SHIVAMOGGA | Dec 5, 2023 | ಶಿವಮೊಗ್ಗದ ಪ್ರತಿಷ್ಟಿತ ಕಾಲೇಜು ಕಟ್ಟಡದಿಂದ ವಿದ್ಯಾರ್ಥಿನಿಯೊಬ್ಬರು ಬಿದ್ದು ಸಾವನ್ನಪ್ಪಿರುವ ಘಟನೆ ಅಚ್ಚರಿ ಮೂಡಿಸುತ್ತಿದೆ. ಘಟನೆಯ ಬೆನ್ನಲ್ಲೆ ಪೋಷಕರು, ವಿವಿಧ ಸಂಘಟನೆಗಳು ಕಾಲೇಜು ಆವರಣದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಸಾವು
ಇವತ್ತು ಬೆಳಗ್ಗೆ ಶರಾವತಿ ನಗರದಲ್ಲಿರುವ ಕಾಲೇಜೊಂದರಲ್ಲಿ ದ್ವಿತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಚೆನ್ನಗಿರಿ ತಾಲೂಕಿನ ಚೆನ್ನಾಪುರದ ಮೇಘಶ್ರೀ (18) ಕಟ್ಟಡದ ಮೇಲಿನಿಂದ ಬಿದ್ದು, ಮೃತಪಟ್ಟಿದ್ದಾಳೆ. ಘಟನೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಘಟನೆಯನ್ನು ಎರಡು ರೀತಿಯಲ್ಲಿ ಹೇಳಲಾಗುತ್ತಿದ್ದು, ಅಂತಿಮವಾಗಿ ಪೊಲೀಸ್ ಎಫ್ಐಆರ್ ಈ ಬಗ್ಗೆ ಸ್ಪಷ್ಟನೆ ನೀಡಲಿದೆ.
ಇನ್ನೂ ಮಗಳ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು ಕಾಲೇಜಿನ ಆಡಳಿತ ಮಂಡಳಿಯ ನಡವಳಿಕೆಯೇ ಈ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ. ಮೇಲಾಗಿ ಘಟನೆ ಬೆನ್ನಲ್ಲೆ,, ಕಾಲೇಜಿನ ಒಳಗೆ ಪ್ರವೇಶ ನೀಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕೆಲವರು ಕಾಲೇಜು ಗೇಟು ಮುರಿಯಲು ಕೂಡ ಯತ್ನಿಸಿದರು. ಹಾಗೂ ಕಾಲೇಜಿನ ಪ್ಲೇಕ್ಸ್ ಹರಿದು ಆಕ್ರೋಶ ವ್ಯಕ್ತಪಡಿಸಿದರು.ಅಂತಿಮವಾಗಿ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತವಾಯ್ತಾದರೂ ಫೋಷಕರ ಆಕ್ರೋಶ ಕಡಿಮೆಯಾಗಲಿಲ್ಲ.
ಕಾಲೇಜಿಗೆ ಸಂಬಂಧಿಸಿದವರು ವಿದ್ಯಾರ್ಥಿಗಳನ್ನು ನಿಂದಿಸುವುದು, ಸಣ್ಣಪುಟ್ಟ ಕಾರಣಕ್ಕೂ ಬೈಯ್ಯುವುದು, ತರಗತಿಯಿಂದ ಹೊರಕ್ಕೆ ಹಾಕುವುದು ಮಾಡುತ್ತಾರೆ ಅಂತಾ ಪೋಷಕರು ಆರೋಪಿಸಿದ್ದಾರೆ. ಇನ್ನೂ ಹಾಸ್ಟೆಲ್ ನಲ್ಲಿ ಊಟ ಸರಿಯಾಗಿ ಕೊಡುವುದಿಲ್ಲ ಎಂದು ದೂರಿದ್ದಾರೆ. ಈ ಬಗ್ಗೆ ಪ್ರಾಂಶುಪಾಲರಿಗೆ ದೂರು ಕೊಟ್ಟರು ಪ್ರಯೋಜನವಾಗಿಲ್ಲ ಎಂಬುದು ಪೋಷಕರ ಅಳಲು.
ಇನ್ನೂ ಘಟನೆ ಸಂಬಂಧ ಕಾಲೇಜಿನ ಸಿಬ್ಬಂದಿ ಅಥವಾ ಆಡಳಿತ ಮಂಡಳಿ ಯಾವುದೇ ಮಾಹಿತಿ ನೀಡದೇ ಇರುವುದು ಸಹ ಕಾಲೇಜಿನ ಬಳಿ ನೆರದಿದ್ದವರ ಆಕ್ರೋಶಕ್ಕೆ ಕಾರಣವಾಯ್ತು. ವಿದ್ಯಾರ್ಥಿನಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲು ಸಮರ್ಪಕವಾಗಿ ಸಹಕಾರ ಮಾಡಲಿಲ್ಲ ಎಂದು ದೂರಲಾಗಿದೆ. ಈ ಬಗ್ಗೆ ಇನ್ನಷ್ಟೆ ಸ್ಪಷ್ಟನೆ ಸಿಗಬೇಕಿದೆ
