ಖೇಲೊ ಇಂಡಿಯ ಯೂಥ್ ಗೇಮ್ಸ್ ನಲ್ಲಿ ಶಿವಮೊಗ್ಗದ ಘಟ್ಕ ಪಟುಗಳು!

Ghatka athletes from Shimoga who participated in Khelo India Youth Games!

ಖೇಲೊ ಇಂಡಿಯ ಯೂಥ್ ಗೇಮ್ಸ್ ನಲ್ಲಿ ಶಿವಮೊಗ್ಗದ ಘಟ್ಕ ಪಟುಗಳು!
Ghatka athletes from Shimoga who participated in Khelo India Youth Games!

MALENADUTODAY.COM | SHIVAMOGGA NEWS 

ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಿಂದ ಭಾರತ ಸರ್ಕಾರದ ವತಿಯಿಂದ ಆಯೋಜಿಸಲಾದ 5 ನೇ ಖೆಲೊ ಇಂಡಿಯ ಯೂಥ್ ಗೇಮ್ಸ್ ನಲ್ಲಿ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ದಿನಾಂಕ: 01-02-2023 ರಿಂದ 05-02-2023 ರ ವರೆಗೆ ಮಧ್ಯಪ್ರದೇಶದ ಮಂಡಲಾ ಜಿಲ್ಲೆಯಲ್ಲಿ ನಡೆದ 

5 ನೇ ಖೆಲೊ ಇಂಡಿಯ ಯೂಥ್ ಗೇಮ್ಸ್ ನಲ್ಲಿ ಘಟ್ಕ ಕ್ರೀಡೆಯಲ್ಲಿ ಕರ್ನಾಟಕ ರಾಜ್ಯದಿಂದ 4 ಕ್ರೀಡಾಪಟುಗಳು ಭಾಗವಹಿಸಿದ್ದರು. ಇದು ಮೊದಲನೇ ಬಾರಿಗೆ ಘಟ್ಕ ಕ್ರೀಡೆಯಲ್ಲಿ ಕರ್ನಾಟಕ ರಾಜ್ಯ ತಂಡವು ಭಾಗವಹಿಸುತ್ತಿರುವುದು. ಶಿವಮೊಗ್ಗದ ಶ್ರೀ ರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 4 ವಿದ್ಯಾರ್ಥಿಗಳಾದ ಲತೀಶ್. ಪಿ, ಶ್ರೀನಿಧಿ. ಬಿ,ಧ್ರುವಂತ್ ಗೌಡ. ಜೆ. ಕೆ ಹಾಗೂ  ದೀಪ್ತಾನ್ಶ್. ಬಿ. ಎ  ಭಾಗವಹಿಸಿದ್ದರು 

ಈ ಕ್ರೀಡೆಯನ್ನು ಇಂಡಿಜಿನಸ್ ಗೇಮ್ಸ್ ಅಂದರೆ ಭಾರತದ ಸ್ಥಳೀಯ ಕ್ರೀಡೆಯಾಗಿ ಭಾರತ ಸರ್ಕಾರದ ವತಿಯಿಂದ ಗುರುತಿಸಿ ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಹೀಗಾಗಿ ಈ ಕ್ರೀಡೆಯನ್ನು ಖೆಲೊ ಇಂಡಿಯ ಕ್ರೀಡಾಕೂಟದಲ್ಲಿ ಸೇರಿಸಲಾಗಿದೆ. ಈ ಬಾರಿ 27 ಕ್ರೀಡೆಗಳನ್ನು ಮಾತ್ರ ಖೇಲೊ ಇಂಡಿಯ ಕ್ರೀಡಾಕೂಟದಲ್ಲಿ  ಆಯ್ಕೆ ಮಾಡಲಾಗಿದೆ ಅದರಲ್ಲಿ ಘಟ್ಕ ಕ್ರೀಡೆಯು ಒಂದಾಗಿದೆ. (ಘಟ್ಕ ಎಂದರೆ ಪಂಜಾಬ್​ ಪ್ರಾಂತ್ಯದಲ್ಲಿ ಕಂಡುಬರುವ ಸಮರ ಕಲೆ) ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ರಾಜ್ಯ ಘಟ್ಕ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶಶಿಧರ. ಎಂ. ಆರ್ ರವರು, ಕಾರ್ಯದರ್ಶಿಗಳಾದ ಫಾತಿಮಾ. ಎಸ್ ರವರು, ತರಬೇತಿದಾರಾದ ಮುರಳಿ. ಹೆಚ್, ಮೊಹ್ಮದ್ ಇಬ್ರಾಹಿಂ. ಎಸ್, ಮಹಮ್ಮದ್ ನಿಜಾಮುದ್ದೀನ್. ಜೆಡ್, ಗುಫರಾನ್ ಶೇಖ್ ರವರು ಹಾಗೂ ಶ್ರೀ ರಾಮಕೃಷ್ಣ ಗುರುಕುಲ ವಸತಿ ಶಾಲೆಯ ಕಾರ್ಯದರ್ಶಿಗಳಾದ ಶೋಭಾ ರವರು, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಆದಿತ್ಯಾ ಎಸ್​,ಕುಂದಾರ್ ಪೋಷಕರು ಶುಭಾ ಕೋರಿದ್ದಾರೆ.

ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com