ಅಸಲಿ ಮತದಾನಕ್ಕೂ ಮೊದಲು ಅಣಕು ಮತದಾನ ನಡೆಯುತ್ತೆ! ಬೆಳಗ್ಗಿನ ಜಾವ 5.30 ಕ್ಕೆ ನಡೆಯುವ ಪ್ರಕ್ರಿಯೆ ಏನು?

Mock voting takes place before the actual voting! Do you know why?

ಅಸಲಿ ಮತದಾನಕ್ಕೂ ಮೊದಲು ಅಣಕು ಮತದಾನ ನಡೆಯುತ್ತೆ! ಬೆಳಗ್ಗಿನ ಜಾವ 5.30 ಕ್ಕೆ ನಡೆಯುವ ಪ್ರಕ್ರಿಯೆ ಏನು?

KARNATAKA NEWS/ ONLINE / Malenadu today/ May 10, 2023 GOOGLE NEWS

ಚುನಾವಣಾ ಪ್ರಕ್ರಿಯೆಯಲ್ಲಿ ನಾವು ಹೋಗುತ್ತೆವೆ ವೋಟು ಮಾಡುತ್ತೇವೆ ಬರುತ್ತೇವೆ ಆದರೆ ನಾವು ಹಾಕುವ ಮತದಾನದ ಕೇಂದ್ರದಲ್ಲಿ ನಮ್ಮ ಮತದಾನದ ಹಕ್ಕು ಚಲಾವಣೆಗೆ ಎಷ್ಟೆಲ್ಲಾ ಎಚ್ಚರಿಕೆ ವಹಿಸಲಾಗಿರುತ್ತದೆ ಎಂಬುದನ್ನ ಯಾರು ಗಮನಿಸಿರೋದಿಲ್ಲ.

ಮತಗಟ್ಟೆಯಲ್ಲಿ ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗುವುದಕ್ಕೂ ಮೊದಲೇ ಅಣಕು ಮತದಾನ ನಡೆದಿರುತ್ತದೆ ಎಂಬ ವಿಚಾರ ನಿಮಗೆ ಗೊತ್ತಿದ್ಯಾ? ಆ ಬಗ್ಗೆ ಹೇಳುತ್ತೇವೆ ಕೇಳಿ. ಚುನಾವಣಾ ಆಯೋಗದ ವ್ಯವಸ್ಥೆಯಂತೆ. ಪ್ರತಿ ಮತಗಟ್ಟೆಯಲ್ಲಿಯು, ಅಸಲಿ ಮತದಾನ ನಡೆಯುವುದಕ್ಕೂ ಮೊದಲು ಅಣಕು ಮತದಾನ ನಡೆಯಬೇಕು. ಅದರ ಬಗ್ಗೆ ಚುನಾವಣಾ ಏಜೆಂಟರುಗಳಿಗೆ ಹಿಂದಿನ ದಿನವೇ ಮಾಹಿತಿ ನೀಡಿರಬೇಕು ಮತ್ತು ಈ ಅಣಕು ಮತದಾನವನ್ನು ಅವರುಗಳೇ ಮಾಡಬೇಕು. ಮತದಾನದ ದಿನ ಬೆಳಗ್ಗೆ 5.30 ಕ್ಕೆ ಅಣಕು ಮತದಾನದ ಪ್ರಕ್ರಿಯೆ ಆರಂಭಗೊಂಡು .6.45 ರ ಹೊತ್ತಿಗೆ ಮಾಕ್​ ಡ್ರಿಲ್ ಅಂತ್ಯಗೊಳ್ಳಲಿದೆ.

ಇದನ್ನ ಸಹ ಓದಿ / ಇವಿಎಂ ಜೊತೆ ವಿವಿ ಪ್ಯಾಟ್ ಏತಕ್ಕಾಗಿ ಇರುತ್ತೆ ಗೊತ್ತಾ? ಮತಗಟ್ಟೆಯಲ್ಲಿ ಏನೇನೆಲ್ಲಾ ಇರುತ್ತೆ? ಮತದಾನದ ಇಂಟ್ರಸ್ಟಿಂಗ್ ಸಂಗತಿಗಳು!

ಈ ವೇಳೆಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೂ ಸೇರಿ ಒಟ್ಟು 50 ಮತಗಳನ್ನು ಹಾಕಲಾಗುತ್ತದೆ. ಮತ್ತದನ್ನು ಪ್ರತ್ಯೇಕವಾಗಿ ಬರೆದಿರಿಸಿಕೊಳ್ಳಲಾಗಿರುತ್ತದೆ. ಆನಂತರ ಬರೆದಿಟ್ಟುಕೊಂಡಿದ್ದನ್ನು ಇವಿಎಂನ ರಿಸಲ್ಟ್​ನೊಂದಿಗೆ ಹೋಲಿಸಿ, ಸರಿಯಾಗಿರುವುದನ್ನ ಖಾತರಿ ಪಡಿಸಿಕೊಳ್ಳಲಾಗುತ್ತದೆ. ದೋಷಪೂರಿತವಿದ್ದರೇ ಮತಯಂತ್ರದ ಬಗ್ಗೆ ಹಿರಿಯ ಅಧಿಕಾರಿಗಳು ನಿರ್ಣಯ ಕೈಗೊಳ್ಳುತ್ತಾರೆ. ಎಲ್ಲವೂ ಸರಿಯಾಗಿದ್ದರೆ,  ಮತಯಂತ್ರದಲ್ಲಿರುವ ಅಣಕು ಮತದಾನದ ಫಲಿತಾಂಶವನ್ನು  ಶೂನ್ಯಗೊಳಿಸಿ, ಅಸಲಿ ಮತದಾನವನ್ನು ಆರಂಭಿಸಲಾಗುತ್ತದೆ. 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

 

Malenadutoday.com Social media