ಹೊಳೆಹೊನ್ನೂರು ರಸ್ತೆಯಲ್ಲಿ ಸಾಲ ವಾಪಸ್ ಕೊಡದ ಚಾಲಕನ ಬೆನ್ನಿಗೆ ಇರಿದ ಸ್ನೇಹಿತ!

Malenadu Today

SHIVAMOGGA  |  Dec 12, 2023  |  ಸಾಲಗಾರನ ಬೆನ್ನಿಗೆ ಚೂರಿ ಹಾಕಿರುವ ಘಟನೆಯೊಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ನಡೆದಿದೆ. 

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ 

ಸ್ನೇಹಿತನ ಬಳಿ ಸಾಲಕ್ಕೆ ಹಣ ಪಡೆದು ಕೊನೆಗೆ ಹಿಂತಿರುಗಿಸದ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆಯಿದು.  ಆಟೋ ಚಾಲಕ  ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ. ಸ್ನೇಹಿತನೊಬ್ಬನಿಂದ ಚಾಲಕ ಎರಡು ತಿಂಗಳ ಹಿಂದೆ ₹20 ಸಾವಿರ ಸಾಲ ಪಡೆದಿದ್ದರು. 

ಈಚೆಗೆ ಹಣ ಹಿಂತಿರುಗಿಸುವಂತೆ ಸ್ನೇಹಿತ ಕೇಳಿದ್ದು, ಡಿಸೆಂಬರ್​ 8 ರಂದು ರಾತ್ರಿ ಸಾಲ ವಸೂಲಿಗೆ ಸ್ನೇಹಿತ ಬಂದಿದ್ದಾನೆ. ಈ ವೇಳೆ ಸ್ನೇಹಿತ ಹಾಗೂ ಆತನ ಜೊತೆಗಿದ್ದ  ಇನ್ನೊಬ್ಬ ಯುವಕ  ಆಟೋ ಚಾಲಕನನ್ನ ಹೊಳೆಹೊನ್ನೂರು ರಸ್ತೆಗೆ ಕರೆದೊಯ್ದಿದ್ದಾರೆ. 

READ : GOOD NEWS | ಕಡಿಮೆಯಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್​ ದರ?

ಅಲ್ಲಿ ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. ಅಲ್ಲದೇ, ಚಾಲಕನಿಗೆ ಹೊಡೆದು, ಬೆನ್ನಿಗೆ ಚಾಕುವಿನಿಂದ ಚುಚ್ಚಿದ್ದಾರೆ. ಈ ಬಗ್ಗೆ ಸಂತ್ರಸ್ತ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ ನಲ್ಲಿ  ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

 

Share This Article