BREAKING NEWS | ಕೆಪಿಸಿಸಿ ಯಿಂದ ಎಸ್‌ಪಿ ದಿನೇಶ್‌ ಸೇರಿ ನಾಲ್ವರ ಉಚ್ಚಾಟನೆ

BREAKING NEWS | Expulsion of four people including SP Dinesh from KPCC

BREAKING NEWS  | ಕೆಪಿಸಿಸಿ ಯಿಂದ ಎಸ್‌ಪಿ ದಿನೇಶ್‌ ಸೇರಿ ನಾಲ್ವರ ಉಚ್ಚಾಟನೆ
SP Dinesh

SHIVAMOGGA | MALENADUTODAY NEWS | May 23, 2024  ಮಲೆನಾಡು ಟುಡೆ

 

ಶಿವಮೊಗ್ಗ ಬಿಜೆಪಿಯಂತೆಯೇ ಶಿವಮೊಗ್ಗ ಕಾಂಗ್ರೆಸ್‌ನಲ್ಲಿನ ಬಂಡಾಯ ತಾರ್ಕಿಕ ಹಂತ ತಲುಪಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್‌ನಿಂದ ಹಿರಿಯ ಮುಖಂಡ ಎಸ್‌ಪಿ ದಿನೇಶ್‌ ರನ್ನ ಉಚ್ಚಾಟನೆ ಮಾಡಲಾಗಿದೆ. ಇವರು ಸೇರಿ ನಾಲ್ವರನ್ನು ಕೆಪಿಸಿಸಿ ಉಚ್ಚಾಟನೆ ಮಾಡಿದೆ.  ಇದು ಗಂಭೀರ ಕ್ರಮವಾಗಿದ್ದು, ಪಕ್ಷ ನಿಷ್ಟೆಯಿಂದ ಇದ್ದ ಎಸ್‌ಪಿ ದಿನೇಶ್‌ ರನ್ನ ಉಚ್ಚಾಟಿಸಿರುವುದು ಚರ್ಚೆಗೂ ಗ್ರಾಸವಾಗಿದೆ. ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಸ್ಪರ್ಧೆ ಮಾಡಿದ್ದಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಪ್ರಕಟಣೆಯನ್ನು ಸಹ ನೀಡಲಾಗಿದೆ. 

ಪ್ರಸ್ತುತ ನಡೆಯುತ್ತಿರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ನಡೆಯಲಿರುವ ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಈ ಕೆಳಕಾಣಿಸಿದ ಕಾಂಗ್ರೆಸ್ ಮುಖಂಡರುಗಳು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತಾರೆ. ಕಾಂಗ್ರೆಸ್‌ ಪಕ್ಷದ  ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ದಿಸಿ ಕಾಂಗ್ರೆಸ್ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿರುತ್ತಾರೆ. ಇವರ ಆ ನಡೆಯು ಪಕ್ಷ ವಿರೋಧಿ ಚಟುವಟಿಕೆಯಾಗಿರುವ ಹಿನ್ನೆಲೆಯಲ್ಲಿ, ಈ ಕೆಳಕಾಣಿಸಿದ ಎಲ್ಲ ಬಂಡಾಯ ಅಭ್ಯರ್ಥಿಗಳನ್ನು ಮಾನ ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ.

ನೈರುತ್ಯ ಪದವೀಧರರ ಕ್ಷೇತ್ರ  ಎಸ್.ಪಿ.ದಿನೇಶ್, ಶಿವಮೊಗ್ಗ ಬೆಂಗಳೂರು ಪದವೀಧರ ಕ್ಷೇತ್ರ ಫರ್ಡಿನಾಂಡ್ ಲಾರೆನ್ಸ್ ಬೆಂಗಳೂರು ನೈರುತ್ಯ ಶಿಕ್ಷಕರ ಕ್ಷೇತ್ರ  ಬಿ. ಆರ್‌ ನಂಜೇಶ್‌  ಆಗ್ನೇಯ ಶಿಕ್ಷಕರ ಕ್ಷೇತ್ರ ಲೋಕೇಶ್‌ ತಾಳಿಕಟ್ಟೆ  ವಿನೋದ್ ಶಿವರಾಜ್ ಬೆಂಗಳೂರು (ಬ್ಯಾಟರಾಯನಪುರ) ರವರನ್ನ ಉಚ್ಚಾಟನೆ ಮಾಡಲಾಗಿದೆ ಕೆಪಿಸಿ ಕಾರ್ಯಾಧ್ಯಕ್ಷ ಜೆಸಿ ಚಂದ್ರಶೇಖರ್‌ ಆದೇಶ ಮಾಡಿದ್ದಾರೆ.