ತಮ್ಮ ಸ್ಪರ್ಧೆ ಕಾಂಗ್ರೆಸ್‌ ವಿರುದ್ಧವಲ್ಲ | ಬಂಡಾಯಕ್ಕೆ ಕಾರಣ ತಿಳಿಸಿದ ಎಸ್‌ಪಿ ದಿನೇಶ್‌

SP Dinesh, an independent candidate from the Southwest Graduate constituency, said that his contest is not against Congress but against defection,

ತಮ್ಮ ಸ್ಪರ್ಧೆ ಕಾಂಗ್ರೆಸ್‌ ವಿರುದ್ಧವಲ್ಲ | ಬಂಡಾಯಕ್ಕೆ ಕಾರಣ ತಿಳಿಸಿದ ಎಸ್‌ಪಿ ದಿನೇಶ್‌
Southwest Graduate constituency,SP Dinesh

SHIVAMOGGA | MALENADUTODAY NEWS | May 28, 2024  ಮಲೆನಾಡು ಟುಡೆ 

ಪಕ್ಷದಿಂದಲೇ ಉಚ್ಚಾಟಿಸಿದರೂ ನನ್ನ ಸ್ಪರ್ಧೆ ಕಾಂಗ್ರೆಸ್‌ ವಿರುದ್ಧವಲ್ಲ ಪಕ್ಷಾಂತರದ ವಿರುದ್ಧ ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ ಎಸ್‌ಪಿ ದಿನೇಶ್‌ ಹೇಳಿದ್ದಾರೆ. ಈ ಸಂಬಂಧ ಸಾಗರ ತಾಲ್ಲೂಕು ನಲ್ಲಿ ಮಾತನಾಡಿದ ಅವರು, ಹಲವು ಪಕ್ಷಗಳಿಗೆ ಹೋಗಿ ಕಾಂಗ್ರೆಸ್‌ಗೆ ಬಂದಿರುವ ಆಯನೂರು ಮಂಜುನಾಥ್‌ಗೆ ಪಕ್ಷ ಟಿಕೆಟ್ ನೀಡಲಾಗಿದೆ. ಇದನ್ನ ಖಂಡಿಸಿ ಕಣಕ್ಕೆ ಇಳಿದಿದ್ದೇನಷ್ಟೆ  ನನ್ನ ಸ್ಪರ್ಧೆ ಪಕ್ಷಾಂತರದ ವಿರುದ್ಧವೇ ಹೊರತು ಕಾಂಗ್ರೆಸ್ ವಿರುದ್ಧವಲ್ಲ  ಎಂದಿದ್ದಾರೆ. 

ಈ ಹಿಂದಿನ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಆಗ ಸೋಲು ಅನುಭವಿಸಿದ್ದೆ. ಈ ಸಲ ಟಿಕೆಟ್‌ ಸಿಗುವ ಭರವಸೆ ಸಿಕ್ಕಿತ್ತು. ಹಾಗಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೆ. ಕೊನೆ ಕ್ಷಣದಲ್ಲಿ ಟಿಕೆಟ್ ನೀಡಲಿಲ್ಲ, ಆಯನೂರು  ಮಂಜುನಾಥ್‌ರವರಿಗೆ ಪದವೀಧರ ಕ್ಷೇತ್ರದ ಸಮಸ್ಯೆಗಳ ಅರಿವಿಲ್ಲ ,  ಇದೇ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಇರುವುದರಿಂದ ಚುನಾವಣೆಯಲ್ಲಿ ಆಯ್ಕೆಯಾದರೆ ಸಮಸ್ಯೆಗಳಿಗೆ ಸಮರ್ಥವಾಗಿ ಸ್ಪಂದಿಸುತ್ತೇನೆ ಎಂದಿದ್ಧಾರೆ. 

SP Dinesh, an independent candidate from the Southwest Graduate constituency, said that his contest is not against Congress but against defection, even though he has been expelled from the party. He said that Ayanur Manjunath, who has come to Congress after going to many parties, has been given a party ticket.