ಬೈಕ್‌ನಲ್ಲಿ ಹೋಗುತ್ತಿದ್ದಾಗ ತಲೆ ಮೇಲೆ ಬಿದ್ದ ತೆಂಗಿನಕಾಯಿ | ಕೋಮಕ್ಕೆ ಜಾರಿದ ಅಪ್ರಾಪ್ತ

A coconut fell on the head of the Pillion rider while riding the bike A minor slipped into a coma Gajanur Checkpost, Shimoga-Teerthahalli Road, National Highway 169

ಬೈಕ್‌ನಲ್ಲಿ ಹೋಗುತ್ತಿದ್ದಾಗ ತಲೆ ಮೇಲೆ ಬಿದ್ದ ತೆಂಗಿನಕಾಯಿ |  ಕೋಮಕ್ಕೆ ಜಾರಿದ ಅಪ್ರಾಪ್ತ
Gajanur Checkpost, Shimoga-Teerthahalli Road, National Highway 169

SHIVAMOGGA | MALENADUTODAY NEWS | May 23, 2024  ಮಲೆನಾಡು ಟುಡೆ

ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌ ಸವಾರನ ತಲೆ ಮೇಲೆ ತೆಂಗಿನ ಕಾಯಿ ಬಿದ್ದು ಆತ ಕೋಮಕ್ಕೆ ಜಾರಿ ಘಟನೆ ಸಂಬಂಧ ತಡವಾಗಿ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಜನೂರು ಚೆಕ್‌ಪೋಸ್ಟ್‌ ಸಮೀಪ ಈ ಘಟನೆ ಸಂಭವಿಸಿದೆ. 

ಶಿವಮೊಗ್ಗ ತೀರ್ಥಹಳ್ಳಿ ಹೆದ್ದಾರಿ 169 ನಲ್ಲಿ ಗಾಜನೂರು ಸಮೀಪ ಚೆಕ್‌ಪೋಸ್ಟ್‌ ಒಂದಿದೆ. ಅಲ್ಲಿಯೇ ಹತ್ತಿರದಲ್ಲಿರುವ ತೋಟದಲ್ಲಿನ ತೆಂಗಿನ ಮರ ಹೆದ್ದಾರಿ ಬದಿಗೆ ವಾಲಿಕೊಂಡಿದೆ. ಕಳೆದ ಏಳನೇ ತಾರೀಖು ಇದೇ ಮಾರ್ಗದಲ್ಲಿ 16 ವರ್ಷದ ಯುವಕನೊಬ್ಬ ಇನ್ನೊಬ್ಬರ ಜೊತೆಗೆ ಬೈಕ್‌ನಲ್ಲಿ ಬರುತ್ತಿದ್ದ. ಚೆಕ್‌ಪೋಸ್ಟ್‌ ಸಮೀಪ ಬರುವ ಹೊತ್ತಿಗೆ ಜೋರಾಗಿ ಗಾಳಿ ಬೀಸಿದ ಪರಿಣಾಮವಾಗಿ ತೆಂಗಿನ ಮರದಿಂದ ಕಾಯಿ ಬಿದ್ದಿದೆ. ಹೀಗೆ ಬಿದ್ದ ತೆಂಗಿನ ಕಾಯಿ ಬೈಕ್‌ನಲ್ಲಿ ಹಿಂದುಗಡೆ ಕುಳಿತಿದ್ದ 16 ವರ್ಷದ ಯುವಕನ ತಲೆ ಮೇಲೆ ಬಿದ್ದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಆತನನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಇದೀಗ ಆತ ಕೋಮಕ್ಕೆ ಜಾರಿದ್ದಾನೆ. ಈ ಸಂಬಂಧ ಅವರ ಪೋಷಕರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧೀಕಾರ ಹಾಗೂ ಬಿದ್ದ ತೆಂಗಿನಕಾಯಿಯ ಮರವಿರುವ ತೋಟದ ಮಾಲೀಕರ ವಿರುದ್ಧ ಕೇಸ್‌ ದಾಖಲಾಗಿದೆ.