ಕಾರಿನಲ್ಲಿ ಟೂಲ್ಸ್‌ ಹಾಕ್ಕೊಂದು ಶಿವಮೊಗ್ಗ-ಹೊನ್ನಾಳಿ-ಶಿಕಾರಿಪುರ ಸುತ್ತಿದ ರೌಡಿಶೀಟರ್ಸ್‌ | ಕಾರಣವೇನು?

Rowdysheeters went around Shimoga-Honnali-Shikaripur in car with tools and Threat to driver | What is the reason?

ಕಾರಿನಲ್ಲಿ ಟೂಲ್ಸ್‌ ಹಾಕ್ಕೊಂದು  ಶಿವಮೊಗ್ಗ-ಹೊನ್ನಾಳಿ-ಶಿಕಾರಿಪುರ ಸುತ್ತಿದ ರೌಡಿಶೀಟರ್ಸ್‌ | ಕಾರಣವೇನು?
Shimoga-Honnali-Shikaripur,Rowdysheeters

SHIVAMOGGA | MALENADUTODAY NEWS | May 23, 2024  ಮಲೆನಾಡು ಟುಡೆ

ಶಿವಮೊಗ್ಗ ತಣ್ಣಗಿಲ್ಲ, ರೌಡಿಗಳ ಹಾವಳಿ ಮುಂದುವರಿದೆ ಎಂಬುದಕ್ಕೆ ಸಾಕ್ಷಿಯಾಗುವಂತಹ ಘಟನೆಯೊಂದು ನಡೆದಿದೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಕೇಸ್‌ ಇದೀಗ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಗೆ ವರ್ಗಾವಣೆ ಗೊಂಡಿದ್ದು, : IPC 1860 (U/s-365,342,392,506,34); ARMS ACT, 1959 (U/s-4,25(B)) ಅಡಿಯಲ್ಲಿ ಕೇಸ್‌ ದಾಖಲಾಗಿದೆ. 

ಪ್ರಕರಣದ ವಿವರ ಹೀಗಿದೆ, ಪ್ರತಾಪ್‌ ಅಲಿಯಾಸ್‌ ಸಾಪಡ್‌ ಬೆಂಗಳೂರು ನಿವಾಸಿ ಜೊತೆ ಸ್ಯಾಡೋ ಅಲಿಯಾಸ್‌ ಸಚಿನ್‌ , ಸುಮನ್‌ ಹಾಗೂ ಶಶಾಂಕ್‌ ಅಲಿಯಾಸ್‌ ಹೂಡ ಎಂಬ ನಾಲ್ವರು ಭದ್ರಾವತಿಯಿಂದ ಹೊನ್ನಾಳಿಗೆ ಬಾಡಿಗೆಗೆ ಕಾರು ಪಡೆದಿದ್ದಾರೆ. ಯಾವ ಕಾರಣಕ್ಕೆ ಅವರು ಕಾರು ಪಡೆದಿದ್ದರು? ಅವರ ಉದ್ದೇಶವೇನಾಗಿತ್ತು ಪೊಲೀಸ್‌ ತನಿಖೆಯಲ್ಲಿ ಗೊತ್ತಾಗಬೇಕಿದೆ.

ಭದ್ರಾವತಿಯಿಂದ ಕಾರು ಬಾಡಿಗೆ ಪಡೆದ ಅವರನ್ನ ಕಾರು ಮಾಲೀಕರು ಶಿವಮೊಗ್ಗದಿಂದ ಡ್ರೈವರ್‌ ನ್ನ ಜೊತೆಗೆ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಸವಿಬೇಕರಿ ಸಮೀಪದಲ್ಲಿ ಕಾರಿನ ಡಿಕ್ಕಿಗೆ ಟೂಲ್ಸ್‌ಗಳನ್ನು (ಮಾರಕಾಸ್ತ್ರಗಳು)  ತುಂಬಿಕೊಂಡ ನಾಲ್ವರು ಅಬ್ಬಲಗೆರೆ ಬಳಿ ಬಾರ್‌ವೊಂದರಲ್ಲಿ ಡ್ರಿಂಕ್ಸ್‌ ಪಡೆದಿದಾರೆ. ಆ ಬಳಿಕ ಡ್ರೈವರ್‌ನ ಮೊಬೈಲ್‌ ಕಿತ್ತುಕೊಂಡು ಸ್ವಿಚ್‌ ಆಫ್‌ ಮಾಡಿದ್ದಾರೆ. ಆತನಿಂದ ಕಾರ್‌ ಕೀ ಪಡೆದು ಡ್ರೈವ್‌ ಮಾಡಿದ ಸಚಿನ್‌, ಹೊನ್ನಾಳಿ ಮಾರ್ಗದಲ್ಲಿ ಡ್ರಿಂಕ್ಸ್‌ ಮಾಡಿದ್ದಾರೆ.

ಅಲ್ಲಿಂದ ಹೊನ್ನಾಳಿಗೆ ಹೋಗಿ ಅಲ್ಲಿಯು ಡ್ರೀಂಕ್ಸ್‌ ಮಾಡಿ ಶಿಕಾರಿಪುರದತ್ತ ಕಾರು ಚಲಾಯಿಸಿದ್ದಾರೆ. ಇದರ ನಡುವೆ ಚೆಕ್‌ಪೋಸ್ಟ್‌ ಒಂದರಲ್ಲಿ ಪೊಲೀಸರು ಕಾರು ಅಡ್ಡಹಾಕಿದರೂ ನಿಲ್ಲಿಸದೇಯೇ ಮುಂದಕ್ಕೆ ಎಸ್ಕೇಪ್‌ ಆಗಿ ದಾರಿಯ ನಡುವೆ ಡ್ರೈವರ್‌ನ್ನ  ಒತ್ತೆಯಾಳಾಗಿ ಇರಿಸಿಕೊಂಡು ಡ್ರಿಂಕ್ಸ್‌ ಮಾಡಿದ್ದಾರೆ. ಅಲ್ಲದೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ್ದಾರೆ. ಇಷ್ಟೊತ್ತಿಗೆ ಕಾರಿನ ಮಾಲೀಕರಿಗೆ ಅನುಮಾನ ಬಂದು ಜಿಪಿಎಸ್‌ ಆಧರಿಸಿ ಇನ್ನೊಂದು ಕಾರಿನಲ್ಲಿ ಕೆಲವರ ಜೊತೆಗೆ ಅಲ್ಲಿಗೆ ಬಂದಿದ್ದಾರೆ.

ಹೀಗೆ ಮಾಲೀಕರು ಬರುತ್ತಲೇ ಡ್ರೈವರ್‌ ಅವರ ಬಳಿ ಓಡಿ ಹೋಗಿ ವಿಷಯ ತಿಳಿಸಿದ್ದಾನೆ. ಅದೆ ಹೊತ್ತಿಗೆ ಇನ್ನೊಂದು ವಾಹನ ಬರುವುದನ್ನ ಗಮನಿಸಿದ ಆರೋಪಿಗಳು ಮಾರಕಾಸ್ತ್ರಗಳನ್ನ ಬಿಟ್ಟು ಪರಾರಿಯಾಗಿದ್ದಾರೆ. ಈ ಘಟನೆ ಬೆನ್ನಲ್ಲೆ ಕಾರು ಮಾಲೀಕರು ಚಾಲಕ ಶಿಕಾರಿಪುರ ಗ್ರಾಮಾಂತರ ಠಾಣೆಗೆ ತೆರಳಿ ದೂರು ಕೊಟ್ಟಿದ್ದು, ಆ ದೂರು ಕೃತ್ಯ ನಡೆದ ಸ್ಥಳ ಆಧರಿಸಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ಗೆ ವರ್ಗಾವಣೆ ಆಗಿದೆ.