ತೀರ್ಥಹಳ್ಳಿಯಲ್ಲಿ ಈಜಲು ತೆರಳಿದ್ದ ಕರಾವಳಿಯ ನಿಟ್ಟೆ ಕಾಲೇಜಿನ ಇಬ್ಬರು ಉಪನ್ಯಾಸಕರು ಸಾವು!

Two lecturers of Nitte College in Karkala, who had gone for a swim in Thirthahalli, have died.

ತೀರ್ಥಹಳ್ಳಿಯಲ್ಲಿ ಈಜಲು ತೆರಳಿದ್ದ  ಕರಾವಳಿಯ ನಿಟ್ಟೆ ಕಾಲೇಜಿನ ಇಬ್ಬರು ಉಪನ್ಯಾಸಕರು ಸಾವು!

KARNATAKA NEWS/ ONLINE / Malenadu today/ Jun 18, 2023 SHIVAMOGGA NEWS

ತೀರ್ಥಹಳ್ಳಿ/ ತಾಲ್ಲೂಕಿನ  ತೀರ್ಥಮತ್ತೂರು ಬಳಿಯಲ್ಲಿ ಹರಿಯುವ ಹೊಳೆಯಲ್ಲಿ  ಈಜಲು ಹೋಗಿದ್ದ ಇಬ್ಬರು ಉಪನ್ಯಾಸಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನ 36 ವರ್ಷದ ಪುನೀತ್​ ಹಾಗೂ 38 ವರ್ಷದ ಬಾಲಾಜಿ ಎಂದು ಗುರುತಿಸಲಾಗಿದೆ. 

ಘಟನೆ ನಡೆದಿದ್ದು ಹೇಗೆ? 

ಕಾರ್ಕಳ ಸಮೀಪ ಇರುವ ನಿಟ್ಟೆ ಕಾಲೇಜಿನ ಇಬ್ಬರು ಉಪನ್ಯಾಸಕರು ತಿರ್ಥಮತ್ತೂರು ಮಠದ ಬಳಿ ಇರುವ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು.  ಶನಿವಾರ ಪ್ರವಾಸಕ್ಕೆ ಬಂದಿದ್ದವರು ಅಲ್ಲಿಯೇ ಹರಿಯುವ ಹೊಳೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಇಬ್ಬರು ಸಹ ಸಾವನ್ನಪ್ಪಿದ್ದಾರೆ. ಇನ್ನು ಸ್ಥಳೀಯರು ಓರ್ವನ ಶವವನ್ನ ನೀರಿನಿಂದ ಮೇಲಕ್ಕೆ ಎತ್ತಿದ್ದು, ಇನ್ನೋರ್ವನ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ. 


ಶಿವಮೊಗ್ಗದ ತುಂಗಾನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಮಹಿಳೆಯ ಕೊಲೆ!

ಶಿವಮೊಗ್ಗ ನಗರದಲ್ಲಿ ಮಹಿಳೆಯೊಬ್ಬರ ಕೊಲೆಯಾಗಿದೆ.  ವಿಜಯ ನಗರದ 2 ನೇ ತಿರುವಿನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಕಮಲಮ್ಮ(54) ಕೊಲೆಯಾದ ಮಹಿಳೆ

ಚಿಕ್ಕಮಗಳೂರಿನ ತರೀಕೆರೆ ತಾಲ್ಲೂಕು ಅಜ್ಜಂಪುರದಲ್ಲಿ ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿರುವ ಮಲ್ಲಿಕಾರ್ಜುನರವರ ಪತ್ನಿ ಕಮಲಮ್ಮ ಕೊಲೆಯಾಗಿದ್ದಾಳೆ . ಮಲ್ಲಿಕಾರ್ಜುನ್​ರವರು ಗೋವಾಕ್ಕೆ ತೆರಳಿದ್ರು. ಈ ವೇಳೆ ಘಟನೆ ನಡೆದಿದೆ. ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ. ನಿನ್ನೆ ಸಂಜೆ  ಘಟನೆ ನಡೆದಿರುವ ಸಾಧ್ಯತೆ ಇದ್ದು ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. 

ಗೋವಾಕ್ಕೆ ತೆರಳಿದ್ದ ಮಲ್ಲಿಕಾರ್ಜುನ್​ರವರು ಮನೆಗೆ ಕರೆ ಮಾಡಿದಾಗ ಫೋನ್ ಕಾಲ್ ಯಾರು ಸ್ವೀಕರಿಸಲಿಲ್ಲ. ಹೀಗಾಗಿ ಅನುಮಾನಗೊಂಡು ಅಕ್ಕಪಕ್ಕದವರಿಗೆ ಕರೆ ಮಾಡಿದ್ದಾರೆ. ಅಲ್ಲಿದ್ದವರು ಮನೆಗೆ ಹೋಗಿ ನೋಡಿದಾಗ ಬಾಗಿಲು ತೆರದ ಸ್ಥಿತಿಯಲ್ಲಿತ್ತು. ಒಳಗಡೆ ಮಹಿಳೆಯ ಕೊಲೆಯಾಗಿರುವುದು ಕಂಡು ಬಂದಿದೆ. ಸದ್ಯ ದಾವಣಗೆರೆಯಿಂದ ಎಫ್​ಎಸ್​ಎಲ್​ ತಂಡ ಬರುತ್ತಿದ್ದು,ಘಟನೆ ಸಂಬಂಧ ತುಂಗಾನಗರ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.