karnataka politics / ಕುಮಾರಸ್ವಾಮಿಯವರನ್ನ ಪಟ್ಟಕ್ಕೆ ತಂದ ದೇವೇಗೌಡರಂತೆ , ಬಿಎಸ್ ಯಡಿಯೂರಪ್ಪ ವಿಜಯೇಂದ್ರರನ್ನ ಉತ್ತರಾಧಿಕಾರಿಯಾಗಿಸಬಲ್ಲರೇ?

karnataka politics / Like Deve Gowda, who made Kumaraswamy the next leader, can BS Yediyurappa make Vijayendra his successor?

karnataka politics / ಕುಮಾರಸ್ವಾಮಿಯವರನ್ನ ಪಟ್ಟಕ್ಕೆ ತಂದ ದೇವೇಗೌಡರಂತೆ , ಬಿಎಸ್ ಯಡಿಯೂರಪ್ಪ ವಿಜಯೇಂದ್ರರನ್ನ ಉತ್ತರಾಧಿಕಾರಿಯಾಗಿಸಬಲ್ಲರೇ?
karnataka politics / ಕುಮಾರಸ್ವಾಮಿಯವರನ್ನ ಪಟ್ಟಕ್ಕೆ ತಂದ ದೇವೇಗೌಡರಂತೆ , ಬಿಎಸ್ ಯಡಿಯೂರಪ್ಪ ವಿಜಯೇಂದ್ರರನ್ನ ಉತ್ತರಾಧಿಕಾರಿಯಾಗಿಸಬಲ್ಲರೇ?

ಕುಟುಂಬ ಮತ್ತು ರಾಜಕಾರಣ

ಈ ದೇಶದಲ್ಲಿ ಅಪ್ಪ-ಮಕ್ಕಳ ರಾಜಕಾರಣ ಹೊಸದೇನಲ್ಲ, ರಾಜಕಾರಣಿಯ ಮಗ ರಾಜಕಾರಣಿ ಏಕೆ ಆಗಬಾರದು ಎನ್ನುವಷ್ಟರ ಮಟ್ಟಿಗೆ ವಂಶಪಾರಂಪರ್ಯ ರಾಜಕಾರಣದ ಧ್ವನಿ ಗಟ್ಟಿಕೊಂಡಿದೆ. ಕರ್ನಾಟಕದಲ್ಲಿ ಈ ಕುಟುಂಬ ರಾಜಕಾರಣ, ವಿಶೇಷವಾಗಿ ಗಮನ ಸೆಳೆಯುತ್ತಿದೆ. ರಾಜ್ಯ ಮುಖ್ಯಮಂತ್ರಿಗಳಾದವರ ಪೈಕಿ ಹಲವರು, ತಮ್ಮ ಮನೆ ಕಡೆಯವರನ್ನು ಪಾಲಿಟಿಕ್​ಸ್​ಗೆ ಎಳೇತಂದು ಅದೃಷ್ಟ ಪರೀಕ್ಷೆ ಮಾಡಿಸಿದ್ದಿದೆ. ಮನೆತನದ ಕುಡಿಗಳ ಪೈಕಿ ಕೆಲವರು, ಮತದಾರರ ಮನದಲ್ಲಿ ಬೇರೂರಿದರೆ, ಮತ್ತೆ ಕೆಲವರು ಅಷ್ಟೆ ನಿಷ್ಟುರವಾಗಿ ತಿರಸ್ಕೃತಗೊಂಡಿದ್ದಾರೆ.

