Karnataka election / ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ಮತದಾನವಾಗಿದೆ! ಯಾವ್ಯಾ ವ ಕ್ಷೇತ್ರದಲ್ಲಿ ಆದ ಶೇಕಡಾವಾರು ಮತಗಳೆಷ್ಟು? ವಿವರ ಇಲ್ಲಿದೆ

Karnataka election / What is the percentage of votes polled in Shivamogga district? Here's the details

Karnataka election /  ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ಮತದಾನವಾಗಿದೆ! ಯಾವ್ಯಾ ವ ಕ್ಷೇತ್ರದಲ್ಲಿ ಆದ ಶೇಕಡಾವಾರು ಮತಗಳೆಷ್ಟು? ವಿವರ ಇಲ್ಲಿದೆ

KARNATAKA NEWS/ ONLINE / Malenadu today/ May 10, 2023 GOOGLE NEWS 

ಶಿವಮೊಗ್ಗ/ ವಿಧಾನಸಭಾ ಚುನಾವಣೆಯ ಮತದಾನ ಶಿವಮೊಗ್ಗ ಜಿಲ್ಲೆಯಲ್ಲಿ ಸುಗಮವಾಗಿ ಸಾಗುತ್ತಿದೆ. ಬಿಎಸ್ ಯಡಿಯೂರಪ್ಪನವರ ಮೊಮ್ಮಗ ತಮ್ಮ ಮೊದಲ ವೋಟನ್ನು ಚಲಾಯಿಸಿದ್ದಾರೆ. ಈ ಬಗ್ಗೆ ತಮ್ಮ ಅನುಭವನ್ನು ಹಂಚಿಕೊಂಡ ಅವರು, ಮೊದಲ ಮತದಾನ ಖುಷಿ ಕೊಡುತ್ತಿದೆ ಎಂದಿದ್ಧಾರೆ. 

ಶಿಕಾರಿಪುರದಲ್ಲಿ ಬಿಎಸ್ ವೈ ಹಾಗೂ ಅವರ ಕುಟುಂಬಸ್ಥರು, ಎದುರಾಳಿ ಅಭ್ಯರ್ಥಿ ನಾಗರಾಜ್​ ಗೌಡ, ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್​, ಶಿವಮೊಗ್ಗದಲ್ಲಿ ಚೆನ್ನಬಸಪ್ಪ ಸೇರಿದಂತೆ ಹಲವರು ಮತ ಚಲಾಯಿಸಿದ್ದಾರೆ.  

11 ಗಂಟೆಗೆ ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರ ಶಿವಮೊಗ್ಗದಲ್ಲಿ ಶೇಕಡಾ 22.75 ರಷ್ಟು ಮತದಾನವಾಗಿದೆ. ಸಾಗರದಲ್ಲಿ ಅತಿಹೆಚ್ಚು, 26.66% ಮತದಾನವಾಗಿದೆ. ಭದ್ರಾವತಿಯಲ್ಲಿ 21.92% ಶಿಕಾರಿಪುರದಲ್ಲಿ 22.01, ಶಿವಮೊಗ್ಗದಲ್ಲಿ 23.62 ರಷ್ಟು ಮತದಾನವಾಗಿದೆ. ಇನ್ನೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 23.49 , ಸೊರಬದಲ್ಲಿ  21.00 ,ತೀರ್ಥಹಳ್ಳಿಯಲ್ಲಿ 20.00 ರಷ್ಟು ಮತದಾನವಾಗಿದೆ. ವಿಶೇಷ ಅಂದರೆ, ಶಿಕಾರಿಪುರದ ಸಾಲೂರಿನ ಮತಗಟ್ಟೆಯಲ್ಲಿ ಹನ್ನೊಂದು ಗಂಟೆಗೆ ಅವಧಿ ಬರೋಬ್ಬರಿ 30 ಪರ್ಸೆಂಟ್ ಮತವಾಗಿದೆ. 

