ವಂಚಿತ ರಾಷ್ಟ್ರಭಕ್ತರು ಎಂದು ಕರೆದ ಆಯನೂರು ಮಂಜುನಾಥ್‌ ಚುನಾವಣೆ ಬಗ್ಗೆ ಹೇಳಿದ್ದೇನು?

Southwest Graduate Election, Ayanur Manjunath, Shimoga

ವಂಚಿತ ರಾಷ್ಟ್ರಭಕ್ತರು ಎಂದು ಕರೆದ ಆಯನೂರು ಮಂಜುನಾಥ್‌ ಚುನಾವಣೆ ಬಗ್ಗೆ ಹೇಳಿದ್ದೇನು?
Southwest Graduate Election, Ayanur Manjunath, Shimoga

SHIVAMOGGA | MALENADUTODAY NEWS | May 22, 2024  ಮಲೆನಾಡು ಟುಡೆ

 

ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆ ಅಖಾಡ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಮತಪ್ರಚಾರಕ್ಕೆ ತಮ್ಮದೇ ರೀತಿಯಲ್ಲಿ ಪ್ರಯತ್ನಿಸುತ್ತಿರುವ ಅಭ್ಯರ್ಥಿಗಳ ಮಾತುಗಳು ಸಹ ಕ್ಷೇತ್ರದ ಮಹತ್ವಕ್ಕೆ ತಕ್ಕಂತೆ ಬಿಗುವಿನಿಂದ ಕೂಡಿದೆ. ಇನ್ನೂ ಚುನಾವಣೆ ಸಂಬಂಧ ಮಾತನಾಡಿರವು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಎಲ್ಲಾ ಸ್ಪರ್ಧಿಗಳು ಬೆಂಬಲಿಸುತ್ತಿರೋದು ಮತ್ತಷ್ಟು ಬಲ ಬಂದಿದೆ ಎಂದಿದ್ದಾರೆ. 

 

ನನ್ನ ಹೋರಾಟದ ಹಿನ್ನೆಲೆಯಲ್ಲಿ ಮತ ನೀಡಿ ಎಂದು ಕೇಳಿದ್ದೇನೆ, ಎಲ್ಲಾ ಕಡೆ ಉತ್ತಮ ವಾತಾವರಣ ಇದೆ.  ಕೆ ರಘುಪತಿ ಭಟ್ ಸ್ಪರ್ಧೆಯಿಂದ ನನಗೆ ಯಾವುದೇ ತೊಂದರೆ ಆಗಲ್ಲ ಎಂದ ಅವರು ನಮ್ಮ ಮತಗಳು ನಮಗೆ ಬರುತ್ತೆ ಹಾಗಾಗಿ ನಾವು ಗೆಲ್ಲುತ್ತೇವೆ ಎಂದಿದ್ದಾರೆ. 

 

ಪಕ್ಷದ ಸಂಘಟನೆ, ಶಕ್ತಿಯ ಆಧಾರದ ಮೇಲೆ ಗೆಲ್ಲುತ್ತೇವೆ, ಸ್ಪರ್ಧೆಯಲ್ಲಿ ನಾವು ಮೊದಲಿಗರಾಗಿದ್ದೇವೆ, ಉಳಿದವರು ನಮ್ಮ ಹಿಂದುಳಿದಿದ್ದಾರೆ, ವಂಚಿತ ರಾಷ್ಟ್ರಭಕ್ತರು ಅವರ ದುಃಖವನ್ನು ತೋಡಿಕೊಳ್ಳುತ್ತಿದ್ದಾರೆ ಎಂದ ಆಯನೂರು ಮಂಜುನಾಥ್‌   ಕೆಎಸ್‌ ಈಶ್ವರಪ್ಪ ಮತ್ತು ನನ್ನ ಮಧ್ಯೆ ವ್ಯಕ್ತಿಗತ ದ್ವೇಷ ಇಲ್ಲ ಎಂದರು. 

 

ಇದೇ ವೇಳೆ  ನಮ್ಮ ಪಕ್ಷದ ಬಂಡಾಯ ಅಭ್ಯರ್ಥಿ ಜೊತೆ ಮಾತಾಡಿದ್ದೇವೆ, ಪಕ್ಷದ ಕಡೆಯಿಂದ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ. ಮತದಾರರ ಪಟ್ಟಿಯಲ್ಲಿ ಸಾಕಷ್ಟು ದೋಷ ಇದೆ. ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ದೋಷ ಇದೆ .

ಈ ಬಾರಿ ಹೆಚ್ಚಿನ ಮತದಾನ ಆಗುವ ಭರವಸೆ ಇದೆ ಎಂದಿದ್ದಾರೆ.