ಬಿಎಸ್​ವೈ ಮಹತ್ವಾಕಾಂಕ್ಷೆ

ಈಗ ಪ್ರಸ್ತುತ ಗಮನಸೆಳೆಯುತ್ತಿರುವುದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ಅವರ ಎರಡನೇ ಪುತ್ರ ಬಿವೈ ವಿಜಯೇಂದ್ರವರ ವಿಚಾರ. ಬಿಎಸ್​ವೈ ಎಲೆಕ್ಷನ್​ ಅಖಾಡಕ್ಕೆ ಗುಡ್​ ಬೈ ಹೇಳಿ, ಅಲ್ಲಿ ನನ್ನ ಉತ್ತರಾಧಿಕಾರಿ ವಿಜಯೇಂದ್ರ ಎಂದು ಘೋಷಿಸಿದ್ಧಾರೆ.ಕುಮಧ್ವತಿ ನದಿಗೆ ಬಾಗೀನ ಕೊಟ್ಟು ಮಾಜಿ ಸಿಎಂ ಹೇಳಿದ್ದ ಈ ಮಾತು ಕೇಸರಿ ಪಡೆಗೆ ಅಂದೇ ರುಚಿಸಿರಲಿಲ್ಲ. ಒಳಗೊಳಗೆ ವಿರೋಧಿಸಿಕೊಂಡೇ ಬಂದಿದ್ದ ಬಿಜೆಪಿ ಮುಖಂಡರನ್ನ ತಮ್ಮ ಇಷ್ಟಾರ್ಥಕ್ಕೆ ಒಪ್ಪಿಸಲು ಬಿಎಸ್​ ಯಡಿಯೂರಪ್ಪ ರಾಜಕೀಯ ಬದುಕಿನ ಅನುಭವವನ್ನೆಲ್ಲಾ ಸುರಿಯುತ್ತಿದ್ದಾರೆ. 

 

ಕಿಚನ್​ ಪಾಲಿಟಿಕ್ಸ್​ಗೆ ಜೈ ಎಂದರಾ ಅಮಿತ್ ಶಾ

ನಮ್ಮಲ್ಲಿ ಕಿಚನ್​ ಪಾಲಿಟಿಕ್ಸ್​ಗೆ ಅವಕಾಶವೇ ಇಲ್ಲ ಎಂದಾಗಲೂ, ತಲೆಕೆಡಿಸಿಕೊಳ್ಳದ ಬಿಎಸ್​ವೈ ಅಮಿತ್​ ಶಾರನ್ನು ಮನೆಗೆ ಬ್ರೇಕ್​ ಫಾಸ್ಟ್​ಗೆ ಬರಮಾಡಿಕೊಂಡರು. ಅಲ್ಲಿ ಬಿಜೆಪಿಯ ನಿರ್ಧಾರಕ ನಾಯಕ, ಇಸ್ಕೋ ದೇದೋ ಎಂದು ಹೂಗುಚ್ಚವನ್ನು ವಿಜಯೇಂದ್ರರಿಂದಲೇ ಪಡೆದು ಮೊದಲು ಕ್ಯಾಮರಾ ಕಣ್ಣಿಗೆ ಫೋಸ್ ಕೊಟ್ಟರು. ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ, ಮೀಡಿಯಾದಲ್ಲಿ ಹಲವರಿಗೆ ಸಂದೇಶದ ರೂಪವಾಗಿ ರವಾನೆಯಾಗಿತ್ತು.ಬಿಜೆಪಿಗೆ ಬಿಎಸ್​ವೈ ರಷ್ಟೆ ವಿಜಯೇಂದ್ರ ಅನಿವಾರ್ಯ ಎಂಬಂತೆ ಸದ್ಯದ ಸನ್ನಿವೇಶ ಕಾಣುತ್ತಿದ್ದರೂ ಸಹ, ಭವಿಷ್ಯ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ

ಕುಮಾರಸ್ವಾಮಿಯವರನ್ನು ಗೆಲ್ಲಿಸಿದ ಮಾಜಿ ಪ್ರಧಾನಿ

ರಾಜ್ಯ ರಾಜಕಾರಣದಲ್ಲಿ ತಮ್ಮ ಮಗನನ್ನು ರಾಜ್ಯದ ಅಧಿಕಾರದ ಉನ್ನತ ಸೀಟಿನಲ್ಲಿ ಕೂರಿಸುವಲ್ಲಿ ಯಶಸ್ವಿಯಾದವರು ಮಾಜಿ ಸಿಎಂ ದೇವೇಗೌಡರು, ತಮ್ಮ ಕುಟುಂಬದಲ್ಲಿ ಹೆಚ್​.ಡಿ.ರೇವಣ್ಣರನ್ನ ರಾಜಕಾರಣಕ್ಕಿಳಿಸಿದ್ದ ಮಾಜಿ ಪ್ರಧಾನಿಯವರು,  ಮಾಜಿ ಸಿಎಂ ಕುಮಾರಸ್ವಾಮಿಯವರ ರಾಜಕಾರಣದ ಯಶಸ್ಸಿನ ಪಯಣದಲ್ಲಿ ದೂರವೂ ಉಳಿದಿದ್ದರು, ಹತ್ತಿರವೂ ಇದ್ದು ಸಲಹೆ ಕೊಟ್ಟು ನಿರ್ಣಯ ತೆಗೆದುಕೊಂಡಿದ್ದರು. ಹಾಗಿದ್ದರೂ ಇಡೀ ಕುಟುಂಬದಲ್ಲಿ ಹಲವರಿಗೆ ಜನಪ್ರತಿನಿಧಿಗಳಾಗುವ ಅವಕಾಶಗಳಿಗೆ ದೇವೇಗೌಡರು ಅಡ್ಡಿಯಾಗಲಿಲ್ಲ. ಮೂರನೇ ತಲೆಮಾರಿನ ಪ್ರಜ್ವಲ್​ ರೇವಣ್ಣರನ್ನು ವಿಶೇಷವಾಗಿಯೇ ಟ್ರೈನ್ ಮಾಡುತ್ತಿರುವ ರಾಜ್ಯ ರಾಜಕಾರಣದ ದಿಗ್ಗಜ, ನಿಖಿಲ್ ಕುಮಾರಸ್ವಾಮಿಯವರ ರಾಜಕಾರಣದ ಎಂಟ್ರಿಗೂ ಸೈ ಎಂದಿದ್ದಾರೆ. 

ದೇವೇಗೌಡರ ಹಾದಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ

ಮಾಜಿ ಸಿಎಂ ಕುಮಾರಸ್ವಾಮಿಯವರು ದೇವೇಗೌಡರು ಕಟ್ಟಿ ಬೆಳಸಿದ ಜೆಡಿಎಸ್​ ಪಕ್ಷವನ್ನು ಮುನ್ನೆಡೆಸುವ ಜವಾಬ್ದಾರಿಯನ್ನು ವಹಿಸುವುದರ ಜೊತೆ ಸಮುದಾಯದ ನಾಯಕರಾಗಿಯು ಹೊರಹೊಮ್ಮಿದ್ದಾರೆ. ಇದೇ ರೀತಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ತಾವು ನಿರ್ವಹಿಸುತ್ತಿರುವ ರಾಜಕಾರಣ ಹಾಗೂ ಸಮುದಾಯದ ನಾಯಕತ್ವವನ್ನು ವಿಜಯೇಂದ್ರರಿಗೆ ವರ್ಗಾಯಿಸುವ ಪ್ರಯತ್ನದಲ್ಲಿದ್ದಾರೆ. ಅಲ್ಲದೆ ಪುತ್ರನ ಯಶಸ್ಸಿನ ಹೆಜ್ಜೆಗೆ ಒಂದೊಂದೆ ವೇದಿಕೆಯನ್ನು ಸಿದ್ಧಪಡಿಸಿಕೊಡುತ್ತಿದ್ದಾರೆ. 