ಇವಿಎಂ ಬಗ್ಗೆ ಸಿಗುವ ಈ ಖಾತರಿ ದಾಖಲೆ ಬಗ್ಗೆ ಗೊತ್ತಾ? ಟೆಸ್ಟೆಡ್ ವೋಟ್​, ಚಾಲೆಂಜ್​ ​ ವೋಟ್, ಟೆಂಡರ್ಡ್​ ವೋಟ್​  ಅಂದರೆ ಗೊತ್ತಾ? ಇವೆಷ್ಟು ಮುಖ್ಯ ಓದಿ ನೋಡಿ 

ಮತದಾನಕ್ಕೆ ಅಂತಾ ಮತಗಟ್ಟೆಗೆ ಹೋಗುವಾಗ ಮತಗಟ್ಟೆಯಲ್ಲಿ ನಡೆಯುವ ಪ್ರಕ್ರಿಯೆಗಳು ಏನೇನು ಅನ್ನುವದನ್ನ ತಿಳಿದುಕೊಂಡರೆ ಅನುಮಾನಗಳಿಗೆ ಆಸ್ಪದವೇ ಇರೋದಿಲ್ಲ .

ಈ ಸಂಬಂಧ ಮತದಾನಕ್ಕೆ ಸಂಬಂಧಿಸಿದ ಇಂಟ್ರಸ್ಟಿಂಗ್ ಮಾಹಿತಿಗಳನ್ನು ಮಲೆನಾಡು ಟುಡೇ ನಿಮ್ಮ ಮುಂದೆ ಇಡುತ್ತಿದೆ.

ಕ್ಷಿಪ್ರ ಕಾರ್ಯಾಚರಣೆ/  ಶಿವಮೊಗ್ಗದ ಇಬ್ಬರು ಸೇರಿದಂತೆ ರಾಜ್ಯ ನಾಲ್ವರು ವಿದ್ಯಾರ್ಥಿಗಳು ಮಣಿಪುರದಲ್ಲಿ ಸೇಫ್​  

ಅಧಿಕಾರಿಗಳು ತಪ್ಪಿಸಿಕೊಳ್ಳುವಂತಿಲ್ಲ

ಯಾವುದೇ ಅಧಿಕಾರಿಯನ್ನು ಚುನಾವಣೆ ಕರ್ತವ್ಯಕ್ಕೆ ಆಯ್ಕೆ ಮಾಡುವುದು ಕಾನೂನು ಬದ್ಧವಾಗಿರುತ್ತದೆ. ಹಾಗಾಗಿ ಈ ಕರ್ತವ್ಯವದಿಂದ ತಪ್ಪಿಸಿಕೊಳ್ಳುವಂತಿರುವುವುದಿಲ್ಲ. 

ಮತಗಟ್ಟೆಯಲ್ಲಿ ಯಾರ್ಯಾರು ಇರುತ್ತಾರೆ

ಒಂದು ಮತಗಟ್ಟೆಯಲ್ಲಿ ಪಿಆರ್​ಒ, ಎಪಿಆರ್​ಒ ಹಾಗೂ ಪೊಲೀಂಗ್ ಆಫಿಸರ್ 1 ಪೊಲೀಸ್ ಆಫಿಸರ್​ 2 ಎಂಬ ಅಧಿಕಾರಿಗಳು ಇರುತ್ತಾರೆ. ಇವರಲ್ಲದೇ ಅಟೆಂಡರ್​, ಮೈಕ್ರೋ ಆಫಿಸರ್​ಗಳು ಇರುತ್ತಾರೆ. ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಇರುತ್ತಾರೆ. 

ಮಸ್ಟರಿಂಗ್ ಎಂದರೇನು? 

