ಅಧಿಕಾರದ ಆಸೆಗೆ ಕಾಂಗ್ರೆಸ್​ನವರನ್ನ ಕರೆದುಕೊಂಡು ಬಂದಿದ್ದೇವೆ! ನಾವು ತಪ್ಪು ಮಾಡಿದ್ದೇವೆ/ ಕೆ.ಎಸ್​.ಈಶ್ವರಪ್ಪ

KARNATAKA NEWS/ ONLINE / Malenadu today/ SHIVAMOGGA / Apr 22, 2023


ಶಿವಮೊಗ್ಗ/   ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂದು ನಾನು ಹೇಳುವುದಿಲ್ಲ. ಬಿಜೆಪಿ ಮೂಲ ಸಿದ್ಧಾಂತ ಉಳಿದಿಲ್ಲ. ಕೆಲವೊಂದು ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಪಕ್ಷಾಂತರವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಹೇಳಿದ್ದಾರೆ. 

ಶಿವಮೊಗ್ಗ ಪ್ರೆಸ್ಟ್​ ಟ್ರಸ್ಟ್​ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಸಂವಾದದಲ್ಲಿ ಕೆ.ಎಸ್​.ಈಶ್ವರಪ್ಪನವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮುಸ್ಲಿಮ್​ ವಿರೋಧಿ ನಾನಲ್ಲ

ಪಕ್ಷಾಂತರಿಗಳು ಅಧಿಕಾರಕ್ಕಾಗಿ ಬಿಜೆಪಿಗೆ ಬರುತ್ತಾರೆ. ಪಕ್ಷಾಂತರ ರಾಜಕಾರಣವನ್ನು ನಾನು ಒಪ್ಪುವುದಿಲ್ಲ. ನಾನು ಮುಸ್ಲಿಂ ಹಾಗು ಕ್ರಿಶ್ವಿಯನ್ ವಿರೋದಿಯಲ್ಲ. ನನಗೆ ಟಿಕೇಟ್ ಸಿಗದಿದ್ದಾಗ ಬಹಳಷ್ಟು ಮುಸ್ಲಿಂ ಮಹಿಳೆಯರು ಮನೆಗೆ ಬಂದು ಕಣ್ಣೀರು ಹಾಕಿದ್ದಾರೆ.  ಎಂದು ಈಶ್ವರಪ್ಪನವರು ಹೇಳಿದ್ದಾರೆ. 

ರಾಜಕಾರಣ ಕೆಲವರಿಗೆ ಫ್ಯಾನ್ಸಿಯಾಗಿದೆ

ರಾಜಕಾರಣ ಬಡವರು, ಸಂಕಷ್ಟದಲ್ಲಿರುವವರಿಗೆ ನೆರವಾಗಲು ಇರುವ ಪ್ರಬಲ ಮಾಧ್ಯಮ ಇದರಿಂದ ಸಮಾಜ ಸೇವೆಗೆ ಅನುಕೂಲವಾಗುತ್ತದೆ. ನಾನು ಒಟ್ಟು 7 ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು 5 ಸಲ ಗೆದ್ದಿದ್ದು 2 ಸಲ ಸೋತಿದ್ದೇನೆ. ಸೋತಾಗಲೂ ನನಗೆ ಪಕ್ಷ ಸಾಕಷ್ಟು ಅವಕಾಶ ನೀಡಿದೆ ಎಂದರು . 

ಮೊನ್ನೆ ನಡೆದ ಘಟನೆ

ರಾಜ್ಯದಲ್ಲಿ ಮೊನ್ನೆ ನಡೆದ ಘಟನೆ ನನ್ನ ಜೀವನದಲ್ಲಿ ಮರೆಯಲಾಗದ್ದು. ನಡ್ಡಾ, ಸಂತೋಷ್ ಮತ್ತು ಧರ್ಮೆಂದ್ರ ಪ್ರಧಾನ್ ಕರೆ ಮಾಡಿ ಚುನಾವಣೆ ರಾಜಕೀಯದಿಂದ ನಿವೃತ್ತಿ ಆಗಲು ಸೂಚಿಸಿದರು. ಅದನ್ನು ಒಪ್ಪಿ ನಿವೃತ್ತಿ ಪತ್ರ ಕಳುಹಿಸಿದೆ. ಆದರೆ ಜಗದೀಶ್ ಶೆಟ್ಟರ್ ಅವರ ಕಾಂಗ್ರೆಸ್‌ ಸೇರಿದ್ದು ನೋವುಂಟು ಮಾಡಿತು. ಅದಕ್ಕಾಗಿ ನಾನು ಅವರಿಗೆ ಬಹಿರಂಗವಾಗಿ  ಪತ್ರ ಬರೆದು ನನ್ನ ಅಭಿಪ್ರಾಯ ತಿಳಿಸಿದ್ದೆ

ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ್ದರು

ನನ್ನ ಈ ನಿಲುವು ಹಲವರಿಗೆ ಆಶ್ಚರ್ಯ ತರಿಸಿತು. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯೇ ನಿನ್ನೆ ಕರೆ ಮಾಡಿ ಅಭಿನಂದಿಸಿದರು. ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ಜೀವನ ಸಾರ್ಥಕವಾಯಿತು ಎಂದು ಅನಿಸಿತು. ಬಿಜೆಪಿಯಲ್ಲಿ ಜಾತಿ ರಾಜಕಾರಣ ಇಲ್ಲವೇ ಇಲ್ಲ. ನಾನು ಮೊದಲು ಸ್ಪರ್ಧೆ ಮಾಡಿದಾಗ ನನ್ನ ಸಮಾಜದ ಮತವಿದ್ದಿದ್ದು ಕೇವಲ 5 ರಿಂದ 6 ಸಾವಿರವಷ್ಟೇ ಇತ್ತು. ಬಿಜೆಪಿ ಬಿಟ್ಟು ಉಳಿದ ಪಕ್ಷದಲ್ಲಿ ಜಾತೀಯತೆ ಇದೆ ಎಂದರು

ರಾಯಣ್ಣ ಬ್ರಿಗೇಡ್​ ಮಾಡಿದ್ದು

ನಾನು ರಾಯಣ್ಣ ಬ್ರಿಗೇಡ್ ಮಾಡಿದ್ದು ಹಿಂದುಳಿದ ವರ್ಗದ ಸಂಘಟನೆಗೆ ಹೊರತು ಅನ್ಯ ಉದ್ದೇಶಕ್ಕೆ ಅಲ್ಲ. ಪಕ್ಷಾಂತರವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಹಿಂದೆ ಕಾಂಗ್ರೆಸ್‌ ಪ್ರಬಲವಾಗಿತ್ತು. ಹಾಗಾಗಿ ಕಾಂಗ್ರೆಸ್‌ ಟಿಕೆಟ್ ಸಿಕ್ಕರೆ ಗೆದ್ದು ಬಿಡುತ್ತೇನೆ ಎಂಬ ಪರಿಸ್ಥಿತಿ ಇತ್ತು..ಆದರೆ ಇಂದು ಬಿಜೆಪಿ ಬೆಳೆದಿದೆ. ಬಿಜೆಪಿಗೆ ಬರುತ್ತಿರುವವರೂ ತತ್ವ ಸಿದ್ಧಾಂತಕ್ಕಿಂತ ಅಧಿಕಾರ, ಸ್ಥಾನ-ಮಾನ ಬಯಸಿ ಬರುತ್ತಿದ್ದಾರೆ. ಬಿಜೆಪಿ ಸಹ ಅಧಿಕಾರ ರಾಜಕಾರಣದಿಂದ ಹೊರತಾಗಿಲ್ಲ ಎಂದರು 

ಬಿಜೆಪಿಯಲ್ಲಿ ಎಲ್ಲಾ ಸರಿಯಿದೆ ಎಂದು ಹೇಳೋದಿಲ್ಲ

ಆಪರೇಷನ್ ಕಮಲದ ಮೂಲಕ ಅತೃಪ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿ ಸೆಳೆಯಿತು. ಬಿಜೆಪಿಯಲ್ಲಿ ಎಲ್ಲಾ ಸರಿಯಿದೆ ಎಂದು ನಾನು ಹೇಳುವುದಿಲ್ಲ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬುದು ನಮ್ಮ ಪಕ್ಷದ ಪದ್ಧತಿ. ಈ ಬಾರಿ ಬಹುತೇಕ ಅದನ್ನು ಪಾಲಿಸಲಾಗಿದೆ ಎಂದರು 

ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್​ 

ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನ ಸುರ್ಜೆವಾಲಾಗೆ ಕಾನೂನಿನ ಬಗ್ಗೆ ತಿಳಿವಳಿಕೆ ಇಲ್ಲ ಅನಿಸುತ್ತಿದೆ. ಆತ್ಮಹತ್ಯೆ ಪ್ರಕರಣದಲ್ಲಿ ನನಗೆ ಕ್ಲೀನ್ ಚೀಟ್ ಸಿಕ್ಕಿದ್ದಕ್ಕೂ ಕಾಂಗ್ರೆಸ್ಸಿಗರು ಆಕ್ಷೇಪಿಸುತ್ತಾರೆ, ಹಾಗೆಯೇ ರಾಹುಲ್ ಗಾಂಧಿಗೆ ಕೋರ್ಟ್ ಶಿಕ್ಷೆ ನೀಡಿದ್ದಕ್ಕೂ ಪ್ರತಿಭಟನೆ ಮಾಡುತ್ತಾರೆ. 