ಬಿಜೆಪಿಗೆ ಒಪ್ಪುತ್ತಾ ಕುಟುಂಬ ರಾಜಕಾರಣ

ಕುಟುಂಬ ರಾಜಕಾರಣವನ್ನು ಶತಾಯಗತಾಯ ಒಪ್ಪುವುದಿಲ್ಲ ಎನ್ನುವ ಹೈಕಮಾಂಡ್​ಗೆ ಕರ್ನಾಟಕದ ರಾಜಕೀಯ ಸನ್ನಿವೇಶ, ಬಿಎಸ್​ವೈ ಜಿಂದಾಬಾದ್​ ಎನ್ನುವಂತೆ ಮಾಡಿದೆ. ಕೆಲವು ದಿನಗಳ ಹಿಂದೆ ಈ ಸನ್ನಿವೇಶವಿರಲಿಲ್ಲ. ಬಿಎಸ್​ ವೈರನ್ನ ಕೇಂದ್ರ ಬಿಜೆಪಿ ನಿರ್ಲಕ್ಷಿಸಿತ್ತು, ವಿಜಯೇಂದ್ರರಿಗೆ ಸ್ಥಾನಮಾನ ನೀಡುವುದು ತಪ್ಪಿಹೋಗಿತ್ತು. ಒಂದು ಬಣದ ರಾಜಕೀಯ ನಾಯಕರು ತಂದೆ ಮಕ್ಕಳ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದರು. ಹಾಗಂತ ಬಿಎಸ್​ ವೈರವರು ಸಹ ಸುಮ್ಮನಿರಲಿಲ್ಲ. ತಮ್ಮದೇ ತಂತ್ರಗಾರಿಕೆಯ ಅನುಭವದಲ್ಲಿ ಹೈಕಮಾಂಡ್​ಗೆ ಹಾಗೂ ತಮ್ಮ ವಿರೋಧಿಗಳಿಗೆ ಬೇರೆಯದ್ದೆ ಸಂದೇಶ ಕಳುಹಿಸಿದರು. ಇನ್ನೊಂದೆಡೆ ರಾಜ್ಯ ಬಿಜೆಪಿಯಲ್ಲಿ ಪಕ್ಷಾಂತರದ ಅಸಮಾಧಾನ ಹೊಗೆಯಾಡತೊಡಗಿತು. ಲಿಂಗಾಯತ ಸಮುದಾಯದಲ್ಲಿ ಅಪಸ್ವರಗಳು ಕೇಳಿಬಂದವು. ಬಿಎಸ್​ ವೈ ಇಲ್ಲದೇ ಬಿಜೆಪಿಯಿಲ್ಲ ಎಂಬಂತಹ ರಿಪೋರ್ಟ್​ಗಳು ದೆಹಲಿಗೆ ರವಾನೆಯಾದವು. ಇದನ್ನೆಲ್ಲಾ ಅರಿತ ಕೇಂದ್ರ ಹೈಕಮಾಂಡ್ ಅಧಿಕಾರಕ್ಕಾಗಿ ಮತ್ತೆ ಯಡಿಯೂರಪ್ಪರಿಗೆ ಜೈ ಅಂದುಬಿಟ್ಟಿತ್ತು. ಅದಕ್ಕೆ ಅಮಿತ್​ ಶಾ ರ ಬ್ರೇಕ್​ ಫಾಸ್ಟ್​ ಮೀಟಿಂಗ್​ ಸಾಕ್ಷಿ ಹೇಳುತ್ತಿತ್ತು. 

ವರುಣಾ ಕ್ಷೇತ್ರ ಬೇಡವೆಂದಿದ್ದೇಕೆ? 