ಮಸ್ಟರಿಂಗ್​ ಪ್ರಕ್ರಿಯೆ ನಡೆಯಿತು ಎಂದು ಸುಲಭವಾಗಿ ಹೇಳಬಹುದು ಆದರೆ, ಮಸ್ಟರಿಂಗ್ ಎಂದರೇ ಏನು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಚುನಾವಣೆ ಕರ್ತವ್ಯಕ್ಕೆ ಇಂತಿಷ್ಟು ಮಂದಿ ಇಲ್ಲಿಲ್ಲಿಗೆ ಎಂದು ನಿಗದಿ ಪಡಿಸಿ, ಅವರ ಹುದ್ದೆಗೆ ತಕ್ಕಂತೆ ಎಲೆಕ್ಷನ್​ ಪ್ರಕ್ರಿಯೆಯಲ್ಲಿನ ಸ್ಥಾನ ಮಾನವನ್ನು ಒದಗಿಸಲಾಗುತ್ತದೆ.ಪೊಲೀಂಗ್ ಆಫೀಸರ್ನಿಂದ ಹಿಡಿದು ಅಟೆಂಡರ್​ರವರೆಗು ಇವರಿವರು ಇಂತಹ ಕಡೆ ಎಂದು ತೀರ್ಮಾನಿಸಲಾಗಿರುತ್ತದೆ. ಅಲ್ಲದೆ ಅವರಿಗೆ ತಕ್ಕುದಾದ ಟ್ರೈನಿಂಗ್ ಮತ್ತು ಚುನಾವಣಾ ಆಯೋಗದ ರೀತಿನೀತಿಯಲ್ಲಾದ ಬದಲಾವಣೆಯನ್ನು ವಿವರಿಸಿ ಹೇಳಲಾಗಿರುತ್ತದೆ. ಹೀಗೆ ತರಬೇತಿ ಪಡೆದ ಅಧಿಕಾರಿ, ನೌಕರ, ಸಿಬ್ಬಂದಿಗಳನ್ನು ಇವತ್ತು ಒಂದು ಕಡೆಯಲ್ಲಿ ಕರೆಸಲಾಗುತ್ತದೆ. ಅಲ್ಲಿ ಚುನಾವಣಾ ಪ್ರಕ್ರಿಯೆಗೆ ಅಗತ್ಯವಿರುವ ಇವಿಎಂ , ಕಂಟ್ರೋಲ್​ ಯುನಿಟ್​, ವಿವಿ ಪ್ಯಾಟ್​  ಹಾಗೂ ಟೆಂಡರ್​ ಫಾರಮ್​, ಚಾಲೆಂಜ್ ಫಾರಮ್, ಟೆಸ್ಟ್ ಫಾರಮ್​ ಹೀಗೆ ಹಲವಾರು ಪ್ರಕ್ರಿಯೆಯ ಫಾರಂ ಜೊತೆಗೆ ಇಂಕು, ಸ್ಕೇಲು, ಪೆನ್ನು ಇತ್ಯಾದಿಗಳನ್ನ ಕೊಟ್ಟು ಅವರವರಿಗೆ ಜವಾಬ್ದಾರಿ ನೀಡಿರುವ ಬೂತ್​ಗಳಿಗೆ ನಿಗದಿತ ವಾಹನಗಳಲ್ಲಿ ಕಳುಹಿಸಿಕೊಡಲಾಗುತ್ತದೆ. ಇದನ್ನ ಮಸ್ಟರಿಂಗ್ ಎಂದು ಕರೆಯುತ್ತಾರೆ. ಚುನಾವಣೆ ಮುಗಿದ ಬಳಿಕ, ಕೊಟ್ಟಿದ್ದನ್ನೆಲ್ಲಾ ಲೆಕ್ಕ ತಪ್ಪದೆ ಲಿಸ್ಟ್​ನಲ್ಲಿ ಟಿಕ್ ಮಾಡಿ ವಾಪಸ್ ಕೊಡುವುದನ್ನ ಡಿ ಮಸ್ಟರಿಂಗ್​ ಎನ್ನಲಾಗುತ್ತದೆ. '

ಇವಿಎಂ ಜೊತೆಗೆ ಏನೇನು ಇರುತ್ತದೆ

ಇವಿಎಂ ಜೊತೆಗೆ ಕಂಟ್ರೋಲ್​ ಯುನಿಟ್​, ವಿವಿ ಪ್ಯಾಟ್, ಬ್ಯಾಲೆಟ್ ಯುನಿಟ್ ಗಳು ಇರುತ್ತದೆ. ಈ ಮೊದಲು ಕಂಟ್ರೋಲ್​ ಯುನಿಟ್ ಹಾಗೂ ಬ್ಯಾಲೆಟ್ ಯುನಿಟ್ ಮಾತ್ರ ಇರುತ್ತಿತ್ತು. ಇದರ ಜೊತೆ ವಿವಿ ಪ್ಯಾಟ್​ ಕೂಡ ಇವಿಎಂನ ಜೊತೆಗೆ ಇರುತ್ತದೆ. ವಿವಿಪ್ಯಾಟ್​ ಬಗ್ಗೆ ಬಹಳ ಮುಖ್ಯವಾದ ಸಂಗತಿಯನ್ನು ನೀವು ತಿಳಿದುಕೊಳ್ಳಬೇಕು!

