ಕೋಟೆ ಪೊಲೀಸರಿಂದ ರೌಡಿ ಪರೇಡ್​! ಹಳೇ ಪಂಟರಿಗೆ ವಾರ್ನಿಂಗ್! ಶಿವಮೊಗ್ಗದಲ್ಲಿ ಮುಂದುವರಿದ ಪೊಲೀಸರ ಲಾಡ್ಜ್​ ವಿಸಿಟ್​

Rowdy parade by kote police! Warning to the old Rowdies Police lodge visit continues in Shimoga

ಕೋಟೆ ಪೊಲೀಸರಿಂದ ರೌಡಿ ಪರೇಡ್​! ಹಳೇ ಪಂಟರಿಗೆ ವಾರ್ನಿಂಗ್!  ಶಿವಮೊಗ್ಗದಲ್ಲಿ ಮುಂದುವರಿದ ಪೊಲೀಸರ ಲಾಡ್ಜ್​ ವಿಸಿಟ್​
ಕೋಟೆ ಪೊಲೀಸರಿಂದ ರೌಡಿ ಪರೇಡ್​! ಹಳೇ ಪಂಟರಿಗೆ ವಾರ್ನಿಂಗ್! ಶಿವಮೊಗ್ಗದಲ್ಲಿ ಮುಂದುವರಿದ ಪೊಲೀಸರ ಲಾಡ್ಜ್​ ವಿಸಿಟ್​

MALENADUTODAY.COM | SHIVAMOGGA  | #KANNADANEWSWEB

ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು (@Shivamogga_SP) ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಒಂದು ಕಡೆ ಲಾಡ್ಜ್​​ಗಳಿಗೆ ಭೇಟಿಕೊಡುತ್ತಿರುವ ಪೊಲೀಸರು, ಅಲ್ಲಿಯ ಚಟುವಟಿಕೆಗಳನ್ನು ಹಾಗೂ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ಧಾರೆ. 

ಈ ನಡುವೆ ನಿನ್ನೆ ಅಂದರೆ,  ದಿನಾಂಕಃ- 22-02-2023 ರಂದು ಕೋಟೆ ಪೊಲೀಸ್ ಠಾಣೆ(kote Police Station) ಇನ್​ಸ್ಪೆಕ್ಟರ್​ ಶಿವಪ್ರಸಾದ್, ಠಾಣಾ ವ್ಯಾಪ್ತಿಯ ರೌಡಿ ಆಸಾಮಿಗಳನ್ನು ಠಾಣೆಗೆ ಕರೆಸಿ ರೌಡಿ ಪರೇಡ್ ನಡೆಸಿದ್ದಾರೆ. ಪ್ರತಿ ವಾರ ಪೊಲೀಸ್ ಠಾಣೆಗೆ ಬಂದು ಕಡ್ಡಾಯವಾಗಿ ಹಾಜರಿ ನೀಡಿ ಹೋಗುವಂತೆ ಮತ್ತು ರೌಡಿ ಆಸಾಮಿಗಳ ವಿರುದ್ಧ ಮುಂಜಾಗ್ರತಾ ಪ್ರಕರಣಗಳನ್ನು (ಸೆಕ್ಯುರಿಟಿ ಕೇಸ್) ದಾಖಲಿಸಿ, ಬಾಂಡ್ ಓವರ್ ಮಾಡಿದ್ದು, ಒಂದು ವೇಳೆ ಬಾಂಡ್ ನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಬಾಂಡ್ ಓವರ್ ಸಮಯದಲ್ಲಿ ನೀಡಲಾದ ಆರ್.ಟಿ.ಸಿಯನ್ನು ಮುಟ್ಟುಗೋಲು ಹಾಕಿ ಕೊಳ್ಳಲು ಘನ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 

READ | ಕೋವಿಡ್ ಟೈಂನಲ್ಲಿ ರಜೆ ಕೇಳಿ ಹೋಗಿದ್ದ ಕಾನ್​ಸ್ಟೇಬಲ್​ ಕಾಣೆ! ಮಾಳೂರು ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಯ್ತು ಕೇಸ್

READ |ನುಗ್ಗೆಕಾಯಿ ಕಿರಿಕ್​, ಉಣುಗೋಲಿನಿಂದ ಹಲ್ಲೆ! ಕರೆಂಟ್ ಲೈನ್ ಕೇಳಲು ಬಂದವ ದೊಣ್ಣೆಯಿಂದ ಹಲ್ಲೆ! ಕ್ರೈಂ ನ್ಯೂಸ್

ಇನ್ನೊಂದೆಡೆ, ದೊಡ್ಡಪೇಟೆ ಪೊಲೀಸ್ ಠಾಣೆ ಪಿಎಸ್​ಐ (Doddapet Police Station) ಹಾಗೂ  ನಗರ ಪೊಲೀಸ್ ಠಾಣೆ ಪಿಎಸ್​ಐ  ( nagara Police Station ) ಮತ್ತು ತುಂಗಾನಗರ ಪೊಲೀಸ್‌ ಠಾಣೆ ಪಿಎಸ್​ಐಗಳು, (Tunganagar Police Station,) ತಮ್ಮ ಠಾಣೆ ವ್ಯಾಪ್ತಿಯ  ಲಾಡ್ಜ್ / ರೆಸಾರ್ಟ್/ ಹೋಂ ಸ್ಟೇ ಗಳಿಗೆ ಭೇಟಿ ನೀಡಿ, ಲಾಡ್ಜ್ / ರೆಸಾರ್ಟ್/ ಹೋಂ ಸ್ಟೇ ಗಳಿಗೆ ಬಂದು ತಂಗಿರುವ ಗ್ರಾಹಕರ ವಿವರ ಮತ್ತು ಸಿಸಿ ಟಿವಿ ಕ್ಯಾಮೆರಾಗಳ  ಕಾರ್ಯವೈಖರಿ ಕುರಿತು ಪರಿಶೀಲನೆ  ನಡೆಸಿದ್ದಾರೆ.