ಭದ್ರಾವತಿಯ ಬಹುತೇಕಕಡೆಗಳಲ್ಲಿ ಪವರ್ ಕಟ್! ಎಲ್ಲೆಲ್ಲಿ ಎಂಬ ವಿವರ ಇಲ್ಲಿದೆ

Power cuts in most parts of Bhadravathi tomorrow Here's the details of where

ಭದ್ರಾವತಿಯ ಬಹುತೇಕಕಡೆಗಳಲ್ಲಿ  ಪವರ್ ಕಟ್! ಎಲ್ಲೆಲ್ಲಿ ಎಂಬ ವಿವರ ಇಲ್ಲಿದೆ
Power cuts in most parts of Bhadravathi tomorrow Here's the details of where

SHIVAMOGGA  |  Jan 16, 2024  | Power cuts in most parts of Bhadravathi tomorrow Here's the details of where  ಭದ್ರಾವತಿ: ನಗರದ ಸೀಗೆಬಾಗಿ/ಕೂಡ್ಲಿಗೆರೆ/ಮಾವಿನಕಟ್ಟೆ ವಿದ್ಯುತ್‌ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಳ್ಳಲಾಗಿದೆ. 

ಈ ಹಿನ್ನೆಲೆಯಲ್ಲಿ ಜನವರಿ 17 ರಂದು ಬುಧುವಾರ ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ. ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಮೆಸ್ಕಾಂ ನಗರ ಉಪವಿಭಾಗದ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಹಳೇನಗರ, ತಾಲೂಕು ಕಚೇರಿ ರಸ್ತೆ, ರಂಗಪ್ಪವೃತ್ತ, ಬಸವೇಶ್ವರ ವೃತ್ತ, ಕೋಟೆ ಏರಿಯಾ, ಕಂಚಿನ ಬಾಗಿಲು, ಹಳದ ಬೀದಿ, ಖಾಜಿಮೊಹಲ್ಲಾ, ಭೂತನಗುಡಿ, ಹೊಸಮನೆ, ಎನ್‌ಎಂಸಿ ರಸ್ತೆ, ಭೋವಿಕಾಲೋನಿ, ಸಂತೇಮೈದಾನ, ಕೇಶವಪುರ, ಬಾಬಳ್ಳಿರಸ್ತೆ, ಸತ್ಯಸಾಯಿನಗರ, ತಮ್ಮಣ್ಣಕಾಲೋನಿ, ಸುಭಾಷ್ ನಗರ. ವಿಜಯನಗರ, ಕುವೆಂಪುನಗರ, 

ನೃಪತುಂಗನಗರ, ಸೀಗೇಬಾಗಿ, ಹಳೇಸೀಗೆಬಾಗಿ, ಅಶ್ವಥನಗರ, ಕಬಳಿಕಟ್ಟೆ, ಭದ್ರಾಕಾಲೋನಿ, ಕಣಕಟ್ಟೆ, ಚೆನ್ನಗಿರಿರಸ್ತೆ, ಎಪಿಎಂಸಿ. ತರೀಕೆರೆರಸ್ತೆ, ಗಾಂಧಿವೃತ್ತ, ಕೋಡಿಹಳ್ಳಿ, ಮಾರುತಿನಗರ, ಸುಣ್ಣದಹಳ್ಳಿ, ಹೊಸಸೇತುವೆರಸ್ತೆ, ಸಿದ್ದಾರೂಢನಗರ. ಶಂಕರಮಠ, ಕನಕನಗರ, ಸ್ಮಶಾನಪ್ರದೇಶ, ಬಸ್‌ಡಿಪೋ, ಹೊಳೆಹೊನ್ನೂರು ರಸ್ತೆ, ಖಲಂದರನಗರ, ಜಟ್ ಪಟ್‌ನಗರ, 

ಅನ್ವರ್‌ಕಾಲೋನಿ, ಮೊಮಿನ್‌ಮೊಹಲ್ಲಾ, ಆಮೀರ್‌ಜಾನ್ ಕಾಲೋನಿ, ಮಜ್ಜಿಗೇನಹಳ್ಳಿ, ಗೌಡ್ರಹಳ್ಳಿ, ಬಾಬಳ್ಳಿ, ವೀರಾಪುರ, ಶ್ರೀರಾಮನಗರ, ಲಕ್ಷ್ಮೀಪುರ, ಕೂಡ್ಲಿಗೆರೆ, ಬದನೇಹಾಳು, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ತಿಮ್ಲಾಪುರ, ಮಾವಿನಕಟ್ಟೆ, ಹಂಚಿನಸಿದ್ದಾಪುರ. ಸಿದ್ದರಕಾಲೋನಿ, ಬಸವಾಪುರ, ಅಗರದಹಳ್ಳಿ, ಆಗರದಹಳ್ಳಿ ಕ್ಯಾಂಪು ಇನ್ನು ಮುಂತಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ.