ರಾಗಿಗುಡ್ಡದ ಘಟನೆ ಮತ್ತು 13 ಸೀಕ್ರೆಟ್ ವಿಚಾರ! ಮುಂದೆ ನಡೆದಿದ್ದು? ಹಿಂದೆ ನಡೆದದ್ದು? ಎಚ್ಚೆತ್ತುಕೊಳ್ಳಬೇಕಿರುವುದು ಯಾರು ಗೊತ್ತಾ?

Here are some additional thoughts related to the incident that took place in Ragigudda, Shimogaಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಪೂರಕವಿಚಾರಗಳು ಇಲ್ಲಿದೆ

ರಾಗಿಗುಡ್ಡದ ಘಟನೆ ಮತ್ತು 13 ಸೀಕ್ರೆಟ್ ವಿಚಾರ!  ಮುಂದೆ ನಡೆದಿದ್ದು? ಹಿಂದೆ ನಡೆದದ್ದು? ಎಚ್ಚೆತ್ತುಕೊಳ್ಳಬೇಕಿರುವುದು ಯಾರು ಗೊತ್ತಾ?

KARNATAKA NEWS/ ONLINE / Malenadu today/ Oct 6, 2023 SHIVAMOGGA NEWS

ರಾಗಿಗುಡ್ಡದಲ್ಲಿ ನಡೆದ ಘಟನೆಯಲ್ಲಿ ಎದುರಾಗುವ ಅನುಮಾನಗಳು ಹಾಗೂ ವಹಿಸಬೇಕಾದ ಎಚ್ಚರಿಕೆಗಳು ಬಹಳಷ್ಟಿವೆ..ನಡೆದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ,  ಈದ್ ಮಿಲಾದ್ ಮೆರವಣಿಗೆ ನಡೆದ ಘಟನೆ ಕಲ್ಲೂ ತೂರಾಟದಿಂದ ಆಗಿದ್ದಲ್ಲ, ಬದಲಾಗಿ ಎರಡು ಗುಂಪುಗಳ ನಡುವಿನ ಹಳೇದ್ವೇಷ ಆಕಸ್ಮಿಕವಾಗಿ ಸ್ಪಾರ್ಕ್​ ಆಗಿರಬಹುದು ಎನ್ನತ್ತವೆ ಒಂದು ಮೂಲ!

ಇದಕ್ಕೆ ಕಾರಣ, ಘಟನೆಗೆ ಸಂಬಂಧಿಸಿದ ಎಫ್​ಐಆರ್​ಗಳಲ್ಲಿ ಅದದೇ ಹೆಸರುಗಳು ತಿರುಗಾ ಮುರುಗಾ ಆರೋಪಿಗಳ ಪಟ್ಟಿಯಲ್ಲಿ ಕೇಳಿಬರುತ್ತವೆ. 24 ಎಫ್ಐಆರ್​ಗಳಲ್ಲಿ ಮೂರು ಕೋಮಿನ ಮಂದಿ ಆರೋಪಿಗಳಾಗಿದ್ದು, ಅವರುಗಳ ನಡುವೆ ಹಳೇ ಕಿರಿಕ್​ಗಳು ಇರುವುದು ಕೂಡ ಪೊಲೀಸರಿಗೆ ತಿಳಿದು ಬಂದಿದೆ. 

ಕಲ್ಲು ತೂರಾಟ ನಡೆಸಿದವರ ಯಾರು? ಮೊದಲು ತೂರಿದವರು ಯಾರು? ಏಕೆ? ಹೇಗೆ? ಮತ್ತು ಮೆರವಣಿಗೆ ಸಾಗಿದ ವೇಳೆ ಆದ ಘಟನೆ ಬಗ್ಗೆ ಕೇಳಿಬರುತ್ತಿರುವ ವಿಚಾರಗಳಿಗೆ ಇನ್ನೂ ಸಹ ಸ್ಪಷ್ಟನೆ ಸಿಕ್ಕಂತಿಲ್ಲ  ಆದರೆ ಮೂರು ಕೋಮಿನವರಿಗೂ ಪೆಟ್ಟು ಬಿದ್ದಿದೆ, ಮೂರು ಕೋಮಿನ ಯುವಕರು ಘಟನೆಯಲ್ಲಿ ಆರೋಪಿಗಳು! 