ವಿವಿಪ್ಯಾಟ್ ಇರೋದೇಕೆ? ಅದರಿಂದ ಏನಾಗುತ್ತೆ? 

ಇವಿಎಂ ಬಗ್ಗೆ ಇರುವ ಅನುಮಾನದ ಆರೋಪಗಳ ಎಲ್ಲರಿಗೂ ಗೊತ್ತೆ ಇದೆ. ಆದರೆ ಚುನಾವಣಾ ಆಯೋಗ ಮಾತ್ರ ಪ್ರಾಮಾಣಿಕ ಹಾಗೂ ಪಾರದರ್ಶಕ ಮತದಾನಕ್ಕೆ ಒತ್ತು ನೀಡುತ್ತಿದೆ. ಅದಕ್ಕಾಗಿ ಇವಿಎಂ ಜೊತೆಗೆ ವಿವಿಪ್ಯಾಟ್​ನ್ನ ಜೊಡಿಸಿ ತಂತ್ರಗಾರಿಕೆಯನ್ನು ಅಪ್​ಡೇಟ್ ಮಾಡಿದೆ  ಎಲೆಕ್ಷನ್​ ಕಮಿಷನ್​. ಇಷ್ಟಕ್ಕೂ ವಿವಿಪ್ಯಾಟ್ ಏನು ಕೆಲಸ ಮಾಡುತ್ತೆ ಎಂದು ನೋಡುವುದಾದರೆ, ಮತದಾರ ತಾನ ಚಲಾಯಿಸಿದ ಮತ, ತಾನು ಬಯಸಿದವರಿಗೆ ಬಿದ್ದಿದ್ಯಾ ಎಂಬುದನ್ನ ವಿವಿಪ್ಯಾಟ್​ನಲ್ಲಿ ಆತ ನೋಡಬಹುದಾಗಿದೆ. ಇದು ಆತನ ಖಾತರಿಗಾಗಿ ಚುನಾವಣಾ ಆಯೋಗ ಒದಗಿಸಿರುವ ಸೌಲಭ್ಯವಾಗಿದೆ. 

ಅಣಕು ಮತದಾನ ನಡೆಯುತ್ತೆ ಗೊತ್ತಾ? 

ಚುನಾವಣಾ ಪ್ರಕ್ರಿಯೆಯಲ್ಲಿ ನಾವು ಹೋಗುತ್ತೆವೆ ವೋಟು ಮಾಡುತ್ತೇವೆ ಬರುತ್ತೇವೆ ಆದರೆ ನಾವು ಹಾಕುವ ಮತದಾನದ ಕೇಂದ್ರದಲ್ಲಿ ನಮ್ಮ ಮತದಾನದ ಹಕ್ಕು ಚಲಾವಣೆಗೆ ಎಷ್ಟೆಲ್ಲಾ ಎಚ್ಚರಿಕೆ ವಹಿಸಲಾಗಿರುತ್ತದೆ ಎಂಬುದನ್ನ ಯಾರು ಗಮನಿಸಿರೋದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮತಗಟ್ಟೆಯಲ್ಲಿ ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗುವುದಕ್ಕೂ ಮೊದಲೇ ಅಣಕು ಮತದಾನ ನಡೆದಿರುತ್ತದೆ ಎಂಬ ವಿಚಾರ ನಿಮಗೆ ಗೊತ್ತಿದ್ಯಾ? ಆ ಬಗ್ಗೆ ಹೇಳುತ್ತೇವೆ ಕೇಳಿ. ಚುನಾವಣಾ ಆಯೋಗದ ವ್ಯವಸ್ಥೆಯಂತೆ. ಪ್ರತಿ ಮತಗಟ್ಟೆಯಲ್ಲಿಯು, ಅಸಲಿ ಮತದಾನ ನಡೆಯುವುದಕ್ಕೂ ಮೊದಲು ಅಣಕು ಮತದಾನ ನಡೆಯಬೇಕು. ಅದರ ಬಗ್ಗೆ ಚುನಾವಣಾ ಏಜೆಂಟರುಗಳಿಗೆ ಹಿಂದಿನ ದಿನವೇ ಮಾಹಿತಿ ನೀಡಿರಬೇಕು ಮತ್ತು ಈ ಅಣಕು ಮತದಾನವನ್ನು ಅವರುಗಳೇ ಮಾಡಬೇಕು. ಮತದಾನದ ದಿನ ಬೆಳಗ್ಗೆ 5.30 ಕ್ಕೆ ಅಣಕು ಮತದಾನದ ಪ್ರಕ್ರಿಯೆ ಆರಂಭಗೊಂಡು .6.45 ರ ಹೊತ್ತಿಗೆ ಮಾಕ್​ ಡ್ರಿಲ್ ಅಂತ್ಯಗೊಳ್ಳಲಿದೆ. 