ಹಾಗಾದರೆ ಇವರಿಗೆ ಕೋರ್ಟ್ ತೀರ್ಪಿನ ಮೇಲೆ ನಂಬಿಕೆ ಇಲ್ಲವೇ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರ ಮೇಲೂ ಭ್ರಷ್ಟಾಚಾರದ ಆರೋಪವಿದೆ. ಶಿವಕುಮಾರ್ ಅವರು ಜಾಮೀನಿನ ಮೇಲಿದ್ದಾರೆ. 

ಅವರಿಗೆ ನಮ್ಮ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಪಕ್ಷದ ಆಶಯಗಳಿಗೆ ವಿರುದ್ಧ ಮಾತನಾಡುವ ಆಯನೂರ್ ಮಂಜುನಾಥ್ ಜೊತೆ ಮಾತನಾಡುವ ಅಗತ್ಯ ಕಾಣಲಿಲ್ಲ. 

ಮುಸ್ಲಿಂ ವಿರೋಧಿ ನಾನಲ್ಲ

ನಾನು ಮುಸ್ಲಿಂ ಹಾಗು ಕ್ರಿಶ್ವಿಯನ್ ವಿರೋಧಿಯಲ್ಲ. ನಮ್ಮ ಮನೆಗೆ ಬರುವ ಯಾವುದೇ ಮುಸ್ಲಿಂ ವ್ಯಕ್ತಿಯನ್ನು ನಾನು ಕೆಟ್ಟದ್ದಾಗಿ ನಡೆದುಕೊಂಡಿಲ್ಲ. ಪಾಕಿಸ್ತಾನ್ ಜಿಂದಾಬಾದ್ ಹಿಂದೂಸ್ತಾನ್ ಮುರ್ದಾಬಾದ್ ಎಂದು ಘೋಷಣೆ ಕೂಗಿದರೆ ನಾನು ಸುಮ್ಮನಿರಬೇಕೆ? ರಾಷ್ಟೀಯ ವಿಚಾರಧಾರೆಗಳ ವಿರೋಧಿಸುವವರನ್ನು ನಾನು ವಿರೋಧಿಸುತ್ತೇನೆ

ತ್ರೀಕೊನ ಸ್ಪರ್ಧೇ 

ಶಿವಮೊಗ್ಗ ವಿಧಾನಸಭೆ ಕ್ಷೇತ್ರದಲ್ಲಿ  ಈ ಬಾರಿ ತ್ರಿಕೋನ ಸ್ಪರ್ಧೆ ಇದೆ. ಕಳೆದ ಚುನಾವಣೆಯಲ್ಲಿ  ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇತ್ತು. ಈ ಬಾರಿ ತ್ರಿಕೋನ ಸ್ಪರ್ಧೆ ಇದೆ. ಏಕೆಂದರೆ ಈ ಬಾರಿ  ಜೆಡಿಎಸ್ ಗೆ ಇಬ್ಬರು ಸೇರ್ಪಡೆಯಾಗಿದ್ದಾರೆ. ಬಿಜೆಪಿಯಲ್ಲಿ ಜಾತಿಯಾಧಾರದ ಮೇಲೆ ಸಿಎಂ ಆಗುವುದಿಲ್ಲ. ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್ ನಲ್ಲಿ ಈ ಪರಿಸ್ಥಿತಿ ಇದೆ. ಬಿಜೆಪಿ ಮೂಲ ಸಿದ್ಧಾಂತ ಉಳಿದಿಲ್ಲ. ಕೆಲವೊಂದು ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಪೂರ್ಣ ಬಹುಮತ ಸಿಕ್ಕ ಬಂದರೆ ನಮ್ಮ ಚಿಂತನೆ ಜಾರಿಗೆ ತರಲು ಸಾಧ್ಯವಾಗುತ್ತದೆ

Malenadutoday.com Social media

Tags:Kannadanewspaper, kannadanewslive, kannadanewsonline, kannadanewschannellist, kannadanewspaperlist, kannadanewsnow, kannadanewshunt, kannadanewspaperonline, kannadanewschannel, kannadanewsanchorslist, kannadanewsapp, kannadanewsarticles, malenadutoday, kannadanewsappdownload, kannadanewsall, kannadanewsshivamogga, kannadanewsnow, malenadutoday, malenadu news, malenadu express, malenadu live, #KannadaNews, #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,   #karnatakaassemblyelection2023,

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು