Karnataka election/ ಸೊರಬದಲ್ಲಿ ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

Karnataka election/ How much property do kumar and madhu bangarappa own Does Belur Gopalakrishna not own his own land? How much assets do the Aam Aadmi own?

Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!
Karnataka election/ ಸೊರಬದಲ್ಲಿ ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ 2023

ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಚುನಾವಣಾ ಅಖಾಡದಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿದೆ.ಅದರಲ್ಲಿ ಅಭ್ಯರ್ಥಿಗಳ ಆಸ್ತಿ ವಿವರಗಳು ವಿಶೇಷ ಕುತೂಹಲ ಮೂಡಿಸುತ್ತಿದೆ. ನಿನ್ನೆ  ಸೋಮವಾರ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ,  ಮಧುಬಂಗಾರಪ್ಪರಿಗೆ ಆಸ್ತಿಯ ಅರ್ಧದಷ್ಟು ಸಾಲವಿದೆ.

ಬೇಳೂರು ಗೋಪಾಲಕೃಷ್ಣರಿಗೆ ಆಸ್ತಿಯೂ ಇಲ್ಲ ಮನೆಯೂ ಇಲ್ಲ. ಬಿಜೆಪಿಯ ವಿಜಯೇಂದ್ರ ಅವರು 126 ಕೋಟಿ ರೂ.ಆಸ್ತಿಯ ಒಡೆಯರಾಗಿದ್ದರೆ, ಕುಮಾರ್ ಬಂಗಾರಪ್ಪ 65 ಕೋಟಿ ರೂ.ಆಸ್ತಿ ಘೋಷಣೆ ಮಾಡಿದ್ದಾರೆ.

Read/ Shivamogga bjp ticket/ಶಿವಮೊಗ್ಗ ಬಿಜೆಪಿ ಟಿಕೆಟ್​  ಅವರ್​ ಬಿಟ್ಟು ಇವರ್​ ಬಿಟ್ಟು ಇವರಿಗಾ? ಕತೂಹಲ ಮೂಡಿಸುತ್ತಿದೆ  ಕೆ.ಎಸ್​.ಈಶ್ವರಪ್ಪರವರ ನಡೆ!

ಮಧು ಆಸ್ತಿಯ ಅರ್ಧದಷ್ಟು ಸಾಲ

ಮಾಜಿ ಶಾಸಕ ಮಧು ಬಂಗಾರಪ್ಪ ಕುಟುಂಬ 69.50 ಕೋಟಿ ರೂ. ಆಸ್ತಿ ಹೊಂದಿದ್ದು 2018ರ ಬಳಿಕ ಇಲ್ಲಿವರೆಗೆ 3 ಕೋಟಿ ರೂ. ಆಸ್ತಿ ಹೆಚ್ಚಳವಾಗಿದೆ. ಹಿಂದಿನ ಚುನಾವಣೆಯಲ್ಲಿ 66 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು. ಆದರೆ, ಇವರ ಸಾಲದ ಮೊತ್ತ 16.38 ಕೋಟಿ ರೂ.ನಿಂದ 26 ಕೋಟಿ ರೂ.ಗಳಿಗೆ ಹೆಚ್ಚಾಗಿದೆ.

  1. ಒಟ್ಟು ಆಸ್ತಿ 69.50 ಕೋಟಿ ರೂ.

  2. ನಗದು, ವಾಹನ, ಚಿನ್ನಾಭರಣ ಚರಾಸ್ತಿ 27.80 ಕೋಟಿ ರೂ.

  3. ಮನೆ, ನಿವೇಶನ, ತೋಟ, ಜಮೀನು ಸೇರಿ ಸ್ಥಿರಾಸ್ತಿ 41.50 ಕೋಟಿ ರೂ.

  4. ಇವರ ಬಳಿ ಇರುವ ನಗದು 1.37 ಕೋಟಿ ರೂ.

  5. ಮೂರು ಮುಕ್ಕಾಲು ಕೆಜಿ ಚಿನ್ನಾಭರಣ, 25 ಕೆಜಿ ಬೆಳ್ಳಿ ಆಭರಣಗಳನ್ನು ಹೊಂದಿದ್ದಾರೆ

Read / ಕುಡಿಯುವ ನೀರು ಪೂರೈಕೆಗೂ ಡಿಸಿ ಪರ್ಮಿಶನ್​ ಬೇಕಾ!? ಸಹಕಾರಿ ಸಾಲನೂ ಸಿಗೋದಿಲ್ವಾ? ಸೀಜ್ ಆದ ದುಡ್ಡು ವಾಪ್ ಬರಲ್ವಾ?  SP -DC  ಕೊಟ್ಟ ಉತ್ತರವೇನು?

