಹಾಗೂ ಕೆಪಿಸಿಎಲ್ ಹಿ.ಪ್ರಾ.ಶಾಲೆ ಜೋಗ, ಸರ್ಕಾರಿ ಹಿ.ಪ್ರಾ.ಶಾಲೆ ನಿಟ್ಟೂರು ಇಲ್ಲಿ ಎತ್ನಿಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ಜಿಲ್ಲೆಯಲ್ಲಿ 275 ಕ್ರಿಟಿಕಲ್ ಮತ್ತು 127 ದುರ್ಬಲ ಮತಗಟ್ಟೆಗಳು ಇವೆ.

Read/ ಕ್ಷಿಪ್ರ ಕಾರ್ಯಾಚರಣೆ/  ಶಿವಮೊಗ್ಗದ ಇಬ್ಬರು ಸೇರಿದಂತೆ ರಾಜ್ಯ ನಾಲ್ವರು ವಿದ್ಯಾರ್ಥಿಗಳು ಮಣಿಪುರದಲ್ಲಿ ಸೇಫ್​ 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media