ಇನ್ನೊಂದೆಡೆ ಸ್ಥಳೀಯ ಮೂಲಗಳ ಪ್ರಕಾರ, ಕೆಲವರು ಘಟನೆ ನಂತರ ರಾಗಿಗುಡ್ಡದಿಂದ ಕಾಣೆಯಾಗಿದ್ದಾರೆ. ಅಜ್ಞಾತ ಸ್ತಳದಲ್ಲಿರುವ ಅವರುಗಳೇ ಅಶಾಂತಿಗೆ ಕಾರಣವಾಗಿರಬಹುದು ಎನ್ನಲಾಗುತ್ತದೆ. ಸದ್ಯ ಅವರುಗಳ ತಲಾಶ್ ನಲ್ಲಿದ್ದಾರೆ ಪೊಲೀಸರು

ರಾಗಿಗುಡ್ಡದಲ್ಲಿ  ಕೋಮು ಸಂಘಟನೆಗಳ ಪ್ರಭಾವ ಹೆಚ್ಚಿದೆ. ಆ ಸಂಘಟನೆಯ ವೈಯಕ್ತಿಕ ಅಜೆಂಡಾಗಳು ರಾಗಿಗುಡ್ಡದಲ್ಲಿ ಎಂತಹ ಪರಿಣಾಮ ಬೀರಿದೆ ಎಂಬುದುನ್ನ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ ಎನ್ನುತ್ತದೆ ಸೀಕ್ರೆಟ್ ರಿಪೋರ್ಟ್​

ಇನ್ನೂ ಇದೇ ವಿಚಾರವಾಗಿ ಇತ್ತೀಚೆಗೆ ಆಂತರಿಕ ಭದ್ರತಾ ದಳದ ಅಧಿಕಾರಿಗಳು ರಾಗಿಗುಡ್ಡಕ್ಕೆ ಭೇಟಿಕೊಟ್ಟು ಮೆರವಣಿಗೆಗೆ ಆದ ಪಂಡಿಂಗ್ ಸೇರಿದಂತೆ, ಕೋಮು ಸಂಘಟನೆಗಳ ಆಕ್ಟೀವಿಟಿಯನ್ನು ಪರಿಶೀಲಿಸಿ ರಿಪೋರ್ಟ್ ಮಾಡಿಕೊಂಡು ವಾಪಸ್ ಆಗಿದ್ದಾರೆ. 

ಎರಡು ಕೋಮಿನ ಮತೀಯ ಸಂಘಟನೆಯ ಕಾರ್ಯಕರ್ತರ ನಡುವೆ ಆಗ್ಗಾಗ್ಗೆ ಗಲಾಟೆಗಳು ನಡೆಯುತ್ತಲೆ ಇತ್ತು ಎಂಬ ವಿಚಾರವಿದ್ದು ಅದು ಕ್ಲೈಮ್ಯಾಕ್ಸ್​ನ್ನ ಎದುರು ನೋಡುತ್ತಿತ್ತು ಎನ್ನಲಾಗುತ್ತೆ

ಇನ್ನೂ  ಕ್ರಿಕೆಟ್ ಕಿರಿಕ್​ ನಿಂದ ಹಿಡಿದು, ಹಲವು ರೀತಿಯ ಕಿರಿಕ್​ಗಳು ಇಲ್ಲಿನ ಯುವಕರ ನಡುವೆ ನಡೆದಿದೆ ಎನ್ನಲಾಗುತ್ತಿದ್ದು, ವೈಯಕ್ತಿಕ ದ್ವೇಷವೂ ಮೆರವಣಿಗೆಯಲ್ಲಿ ಅನಾವರಣಗೊಂಡಿರಬಹುದು.  

ರಾಗಿಗುಡ್ಡದಲ್ಲಿ ನಿಷೇಧಿತ ಸಂಘಟನೆಯು ಇನ್ನೂ ಸಹ  ಆಕ್ಟೀವ್ ಆಗಿದೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ಗಮನಹರಿಸುತ್ತಿದೆ. 

ಮೆರವಣಿಗೆ ನಡೆಯುವ ದಿನ ಬೆಳಗ್ಗೆ ಕಟೌಟ್ ನಲ್ಲಿ ಆಕ್ಷೇಪಾರ್ಹ ಚಿತ್ರಕ್ಕೆ ಬಣ್ಣ ಬಳಿದಿದ್ದನ್ನ ಪ್ರಶ್ನಿಸಿ ಪ್ರತಿಭಟಿಸಿದವರ ಪೈಕಿ, ಕೆಲವರು ನೇರವಾಗಿ ಪೊಲೀಸರಿಗೆ ಬೆದರಿಸುವ ತಂತ್ರ ಮಾಡಿದ್ದರು. ಆದರೆ ಆ ಸಂದರ್ಭದಲ್ಲಿ ತೋರಿದ ಸಂಯಮವನ್ನು ಪೊಲೀಸ್ ಸಿಬ್ಬಂದಿಗೆ ರಾತ್ರಿ ಹೊತ್ತು ಎಸ್​ಪಿಗೆ ಕಲ್ಲು ತೂರುವಾಗ ಸಹನೆಯ ಕಟ್ಟೆ ಒಡೆದಿತ್ತು. 

