ಇವಿಎಂ ಜೊತೆ ವಿವಿ ಪ್ಯಾಟ್ ಏತಕ್ಕಾಗಿ ಇರುತ್ತೆ ಗೊತ್ತಾ? ಮತಗಟ್ಟೆಯಲ್ಲಿ ಏನೇನೆಲ್ಲಾ ಇರುತ್ತೆ? ಮತದಾನದ ಇಂಟ್ರಸ್ಟಿಂಗ್ ಸಂಗತಿಗಳು!

Do you know why VVPAT is there with EVMs? What is there in the polling booth? Interesting facts about voting!

ಇವಿಎಂ ಜೊತೆ ವಿವಿ ಪ್ಯಾಟ್ ಏತಕ್ಕಾಗಿ ಇರುತ್ತೆ ಗೊತ್ತಾ? ಮತಗಟ್ಟೆಯಲ್ಲಿ ಏನೇನೆಲ್ಲಾ ಇರುತ್ತೆ? ಮತದಾನದ ಇಂಟ್ರಸ್ಟಿಂಗ್ ಸಂಗತಿಗಳು!

KARNATAKA NEWS/ ONLINE / Malenadu today/ May 10 2023 GOOGLE NEWS 

ಶಿವಮೊಗ್ಗ/ ಮತದಾನಕ್ಕೆ ಅಂತಾ ಮತಗಟ್ಟೆಗೆ ಹೋಗುವಾಗ ಮತಗಟ್ಟೆಯಲ್ಲಿ ನಡೆಯುವ ಪ್ರಕ್ರಿಯೆಗಳು ಏನೇನು ಅನ್ನುವದನ್ನ ತಿಳಿದುಕೊಂಡರೆ ಅನುಮಾನಗಳಿಗೆ ಆಸ್ಪದವೇ ಇರೋದಿಲ್ಲ .ಈ ಸಂಬಂಧ ಮತದಾನಕ್ಕೆ ಸಂಬಂಧಿಸಿದ ಇಂಟ್ರಸ್ಟಿಂಗ್ ಮಾಹಿತಿಗಳನ್ನು ಮಲೆನಾಡು ಟುಡೇ ನಿಮ್ಮ ಮುಂದೆ ಇಡುತ್ತಿದೆ.

ಕ್ಷಿಪ್ರ ಕಾರ್ಯಾಚರಣೆ/  ಶಿವಮೊಗ್ಗದ ಇಬ್ಬರು ಸೇರಿದಂತೆ ರಾಜ್ಯ ನಾಲ್ವರು ವಿದ್ಯಾರ್ಥಿಗಳು ಮಣಿಪುರದಲ್ಲಿ ಸೇಫ್​  

ಅಧಿಕಾರಿಗಳು ತಪ್ಪಿಸಿಕೊಳ್ಳುವಂತಿಲ್ಲ

ಯಾವುದೇ ಅಧಿಕಾರಿಯನ್ನು ಚುನಾವಣೆ ಕರ್ತವ್ಯಕ್ಕೆ ಆಯ್ಕೆ ಮಾಡುವುದು ಕಾನೂನು ಬದ್ಧವಾಗಿರುತ್ತದೆ. ಹಾಗಾಗಿ ಈ ಕರ್ತವ್ಯವದಿಂದ ತಪ್ಪಿಸಿಕೊಳ್ಳುವಂತಿರುವುವುದಿಲ್ಲ. 

ಮತಗಟ್ಟೆಯಲ್ಲಿ ಯಾರ್ಯಾರು ಇರುತ್ತಾರೆ

ಒಂದು ಮತಗಟ್ಟೆಯಲ್ಲಿ ಪಿಆರ್​ಒ, ಎಪಿಆರ್​ಒ ಹಾಗೂ ಪೊಲೀಂಗ್ ಆಫಿಸರ್ 1 ಪೊಲೀಸ್ ಆಫಿಸರ್​ 2 ಎಂಬ ಅಧಿಕಾರಿಗಳು ಇರುತ್ತಾರೆ. ಇವರಲ್ಲದೇ ಅಟೆಂಡರ್​, ಮೈಕ್ರೋ ಆಫಿಸರ್​ಗಳು ಇರುತ್ತಾರೆ. ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಇರುತ್ತಾರೆ. 

