ಮದುವೆಯಾಗುತ್ತೇನೆ ಎಂದಿದ್ದ ಯುವಕನ ವಿರುದ್ಧ ಎಫ್‌ಐಆರ್‌ | ಮೊಬೈಲ್‌ ಕೊಡಿಸದಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ

Shimoga Crime Report Today

ಮದುವೆಯಾಗುತ್ತೇನೆ ಎಂದಿದ್ದ ಯುವಕನ ವಿರುದ್ಧ ಎಫ್‌ಐಆರ್‌ | ಮೊಬೈಲ್‌ ಕೊಡಿಸದಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ
Shimoga Crime Report Today

SHIVAMOGGA | MALENADUTODAY NEWS | May 23, 2024  ಮಲೆನಾಡು ಟುಡೆ

ಐದು ವರ್ಷ ಮದುವೆಯಾಗುತ್ತೇನೆಂದು ಸಂಪರ್ಕದಲ್ಲಿದ್ದು ಆನಂತರ ಕೈಕೊಟ್ಟ ಆರೋಪದ ಅಡಿಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಶಿವಮೊಗ್ಗ ಜಿಲ್ಲೆ ತಾಲ್ಲೂಕು ಒಂದರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಅಡಿಯಲ್ಲಿ  ಈ ಕೇಸ್‌ ದಾಖಲಾಗಿದೆ. ಪ್ರಕರಣದ ವಿವರ ಹೀಗಿದೆ. 

ಸಂತ್ರಸ್ತೆಯೊಬ್ಬರಿಗೆ ಯುವಕನೊಬ್ಬ ಇವತ್ತಿಗೆ ಐದು ವರ್ಷಗಳ ಹಿಂದೆ ಪರಿಚಯವಾಗಿದ್ದ. ಆನಂತರ ಇಬ್ಬರು ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದರು. ಅದರ ನಡುವೆ ಸಂತ್ರಸ್ತೆಯ ನಿ‍ಶ್ಚಿತಾರ್ಥ ಇನ್ನೊಬ್ಬರ ಜೊತೆ ಆಗಿತ್ತು. ಆ ಬಳಿಕ ಯುವಕನ ಮಾತು ಕೇಳಿ ಸಂತ್ರಸ್ತೆ ನಿ‍ಶ್ಚಿತಾರ್ಥ ರದ್ದು ಮಾಡಿದ್ದರಂತೆ. ಇನ್ನೂ ಯುವಕ ತನ್ನ ಕುಟುಂಬದಲ್ಲಿನ ಮದುವೆಗಾಗಿ ಸಂತ್ರಸ್ತೆ ಬಳಿ ಹಣ, ಒಡವೆ ಪಡೆದಿದ್ದನಂತೆ. ಇದೀಗ ಯುವಕ ಮದುವೆಯಾಗಲ್ಲ ಎಂದು ನಿರಾಕರಿಸಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಸಂತ್ರಸ್ತೆ ದೂರು ನೀಡಿದ್ದಾರೆ. 



ಇನ್ನೊಂದಡೆ ಬಾಲಕನೊಬ್ಬ ಮನೆಯಲ್ಲಿ ಮೊಬೈಲ್‌ ಕೊಡಿಸದಿದ್ದಕ್ಕೆ ಮನೆ ಬಿಟ್ಟು ಹೋದ ಪ್ರಸಂಗ ನಡೆದಿದೆ. ಶಿವಮೊಗ್ಗದ ಪೊಲೀಸ್‌ ಸ್ಟೇಷನ್‌ ಒಂದರಲ್ಲಿ ಈ ಬಗ್ಗೆ ಎಫ್‌ಐಆರ್‌ ದಾಖಲಾಗಿದೆ. ಪಿಯುಸಿ ಮುಗಿಸಿದ ಮಗ ಮನೆಯಲ್ಲಿ ಉಳಿದುಕೊಂಡಿದ್ದ. ತಂದೆಗೆ ಮೊಬೈಲ್‌ ಕೊಡಿಸುವಂತೆ ಆತ ಕೇಳಿದ್ದ. ಆದರೆ ತಂದೆ ಮನೆ ಕಟ್ಟುತ್ತಿದ್ದೇನೆ, ಮನೆ ಪೂರ್ಣ ಆದ ಬಳಿಕ ಕೊಡಿಸುತ್ತೇನೆ ಎಂದಿದ್ದಕ್ಕೆ ರಾತ್ರಿ ಬಾಲಕ ಬಟ್ಟೆಬರೆ ತುಂಬಿಕೊಂಡು ಮನೆಯಿಂದ ಹೋಗಿದ್ದಾನೆ. ಇದೀಗ ಪೋಷಕರು ಆತನ ನಿರೀಕ್ಷೆಯಲ್ಲಿದ್ದಾರೆ.