ಈ ವೇಳೆಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೂ ಸೇರಿ ಒಟ್ಟು 50 ಮತಗಳನ್ನು ಹಾಕಲಾಗುತ್ತದೆ. ಮತ್ತದನ್ನು ಪ್ರತ್ಯೇಕವಾಗಿ ಬರೆದಿರಿಸಿಕೊಳ್ಳಲಾಗಿರುತ್ತದೆ. ಆನಂತರ ಬರೆದಿಟ್ಟುಕೊಂಡಿದ್ದನ್ನು ಇವಿಎಂನ ರಿಸಲ್ಟ್​ನೊಂದಿಗೆ ಹೋಲಿಸಿ, ಸರಿಯಾಗಿರುವುದನ್ನ ಖಾತರಿ ಪಡಿಸಿಕೊಳ್ಳಲಾಗುತ್ತದೆ. ದೋಷಪೂರಿತವಿದ್ದರೇ ಮತಯಂತ್ರದ ಬಗ್ಗೆ ಹಿರಿಯ ಅಧಿಕಾರಿಗಳು ನಿರ್ಣಯ ಕೈಗೊಳ್ಳುತ್ತಾರೆ. ಎಲ್ಲವೂ ಸರಿಯಾಗಿದ್ದರೆ,  ಮತಯಂತ್ರದಲ್ಲಿರುವ ಅಣಕು ಮತದಾನದ ಫಲಿತಾಂಶವನ್ನು  ಶೂನ್ಯಗೊಳಿಸಿ, ಅಸಲಿ ಮತದಾನವನ್ನು ಆರಂಭಿಸಲಾಗುತ್ತದೆ. 

Read/ ಕ್ಷಿಪ್ರ ಕಾರ್ಯಾಚರಣೆ/  ಶಿವಮೊಗ್ಗದ ಇಬ್ಬರು ಸೇರಿದಂತೆ ರಾಜ್ಯ ನಾಲ್ವರು ವಿದ್ಯಾರ್ಥಿಗಳು ಮಣಿಪುರದಲ್ಲಿ ಸೇಫ್​ 



ಮೊದಲ ಮತದಾರನೇ ಖಾತರಿದಾರ

ಅಣಕು ಮತದಾನ ಮುಗಿದ ಮೇಲೆ ಇವಿಎಂಗಳನ್ನು ಸೀಲ್ ಮಾಡಿ, ಏಳು ಗಂಟೆಗೆ ಅಸಲಿ ಮತದಾನ ಆರಂಭವಾಗುತ್ತದೆ. ಈ ವೇಳೆ ಮತ ಹಾಕಲು ಮತಗಟ್ಟೆಗೆ ಬರುವ ಮೊದಲ ಮತದಾರನಿಗೆ ಇವಿಎಂನ್ನ ತೋರಿಸಿ, ಇಲ್ಲಿ ಯಾವುದೇ ಮತವೂ ದಾಖಲಾಗಿಲ್ಲ ಎಂದು ಅಧಿಕಾರಿಗಳು ತೋರಿಸುತ್ತಾರೆ.  ರಿಸಲ್ಟ್ ಬಟನ್ ಒತ್ತಿದರೆ ಟೋಟಲ್​ ಪೊಲ್​ ವೋಟ್​ ಶೂನ್ಯ ತೋರಿಸುತ್ತಿದೆ ಎಂದು ಆತನಿಂದ ಸಹಿ ಪಡೆಯುತ್ತಾರೆ. 

