Karnataka election / ಟಿಕೆಟ್ ತಂದಿಟ್ಟ ಸಂಕಷ್ಟ! ತೀರ್ಥಹಳ್ಳಿ ಯಲ್ಲಿ ಸುಮ್ಮನಿಲ್ಲ ಆರ್​ಎಂ ಮಂಜುನಾಥ್​ ಗೌಡರು?

Karnataka election / RM Manjunath Gowda upset over not getting Congress ticket in Theerthahalli

Karnataka election /  ಟಿಕೆಟ್ ತಂದಿಟ್ಟ ಸಂಕಷ್ಟ! ತೀರ್ಥಹಳ್ಳಿ ಯಲ್ಲಿ ಸುಮ್ಮನಿಲ್ಲ ಆರ್​ಎಂ ಮಂಜುನಾಥ್​ ಗೌಡರು?
Karnataka election / ಟಿಕೆಟ್ ತಂದಿಟ್ಟ ಸಂಕಷ್ಟ! ತೀರ್ಥಹಳ್ಳಿ ಯಲ್ಲಿ ಸುಮ್ಮನಿಲ್ಲ ಆರ್​ಎಂ ಮಂಜುನಾಥ್​ ಗೌಡರು?

 ಏನೇ ಬರಲಿ ಒಗ್ಗಟ್ಟಿರಲಿ, ಒಬ್ಬರು ಎಂಎಲ್​ಸಿ ಇನ್ನೊಬ್ಬರು ಎಂಎಲ್​ ಎ ಆಗಲಿ ಅಂತಿದ್ದ ತೀರ್ಥಹಳ್ಳಿ ಯಲ್ಲಿ ಇದೀಗ ಅಸಮಧಾನದ ಬೇಗುದಿ ಬುಸುಗುಡುತ್ತಿರುವ ಹಾಗೆ ಕಾಣುತ್ತಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಉರುಳಿಸಿದ ಕೊನೆ ಚುನಾವಣೆಯ ದಾಳಕ್ಕೆ ಹೈಕಮಾಂಡ್ ಅಸ್ತು ಎಂದಿದ್ದು, ಟಿಕೆಟ್ ಕೊಟ್ಟು ಹಿರಿಯ ನಾಯಕನಿಗೆ ಆರಗ ಜ್ಞಾನೇಂದ್ರರ ವಿರುದ್ಧ ಗೆಲುವು ಸಾಧಿಸುವಂತೆ ಸೂಚನೆ ಕೊಟ್ಟಿದೆ. 

ಕುತೂಹಲ ಮೂಡಿಸಿದ ಆರ್​ ಎಂ ಮಂಜುನಾಥ್ ಗೌಡರ ನಡೆ

ತಮ್ಮೆಲ್ಲಾ ಅನುಭವ, ಆಸಕ್ತಿ ಹಾಗೂ ಪ್ರಭಾವಗಳನ್ನ ಬಳಸಿದ್ದ ಆರ್​ಎಂ ಮಂಜುನಾಥ್​ ಗೌಡ ರಿಗೆ ಪ್ರಯತ್ನ ಹಾಗೂ ಪರಿಶ್ರಮದ ಫಲವಾಗಿ ಟಿಕೆಟ್​ ಎಂಬ ಮಾಯಾಂಗನೆ ಸಿಗದೇ ಹೋಗಿದ್ದು ಅವರನ್ನ ನಾಟ್ ರೀಚಬಲ್ ಆಗಿಸಿದೆಯಂತೆ. ಹೀಗಂತ ತೀರ್ಥಹಳ್ಳಿ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. 

ಬಣಗಳ ನಡುವೆ ಮುಂದೇನು? 

