ದಾರಿ ತಪ್ಪಿದ ಶಾಸಕರ ಗುಟ್ಕಾ ಖರೀದಿ ವಿಡಿಯೋ | ಸಾಗರ ಪೇಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾಯ್ತು ದೂರು

A complaint has been lodged at the Sagar Town Police Station that MLA Belur Gopalakrishna has been insulted through a viral video.

ದಾರಿ ತಪ್ಪಿದ ಶಾಸಕರ ಗುಟ್ಕಾ ಖರೀದಿ ವಿಡಿಯೋ  |  ಸಾಗರ ಪೇಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾಯ್ತು ದೂರು
MLA Belur Gopalakrishna

SHIVAMOGGA | MALENADUTODAY NEWS | May 24, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಶಾಸಕ ಬೇಳೂರು ಗೋಪಾಲಕೃಷ್ಣರವರ ವಿಡಿಯೋವೊಂದನ್ನ ಹರಿಬಿಟ್ಟು ಅವಹೇಳನಕಾರಿ ಸಂದೇಶ ರವಾನೆ ಮಾಡುತ್ತಿರುವ ಆರೋಪ ಸಂಬಂಧ ಪೊಲೀಸ್‌ ಕಂಪ್ಲೆಂಟ್‌  ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಗರ ಟೌನ್‌ ಪೊಲೀಸ್ ಠಾಣೆಗೆ, ಶಿವಮೊಗ್ಗ ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ಸಿ.ಎಂ.ದೂರು ಕೊಟ್ಟಿದ್ದಾಋಎ. 

ಸಾಗರ ಪೇಟೆಯ ಶಿವಮೊಗ್ಗ ರಸ್ತೆಯಲ್ಲಿರುವ ಪ್ರಥಮದರ್ಜೆ ಕಾಲೇಜು ಕಟ್ಟಡದ ಮುಂಭಾಗದಲ್ಲಿನ ಅಂಗಡಿಯೊಂದಕ್ಕೆ ಗ್ರಾಹಕನಂತೆ ಭೇಟಿಕೊಟ್ಟಿದ್ದ ಶಾಸಕರು, ತಂಬಾಕು ಉತ್ಪನ್ನವನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದರು. ಈ ವಿಡಿಯೋವನ್ನ ಖದೀಮಾ ಕಾಂಗ್ರೆಸ್‌ ಎಂಬ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಬೇರೆ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.