ರೋಗಿಗೆ ಚಿಕಿತ್ಸೆ ಮಲಗಿದ್ದ ವೈದ್ಯರಿಗೆ ಬೆಳಗ್ಗೆ ಎದುರಾಯ್ತು ಆಘಾತ | ರಾತ್ರಿಯೇ ನಡೆದಿತ್ತು ಕೃತ್ಯ

gold ornaments worth were stolen thirthahalli

ರೋಗಿಗೆ ಚಿಕಿತ್ಸೆ ಮಲಗಿದ್ದ ವೈದ್ಯರಿಗೆ ಬೆಳಗ್ಗೆ ಎದುರಾಯ್ತು ಆಘಾತ | ರಾತ್ರಿಯೇ ನಡೆದಿತ್ತು ಕೃತ್ಯ
gold ornaments worth were stolen thirthahalli

SHIVAMOGGA | MALENADUTODAY NEWS | Jun 9, 2024  ಮಲೆನಾಡು ಟುಡೆʼ

ಗ್ರಾಮಸ್ಥರು ಕರೆದುಕೊಂಡು ಬಂದ ರೋಗಿಯೊಬ್ಬರಿಗೆ ತುರ್ತುಚಿಕಿತ್ಸೆ ನೀಡಿದ ಬಳಿಕ ಮನೆಯಲ್ಲಿ ಮಲಗಿದ್ದ ವೈದ್ಯರೊಬ್ಬರಿಗೆ ಆಘಾತವಾದ ಘಟನೆ ಎದುರಾಗಿದೆ. ಅದೇ ರಾತ್ರಿ ಅವರ ಮನೆಯಲ್ಲಿ : 14,63,500 ಚಿನ್ನಾಭರಣ ಕಳ್ಳತನವಾಗಿದೆ. 

 

ಕಳೆದ 06-06-2024 ರಂದು ತೀರ್ಥಹಳ್ಳಿಯ ಗ್ರಾಮವೊಂದರಲ್ಲಿ  ಈ ಘಟನೆ ನಡೆದಿದೆ. ಅಂದು ರಾತ್ರಿ ಇಲ್ಲಿನ ವೈದ್ಯರು ರೋಗಿಯೊಬ್ಬರಿಗೆ ಮನೆಯ ಬಳಿ ಚಿಕಿತ್ಸೆ ನೀಡಿ ಆನಂತರ ತಮ್ಮ ರೂಮಿಗೆ ಹೋಗಿ ಮಲಗಿದ್ದರು. ಅವರು ಬೆಳಗ್ಗೆ ಆರು ಗಂಟೆಗೆ ಎದ್ದಾಗ ಅವರ ತಂಗಿಯ ಕೊಠಡಿಯಲ್ಲಿ ಮಗು ಅಳುವ ಸದ್ದು ಕೇಳಿಸಿದೆ ಹೋಗಿ ನೋಡಿದಾಗ ಗೋಡ್ರೇಜ್‌ ಬೀರುವಿನ ಬಾಗಿಲು ತೆರೆದಿದ್ದು ಕಂಡು ಬಂದಿದೆ. ಪರಿಶೀಲಿಸಿದಾಗ  ರಾತ್ರಿ ವೇಳೆ ಮನೆಯ ಪ್ಯಾಸೇಜ್ ನ ಕಿಟಕಿಯ ಸೈಡಿಂಗ್ ಡೋರ್ ಅನ್ನು ಯಾವುದೋ ಆಯುಧದಿಂದ ಓಪನ್ ಮಾಡಿ ಒಳನುಗ್ಗಿ ಲಾಕರ್‌ ಕೀ ತೆಗೆದು ಚಿನ್ನಾಭರಣ ದೋಚಿರುವುದು ಗೊತ್ತಾಗಿದೆ. ಈ ಸಂಬಂಧ ವೈದ್ಯರು ತೀರ್ಥಹಳ್ಳಿ ಪೊಲೀಸರ ಮೊರೆಹೋಗಿದ್ದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.  

 

A doctor in Thirthahalli experienced a shocking incident after providing emergency treatment to a patient brought in by villagers. gold ornaments worth Rs 14,63,500 were stolen.