ಆನು ಒಲಿದಂತೆ ಹಾಡುವೆ ನಾಟಕಕ್ಕೆ ಪ್ರಥಮ ಸ್ಥಾನ

Shivamogga Press Trust organized a drama competition titled "Let's Play Again"

ಆನು ಒಲಿದಂತೆ ಹಾಡುವೆ ನಾಟಕಕ್ಕೆ ಪ್ರಥಮ ಸ್ಥಾನ

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ: ಮನ್ವಂತರ ಮಹಿಳಾ ಮಂಡಲ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ "ಮತ್ತೆ ಆಡೋಣ ಬನ್ನಿ" ನಾಟಕ ಸ್ಪರ್ಧೆಯಲ್ಲಿ ಸದಭಿರುಚಿ ತಂಡ ಪ್ರದರ್ಶಿಸಿದ ಆನು ಒಲಿದಂತೆ ಹಾಡುವೆ ನಾಟಕಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಶಾರದಾ ಮಹಿಳಾ ಕೂಟ  ಪ್ರದರ್ಶಿಸಿದ ನೀನೇ ಎಲ್ಲಾ, ನಿನ್ನಿಂದಲೇ ಎಲ್ಲಾ ನಾಟಕಕ್ಕೆ ದ್ವಿತೀಯಸ್ಥಾನ, ಸ್ವಪ್ನ ತಂಡದ ಮನಸ್ವಿನಿ ನಾಟಕ ತೃತೀಯ ಸ್ಥಾನಕ್ಕೆ ಪಾತ್ರವಾದವು.

ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಾತ್ರವಾಗಿದ್ದು  ಭಾರತೀಯ ವೈದ್ಯಕೀಯ ಸಂಘದ ಮಹಿಳಾ ವೈದ್ಯರ ಘಟಕ ಪ್ರದರ್ಶನ ಮಾಡಿದ  ಆ ದಿನಗಳು ನಾಟಕ. ಉಳಿದಂತೆ ಶಾರದಾ ಓದುಗರ ವೇದಿಕೆ, ವಾಗೀಶ್ವರಿ ಮಹಿಳಾ ಸಂಘ, ಪ್ರಗತಿ ಮಹಿಳಾ ಸಂಘ, ಭಾಗ್ಯಲಕ್ಷಿ ಮತ್ತು ತಂಡ ಸೌಮ್ಯ ಮತ್ತು ತಂಡ,ರುಕ್ಮಿಣಿ ಚಂದ್ರಕಲಾ ಮತ್ತು ತಂಡ ರಮಾಶಾಸ್ತ್ರಿ ಮತ್ತು ತಂಡ, ಕೋಟೆಗಾರ್ ಮಹಿಳಾ ಗುಂಪು ಲಹರಿ ತಂಡಗಳು ಸಮಾಧಾನ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡವು. ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಕಾಂತೇಶ್ ಕದರಮಂಡಲಗಿ, ಕಿರಣ್ ದೇಸಾಯಿ, ಹೊನ್ನಾಳಿ ಚಂದ್ರಶೇಖರ್ ಕಾರ್ಯನಿರ್ವಹಿಸಿದರು

ಮತ್ತೊಮ್ಮೆ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಬಂದಿಳಿಯಲಿದ್ದಾರೆ ನರೇಂದ್ರ ಮೋದಿ! ಹುಬ್ಬಳ್ಳಿ ಬಿಟ್ಟು ಶಿವಮೊಗ್ಗವನ್ನೇ ಆಯ್ಕೆ ಮಾಡಿದ್ದೇಕೆ ಪ್ರಧಾನಿ!?

ಇನ್ನೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಿಗೆರೆ, ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊರುವ ಮಹಿಳೆ ಸಾಕಷ್ಟು ಒತ್ತಡ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಕುಟುಂಬ ವೃತ್ತಿ ನಿರ್ವಹಣೆ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ಮಹಿಳೆ ಹೆಚ್ಚು ತೊಡಗಿಕೊಳ್ಳಬೇಕು. ಎಂತದ್ದೆ ಕಠಿಣ ಸಂದರ್ಭಗಳನ್ನು ನಿಭಾಯಿಸುವಂತ ಸೃಜನಶೀಲತೆ ಅಗತ್ಯವಾಗಿದ್ದು, ಸಾಮರ್ಥ್ಯಕ್ಕೆ ಇಂಬು ನೀಡುವಂತೆ ಸಾಮಾನ್ಯ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಓದಿನಲ್ಲಿ ಮಹಿಳೆಯರು ಯಾವಾ ಗಲು ಮುಂದೆ ಇರುತ್ತಾರೆ. ಓದಿನಾಚೆಗಿನ ಪ್ರಪಂಚದ ಬಗ್ಗೆಯೂ ಅವರು ಜ್ಞಾನ ಸಂಗ್ರಹಿಸಬೇಕು. ಮಹಿಳೆ ತನ್ನ  ಚರ್ಚೆ, ಕಾರ್ಯಚಟುವಟಿಕೆಗಳನ್ನು ಸೀಮಿತಗೊಳಿಸಿಕೊಳ್ಳದೆ, ಸಮಗ್ರ ವಿಷಯಗಳತ್ತ ಆಳವಾದ ಜ್ಞಾನವನ್ನು ಪಡೆದುಕೊಳ್ಳಬೇಕು. ಆಗ ನಮ್ಮೊಳಗಿನ ಐಕ್ಯೂ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ಗಮನ ಹರಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮನ್ವಂತರ ಮಹಿಳಾ ಮಂಡಳ ಅಧ್ಯಕ್ಷೆ ಶ್ರೀರಂಜನಿ ದತ್ತಾತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಶ್ರೀ ಸುಗುಣ ವಾಲ್ಸ್ ಮತ್ತು ಉಪಸ್ಥಿತರಿದ್ದರು. ಪೈಪ್ಸ್ ಪ್ರೈ.ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ವಾರಿಜಾ ರಾಮಾಚಾರ್, ಶಿವಮೊಗ್ಗ ಪ್ರೆಸ್​ ಟ್ರಸ್ಟ್​ನ ಎನ್​ ಮಂಜುನಾಥ್, ರಂಗಭೂಮಿ ಕಲಾ ಏದ ಕಾಂತೇಶ್ ಕದರಮಂಡಲಗಿ, ರಂಗ ನಿರ್ದೇಶಕ ಹೊನ್ನಾಳಿ ಚಂದ್ರ ಶೇಖರ್‌, ಕಮಲ ನೆಹರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಕಿರಣ್ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamogga news,shivamogga,shivamogga airport,kannada news live,kannada news