ದ್ವಿಗುಣವಾದ ಕುಮಾರ್‌ ಬಂಗಾರಪ್ಪರವರ ಆಸ್ತಿ

ಶಾಸಕ ಕುಮಾರ್ ಬಂಗಾರಪ್ಪ ಅವರ ಆಸ್ತಿ ಕಳೆದ ಐದು ವರ್ಷದಲ್ಲಿ ದ್ವಿಗುಣಗೊಂಡಿದ್ದು 65.30 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. 2018ರಲ್ಲಿ ಇವರಿಗೆ 27.68 ಕೋಟಿ ರೂ. ಆಸ್ತಿ ಇತ್ತು. ಅವರಿಗೆ ಬ್ಯಾಂಕ್‌ನಲ್ಲಿ 1.12 ಕೋಟಿ ರೂ. ಸಾಲವಿದೆ. 

  1. ಒಟ್ಟು ಆಸ್ತಿ 65.30 ಕೋಟಿ ರೂ.

  2. ನಗದು, ಕಾರು, ಚಿನ್ನಾಭರಣ ಸೇರಿ ಚರಾಸ್ತಿ 3 ಕೋಟಿ ರೂ.

  3. ಮನೆ, ನಿವೇಶನ, ತೋಟ, ಜಮೀನು ಸೇರಿ ಸ್ಥಿರಾಸ್ತಿ 62.29 ಕೋಟಿ ರೂ.

Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್​ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್​ ಯಾರದ್ದು ಅಂದ್ರು ನೋಡಿ!

ಬೇಳೂರು ಗೋಪಾಲಕೃಷ್ಣರ ಆಸ್ತಿಯೆಷ್ಟು ಗೊತ್ತಾ

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ 4.26 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಆದರೆ, ಇವರ ಹೆಸರಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. ಪತ್ನಿ ಹೆಸರಲ್ಲಿ ಮಾತ್ರ ಬೆಂಗಳೂರು ಆರ್.ಟಿ.ನಗರದಲ್ಲಿ ಮನೆ, ಉಡುಪಿಯಲ್ಲಿ ನಿವೇಶನವಿದೆ. 2013ರಲ್ಲಿ ಇವರು 1.63 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು.

  1. ಒಟ್ಟು ಆಸ್ತಿ 4.76 ಕೋಟಿ ರೂ.

  2. ಚರಾಸ್ತಿ 3.26 ಕೋಟಿ ರೂ.

  3. ಸ್ಥಿರಾಸ್ತಿ 1.50 ಕೋಟಿ ರೂ.

  4. ಇವರ ಹೆಸರಲ್ಲಿ ಕಾರು ಬಿಟ್ಟರೆ ಬೇರೇನೂ ಇಲ್ಲ

  5. ಆಭರಣ ಪ್ರಿಯರಾದರೂ ಕೇವಲ 120 ಗ್ರಾಂ ಚಿನ್ನಾಭರಣವಿದೆ

Read / ಶಿವಮೊಗ್ಗ ಬಿಜೆಪಿ ಟಿಕೆಟ್​! ಬರ್ತಿದೆ...ಬರ್ತಿದೆ..ಬರ್ತಿದೆ! ರೋಚಕ ಟ್ವಿಸ್ಟ್​ ಗೆ ಸಾಕ್ಷಿಯಾಗುತ್ತಾ ಕ್ಷೇತ್ರ! ಜೆಡಿಎಸ್​ ಟಿಕೆಟ್​ಗೆ​ ಇಬ್ಬಿಬ್ಬರ ಟವಲ್​! ಬರ್ತಾರಾ ಜೆಪಿ ನಡ್ಡಾ?

ವಿಜಯೇಂದ್ರ 126 ಕೋಟಿ ರೂ. ಆಸ್ತಿಗೆ ಒಡೆಯ

ಮೊದಲ ಬಾರಿಗೆ ಚುನಾವಣೆ ರಾಜಕೀಯಕ್ಕೆ ಇಳಿದಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ 126.16ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. 56 ಕೋಟಿ ರೂ. ಚರಾಸ್ತಿ, 70 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದು ಸಾಲದ ಬಾಬತ್ತೆ 35 ಕೋಟಿ ರೂ. ಇದೆ. 

  1. ಚರಾಸ್ತಿ 56.06 ಕೋಟಿ ರೂ.

  2. ಸ್ಥಿರಾಸ್ತಿ 70 ಕೋಟಿ ರೂ.

  3. ಪತ್ನಿಗೆ ಕೊಟ್ಟ ಸಾಲ 15 ಕೋಟಿ ರೂ.