ಇನ್ನೂ ವಿಜಯೇಂದ್ರರನ್ನು ಜೈಂಟ್ ಕಿಲ್ಲರ್​ ಆಗಿಸುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಸಂಘಪರಿವಾರ ಅವರಿಗೆ ವರುಣಾ ಕ್ಷೇತ್ರದಿಂದ ಸ್ಪರ್ದಿಸುವ ಅವಕಾಶ ನೀಡುತ್ತಿದೆ ಎನ್ನಲಾಗುತ್ತಿದೆ. ಆದರೆ ಬಿಎಸ್​ ಯಡಿಯೂರಪ್ಪ, ತಮ್ಮ ಎರಡನೇ ಮಗ, ಶಿಕಾರಿಪುರದಿಂದಲೇ ಸ್ಪರ್ಧಿಸುತ್ತಾರೆ, ವರುಣಾದಿಂದ ಅಲ್ಲಾ, ಈ ಬಗ್ಗೆ ಹೈಕಮಾಂಡ್​ಗ ಮನವರಿಕೆ ಮಾಡಿಕೊಡುತ್ತೇನೆ ಎಂದಿದ್ಧಾರೆ. ಇದರರ್ಥ ಸಿದ್ದರಾಮಯ್ಯರ ವಿರುದ್ಧ ಸ್ಪರ್ಧಿಸಿ, ಸೋತರೆ ವಿಜಯೇಂದ್ರರ ರಾಜಕೀಯ ಭವಿಷ್ಯಕ್ಕೆ ಕೊಡಲಿ ಏಟು ಬೀಳುವ ಸಾಧ್ಯತೆ ಇದೆ. ಈ ಕಾರಣಕ್ಕೆ ಶಿಕಾರಿಪುರದಿಂದಲೇ ವಿಜಯೇಂದ್ರ ಗೆದ್ದರೆ, ಭವಿಷ್ಯದ ರಾಜಕಾರಣವೂ ಭದ್ರ ಎಂಬ ಲೆಕ್ಕಾಚಾರ ಅವರಲ್ಲಿದ್ದಂತಿದೆ.  ಮೇಲಾಗಿ ಶಿಕಾರಿಪುರದಲ್ಲಿ ಈಗಾಗಲೇ ವಿಜಯೇಂದ್ರರವರು ಹಲವು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಜೊತೆಯಲ್ಲಿ ಬಿಎಸ್​ವೈರ ಭದ್ರಕೋಟೆಯಂತಿರುವ ಶಿಕಾರಿಪುರದಲ್ಲಿ ಅವರದ್ದೆ ಆದ ಲೆಕ್ಕಾಚಾರಗಳಿವೆ. ಆದರೆ ವರುಣಾ ಕ್ಷೇತ್ರದಲ್ಲಿ ಈ ಲೆಕ್ಕಾಚಾರಗಳು ಬೇರೆಯದ್ದೆ ಆಗಿವೆ ಹಾಗೂ  ಜೈಂಟ್​ ಕಿಲ್ಲರ್​ ಆಗುವ ಯಶಸ್ಸಿನ ಹಾದಿ , ಗುರಿ ತಲುಪದ ಪ್ರಯಾಣವಾಗುವ ಅಪಾಯವನ್ನು ಹೊಂದಿದೆ. 

ರಾಜ್ಯದಲ್ಲಿ ಕುಟುಂಬ ರಾಜಕಾರಣ

ಹಾಗೆ ನೋಡಿದರೆ,  ರಾಜ್ಯ ರಾಜಕಾರಣದಲ್ಲಿ ಕುಟುಂಬ ರಾಜಕಾರಣಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಮಾಜಿ ಸಿಎಂ ಸಿದ್ದರಾಮಯ್ಯರಿಗೆ ರಾಕೇಶ್​ ಸಿದ್ದರಾಮಯ್ಯರನ್ನು ಮುನ್ನೆಲೆಗೆ ತರುವ ಅವಕಾಶ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಅವರ ಪುತ್ರ ಯತೀಂದ್ರರನ್ನ ಶಾಸಕರನ್ನಾಗಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮಗ ಪ್ರಿಯಾಂಕ್ ಖರ್ಗೆ ಅವರನ್ನು ಮಾಜಿ ರಾಜ್ಯ ಸಚಿವ ಮತ್ತು ಎರಡು ಬಾರಿ ಶಾಸಕರನ್ನಾಗಿ ಬೆಳೆಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ  ದಿನೇಶ್ ಗುಂಡೂರಾವ್ ಅವರು ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರ ಪುತ್ರರಾಗಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ಇಬ್ಬರು ಪುತ್ರರಾದ ಅಜಯ್ ಸಿಂಗ್ ಮತ್ತು ವಿಜಯ್ ಸಿಂಗ್ ಕೂಡ ಕಾಂಗ್ರೆಸ್ ಶಾಸಕರಾಗಿದ್ದಾರೆ.1988ರಿಂದ 1989ರವರೆಗೆ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು.  ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಇಬ್ಬರು ಪುತ್ರರು ರಾಜಕೀಯದಲ್ಲಿದ್ದಾರೆ, ಬಂಗಾರಪ್ಪನವರ ಪುತ್ರರಾದ ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿ ಶಾಸಕರಾಗಿದ್ದರೆ, ಮಧು ಬಂಗಾರಪ್ಪ ಸದ್ಯ ಕಾಂಗ್ರೆಸ್ನ ಮುಖಂಡರಾಗಿದ್ದಾರೆ, ಇನ್ನೂ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪರ ಮಗಳು ರೂಪಾ ಶಶಿಧರ್, ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರ ಮಗಳು ಸೌಮ್ಯಾ ಕೂಡ ರಾಜಕಾರಣದಲ್ಲಿದ್ದಾರೆ.

