ಹರ್ಷ ಫರ್ನ್‌ ಬಳಿಕ ಪೊಲೀಸರ ಕೈಗೆ ಬೈಕ್, ಮಾಲು ಸಮೇತ ಸಿಕ್ಕಿಬಿದ್ದ ವಿನೋಬನಗರ ಮಾಲ್ತೇಶ, ಶರಾವತಿ ನಗರ ರಮೇಶ

Shivamogga police have taken action against drug trafficking

ಹರ್ಷ ಫರ್ನ್‌ ಬಳಿಕ ಪೊಲೀಸರ ಕೈಗೆ ಬೈಕ್, ಮಾಲು ಸಮೇತ ಸಿಕ್ಕಿಬಿದ್ದ  ವಿನೋಬನಗರ ಮಾಲ್ತೇಶ, ಶರಾವತಿ ನಗರ ರಮೇಶ
Shivamogga police

SHIVAMOGGA | MALENADUTODAY NEWS | Jun 15, 2024  ಮಲೆನಾಡು ಟುಡೆ

ಮಾದಕ ವಸ್ತುಗಳ ವಿಚಾರದಲ್ಲಿ ಶಿವಮೊಗ್ಗ ಪೊಲೀಸರು ಮತ್ತೊಂದು ಆಕ್ಷನ್‌ ತೆಗೆದುಕೊಂಡಿದ್ದಾರೆ.  ಶಿವಮೊಗ್ಗ ಟೌನ್ ಹರ್ಷ ಫರ್ನ್ ಹತ್ತಿರ ಪುರುದಾಳು ರಸ್ತೆಯಲ್ಲಿ  ಇಬ್ಬರು ಆಸಾಮಿಗಳು ಬೈಕ್ ನಿಲ್ಲಿಸಿಕೊಂಡು ಗಾಂಜಾ ಮಾರುತ್ತಿದ್ದಾರೆ ಎಂಬ ಮಾಹಿತಿಯೊಂದು ಪೊಲೀಸರಿಗೆ ಲಭ್ಯವಾಗಿದೆ.  ಮಂಜುನಾಥ್ ಬಿ, ಪಿಐ ಮತ್ತು  ಶಿವಪ್ರಸಾದ್, ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆಯ ನೇತೃತ್ವದ ಸಿಬ್ಬಂದಿ ರೇಡ್‌ ನಡೆಸಿದ್ದಾರೆ. 

ಈ ವೇಳೆ 1) ಮಾಲತೇಶ ಜೆ, 32 ವರ್ಷ, ವಿನೋಬನಗರ, ಶಿವಮೊಗ್ಗ ಮತ್ತು 2)  ರಮೇಶ ವಿ, 25  ವರ್ಷ, ಶರಾವತಿ ನಗರ, ಶಿವಮೊಗ್ಗ ಇವರನ್ನು ದಸ್ತಗಿರಿ ಮಾಡಿದ್ದಾರೆ.  ಆರೋಪಿತರಿಂದ ಅಂದಾಜು ಮೌಲ್ಯ 14,000/-  ರೂಗಳ 260 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ  ತುಂಗಾನಗರ ಕ್ರೈಂ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0306/2024  ಕಲಂ 20(b), 8(c) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Shivamogga police have taken action against drug trafficking. Acting on a tip-off, police raided a location near Harsha Fern in Shivamogga Town where two individuals were allegedly selling ganja.