ಮೆಕ್ಕೆಜೋಳ ಪ್ರತಿ ಕ್ವಿಂಟಲ್‍ಗೆ ರೂ.2250 ! ಸರ್ಕಾರದ ಸಂಸ್ಥೆಯಿಂದಲೇ ನೇರ ಖರೀದಿ! ಇಲ್ಲಿದೆ ವಿವರ!?

Maize Rs.2250 per quintal! Direct purchase from government agencies! Here's the details!? ಮೆಕ್ಕೆಜೋಳ ಪ್ರತಿ ಕ್ವಿಂಟಲ್‍ಗೆ ರೂ.2250 ! ಸರ್ಕಾರದ ಸಂಸ್ಥೆಯಿಂದಲೇ ನೇರ ಖರೀದಿ! ಇಲ್ಲಿದೆ ವಿವರ!?

ಮೆಕ್ಕೆಜೋಳ ಪ್ರತಿ ಕ್ವಿಂಟಲ್‍ಗೆ ರೂ.2250 ! ಸರ್ಕಾರದ ಸಂಸ್ಥೆಯಿಂದಲೇ ನೇರ ಖರೀದಿ! ಇಲ್ಲಿದೆ ವಿವರ!?

KARNATAKA NEWS/ ONLINE / Malenadu today/ Nov 14, 2023 SHIVAMOGGA NEWS

Shivamogga |  ಮೆಕ್ಕೆಜೋಳ ನೊಂದಣಿ ಪ್ರಕ್ರಿಯೆ ಆರಂಭ

ಕರ್ನಾಟಕ ಹಾಲು ಮಹಾಮಂಡಳಿಯು ರೈತರಿಂದ ಮೆಕ್ಕೆಜೋಳವನ್ನು ನೇರವಾಗಿ ಪ್ರತಿ ಕ್ವಿಂಟಲ್‍ಗೆ ರೂ.2250/- ರ ಬೆಲೆಯಲ್ಲಿ ಖರೀದಿಸಲು ಆರಂಭಿಸಿದ್ದು, ಮೆಕ್ಕೆಜೋಳ ಬೆಳೆದಿರುವ ಆಸಕ್ತ ರೈತರು ಸಮೀಪದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಒಂದು ಕೆ.ಜಿ ಪ್ರಮಾಣದಷ್ಟು ಮೆಕ್ಕೆಜೋಳದ ಮಾದರಿಯನ್ನು ನೀಡಿ, ಫ್ರೂಟ್ಸ್ (FRUTTS) ತಂತ್ರಾಂಶದಲ್ಲಿ ನೊಂದಾವಣೆಯಾಗಿರುವ ಸಂಖ್ಯೆಯೊಂದಿಗೆ ನೊಂದಾಯಿಸಿಕೊಳ್ಳಬಹುದಾಗಿದೆ. 

READ : ನಿಮಗೂ ಶಾಕ್​ ಆಗಬಹುದು! ನೀವು 90 ಸಾವಿರ ಕಳೆದುಕೊಳ್ಳಬಹುದು! ಹೇಗೆ ಗೊತ್ತಾ?

ಕಹಾಮ ಶಿಕಾರಿಪುರ ಪಶು ಆಹಾರ ಘಟಕಕ್ಕೆ ಅವಶ್ಯವಿರುವ 30000 ಮೆ.ಟನ್ ಮೆಕ್ಕೆಜೋಳವನ್ನು ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಪ್ರದೇಶದ ರೈತರುಗಳಿಂದ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ ಬಳಕೆ ಮಾಡುತ್ತಿರುವ ಕ್ಷೀರಸಿರಿ ಮತ್ತು ಸರಕಾರದ ಕೃಷಿ ಇಲಾಖೆ ಸಿದ್ಧಪಡಿಸಿರುವ ಫ್ರೂಟ್ಸ್ ತಂತ್ರಾಂಶದ ಮೂಲಕ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಅನುಷ್ಠಾನಕ್ಕೆ ತರಲಾಗುವುದು.

READ :ಭದ್ರಾವತಿ, ಕೋಟೆಗಂಗೂರು, ರಾಗಿಗುಡ್ಡದ ಈ ನಾಲ್ವರು ಶಿವಮೊಗ್ಗದಲ್ಲಿ ಅರೆಸ್ಟ್ ! ಕಾರಣವೇನು ಗೊತ್ತಾ?



ಪ್ರತಿ ಒಬ್ಬ ರೈತರಿಂದ ಗರಿಷ್ಠ 1000 ಕ್ವಿಂಟಲ್ ಮೆಕ್ಕೆಜೋಳ ಸರಬರಾಜಿಗೆ ಸೀಮಿತಗೊಳಿಸಿದ್ದು, ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ರೈತರೇ ನೇರವಾಗಿ ಉತ್ತಮ ಗುಣಮಟ್ಟದ ಮೆಕ್ಕೆಜೋಳವನ್ನು ತಲಾ ಐವತ್ತು ಕೆ.ಜಿ ತೂಕದಂತೆ ಉತ್ತಮ ಗುಣಮಟ್ಟದ ಗೋಣಿಚೀಲಗಳಲ್ಲಿ ಸರಬರಾಜು ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9606012571 ಮತ್ತು ಇಮೇಲ್ ವಿಳಾಸ : kmfcfps@gmail.com ನ್ನು ಸಂಪರ್ಕಿಸಬಹುದೆಂದು ಶಿಕಾರಿಪುರ ಕ.ಹಾ.ಮ ಪಶು ಆಹಾರ ಘಟಕದ ಪ್ರಕಟಣೆ ತಿಳಿಸಿದೆ