104 ಊರುಗಳಿಗೊಂದು ಹೊಸ ಪೊಲೀಸ್​ ಸ್ಟೇಷನ್​/ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದ ನೂತನ ಠಾಣೆ

New police station for 104 villages/ New police station in Shimoga district/ shivamoggaliveinfonews/ malenadutoday/ malnad news

104  ಊರುಗಳಿಗೊಂದು ಹೊಸ ಪೊಲೀಸ್​ ಸ್ಟೇಷನ್​/ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದ ನೂತನ ಠಾಣೆ
104 ಊರುಗಳಿಗೊಂದು ಹೊಸ ಪೊಲೀಸ್​ ಸ್ಟೇಷನ್​/ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದ ನೂತನ ಠಾಣೆ

ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಪೊಲೀಸ್​ ಸ್ಟೇಷನ್​ಗೆ ಓಡಾಡುವುದು ಎಂದರೇ ತುಸು ಕಷ್ಟದ ಕೆಲಸವೇ ಸರಿ. ಸಣ್ಣಪುಟ್ಟ ಸಮಸ್ಯೆಗೂ ಪೇಟೆಯಲ್ಲಿರುವ ಗ್ರಾಮಾಂತರ ಠಾಣೆಗಳಿಗೆ ಹೋಗಿ ಬರಬೇಕು ಎನ್ನುವ ವಿಚಾರವೇ, ಹಳ್ಳಿಗಳಲ್ಲಿ ಒಂದರ ಹಿಂದೊಂದು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಅಲ್ಲದೆ ಊರಿಗೆ ಹತ್ತರ ಸ್ಟೇಷನ್​ವೊಂದಿದ್ದರೇ ಪುಂಡ ಪೊಕರಿಗಳ ಹಾವಳಿಗಳು ಸಹ ನಿಲ್ಲುತ್ತದೆ. ಅಲ್ಲದೆ, ಆಡಳಿತಾತ್ಮಕವಾಗಿ ಪ್ರತಿಯೊಂದು ಊರುಗಳ ಚಟುವಟಿಕೆಗಳನ್ನು ಗಮನಿಸಲು ಅನುಕೂಲವಾಗುತ್ತದೆ. 

ಇಷ್ಟೊಂದು ಪೀಠಿಕೆ ಏಕೆಂದರೆ, ಸದ್ಯ ಇದೇ ದೃಷ್ಟಿಯಲ್ಲಿ ಶಿವಮೊಗ್ಗ-ಸಾಗರ ತಾಲ್ಲೂಕಿನ ನಡುವೆ ಮತ್ತೊಂದು ಹೊಸ ಸ್ಟೇಷನ್​ ಆರಂಭವಾಗಿದೆ. ಇತ್ತೀಚೆಗೆ ಗೃಹಸಚಿವರು ಆನಂದಪುರ ಪೊಲೀಸ್ ಸ್ಟೇಷನ್​ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಇದರ ಬೆನ್ನಲ್ಲೆ ಉಪಠಾಣೆಯು ಆನಂದಪುರ ಪೊಲೀಸ್​ ಸ್ಟೇಷನ್​ ಆಗಿ ಕಾರ್ಯ ನಿರ್ವಹಿಸಲು ಆರಂಭಿಸಿದೆ.

ಹೊಸ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ಎಂಬತ್ತು ಲಕ್ಷ ರೂಪಾಯಿ ಅನುದಾನ ಲಭಿಸಿದ್ದು, ಅದರ ಕಾಮಗಾರಿ ಇನ್ನಷ್ಟೆ ಆರಂಭವಾಗಬೇಕಿದೆ. ಹೊಸ ಕಟ್ಟಡ ನಿರ್ಮಾಣವಾಗುವವರೆಗೂ ಉಪಠಾಣೆಯಲ್ಲಿಯೇ ಹೊಸ ಪೊಲೀಸ್ ಸ್ಟೇಷನ್​ ಕಾರ್ಯನಿರ್ವಹಿಸಲಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಇಬ್ಬರು ಎಸ್​ಐ ಸೇರಿದಂತೆ  ಹದಿನೈದಕ್ಕೂ ಹೆಚ್ಚು ಸಿಬ್ಬಂದಿ ಈ ಸ್ಟೇಷನ್​ನಲ್ಲಿ ಕೆಲಸ ಮಾಡಲಿದ್ದಾರೆ. ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 

ಈ ಸ್ಟೇಷನ್​ ವ್ಯಾಪ್ತಿಯಲ್ಲಿ ಯಡೇಹಳ್ಳಿ, ಕೆಂಜಗಾಪುರ, ಆಚಾಪುರ, ತ್ಯಾಗರ್ತಿ ಸೇರಿದಂತೆ ಹಾರೋಗೊಪ್ಪ, ಕಾಸ್ಪಾಡಿ ಒಳಗೊಂಡು ಒಟ್ಟು 104 ಹಳ್ಳಿಗಳು ಬರುತ್ತವೆ. ಇದರಿಂದಾಗಿ ಸಾಗರ ಗ್ರಾಮಾಂತರ ಸ್ಟೇಷನ್​ ಮೇಲಿನ ಒತ್ತಡ ಕಡಿಮೆಯಾಗಲಿದೆಯಷ್ಟೆ ಅಲ್ಲದೆ, ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಕ್ರೈಂ ಚಟುವಟಿಕೆಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ. 

 ಪೊಲೀಸ್ ಠಾಣೆ ಕಟ್ಟಡ ನಿರ್ಮಾಣವಾಗುವವರೆಗೂ ಹಳೆಯ ಕಟ್ಟಡದಲೇ ಇದೀಗ ಪೊಲೀಸ್ ಉಪಟಾನಿ ಪೊಲೀಸ್ ಠಾಣೆಯಾಗಿ ಕಾರ್ಯ ನಿರ್ವಹಿಸಲಿದೆ.

Read/ ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್  ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ 



read/ ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

Read/ BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamoggaChikkamagaluru Anandapur Police Station, Anandpur Sub-Station, Sagar Rural Police Station, Sagar Taluka News, Sagar Taluk Report, Police Station News, ಆನಂದಪುರ ಪೊಲೀಸ್ ಸ್ಟೇಷನ್​, ಆನಂದಪುರ ಉಪಠಾಣೆ, ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್​ , ಸಾಗರ ತಾಲ್ಲೂಕು ನ್ಯೂಸ್, ಸಾಗರ ತಾಲ್ಲೂಕು ವರದಿ, ಪೊಲೀಸ್ ಸ್ಟೇಷನ್ ನ್ಯೂಸ್,   #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite MalenaduToday.com Malenadu today Malenadu Postbox kannnada