ಸಿಪೆಟ್ ಮೈಸೂರು : ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

Central Institute of Petrochemicals Engineering and Technology (CIPET) Mysore, has invited online and offline applications for Diploma in Plastic Technology and Diploma in Plastic Mould Technology, 3-year courses for the academic year 2024-25.

ಸಿಪೆಟ್ ಮೈಸೂರು : ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ
Central Institute of Petrochemicals Engineering and Technology (CIPET) Mysore

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ ಸಿಪೆಟ್ ಸಂಸ್ಥೆಯು ದೇಶದ ಪಾಲಿಮರ್/ಪೆಟ್ರೋಕೆಮಿಕಲ್ಸ್/ ಪ್ಲಾಸ್ಟಿಕ್ಸ್ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡಲಾಗುತ್ತಿದ್ದು, 2024-25ನೇ ಸಾಲಿನ ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಿಜಿ, ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಿಜಿ 3 ವರ್ಷ ಕೋರ್ಸ್‍ಗಳ ಪ್ರವೇಶಕ್ಕೆ ಆನ್ ಲೈನ್ /ಆಫ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. 

ಆಸಕ್ತ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ತೇರ್ಗಡಿಯಾದವರು ವೆಬ್‍ಸೈಟ್ www.cipet.gov.in  ರಲ್ಲಿ ಮೇ 31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸಿಪೆಟ್ ಸಂಸ್ಥೆಯ ನಿರ್ದೇಶಕ ಆರ್.ಟಿ. ನಾಗರಳ್ಳಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0821-2510618/9480253024/9791431827/ 9466585669 ಗಳನ್ನು ಸಂಪರ್ಕಿಸುವುದು.

ಅವಧಿ ವಿಸ್ತರಣೆ

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ನಿದಿಗೆ ಕೈಗಾರಿಕೆ ಪ್ರದೇಶ ಮಾಚೇನಹಳ್ಳಿ 2024-25 ನೇ ಸಾಲಿನ ಡಿಪ್ಲೋಮಾ  ಕೋರ್ಸ್ ಗಳ ಪ್ರವೇಶಾತಿಗಾಗಿ ಅರ್ಜಿಯನ್ನು ಅಹ್ವಾನಿಸಿದ್ದು , ಅರ್ಜಿ ಸಲ್ಲಿಸುವ ದಿನಾಂಕವನ್ನು ಜೂನ್ 03 ರ ವರೆಗೆ ವಿಸ್ತರಿಸಿದೆ.

ಡಿಪ್ಲೋಮಾ  ಇನ್ ಟೂಲ್ ಮತ್ತು ಡೈ ಮೇಕಿಂಗ್ ( DTDM), ಡಿಪ್ಲೋಮಾ  ಇನ್ ಪ್ರಿಸಿಷನ್ ಮ್ಯಾನುಪ್ಯಾಕ್ಚರಿಂಗ್ (DPM), ಡಿಪ್ಲೋಮಾ  ಇನ್ ಮೇಕಾಟ್ರಾನಿಕ್ಸ್ ( DMCH)) ಕೋರ್ಸ್ ಗಳಿಗೆ 4 ವರ್ಷ ಅವಧಿ ತರಬೇತಿ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ದಿನಾಂಕ 03.06.2024 ರ ಒಳಗೆ ಆನ್ಲೈನ್ : http://cetonline.Karnataka.gov.in/kea/ ಮೂಲಕ  ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ 08182-246054/ 9902232839/ 9448307027/ 9880141054/9449286543 ಸಂಪರ್ಕಿಸಲು ಪ್ರಾಂಶುಪಾಲರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Central Institute of Petrochemicals Engineering and Technology (CIPET) Mysore, has invited online and offline applications for Diploma in Plastic Technology and Diploma in Plastic Mould Technology, 3-year courses for the academic year 2024-25.