ಮತದಾನ ಆರಂಭ ಮತ್ತು ಅಂತ್ಯ

ಅಲ್ಲಿಂದ ಮತದಾನ ಆರಂಭವಾಗುತ್ತದೆ. ಆನಂತರ ಪ್ರತಿ ಎರಡು ಗಂಟೆಗೊಮ್ಮೆ ಅಂಕಿಅಂಶಗಳನ್ನು ನೀಡಲಾಗುತ್ತದೆ. ರಿಸಲ್ಟ್ ಪೋಲ್​ನ ಬಟನ್​ ಗಂಟೆ ಗಂಟೆಗೆ ಎಷ್ಟು ಮತದಾನವಾಗುತ್ತದೆ ಎಂಬ ಅಂಕಿ ಅಂಶಗಳನ್ನು ನೀಡಲಾಗುತ್ತದೆ. ಸಂಜೆ 6 ಗಂಟೆಯ ನಂತರ ಮತಗಟ್ಟೆಯ 200 ಮೀಟರ್​ ವ್ಯಾಪ್ತಿಯೊಳಗೆ ಪ್ರವೇಶ ಬಂದ್ ಆಗುತ್ತದೆ. ಒಳಗಿದ್ದವರಿಗೆ ವೋಟಿನ ಅವಕಾಶ ನೀಡಲಾಗುತ್ತದೆ. 

ಮತದಾರನಿಗೆ ಹಕ್ಕು ನಿರಾಕರಿಸಬಹುದೆ?

ಮತದಾರ ಒಬ್ಬನಿಗೆ ಅಧಿಕಾರಿಗಳು ಮತಹಾಕುವುದನ್ನ ನಿರಾಕರಿಸಬಹುದು. ಮತದಾರನೊಬ್ಬ ಇಂಕ್ ಹಾಕಿಸಿಕೊಳ್ಳುವುದನ್ನ ನಿರಾಕರಿಸದರೇ, ಸಹಿ ಹಾಕುವುದನ್ನ ನಿರಾಕರಿಸಿದರೆ, ಐಡಿ ಕೊಡುವುದಕ್ಕೆ ನಿರಾಕರಿಸಿದರೇ ಈ ರೀತಿಯಲ್ಲಿ ಚುನಾವಣೆ ಪ್ರಕ್ರಿಯೆಗಳಿಗೆ ವಿರುದ್ಧವಾಗಿ ನಡೆದುಕೊಂಡರೆ, ಅಂತಹ ಮತದಾರನ ಮತ ಚಲಾವಣೆಯ ಹಕ್ಕನ್ನು ಅಧಿಕಾರಿ ನಿರಾಕರಿಸಬಹುದಾಗಿದೆ. 

ಗೌಪ್ಯತೆ ಕಾಪಾಡದಿದ್ದರೇ ವೋಟು ಖತಂ

ಇನ್ನೊಂದು ರೀತಿಯಲ್ಲಿ ಮತದಾರ ತಾನು ವೋಟು ಹಾಕುವಾಗ ಗೌಪ್ಯತೆಯನ್ನು ಕಾಪಾಡಬೇಕು. ಆತ ಮತಗಟ್ಟೆಗೆ ಬಂದು ಗೌಪ್ಯತೆಯನ್ನು ಕಾಪಾಡದೇ ಇಂತಹವರಿಗೆ ವೋಟು ಹಾಕುತ್ತೇನೆ ಎನ್ನಬಾರದು ಹಾಗೊಂದು ವೇಳೆ ಹೇಳಿದರೇ ಆತನಿಗೆ ಮತದಾನದ ಹಕ್ಕು ನೀಡದಿರುವ ಅಧಿಕಾರ ಮತಗಟ್ಟೆ ಅಧಿಕಾರಿಗಳಿಗೆ ಇರುತ್ತದೆ. ವೋಟು ಹಾಕಿದ ಮೇಲೆಯು ಮತದಾರನೊಬ್ಬ ಯಾರಿಗೆ ವೋಟು ಹಾಕಿದ್ದೇನೆ ಎಂದು ಆತ ಹೇಳುವಂತಿಲ್ಲ. ಹಾಗೆ ಹೇಳಿದರೆ, ಆತನನ್ನ ಪೊಲೀಸರ ವಶಕ್ಕೆ ಒಪ್ಪಿಸುವ ಅವಕಾಶಗಳಿರುತ್ತದೆ. 

ಮತದಾರನೇ ವೋಟು ನಿರಾಕರಿಸಬಹುದು. 

ಮತದಾರನೊಬ್ಬ ಮತಗಟ್ಟೆಗೆ ಬಂದು ಸಹಿ ಹಾಕಿ, ಬೆರಳಿಗೆ  ಇಂಕು ಹಚ್ಚಿದ ಮೇಲೆ ವೋಟು ಹಾಕುವುದನ್ನ ನಿರಾಕರಿಸಬಹುದು. ಆಗ ಮತಗಟ್ಟೆ ಅಧಿಕಾರಿಗಳು ಫಾರಂವೊಂದನ್ನ ನೀಡಿ, ಆತನಿಂದ ವೋಟು ಹಾಕಲು ನಿರಾಕರಿಸಿರುವ ಬಗ್ಗೆ ಬರೆಸಿಕೊಂಡು ಆತನನ್ನು ಕಳುಹಿಸಲಾಗುತ್ತದೆ. 

ಟೆಂಡರ್ಡ್​ ಮತದಾನ

ಮತದಾನ ಪ್ರಕ್ರಿಯೆಯಲ್ಲಿ ಒಬ್ಬನೇ ವ್ಯಕ್ತಿಯ ಗುರುತಿನಲ್ಲಿ ಇಬ್ಬರು ಬಂದಾಗ ಟೆಂಡರ್ಡ್​ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಅಂದರೆ ಎ ಎಂಬ ವ್ಯಕ್ತಿಯು ಅದಾಗಲೇ ಬಂದು ಮತದಾನ ಮಾಡಿ ಹೋಗಿರುತ್ತಾರೆ.ಆನಂತರ ಮತಗಟ್ಟೆ ಮತ್ತೆ ಎ ಎಂಬ ವ್ಯಕ್ತಿಯು ತಾನು ಎ ಎಂಬ ಮತದಾರನೆಂದು ಬರುತ್ತಾನೆ. ಆಗ ಆತನಿಗೆ ಮತದಾನದ ಹಕ್ಕನ್ನು ಸಹ ನೀಡಲಾಗುತ್ತದೆ. ಆದರೆ ಆತನಿಗೆ ಬ್ಯಾಲೆಟ್ ಪೇಪರ್​ನಲ್ಲಿ ಮತ ಹಾಕಿಸಲಾಗುತ್ತದೆ, ಆನಂತರ ಇಬ್ಬರು ಎ ವ್ಯಕ್ತಿಗಳಲ್ಲಿ ನಿಜವಾದ ಎ ಯಾರು ಎಂಬುದನ್ನ ಪರಿಗಣಿಸುವ ಪ್ರಕ್ರಿಯೆ ನಡೆದು ಆತನ ಮತವನ್ನು ಸಿಂಧು ಮಾಡಲಾಗುತ್ತದೆ 