ಮಸ್ಟರಿಂಗ್ ಎಂದರೇನು? 

ಮಸ್ಟರಿಂಗ್​ ಪ್ರಕ್ರಿಯೆ ನಡೆಯಿತು ಎಂದು ಸುಲಭವಾಗಿ ಹೇಳಬಹುದು ಆದರೆ, ಮಸ್ಟರಿಂಗ್ ಎಂದರೇ ಏನು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಚುನಾವಣೆ ಕರ್ತವ್ಯಕ್ಕೆ ಇಂತಿಷ್ಟು ಮಂದಿ ಇಲ್ಲಿಲ್ಲಿಗೆ ಎಂದು ನಿಗದಿ ಪಡಿಸಿ, ಅವರ ಹುದ್ದೆಗೆ ತಕ್ಕಂತೆ ಎಲೆಕ್ಷನ್​ ಪ್ರಕ್ರಿಯೆಯಲ್ಲಿನ ಸ್ಥಾನ ಮಾನವನ್ನು ಒದಗಿಸಲಾಗುತ್ತದೆ.ಪೊಲೀಂಗ್ ಆಫೀಸರ್ನಿಂದ ಹಿಡಿದು ಅಟೆಂಡರ್​ರವರೆಗು ಇವರಿವರು ಇಂತಹ ಕಡೆ ಎಂದು ತೀರ್ಮಾನಿಸಲಾಗಿರುತ್ತದೆ.

ಅಲ್ಲದೆ ಅವರಿಗೆ ತಕ್ಕುದಾದ ಟ್ರೈನಿಂಗ್ ಮತ್ತು ಚುನಾವಣಾ ಆಯೋಗದ ರೀತಿನೀತಿಯಲ್ಲಾದ ಬದಲಾವಣೆಯನ್ನು ವಿವರಿಸಿ ಹೇಳಲಾಗಿರುತ್ತದೆ. ಹೀಗೆ ತರಬೇತಿ ಪಡೆದ ಅಧಿಕಾರಿ, ನೌಕರ, ಸಿಬ್ಬಂದಿಗಳನ್ನು ಇವತ್ತು ಒಂದು ಕಡೆಯಲ್ಲಿ ಕರೆಸಲಾಗುತ್ತದೆ. ಅಲ್ಲಿ ಚುನಾವಣಾ ಪ್ರಕ್ರಿಯೆಗೆ ಅಗತ್ಯವಿರುವ ಇವಿಎಂ , ಕಂಟ್ರೋಲ್​ ಯುನಿಟ್​, ವಿವಿ ಪ್ಯಾಟ್​  ಹಾಗೂ ಟೆಂಡರ್​ ಫಾರಮ್​, ಚಾಲೆಂಜ್ ಫಾರಮ್, ಟೆಸ್ಟ್ ಫಾರಮ್​ ಹೀಗೆ ಹಲವಾರು ಪ್ರಕ್ರಿಯೆಯ ಫಾರಂ ಜೊತೆಗೆ ಇಂಕು, ಸ್ಕೇಲು, ಪೆನ್ನು ಇತ್ಯಾದಿಗಳನ್ನ ಕೊಟ್ಟು ಅವರವರಿಗೆ ಜವಾಬ್ದಾರಿ ನೀಡಿರುವ ಬೂತ್​ಗಳಿಗೆ ನಿಗದಿತ ವಾಹನಗಳಲ್ಲಿ ಕಳುಹಿಸಿಕೊಡಲಾಗುತ್ತದೆ.