  4. ಅಣ್ಣ ಸಂಸದ ಬಿ.ವೈ.ರಾಘವೇಂದ್ರಗೆ ಕೊಡಬೇಕಾದ ಸಾಲ 85.48 ಲಕ್ಷ ರೂ.

  5. ತೀರಿಸಬೇಕಾದ ಒಟ್ಟು ಸಾಲ 35 ಕೋಟಿ ರೂ.

ಆಮ್ ಆದ್ಮಿ ದಿವಾಕರ್‌ಗೆ 12 ಕೋಟಿ ರೂ.ಆಸ್ತಿ

ಸಾಗರ ಕ್ಷೇತ್ರದ ಆಪ್ ಅಭ್ಯರ್ಥಿ ಹೈಕೋರ್ಟ್ ವಕೀಲ ಕೆ.ದಿವಾಕರ್ ಅವರು 12.09 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ 29.39 ಲಕ್ಷ ರೂ. ಸಾಲವಿದೆ.

ರಾಜಾರಾಂ 2.42 ಕೋಟಿ

ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಮ್ ಅವರು 2.42 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಬ್ಯಾಂಕ್‌ನಲ್ಲಿ 75 ಲಕ್ಷ ರೂ. ಸಾಲ ಮಾಡಿದ್ದಾರೆ.

Read / 2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್

ಇದನ್ನು ಸಹ ಓದಿ

Read /ಬಿಜೆಪಿ ಪಕ್ಷಾಂತರ/  ಬಹಿರಂಗ ಪತ್ರ ಬರೆದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ 

Read /BREAKIN NEWS/  ಜೆಡಿಎಸ್​ನಿಂದ ಸ್ಪರ್ಧೆ ಮಾಡುತ್ತಾರಾ ಆಯನೂರು ಮಂಜುನಾಥ್​ ! ಮಾತುಕತೆ ನಡೆದಿದ್ಯಾ!? 

Read / ಕುಡಿಯುವ ನೀರು ಪೂರೈಕೆಗೂ ಡಿಸಿ ಪರ್ಮಿಶನ್​ ಬೇಕಾ!? ಸಹಕಾರಿ ಸಾಲನೂ ಸಿಗೋದಿಲ್ವಾ? ಸೀಜ್ ಆದ ದುಡ್ಡು ವಾಪ್ ಬರಲ್ವಾ?  SP -DC  ಕೊಟ್ಟ ಉತ್ತರವೇನು?

Read / 2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್

Read / BREAKING NEWS /  ಭಾರತೀಯ ಜನತಾ ಪಕ್ಷದ ಮೂರನೇ ಪಟ್ಟಿ ರಿಲೀಸ್​! ಶಿವಮೊಗ್ಗ ನಗರ ಕ್ಷೇತ್ರದ  ಕಥೆ ಇನ್ನಷ್ಟು ನಿಗೂಢ 

Read / ಶಿವಮೊಗ್ಗ ಬಿಜೆಪಿ ಟಿಕೆಟ್​! ಬರ್ತಿದೆ...ಬರ್ತಿದೆ..ಬರ್ತಿದೆ! ರೋಚಕ ಟ್ವಿಸ್ಟ್​ ಗೆ ಸಾಕ್ಷಿಯಾಗುತ್ತಾ ಕ್ಷೇತ್ರ! ಜೆಡಿಎಸ್​ ಟಿಕೆಟ್​ಗೆ​ ಇಬ್ಬಿಬ್ಬರ ಟವಲ್​! ಬರ್ತಾರಾ ಜೆಪಿ ನಡ್ಡಾ?

Read / ಪತ್ನಿಗೆ ಸಾಲ, ಅಣ್ಣನಿಂದ ಲೋನ್/ ಸ್ವಂತ ಕಾರು ಹೊಂದಿಲ್ಲದ ಬಿ.ವೈ.ವಿಜಯೇಂದ್ರರ ಆಸ್ತಿ ಎಷ್ಟು ಗೊತ್ತಾ?

Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್​ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್​ ಯಾರದ್ದು ಅಂದ್ರು ನೋಡಿ!

Read/ Shivamogga bjp ticket/ಶಿವಮೊಗ್ಗ ಬಿಜೆಪಿ ಟಿಕೆಟ್​  ಅವರ್​ ಬಿಟ್ಟು ಇವರ್​ ಬಿಟ್ಟು ಇವರಿಗಾ? ಕತೂಹಲ ಮೂಡಿಸುತ್ತಿದೆ  ಕೆ.ಎಸ್​.ಈಶ್ವರಪ್ಪರವರ ನಡೆ!



ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  #karnatakaassemblyelection2023  #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda