ಮನೆಯಿಂದ ಹೊರದಬ್ಬಿದ್ರು ಅಂತಾ ಹೆಂಡತಿ, ಮಗನ ವಿರುದ್ಧ ದೂರು | ಸಾಗರ ಬಾರ್‌ ಬಳಿ ಗಲಾಟೆ | ಸೊರಬದಲ್ಲಿ ಬೈಕ್‌ಗೆ ಬಲೆರೋ ಡಿಕ್ಕಿ

Shivamogga police intervened in several incidents and took necessary actions 

ಮನೆಯಿಂದ ಹೊರದಬ್ಬಿದ್ರು ಅಂತಾ ಹೆಂಡತಿ, ಮಗನ ವಿರುದ್ಧ ದೂರು | ಸಾಗರ ಬಾರ್‌ ಬಳಿ ಗಲಾಟೆ |  ಸೊರಬದಲ್ಲಿ ಬೈಕ್‌ಗೆ ಬಲೆರೋ ಡಿಕ್ಕಿ
Shivamogga police, 112 police shivamogga

SHIVAMOGGA | MALENADUTODAY NEWS | Jun 9, 2024  ಮಲೆನಾಡು ಟುಡೆʼ

ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ 112 ಸಿಬ್ಬಂದಿ ಸಾಕಷ್ಟು ಜನಪೋಕಾರಿ ಕೆಲಸಗಳನ್ನು ಮಾಡುತ್ತಿದ್ದಾರೆ. ಯಾವುದೇ ಅಪರಾಧ ಅಥವಾ ಸಂಕಷ್ಟವನ್ನು ಮೊದಲು ಎದುರಿಸುವ ಅವರು, ಕೈಗೊಳ್ಳುವ ಡ್ಯೂಟಿಯಿಂದ ಹಲವು ಪ್ರಕರಣಗಳು ಸ್ಥಳದಲ್ಲಿಯೇ ಇತ್ಯರ್ಥ ಕಾಣುತ್ತವೆ. ಅಂತಹ ಘಟನೆಗಳ ವಿವರ ಇಲ್ಲಿದೆ  

ಮಗ, ಹೆಂಡತಿ ಮನೆಯಿಂದ ಹೊರಹಾಕಿದ್ದಾರೆಂದು ದೂರು

ದಿನಾಂಕ 06.06.2024ರಂದು ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ತಮ್ಮ ಮಗ ಹಾಗೂ ತಮ್ಮ ಹೆಂಡತಿ ತನ್ನನ್ನು ಮನೆಯಿಂದದ ಹೊರಕ್ಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ, ಆತ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದ ಎಂದು ಆತನ ಕುಟುಂಬಸ್ಥರು ಹೇಳಿದ್ದಾರೆ. ಆ ಬಳಿಕ ಪೊಲೀಸರು ಇಬ್ಬರಿಗೂ ಗಲಾಟೆ ಮಾಡದಂತೆ ತಿಳುವಳಿಕೆ ನೀಡಿದ್ದಾರೆ. 

ಬಾರ್‌ ಬಳಿ ಗಲಾಟೆ ಪೊಲೀಸರ ಎಂಟ್ರಿ

ಇತ್ತ ಸಾಗರದ ಪೇಟೆಯಲ್ಲಿ ಸಣ್ಣ ವಿಷಯಕ್ಕೆ ಬಾರ್‌ ಬಳಿಯಲ್ಲಿ ಯುವಕರು ಗಲಾಟೆ ಮಾಡಿಕೊಂಡ ಘಟನೆ  ದಿ:07.06.2024ರಂದು ನಡೆದಿದೆ. ಈ ವಿಚಾರ ಸಂಬಂಧ ಸ್ಥಳೀಯರು ಸಾಗರಪೇಟೆ ಠಾಣಾ ವ್ಯಾಪ್ತಿಯ 112ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವಕರನ್ನು ಕರೆದು ಗಲಾಟೆ ಮಾಡದಂತೆ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆಯನ್ನು ನೀಡಿ ಮನೆಗೆ ಕಳುಹಿಸಿದ್ದಾರೆ. 

ಸೊರಬದಲ್ಲಿ ಅಪಘಾತ

ಅತ್ತ ಸೊರಬದಲ್ಲಿ ದಿ:07.06.2024ರಂದು ಸೊರಬ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಹಾಗೂ ಬುಲೆರೋ ವಾಹನಗಳ ನಡುವೆ ಅಪಘಾತವಾಗಿದೆ. ಘಟನೆ ಬಗ್ಗೆ ಗೊತ್ತಾಗಿ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು,  ಬೈಕ್ ಸವಾರನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ವಿಚಾರವನ್ನ ಪೊಲೀಸ್‌ ಠಾಣೆಗೆ ರವಾನಿಸಿ ಮುಂದಿನ ಕ್ರಮಕ್ಕೆ ಅನುವು ಮಾಡಿಕೊಡ್ಡಿದ್ದಾರೆ.  

Shivamogga police intervened in several incidents and took necessary actions