ಆದರೆ ತಮ್ಮ ಮಗನನ್ನ ರಾಜ್ಯದ ಶಕ್ತಿಶಾಲಿ ರಾಜಕಾರಣಿಯನ್ನಾಗಿಸುವ ನಿಟ್ಟಿನಲ್ಲಿ ದೊಡ್ಡ ಯಶಸ್ಸು ಕಂಡಿದ್ದು ದೇವೇಗೌಡರು, ಇವರನ್ನ ಹೊರತುಪಡಿಸಿ, ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಬಿಎಸ್​ ಯಡಿಯೂರಪ್ಪನವರ ರಾಜಕಾರಣ ನಡೆ ಸಾಗುತ್ತಿದೆ. ಬಿಜೆಪಿಯಲ್ಲಿ ಏನೂ ಸಹ ನಡೆಯಬಲ್ಲದು, ನಾಳೇ ಏನೂ ಸಹ ಆಗಬಹುದು.ಆದರೆ ಸದ್ಯದ ಮಟ್ಟಿಗೆ ಬಿಎಸ್​ ಯಡಿಯೂರಪ್ಪನವರ ದಾಳಗಳು ಪಕ್ಷದಲ್ಲಿ ಅವರು ಹೇಳಿದಂತೆ ಉರುಳುತ್ತಿದೆ.ಆದರೆ ಚುನಾವಣೆಯ ನಂತರ ಇದರ ರಿಸಲ್ಟ್​ ಹೊರಬರಲಿದೆ. 

Read/ ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್  ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ 



read/ ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

 

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

 

Read/ BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamoggaChikkamagaluru  #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga, Karnataka Politics, Karnataka Elections, BS Yediyurappa, BY Vijayendra, HD Deve Gowda, HD Kumaraswamy, HD Revanna, Prajwal Revanna, Nikhil Kumaraswamy, Basavaraj Bommai, Mallikarjun Kharge, Dharam Singh, Family Politics, Amit Shah, BJP, Congress, State Politics. ಕರ್ನಾಟಕ ಪಾಲಿಟಿಕ್ಸ್, ಕರ್ನಾಟಕ ಎಲೆಕ್ಷನ್​ , ಬಿಎಸ್​ ಯಡಿಯೂರಪ್ಪ, ಬಿವೈ ವಿಜಯೇಂದ್ರ, ಹೆಚ್​ಡಿ ದೇವೇಗೌಡ, ಹೆಚ್​ಡಿ ಕುಮಾರಸ್ವಾಮಿ, ಹೆಚ್​ಡಿ ರೇವಣ್ಣ, ಪ್ರಜ್ವಲ್​ ರೇವಣ್ಣ ನಿಖಿಲ್ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಮಲ್ಲಿಕಾರ್ಜುನ್​ ಖರ್ಗೆ, ಧರಮ್​ ಸಿಂಗ್​,  ಕುಟುಂಬ ರಾಜಕಾರಣ, ಅಮಿತ್ ಶಾ, ಬಿಜೆಪಿ, ಕಾಂಗ್ರೆಸ್, ರಾಜ್ಯ ರಾಜಕಾರಣ,