ಪೊಲೀಸ್ ರೂಟ್ ಮಾರ್ಚ್​ನಲ್ಲಿ ಪಾಲ್ಗೊಂಡ ಐದು ವರ್ಷದ ಬಾಲಕ ! ಯಾರಿವನು!? ಗೊತ್ತಾ

A four-year-old boy participated in the police route march. Who is he!? Do you know?

ಪೊಲೀಸ್ ರೂಟ್ ಮಾರ್ಚ್​ನಲ್ಲಿ ಪಾಲ್ಗೊಂಡ ಐದು  ವರ್ಷದ ಬಾಲಕ ! ಯಾರಿವನು!? ಗೊತ್ತಾ
ಪೊಲೀಸ್ ರೂಟ್ ಮಾರ್ಚ್​ನಲ್ಲಿ ಪಾಲ್ಗೊಂಡ ನಾಲ್ಕು ವರ್ಷದ ಬಾಲಕ ! ಯಾರಿವನು!? ಗೊತ್ತಾ

KARNATAKA NEWS/ ONLINE / Malenadu today/ Apr 25, 2023 GOOGLE NEWS


ಶಿವಮೊಗ್ಗ/    ರಾಜಕಾರಣಿಗಳು ಮತಯಾಚನೆಯಲ್ಲಿ ಬ್ಯುಸಿಯಾಗಿದ್ದಾರೆ. ಜಿಲ್ಲಾಡಳಿತ ಚುನಾವಣೆ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸುವುದರಲ್ಲಿ ತಲ್ಲೀನವಾಗಿದೆ.

ಇನ್ನೂ ಪೊಲೀಸ್ ಇಲಾಖೆ ಭದ್ರತೆ, ಸುರಕ್ಷತೆ ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಹಗಲಿರುಳು ಕೆಲಸ ಮಾಡುತ್ತಿದೆ.  

ಈ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಶಿವಮೊಗ್ಗ ಪೊಲೀಸರು ನೀತಿ ಸಂಹಿತೆ ಜಾರಿಯಾದಾಗಿನಿಂದ ಆಯಾ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ ರೂರ್ ಮಾರ್ಚ್​ ನಡೆಸ್ತಿದೆ. 

ಕೇಂದ್ರದಿಂದ ಬಂದಿರುವ ಸಿಎಪಿಎಫ್​  ತಂಡದ ಜೊತೆಯಲ್ಲಿ ಸ್ಟೇಷನ್​ ಲಿಮಿಟ್ಸ್ನ ಪೊಲೀಸರು ಅಧಿಕಾರಿಗಳು ಹಾಗು ಆಯಕಟ್ಟಿನ ಆಫಿಸರ್​ಗಳು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

ಕುತೂಹಲದ ವಿಷಯವೆಂದರೆ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ ಪಥ ಸಂಚಲನವೊಂದರಲ್ಲಿ ಪಟ್ಟು ಬಾಲಕನೊಬ್ಬ ಪಾಲ್ಗೊಂಡಿದ್ದ.

ಪೊಲೀಸ್ ಇಲಾಖೆ ಕಳುಹಿಸಿದ್ದ ಪ್ರಕಟಣೆಯ ಫೋಟೋದಲ್ಲಿ ಪೊಲೀಸ್ ಹಾಗೂ ಸಿಎಪಿಎಫ್​ ಸಿಬ್ಬಂದಿಯ ಜೊತೆ ಬಾಲಕನೊಬ್ಬ ಹೆಜ್ಜೆ ಹಾಕುತ್ತಿರುವುದು ಕಂಡು ವಿಚಾರಿಸಿದಾಗ ಸಿಕ್ಕ ಮಾಹಿತಿ ಕುತೂಹಲಕಾರಿಯಾಗಿತ್ತು. 

ಶಿವಮೊಗ್ಗದ  ಪುರಲೆಯಲ್ಲಿ ನಡೆದ ರೂಟ್ ಮಾರ್ಚ್​ ನಲ್ಲಿ 5 ವರ್ಷದ ಬಾಲಕ ಸಮರ್ಥ ಗೌಡ  ಪಾಲ್ಗೊಂಢಿದ್ದ. 

ಈತನ  ತಂದೆ ಶಿವಮೊಗ್ಗ ಗ್ರಾಮಂತರ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ನಡೆದ  ಪೊಲೀಸ್ ರೂಟ್​ ಮಾರ್ಚ್​ನ ವಿಡಿಯೋಗಳು ಇವರ ಮೊಬೈಲ್​ನಲ್ಲಿದ್ದವು. 

ಇದನ್ನ ಗಮನಿಸಿದ ಬಾಲಕ ಆರ್ಮಡ್​ ರಿಸರ್ವ್ ಪೊಲೀಸರ ಹಾಗೆ ಯೂನಿಫಾರಮ್​ ಹಾಕಿಕೊಂಡು ತಾನು ಕೂಡ ರೂಟ್ ಮಾರ್ಚ್​ ನಲ್ಲಿ ಪಾಲ್ಗೊಂಡಿದ್ಧಾನೆ. 

ಪುರಲೆಯಲ್ಲಿ ಎಲ್ಲಿವರೆಗೂ ಪೊಲೀಸರು ಪಥಸಂಚಲನದಲ್ಲಿ ಸಾಗಿದರೋ ಅಲ್ಲಿಯವರೆಗೂ ಬಾಲಕ ಕೂಡ ಸಾಗಿ ಬಂದಿದ್ಧಾನೆ. 

ಬಾಲಕನ ಆಸಕ್ತಿ ಹಾಗೂ ಆತನಲ್ಲಿನ ಶಕ್ತಿ ನೋಡಿ ಪೊಲೀಸರು ಹಾಗೂ ಸಿಎಪಿಎಫ್​ ಸಿಬ್ಬಂದಿ ಆತನ ಬಗ್ಗೆ  ಅಚ್ಚರಿ ಪಟಿದ್ಧಾರೆ. 

 

Malenadutoday.com Social media