ಅಜ್ಜಿಗೆ ನಕಲಿ ಪದಕ ಕೊಟ್ಟು ಓಲೆ ಎಗರಿಸಿದ್ದ ಪಾಲಿಶ್‌ ಗ್ಯಾಂಗ್‌ ಅರೆಸ್ಟ್‌ | ನಡೆದಿದ್ದೇನು?

gang that tricks people by offering to polish their jewelry has been caught by the Anandapur police. Two people have been arrested for stealing a woman's necklace by giving her fake gold coins in exchange. 

ಅಜ್ಜಿಗೆ ನಕಲಿ ಪದಕ ಕೊಟ್ಟು ಓಲೆ ಎಗರಿಸಿದ್ದ ಪಾಲಿಶ್‌ ಗ್ಯಾಂಗ್‌  ಅರೆಸ್ಟ್‌ | ನಡೆದಿದ್ದೇನು?
polish gang ,Anandapur police

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ಬೆಂಡೋಲೆ, ಸರ, ಮಾಂಗ್ಯಲ್ಯವನ್ನು ಪಾಲಿಶ್‌ ಹಾಕಿಕೊಡುತ್ತೇವೆ ಎಂದು ಯಾಮಾರಿಸುವ ಗ್ಯಾಂಗ್‌ವೊಂದನ್ನ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಪೊಲೀಸ್‌ ಠಾಣೆಯ ಪೊಲೀಸರು ಹಿಡಿದಿದ್ದಾರೆ. ಕತೂಹಲ ಮೂಡಿಸಿದ ಪ್ರಕರಣದಲ್ಲಿ ಅಜ್ಜಿಗೆ ನಕಲಿ ಚಿನ್ನದ ನಾಣ್ಯಕೊಟ್ಟು ಆಕೆಯ ಬೆಂಡೋಲೆಯನ್ನು ಪಾಲೀಶ್‌ ನೆಪದಲ್ಲಿ ಕದ್ದೊಯ್ದಿದ್ದ ಆರೋಪದ ಅಡಿಯಲ್ಲಿ ಇಬ್ಬರನ್ನ ಬಂಧಿಸಲಾಗಿದೆ. ಈ ಪ್ರಕರಣ ಇನ್ನಷ್ಟು ವಿಸ್ತೃತ ತನಿಖೆಗೊಳಪಡುವ ಸಾಧ್ಯತೆ ಇದೆ. 

ಪ್ರಕರಣವೇನು?

ಆನಂದಪುರ ಸಮೀಪದ ಹೊಸಂತೆ ಗ್ರಾಮದಲ್ಲಿ  ಕೆಲವು ತಿಂಗಳಗಳ ಹಿಂದೆ ಹೊಸಂತೆ ಗ್ರಾಮದ ಬಸಮ್ಮ ಎಂಬ ಮಹಿಳೆ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಈ ವೇಳೆ ಅವರನ್ನ ಮುಖಾಮುಖಿಯಾಗಿ ಬೇಟಿಯಾದ ವ್ಯಕ್ತಿಯೊಬ್ಬ ಏನು ಓಲೆ ಹಳೆದಾಗಿ ಹೋಗಿದೆ. ಕೊಡು ಪಾಲಿಶ್‌ ಮಾಡಿಕೊಡುತ್ತೇನೆ ಎಂದಿದ್ದಾನೆ. ಅಲ್ಲದೆ ಪಾಲಿಶ್‌ ಮಾಡಿ ಕೊಡುವರೆಗೂ ಈ ಈ ಎರಡು ಬಂಗಾರದ ಪದಕಗಳನ್ನು ಇಟ್ಕೊಂಡಿರು ಎಂದಿದ್ದಾನೆ. 

ಚಿನ್ನದ ಪದಕದ ಮಾತನ್ನ ನಂಬಿದ ಅಜ್ಜಿ ಓಲೆ ಬಿಚ್ಚಿ ಆತನ ಕೈಗೆ ಕೊಟ್ಟಿದ್ದಾಳೆ. ಆತ ಅದನ್ನು ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದ. ಪುಣ್ಯಾತ್ಮ ವಾಪಸ್‌ ಬರದಿರುವುದನ್ನ ನೋಡಿ ಅಜ್ಜಿ ಅಲ್ಲಿಯೇ ಇದ್ದ ಅಂಗಡಿಯೊಂದರಲ್ಲಿ ಪದಕಗಳನ್ನ ಪರೀಕ್ಷೆ ಮಾಡಿಸಿದ್ದಾಳೆ. ಆಗವಳಿಗೆ ಆಘಾತ ಎದುರಾಗಿತ್ತು. ದಾರಿಹೋಕ ಕೊಟ್ಟ ಪದಕ ನಕಲಿಯಾಗಿತ್ತು. ಹೀಗಾಗಿ ಬಸಮ್ಮ  ಆನಂದಪುರ ಪೊಲೀಸ್ ಠಾಣೆಗೆ ದೂರು ಕೊಟ್ರು ಕಳ್ಳರನ್ನ ಹಿಡಿದು ತಮ್ಮ ಓಲೆ ವಾಪಸ್‌ ಕೊಡಿಸ್ರಪ್ಪ ಪುಣ್ಯ ಬರುತ್ತೆ ಎಂದಿದ್ದಾಳೆ. 

ಪ್ರಕರಣದ ಸಂಬಂಧ ತನಿಖೆ ನಡೆಸಿದ ಪೊಲೀಸರು ಶಿಕಾರಿಪುರ ಗ್ರಾಮದ ಕೃಷ್ಣಪ್ಪ (65) ಹಾಗೂ ವೀರೇಶ್ (32) ಎಂಬಿಬ್ಬರನ್ನು ಬಂಧಿಸಿದ್ದಾರೆ. ಆತನ ಬಳಿಯಿಂದ ಅಜ್ಜಿ ಓಲೆಯನ್ನ ವಶಕ್ಕೆ ಪಡೆದು ತನಿಖೆ ನಡೆಸ್ತಿದ್ದಾರೆ. ಇನ್ನೂ ಇದೇ ವೇಳೆ  ವಯೋವೃದ್ಧರು ಹಾಗೂ ಅಸಹಾಯಕರನ್ನು ಟಾರ್ಗೆಟ್ ಮಾಡಿ ಯಾಮಾರಿಸುವಂತಹ ಕಳ್ಳರಿದ್ದಾರೆ ಹೀಗಾಗಿ ಇಂಥವರ ಬಗ್ಗೆ ಎಚ್ಚರಿಕೆವಹಿಸಿ ಎಂದು ಆನಂದಪುರ ಪಿಎಸ್ಐ ಯುವರಾಜ್ ಕಂಬಳಿ ಮನವಿ ಮಾಡಿದ್ದಾರೆ. 

A gang that tricks people by offering to polish their jewelry has been caught by the Anandapur police. Two people have been arrested for stealing a woman's necklace by giving her fake gold coins in exchange.