ಇದನ್ನ ಮಸ್ಟರಿಂಗ್ ಎಂದು ಕರೆಯುತ್ತಾರೆ. ಚುನಾವಣೆ ಮುಗಿದ ಬಳಿಕ, ಕೊಟ್ಟಿದ್ದನ್ನೆಲ್ಲಾ ಲೆಕ್ಕ ತಪ್ಪದೆ ಲಿಸ್ಟ್​ನಲ್ಲಿ ಟಿಕ್ ಮಾಡಿ ವಾಪಸ್ ಕೊಡುವುದನ್ನ ಡಿ ಮಸ್ಟರಿಂಗ್​ ಎನ್ನಲಾಗುತ್ತದೆ. '

ಇವಿಎಂ ಜೊತೆಗೆ ಏನೇನು ಇರುತ್ತದೆ

ಇವಿಎಂ ಜೊತೆಗೆ ಕಂಟ್ರೋಲ್​ ಯುನಿಟ್​, ವಿವಿ ಪ್ಯಾಟ್, ಬ್ಯಾಲೆಟ್ ಯುನಿಟ್ ಗಳು ಇರುತ್ತದೆ. ಈ ಮೊದಲು ಕಂಟ್ರೋಲ್​ ಯುನಿಟ್ ಹಾಗೂ ಬ್ಯಾಲೆಟ್ ಯುನಿಟ್ ಮಾತ್ರ ಇರುತ್ತಿತ್ತು. ಇದರ ಜೊತೆ ವಿವಿ ಪ್ಯಾಟ್​ ಕೂಡ ಇವಿಎಂನ ಜೊತೆಗೆ ಇರುತ್ತದೆ. ವಿವಿಪ್ಯಾಟ್​ ಬಗ್ಗೆ ಬಹಳ ಮುಖ್ಯವಾದ ಸಂಗತಿಯನ್ನು ನೀವು ತಿಳಿದುಕೊಳ್ಳಬೇಕು!

ವಿವಿಪ್ಯಾಟ್ ಇರೋದೇಕೆ? ಅದರಿಂದ ಏನಾಗುತ್ತೆ? 

ಇವಿಎಂ ಬಗ್ಗೆ ಇರುವ ಅನುಮಾನದ ಆರೋಪಗಳ ಎಲ್ಲರಿಗೂ ಗೊತ್ತೆ ಇದೆ. ಆದರೆ ಚುನಾವಣಾ ಆಯೋಗ ಮಾತ್ರ ಪ್ರಾಮಾಣಿಕ ಹಾಗೂ ಪಾರದರ್ಶಕ ಮತದಾನಕ್ಕೆ ಒತ್ತು ನೀಡುತ್ತಿದೆ. ಅದಕ್ಕಾಗಿ ಇವಿಎಂ ಜೊತೆಗೆ ವಿವಿಪ್ಯಾಟ್​ನ್ನ ಜೊಡಿಸಿ ತಂತ್ರಗಾರಿಕೆಯನ್ನು ಅಪ್​ಡೇಟ್ ಮಾಡಿದೆ  ಎಲೆಕ್ಷನ್​ ಕಮಿಷನ್​. ಇಷ್ಟಕ್ಕೂ ವಿವಿಪ್ಯಾಟ್ ಏನು ಕೆಲಸ ಮಾಡುತ್ತೆ ಎಂದು ನೋಡುವುದಾದರೆ, ಮತದಾರ ತಾನ ಚಲಾಯಿಸಿದ ಮತ, ತಾನು ಬಯಸಿದವರಿಗೆ ಬಿದ್ದಿದ್ಯಾ ಎಂಬುದನ್ನ ವಿವಿಪ್ಯಾಟ್​ನಲ್ಲಿ ಆತ ನೋಡಬಹುದಾಗಿದೆ. ಇದು ಆತನ ಖಾತರಿಗಾಗಿ ಚುನಾವಣಾ ಆಯೋಗ ಒದಗಿಸಿರುವ ಸೌಲಭ್ಯವಾಗಿದೆ. ಹಾಗಾಗಿ ಪ್ರತಿಯೊಬ್ಬ ಮತದಾರ ತಾನು ಚಲಾಯಿಸಿದ ಮತ ತಾನು ಬಯಸಿದವರಿಗೆ ಬಿದ್ದಿದ್ಯಾ ಎಂಬುದನ್ನ ಅಲ್ಲಿಯೇ ನಿಂತು ಏಳು ಸೆಕೆಂಡ್​ಗಳ ಕಾಲ ಕಾದು , ಖಾತರಿಪಡಿಸಿಕೊಳ್ಳಬೇಕಾಗುತ್ತದೆ 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media