ಎರಡು ಬಣವಿದ್ದರೂ, ನಡುವಿನ ತಾತ್ಕಾಲಿಕ ಶಮನದ ಅವಧಿಯಲ್ಲಿ ಕೈ ಕೈ ಹಿಡಿದು ಓಡಾಡಿದ್ದರು ಇಬ್ಬರು ನಾಯಕರು , ಆದರೆ ಟಿಕೆಟ್ ಘೋಷಣೆ ಬೆನ್ನಲ್ಲೆ ಆರ್​ಎಂಎಂ  ಹಾಗೂ ಅವರ ಬೆಂಬಲಿಗರು ಪಕ್ಷದ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ತಿಲ್ಲ ಎನ್ನಲಾಗುತ್ತಿದೆ. ಅಥವಾ ಟಿಕೆಟ್ ಘೋಷಣೆ ಬೆನ್ನಲ್ಲೆ ನಡೆದ ಸಮನ್ವಯ ಸಮಿತಿ ಸಭೆಗೂ ಆರ್​ಎಂ ಮಂಜುನಾಥ್ ಗೌಡರು ಗೈರಾಗಿದ್ದರು. ಅಲ್ಲಿಯ ಮಾಧ್ಯಮ ಮಂದಿ ಕೇಳಿದ್ದಕ್ಕೆ ಬೆಂಗಳೂರಿನಲ್ಲಿ ಇದ್ದಾರೆ ಎಂದು ಹೇಳ್ತಿದ್ದರಂತೆ ಮುಖಂಡರು. 

ಯಾವ ಕಡೆಗೆ ಆರ್​ಎಂಎಂ ನಡೆ

ಇನ್ನೊಂದೆಡೆ ಆರ್​ಎಂ ಮಂಜುನಾಥ್​ಗೌಡರು ಕರೆದಿದ್ದ ಬೆಂಬಲಿಗರ ಸಭೆಯ ಔಟ್ ಪುಟ್ ಏನಾಯ್ತು ಎಂಬುದು ಸ್ಪಷ್ಟವಾಗಿಲ್ಲ. ಆರ್​ಎಂ ಮಂಜುನಾಥ್​ ಗೌಡರು ಬೆಂಗಳೂರಲ್ಲೆ ಇದ್ದು, ಕೆಪಿಸಿಸಿ ಅಧ್ಯಕ್ಷರ ಎದುರು ತಮ್ಮ ಸಿಟ್ಟನ್ನ ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಸದ್ಯ ನಡೆಯುತ್ತಿರುವ ಚರ್ಚೆಗಳ ಪ್ರಕಾರ, ಅವರ ದಾರಿ ಆಮ್​ ಆಧ್ಮಿ ಪಕ್ಷ ಅಥವಾ ಜೆಡಿಎಸ್​ ಕಡೆಗೆ ಸಾಗಿದರೂ ಸಾಗಬಹುದು. ಅಥವಾ ಕೈಪಡೆಯಲ್ಲಿಯೇ ಇದ್ದು ಒಳಪೆಟ್ಟು ನೀಡಬಹುದು ಎನ್ನುತ್ತಿದೆ ತೀರ್ಥಹಳ್ಳಿ ರಾಜಕೀಯದ ಮೂಲಗಳು

ತೀರ್ಥಹಳ್ಳಿ ರಾಜಕಾರಣ 

ಒಟ್ಟಾರೆ, ತೀರ್ಥಹಳ್ಳಿ ರಾಜಕಾರಣದಲ್ಲಿ ಟಿಕೆಟ್ ಘೋಷಣೆ ಬೆನ್ನಲ್ಲೆ ನೇರ ಸ್ಪರ್ಧೆಯ ಅಖಾಡ ಸಿದ್ಧವಾಯ್ತಾದರೂ, ಮಗ್ಗುಲಲ್ಲಿಯೇ ಒಳಪೆಟ್ಟಿನ ರಾಜಕಾರಣ ಸದ್ದು ಮಾಡುತ್ತಿದೆ. ಪಕ್ಷಕ್ಕೆ ಹಲವರು ಸೇರ್ಪಡೆಯಾಗುತ್ತಿದ್ದು, ಮತಕ್ಷೇತ್ರದಲ್ಲಿ ಕಿಮ್ಮನೆ ರತ್ನಾಕರ್​ ಪಡೆ ಹುಮ್ಮಸ್ಸಿನಿಂದ ಓಡಾಡ ತೊಡಗಿದ್ದು,ಈ ಸಲ ಗೆಲುವು ನಮ್ದೆ ಅಂತಿದೆಯಾದರೂ , ‘ಕೈ’ ವಾಡಗಳ ಆತಂಕವೂ ನಿರೀಕ್ಷೆಯ ಬೆನ್ನೇರಿ ಕಾಡುತ್ತಿದೆ. 

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 




ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 



 

MALENADUTODAY.COM/ SHIVAMOGGA / KARNATAKA WEB NEWS


HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite

 .