ಟೆಸ್ಟೆಡ್ ಮತದಾನ

ವಿವಿ ಪ್ಯಾಟ್ ಬಂದ ಮೇಲೆ ಟೆಸ್ಟೆಡ್​ ಮತ ಎಂಬ ಪ್ರಕ್ರಿಯೆಯು ಸಹ ನಡೆಯುತ್ತಿದೆ. ಅಂದರೆ ನೀವು ಹಾಕಿದ ವೋಟು ಒಬ್ಬರಿಗಾಗಿದ್ದು, ವಿವಿ ಪ್ಯಾಟ್​ನಲ್ಲಿ ತೋರಿಸುತ್ತಿರುವ ಚಿತ್ರ ಬೇರೆಯವರದ್ದಾಗಿದ್ದರೆ, ಅದನ್ನ ಪ್ರಶ್ನಿಸಬಹುದಾಗಿದೆ. ಆ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೆ ಪ್ರಶ್ನಿಸಿದವರನ್ನ ವಿಚಾರಿಸುತ್ತಾರೆ. ಅದರ ಮೇಲೆಯು ಆತ ನೂರಕ್ಕೆ ನೂರು ಖಾತರಿಯಾಗಿ ವಿವಿ ಪ್ಯಾಟ್​ನಲ್ಲಿ ತಾನು ಮತ ಹಾಕದವರ ಚಿತ್ರ ತೋರಿಸುತ್ತಿದೆ ಎಂದು ಹೇಳಿದರೆ ಆತನಿಗೆ ಮತ್ತೊಮ್ಮೆ ಮತ ಹಾಕಲು ಅವಕಾಶ ನೀಡಲಾಗುತ್ತದೆ. ಎಲ್ಲಾ ಚುನಾವಣಾ ಏಜೆಂಟರ ಸಮ್ಮುಖದಲ್ಲಿ ಆತನಿಗೆ ಮತವನ್ನ ಹಾಕಲು ಅವಕಾಶ ನೀಡಲಾಗುತ್ತದೆ. ಆಗ ಆತ ಹಾಕಿದ ಮತಕ್ಕೂ, ವಿವಿಪ್ಯಾಟ್​ನಲ್ಲಿ ತೋರಿಸುತ್ತಿರುವ ಚಿತ್ರಕ್ಕೂ ವತ್ಯಾಸ ಕಂಡು ಬಂದರೆ, ಆ ಬೂತ್​ನಲ್ಲಿ ಮತದಾನ ಪ್ರಕ್ರಿಯೆ ಸ್ಥಗಿತಗೊಳ್ಳುತ್ತದೆ. ಹಾಗೊಂದು ವೇಳೆ ಪ್ರಶ್ನಿಸಿದ ವ್ಯಕ್ತಿ ಸುಳ್ಳು ಹೇಳಿದ್ದರೇ, ಆತನ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ. 

ಚಾಲೇಂಜಿಂಗ್ ವೋಟ್​

ಮತದಾನ ಪ್ರಕ್ರಿಯೆಯಲ್ಲಿ ಇನ್ನೊಂದು ಸಂದರ್ಭ ಎದುರಾಗುತ್ತದೆ. ಮತಗಟ್ಟೆಗೆ ಬರುವ ವ್ಯಕ್ತಿಯ ಎ ಆಗಿದ್ದು, ಆತನ ಎ ವ್ಯಕ್ತಿಯಲ್ಲ ಎಂದು ಚುನಾವಣಾ ಏಜೆಂಟ್ ಹೇಳುತ್ತಾರೆ. ಎ ಎನ್ನುವಾತ ನನಗೆ ಗೊತ್ತಿರುವವನು, ಅವನು ಇವನಲ್ಲ ಎಂದು ಏಜೆಂಟ್ ಹೇಳಿದರೆ, ಬಂದಿರುವ ವ್ಯಕ್ತಿ ನಾನೇ ಎ ಎನ್ನವ ಹೆಸರಿನವನು ಎನ್ನುತ್ತಾರೆ. ಇಂತಹ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಗೊಂದಲ ಶುರುವಾಗುತ್ತದೆ. ಆ ಸಂದರ್ಭದಲ್ಲಿ ಚುನಾವಣಾ ಏಜೆಂಟ್ ಹಾಗೂ ಬಂದಂತಹ ವ್ಯಕ್ತಿಯು ತಾನು ಅದೇ ವ್ಯಕ್ತಿ ಎಂದು ಸಾಬೀತು ಮಾಡಲು ಅವಕಾಶ ನೀಡಲಾಗುತ್ತದೆ. ಅದಕ್ಕಾಗಿ ಎರಡು ರೂಪಾಯಿ ಡಿಪಾಸಿಟ್ ಇಟ್ಟು, ಫಾರಂವೊಂದನ್ನ ಭರ್ತಿ ಮಾಡಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕು. ಹಾಗೊಂದು ವೇಳೆ ಮತಗಟ್ಟೆಗೆ ಬಂದ ವ್ಯಕ್ತಿಯು  ನೀಡಿದ ದಾಖಲೆ ಸುಳ್ಳಾದರೆ ಆತನನ್ನ ಪೊಲೀಸ್ ವಶಕ್ಕೆ ಒಪ್ಪಿಸಲಾಗುತ್ತದೆ. ವ್ಯತಿರಿಕ್ತವಾಗಿ ಎಜೆಂಟ್ ಸುಳ್ಳು ಹೇಳಿದ್ದರೆ ಆತನ ವಿರುದ್ಧ ಕ್ರಮ ಕೈಗೊಳ್ಳಬಹುದು.  




 




 

 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media