ಹೆಜ್ಜೆ ಹೆಜ್ಜೆಗೂ ಎಸ್​ಪಿ ಮಿಥುನ್ ಕುಮಾರ್, ಶಾಂತಿ ಶಾಂತಿ ಎನ್ನುತ್ತಿದ್ದರೇ, ಕೆಲವರು ಪೊಲೀಸರನ್ನೆ ಟಾರ್ಗೆಟ್ ಮಾಡಿ ಕಲ್ಲು ತೂರಿದ್ದು ಆಘಾತಕಾರಿ ವಿಚಾರವಾಯ್ತು

ಘಟನೆಯ ನಂತರ ಸಿಸಿ ಕ್ಯಾಮರಾವೂ ಸೇರಿದಂತೆ, ಮೊಬೈಲ್​ಗಳಲ್ಲಿ ಸೆರೆಯಾದ ವಿಡಿಯೋಗಳು ದಿನಕ್ಕಿಷ್ಟು ಎಂಬಂತೆ ಹೇಗೆ ಹೊರಬಂದವು. ಅವುಗಳು ವೈರಲ್ ಆಗಲು ಕಾರಣವಾಗಿದ್ದೇನು? ಅದರ ಹಿಂದಿನ ಅಜೆಂಡಾ ಏನಾಗಿತ್ತು? ಈ ಪ್ರಶ್ನೆಗಳಿಗೂ ಉತ್ತರ ಸಿಗಬೇಕಿದೆ. 

ಇಡೀ ರಾಗಿಗುಡ್ಡದಲ್ಲಿ ಕೇವಲ ಮುಕ್ಕಾಲು ಗಂಟೆಯಲ್ಲಿ ಪರಿಸ್ಥಿತಿ ಶಾಂತವಾಗಿತ್ತು. ಆದರೆ, ವಿಚಾರ ಮಾತ್ರ ಇನ್ನೂ ರಾಜಕಾರಣದ ಬಾಯಲ್ಲಿ ದಗಾ ದಗಾ ಅನ್ನುತ್ತಿದೆ. ಇದಕ್ಕೆ ಕಾರಣವೇನು ಎಂಬುದು ಎಲ್ಲರಿಗೂ ಗೊತ್ತಿದೆ. ಇದು ಕೂಡ ಪರೋಕ್ಷ ಸಂದೇಶವನ್ನು ಜನರಿಗೆ ರವಾನಿಸುತ್ತಿದೆ. ಯಾರ ಲಾಭ! ಯಾರಿಗೆ ಎಂಬುದನ್ನು ಹೇಳುತ್ತಿದೆ. 

ಕುತೂಹಲ ಕಾರಿ ಅಂಶವೆಂದರೆ, ಇದುವರೆಗೂ ಘಟನೆ ನಡೆದಿದ್ದೇಗೆ? ಘಟನೆಗೆ ಕಾರಣವೇನು ಎಂಬುದು ಬಯಲಾಗಿಲ್ಲ. ಮೂಲಗಳು ನೀಡಿದ ಸತ್ಯಗಳನ್ನಷ್ಟೆ ಬಹಿರಂಗಗೊಳ್ಳುತ್ತಿದೆ. ಈ ಕಾರಣಕ್ಕೇನೆ, ಬೇರೆ ಬೇರೆ ರೀತಿಯ ಅಂತೆಕಂತೆ  ಕಥೆಗಳನ್ನು ಕಟ್ಟಿ ಹೆಣವ ಪ್ರಯತ್ನಗಳು ಸಹ ನಡೆಯುತ್ತಿವೆ. 

ಒಟ್ಟಾರೆ, ರಾಗಿಗುಡ್ಡದ ಎರಡು ಕ್ರಾಸ್​ಗಳಲ್ಲಿ ನಡೆದ ಘಟನೆಗಳು ಶಿವಮೊಗ್ಗ ಪೊಲೀಸ್ ಇಲಾಖೆಗೆ ಹಲವು ಪಾಠಗಳನ್ನು ಹೇಳಿಕೊಡುತ್ತಿದೆ. ಜನ ಸ್ನೇಹಿ ಸಂಯಮದ ಜೊತೆಗೆ ದುಷ್ಟಶಕ್ತಿಗಳನ್ನು ಸೆದೆಬಡಿಯುವುದು ಇಲಾಖೆಗೆ ಅನಿವಾರ್ಯ..ಇಲ್ಲವಾದರೆ, ಶಿವಮೊಗ್ಗ ಪೀಸ್​ ಫುಲ್ ಇದ್ದರೂ, ಬೇರೆ ಕಡೆ ಶಿವಮೊಗ್ಗ ಸುದ್ದಿ ಕೊತ ಕೊತ ಕುದಿಯುತ್ತಿರುತ್ತದೆ 




ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