Soraba / ಸೊರಬ ಚುನಾವಣಾ ಕಣದಿಂದ ಹಿಂದೆ ಸರಿದ ನಮೋ ವೇದಿಕೆ ! ಕುಮಾರ್​ ಬಂಗಾರಪ್ಪ್ರರಿಗೆ ತಪ್ಪಿತಾ ಕಂಟಕ!?

Soraba / NaMo platform withdraws from Soraba election fray Did Kumar Bangarappa solve the problem?

Soraba /  ಸೊರಬ ಚುನಾವಣಾ ಕಣದಿಂದ ಹಿಂದೆ ಸರಿದ ನಮೋ ವೇದಿಕೆ ! ಕುಮಾರ್​ ಬಂಗಾರಪ್ಪ್ರರಿಗೆ  ತಪ್ಪಿತಾ ಕಂಟಕ!?

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ-2023 

ಸೊರಬ ವಿಧಾನಸಭಾ ಕ್ಷೇತ್ರದ ಕಣದಿಂದ ಹಿಂದೆ ಸರಿದ  ’ನಮೋ ವೇದಿಕೆ’

ಸೊರಬ ವಿಧಾನಸಭಾ ಚುನಾವಣೆಯಲ್ಲಿ ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ, ಸ್ಪರ್ಧಾ ಕಣದಿಂದ ಹಿಂದೆ ಸರಿದಿರುವುದಾಗಿ ವೇದಿಕೆಯ ಅಧ್ಯಕ್ಷ ಪಾಣಿ ರಾಜಪ್ಪ ಸ್ಪಷ್ಟಪಡಿಸಿದ್ದಾರೆ. 

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

ಕಾರಣವೇನು? 

ಪಟ್ಟಣದ ನಮೋವೇದಿಕೆ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಥಳೀಯ ಶಾಸಕರಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೇಟ್ ನೀಡಬಾರದು ಎಂದು ವೇದಿಕೆಯು ಪಟ್ಟು ಹಿಡಿದಿತ್ತು. ಈ ಕುರಿತು ವೇದಿಕೆಯ ಕಾರ್ಯಕರ್ತರು ಸಮಾವೇಶ, ಬೈಕ್ ರ್‍ಯಾಲಿ ನಡೆಸಿ, ವರಿಷ್ಠರ ಗಮನಕ್ಕೂ ತರಲಾಗಿತ್ತು. 

ಆದರೆ, ಪಕ್ಷ ಪುನಃ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರಿಗೆ ಟಿಕೇಟ್ ನೀಡಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕುಮಾರ್ ಬಂಗಾರಪ್ಪ ಅವರಿಗೆ ಬೆಂಬಲ ಸೂಚಿಸುವುದಿಲ್ಲ ಎಂದರು.

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

ಕುಮಾರ್ ಬಂಗಾರಪ್ಪರಿಗೆ ಬೆಂಬಲವಿಲ್ಲ

ಇತ್ತೀಚೆಗೆ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಅವರು ನಮೋ ವೇದಿಕೆಯ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆಯಲಾಗಿದೆ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಆದರೆ, ಇದು ಅಸಾಧ್ಯವಾದ ಮಾತು. ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸುವುದೇ ನಮೋ ವೇದಿಕೆಯ ಉದ್ದೇಶ. 

ಇನ್ನೂ ಈ ಹಿಂದೆ ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು ಎಂದು ತಿಳಿಸಿದ್ದೆವು. ಆದರೆ, ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ, ಏ. 24ರವರೆಗೆ ಕಾದು ನೋಡುತ್ತೇವೆ. ನಂತರ ವೇದಿಕೆಯ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಾರಾ?

ನಮೋ ವೇದಿಕೆಯವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎನ್ನುವ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು. ಆದರೆ, ವೇದಿಕೆ ಸ್ಪಷ್ಟ ನಿಲುವಿನೊಂದಿಗೆ ಸ್ವಾಭಿಮಾನಿ ಬಿಜೆಪಿ ಕಾರ್ಯಕರ್ತರ ತಂಡವಾಗಿದೆ. 

ಕಾರ್ಯಕರ್ತರು ವಿಚಲಿತರಾಗಿಲ್ಲ, ದೃಢ ಸಂಕಲ್ಪ ಹೊಂದಿದ್ದಾರೆ. ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸುವುದೇ ಮುಖ್ಯ ಗುರಿಯಾಗಿದೆ ವಿನಃ, ಬೇರೆ ಪಕ್ಷವನ್ನು ಬೆಂಬಲಿಸುವುದಲ್ಲ. 

ವೇದಿಕೆಯ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ಕೆಲವರು ತೊಡಗುವ ಸಂಭವವಿದೆ. ಇವಕ್ಕೆ ಕಾರ್ಯಕರ್ತರು ಕಿವಿಗೊಡಬಾರದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಮೋ ವೇದಿಕೆಯ ಪ್ರಮುಖರಾದ ಎ.ಎಲ್. ಅರವಿಂದ್, ಗಜಾನನರಾವ್ ಉಳವಿ, ಅಶೋಕ್ ನಾಯ್ಕ್ ಅಂಡಿಗೆ, ಮಂಜಣ್ಣ ನೇರಲಗಿ, ಮಲ್ಲಿಕಾರ್ಜುನ ಗುತ್ತೇರ್, ಡಿ. ಶಿವಯೋಗಿ, ಅರುಣ್ ಪುಟ್ಟನಹಳ್ಳಿ, ಸಂಜೀವ್ ಆಚಾರ್, ಚಂದ್ರಪ್ಪ ಬರಗಿ, ದಯಾನಂದಗೌಡ, ಮೋಹನ್ ಹಿರೇಶಕುನ, ಸಂಜೀವ್ ಆಚಾರ್, ಮೋಹನ್ ಹಿರೇಶಕುನ, ಹರೀಶ್, ರಜನಿ ಸೇರಿದಂತೆ ಇತರರಿದ್ದರು.

ಇದನ್ನು ಸಹ ಓದಿ

Read /BREAKING /  ಅಭ್ಯರ್ಥಿ ಕುತೂಹಲದ ನಡುವೆ ಶಿವಮೊಗ್ಗ ಕ್ಕೆ ಬಂದ ಬಿಎಸ್​ವೈ !   ಘೋಷಣೆಯಾಗುತ್ತಾ ಹೆಸರು!  ಹೆಲಿಪ್ಯಾಡ್​ಗೆ  ನೀತಿ ಸಂಹಿತೆಯ ಅಧಿಕಾರಿಗಳ  ಎಂಟ್ರಿ!

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere, firstnews,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga, #ShivamoggaNews ,#Shimoga, #MalnadNews #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,  #Kannada_News,  #karnatakaassemblyelection2023,  #KarnatakaPolitics ,#KarnatakaLatestnews, #Karanataka, #election2023 ,#karnatakaelections2023 #BJPGovernment, #bjpkarnatakanews, #bjpvscongress, #BYVijayendra, #BasavarajBommai #Lakshmansavadi, #JagadishShettar, #Modi, #AmitShah, #JPNadda,